N-2676 
  25-09-2024 09:00 AM   
ತರಳಬಾಳು ಮಠವು ಧರ್ಮಪೀಠ, ನ್ಯಾಯಪೀಠ, ಜ್ಞಾನಪೀಠಗಳ ತ್ರಿವೇಣಿ ಸಂಗಮವಾಗಿದೆ : ಜಸ್ಟೀಸ್ ಶಿವರಾಜ್ ವಿ. ಪಾಟೀಲ್
ಇದು ಅಕ್ಷರಶಃ ಸತ್ಯ. ನಿನ್ನೆ ನಡೆದ ಶ್ರದ್ಧಾಂಜಲಿ ಸಮಾರಂಭದಲ್ಲಿ ಪರಮ ಪೂಜ್ಯರು "Live Stream Video of Court Proceedings" ಗಳು ಸಾಮಾಜಿಕ ಜಾಲತಾಣಗಳಲ್ಲಿ Opinion Set ಮಾಡುವಂತಹ ಪ್ರಕ್ರಿಯೆ ನಡೆಯುತ್ತಿದ್ದು, ಇದು ನ್ಯಾಯಾಂಗದ ಗೌರವ ಘನತೆಗೆ ಮತ್ತು ದೂರುದಾರರ privacy ಗೆ ಮಾರಕವಾಗಿದೆ. ಇದು ನಿಲ್ಲಬೇಕು ಎಂದು ತಿಳಿಸಿದರು.
ನಿನ್ನೆ ಹೈಕೋರ್ಟಿನಲ್ಲಿಯೂ ಮಾನ್ಯ ನ್ಯಾಯಾಧೀಶರಾದ ಶ್ರೀ ಹೇಮಂತ್ ಚಂದನ್ ಗೌಡರ್, ಲೈವ್ ಸ್ಟ್ರೀಮ್ ತಡೆಹಿಡಿಯಲು ಮಧ್ಯಂತರ ಆದೇಶ ಕೊಟ್ಟಿದ್ದಾರೆ.
ಇದನ್ನು ನೋಡಿದಾಗ ನಮ್ಮ ಘನತೆವೆತ್ತ ನ್ಯಾಯಾಲಯಗಳು ಹಾಗೂ ನಮ್ಮ ಘನತೆವೆತ್ತ ಸದ್ಧರ್ಮ ನ್ಯಾಯಪೀಠದ ಗುರುಗಳು ನ್ಯಾಯಾಧೀಶರು ಒಂದೇ ರೀತಿಯಲ್ಲಿ ಯೋಚನೆ ಮಾಡಿದಂತಿದೆ. ಇದು ನಮಗೆ ಹೆಮ್ಮೆಯ ವಿಷಯ ಅಲ್ಲವೇ ?
Dr. KP. Basavaraj
Banglore