N-2440 
  21-03-2024 07:49 PM   
ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ
ನಮಸ್ತೆ ಗುರುಗಳೇ..
ಈ ಅಂಕಣ ಓದಿ ನನಗೆ ತುಂಬಾ ಬೇಸರವಾಯಿತು..
ಈಗಿನ ಸಮೂಹ ಮಾಧ್ಯಮಗಳ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ತುಂಬಾ ಚೆನ್ನಾಗಿ ತಿಳಿಹೇಳಿದ್ದೀರಿ..
ಆದರೆ
ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ತಾಯಿ ಎಲ್ಲಿಯೂ ಇಲ್ಲವೆಂದು ಹೇಳಿದ್ದೀರಿ ಬುದ್ದಿಅವರೆ ..
ಹಾಗಂತ ನೀವು ಹೇಳಿರುವುದು ಸತ್ಯವೇ ಆದರೆ 100 ಕ್ಕೆ 99 ಜನರು ಒಳ್ಳೆಯ ತಾಯಂದಿರು ಇದ್ದಾರೆ..
ಆದರೆ
ನನ್ನ ಹಾಗೂ ನನ್ನ ಯಜಮಾನರ ಪಾಲಿಗೆ ನಮ್ಮ ಮನೆಯವರ ತಾಯಿಯಂತ ತಾಯಿ ಯಾರಿಗೂ ಬೇಡ ಬುದ್ದಿ..
ಅವರಿಗೆ ಮಗಳೇ ಹೆಚ್ಚು ಮಗ ಕಾಲಿನ ಕಸ ..
ಮಗಳ ಮಾತು ಕೇಳಿ ನನ್ನ ಹಿಂಸೆ ಕೊಟ್ಟು ಬದುಕೇ ಬೇಡ ಅನ್ನೋ ಸ್ಥಿತಿಗೆ ನನ್ನ ತಂದಿಟ್ಟರು ..
ಆದರೆ ಪಾಪ ನಮ್ಮ ಯಜಮಾನರು ಜೀವನಪೂರ ಕಷ್ಟಕ್ಕೆ ತಳ್ಳಿದ್ರು..
ಇಲ್ಲಿ ಹೆಣ್ಣು ಮಕ್ಕಳೇ ಎಲ್ಲಾ ಗಂಡು ಮಕ್ಕಳಿಗೆ ಯಾವುದೇ ತರದ ಬೆಲೆನೂ ಇಲ್ಲ..
ನನ್ನ ಗಂಡನನ್ನು ಮೂರು ಸಾರಿ ಠಾಣೆಯ ಮೆಟ್ಟಿಲನ್ನು ಹತ್ತಿಸಿದ್ದಾರೆ..
ಮಗಳಿಗೆ ದುರಾಸೆ ಇಲ್ಲಿಂದಲೇ ಅಕ್ಕಿ ಬೇಳೆ ಪ್ರತಿಯೊಂದು ತವರಿನಿಂದನೆ ಹೋಗಬೇಕು ಆಕೆ ತುಂಬಾ ಸ್ಥಿತಿವಂತಳು..
ಆದರೆ ನಾವು ಅಷ್ಟಕ್ಕಷ್ಟೇ ಆದ್ರೂ ನಾವು ಎಲ್ಲದು ಯಾವುದನ್ನು ಪ್ರಶ್ನೆ ಮಾಡದೇ ಇದ್ದೇವೆ ಆದ್ರೂ ನಮ್ಮನ್ನ ನೆಮ್ಮದಿಯಾಗಿ ಬದುಕುವುದಕ್ಕೆ ಬಿಡಲಿಲ್ಲ.. ಜಗಳ ದ್ವೇಷ ರಂಪಾಟ ಇವುಗಳಲ್ಲೇ ಆಕೆ ತನ್ನ ಬದುಕನ್ನ ಮುಗಿಸಿಕೊಂಡಳು..
ಅದು ಮಗಳ ಮನೆಯಲ್ಲಿ..
ದುಡ್ಡು ಬಂಗಾರ ಎಲ್ಲವೂ ಆಕೆಗೆ ಮಾಡಿದ್ರು ಚಿಕ್ಕ ವಯಸ್ಸಿಗೆ ನಾನು ಮದುವೆಯಾಗಿ ಬಂದೆ..
ಆಕೆ ಜೊತೆ ಇಲ್ಲಿ ಯಾರು ಬದುಕುವುದು ಸಾಧ್ಯವಿಲ್ಲವೆಂದು
ಎಲ್ಲ ಸೇರಿ ನಮ್ಮನ್ನ ಪಕ್ಕದ ಮನೆಯಲ್ಲಿ ಇಟ್ಟರು.. ಕೂತರು ನಿಂತ್ರು ನನಗೆ ಬೈಯುತ್ತಾ ಇದ್ದರು..
ಇವರಿಂದ ಜೀವನನೇ ಬೇಡ ಅನ್ನಿಸುತ್ತಾ ಇತ್ತು..
ಹೊಡೆತಾ , ಸುಳ್ಳು ಆಪಾದನೆ ಎಲ್ಲವನ್ನೂ ತಲೆಗೆ ಕಟ್ಟಿದರು..
ಈಗಲೂ ಕೂಡ ನಮಗೆ ಸೇರಬೇಕಾಗಿರುವ ಮನೆಯ ಬೀಗದ ಕೀ ಮಗಳ ಹತ್ತಿರ ಇದೆ..
ಎಲ್ಲವನ್ನೂ ಆಕೆಯೇ ಅನುಭವಿದಳು ನನ್ನ ಯಜಮಾನರಿಗೆ ತಾಯಿ , ತಂದೆ ಪ್ರೀತಿ ಎಂದರೆ ಏನು ಎಂದು ಗೊತ್ತೇ ಇಲ್ಲ ..
ಒಳ್ಳೆ ತಾಯಿಯರು ತುಂಬಾ ಅಪರೂಪ ಸಿಗುವುದು.. ಆದರೆ ನನ್ನ ಗಂಡ ತುಂಬಾ ದುರಾದೃಷ್ಟವಂತರು ಯಾವ ಜನ್ಮದ ಪಾಪವೋ ನಾನು ನನ್ನ ಮಗನು ಕೂಡ ಈಗಲೂ ಅನುಭವಿಸುತ್ತಿದ್ದೇವೆ.. ತಾಯಿ ಆದ್ರೆ ಸಾಲಲ್ಲ ತಾಯಿ ಅದ ಮೇಲೆ ತಾಯಿತನ ಬರಬೇಕು..
ಹೆತ್ತ ಎಲ್ಲಾ ಮಕ್ಕಳನ್ನು ಒಂದೇ ದೃಷ್ಟಿಯಿಂದ ನೋಡಿದರೆ ಯಾವ ಸಮಸ್ಯೆ ಕೂಡ ಇರುವುದಿಲ್ಲ..
ಹೆತ್ತ ಮಗನನ್ನೇ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲು ಆ ಮಹಾತಾಯಿಗೆ ಮನಸ್ಸು ಬರಲಿಲ್ಲ. ಆಕೆಯ ಮಾತೃವಾತ್ಸಲ್ಯ ತನ್ನನ್ನು ತಾನೇ ದಂಡಿಸಿಕೊಳ್ಳುವಂತೆ ಮಾಡಿತು ಇದು ನಿಜವಾದ ತಾಯಂದಿರ ಲಕ್ಷಣಗಳು...
ಈ ಅಂಕಣವನ್ನು ಓದಿ ನನ್ನ ಬದುಕಿನ ಎಲ್ಲಾ ದುರಂತವು ಮತ್ತೆ ಕಣ್ಣಮುಂದೆ ಬಂದಂತೆ ಆಯ್ತು..
ನಿಜಕ್ಕೂ ಮನ ಮುಟ್ಟುವಂತ ಲೇಖನ .ಬುದ್ದಿಅವರೆ..
ನಿಮ್ಮ ಪಾದಗಳಿಗೆ ನಮಸ್ಕರಿಸುತ್ತಾ..
ಶ್ರೀ ಮಠದ ಭಕ್ತಳು
ಲೇಖಕಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು