N-2440 
  25-03-2024 01:21 PM   
ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ
ಪರಮಪೂಜ್ಯ ಶ್ರೀಗುರುಗಳವರು ಈ ಸಲದ ಅಂಕಣದಲ್ಲಿ ಸಮೂಹ ಮಾಧ್ಯಮದ ಸದ್ಬಳಕೆ ಹಾಗೂ ದುರ್ಬಳಕೆಯನ್ನು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಸ್ತರದಲ್ಲಿ ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದನ್ನು ದಾಖಲಿಸುತ್ತಾ ಅದರ ಒಳಿತು ಕೆಡುಕಿನ ಕುರಿತ ವಿಶ್ಲೇಷಣೆ ಮಾಡಿದ್ದಾರೆ. ಮನುಷ್ಯನ ಮನಸ್ಸಿನ ಒಳಗೆ ನಡೆಯುವ ಶ್ರೇಯಸ್ಸು-ಪ್ರೇಯಸ್ಸಿನ ನಡುವಿನ ಸಂಘರ್ಷ ವ್ಯಕ್ತಿಗತವಾಗಿರದೆ ಸ್ವಾರ್ಥ ಸಾಧನೆಯ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮಾಧ್ಯಮವಾಗಿ ಬದಲಾಗಿರುವುದು ಒಂದು ದುರಂತ. ಡಿಜಿಟಲ್ ಡೈರಿಯ ರೀತಿ ಬಳಕೆಯಾಗುತ್ತಿರುವ ಮೊಬೈಲ್ ಒಳಗಿನ ಮಾಹಿತಿ ಸೋರಿಕೆಯನ್ನು, ಅದರ ದುರ್ಬಳಕೆಯನ್ನು ತಡೆಯುವ ಕಾನೂನು ನಮ್ಮ ದೇಶದಲ್ಲಿ ಇನ್ನೂ ಬಳಕೆಯಲ್ಲಿಲ್ಲ. ಇದನ್ನೇ ಬಳಸಿಕೊಂಡು ವ್ಯಕ್ತಿಗಳ, ಸಮುದಾಯಗಳ ನಡುವೆ ದ್ವೇಷ ಹರಡುವ ಸಾಧನಗಳಾಗಿ ಸಮೂಹ ಮಾಧ್ಯಮಗಳು ಬದಲಾಗುವುದನ್ನು ತುರ್ತಾಗಿ ತಪ್ಪಿಸಬೇಕಾಗಿದೆ.
ದಡವಿರದ ಮಮತೆಯ ಕಡಲು ತಾಯಿ. ಹೌದು, ಏಕೆಂದರೆ ಆಕೆ ತನ್ನ ಮಕ್ಕಳಿಗೆ ಪ್ರೀತಿಯ ಧಾರೆಯೆರೆದು ಸಾಕುವಾಗ ಯಾವ ಕುದೃಷ್ಟಿಯ ತಡೆಯೂ ಇರುವುದಿಲ್ಲ. ಆದರೆ ಅದೇ ಪೋಷಕರು ವಯೋಸಹಜ ಕಾರಣಗಳಿಂದ ದೈಹಿಕವಾಗಿ ಬಲಹೀನರಾದಾಗ ಆಸರೆ ನೀಡುವ ಮಕ್ಕಳನ್ನು ಪ್ರಶ್ನಿಸುವ ವಿಕೃತ ಮನಸ್ಸುಗಳು ಹೆಚ್ಚಾಗಲು ಟಿವಿ ಹಾಗೂ ಇತರ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದೆ.
ವಿಜ್ಞಾನಿಯ ಪ್ರಯೋಗಶಾಲೆಯ ಸಿದ್ಧಾಂತಗಳು ಬೇರೊಬ್ಬ ವಿಜ್ಞಾನಿಯ ಸಿದ್ಧಾಂತದಿಂದ ಸುಳ್ಳಾಗಬಹುದು. ಆದರೆ ಭಾರತದ ತಲೆಮಾರುಗಳಿಂದ ಆಚರಣೆಯಲ್ಲಿರುವ ಕೌಟುಂಬಿಕ, ಸಾಮಾಜಿಕ ಜೀವನ ಮೌಲ್ಯಗಳು ಸಾರ್ವಕಾಲಿಕ ಸತ್ಯ. ಅವನ್ನು ಆಚರಣೆಗೆ ತರುವ ಪ್ರಯತ್ನ ಮಾಡಿದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆಯುವಲ್ಲಿ ಅನಮಾನವಿಲ್ಲ.
*ಶಿವಕುಮಾರ ಕೆ.ಎಂ*
ಬೆಂಗಳೂರು.