N-2672 
  23-09-2024 09:11 AM   
ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಯಶಸ್ವಿ ಕಾರ್ಯಾರಂಭ
ಹವಾಮಾನ ಬದಲಾವಣೆ, ಪ್ರವಾಹ ಮತ್ತು ಬರ, ಒಂದಕ್ಕೊಂದು ಸಂಬಂಧವಿರುವಂತ ಹಾಗೂ ಅತಿ ಕ್ಲಿಷ್ಟಕರವಾದ ಜಾಗತಿಕ ಸಮಸ್ಯೆ. ಈ ಸಮಸ್ಯೆಗಳ ಪರಿಹಾರಕ್ಕೆ ವಿಶ್ವ ಬ್ಯಾಂಕ್ ಹಾಗೂ ವಿಶ್ವಸಂಸ್ಥೆ ಅನೇಕ ಮಾರ್ಗೋಪಾಯಗಳನ್ನು ಕಂಡುಕೊಂಡಿವೆ. ಅವುಗಳಲ್ಲಿ ಒಂದಾದ- ನದಿಗಳಲ್ಲಿ ಹರಿದು ಹೋಗುವ ಹೆಚ್ಚಾದ ನೀರನ್ನು ದೊಡ್ಡ ದೊಡ್ಡ ಜಲಾಶಯಗಳನ್ನು ಕಟ್ಟದೆ, ಚಿಕ್ಕ ಚಿಕ್ಕ ಏತ ನೀರಾವರಿ ಯೋಜನೆಗಳ ಮೂಲಕ ಬರ ಪ್ರದೇಶಕ್ಕೆ ನೀರು ಉಣಿಸುವುದು.
ಹಾಗಾದರೆ, 76 ವರ್ಷ ಕಳೆದರೂ ಮೇಲ್ಕಂಡ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿಲ್ಲವೇಕೆ? ಇದಕ್ಕೆ ಮೂಲ ಕಾರಣ ಸಮತೋಲನವಲ್ಲದ "Political Economy", ಇದನ್ನು ಮನಗಂಡು ಮೇಲಿನ ಸಮಸ್ಯೆಯನ್ನು ಬಗೆಹರಿಸಲು ಪರಮಪೂಜ್ಯರ ಕಂಡುಕೊಂಡ ಮಾರ್ಗ ಸಂವಿಧಾನ ಮಾನ್ಯ ಮಾಡಿರುವ "Participatory Democracy" ವ್ಯವಸ್ಥೆಯನ್ನು ಅನುಸರಿಸಿ ಸರಕಾರದ ಒಟ್ಟಿಗೆ ಮುಂದಾಳತ್ವವನ್ನು ವಹಿಸಿದ್ದು. ಅದರ ಫಲವೇ ನಮ್ಮ ಕಣ್ಣ ಮುಂದೆ ಇರುವ ಯೋಜನೆಗಳು. ಪರಮಪೂಜ್ಯರ ಈ ಸಮಾಜಮುಖಿ ಕೆಲಸವನ್ನು ನೋಡಿದ ಅನೇಕರು ಇದು ಒಂದು ಅಧ್ಯಯನದ ವಸ್ತು, ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡೋಣ ಎನ್ನುವ ಆಸಕ್ತಿ ತೋರಿಸಿದ್ದಾರೆ.
ಈ ಹಿನ್ನೆಲೆಯನ್ನು ಇಟ್ಟುಕೊಂಡು " ಪರಮಪೂಜ್ಯರ ಕೊಡಿಗೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ- ದೇಶಕ್ಕೆ ಒಂದು ಅಭಿವೃದ್ಧಿ ಮಾದರಿ ನೀತಿ" ಎನ್ನುವ ಅಂಶವನ್ನು ಇಟ್ಟುಕೊಂಡು ಅಧ್ಯಯನ ಮಾಡಲು ಚಿಂತಿಸುತ್ತಿದ್ದೇವೆ.
Dr. KP. Basavaraj
Banglore