N-2671 
  22-09-2024 10:05 PM   
ಸಿರಿಗೆರೆ ಮಠ ಒಂದು ಜಾತಿಯ ಮಠವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಿದೆ : ಶ್ರೀ ತರಳಬಾಳು ಜಗದ್ಗುರುಗಳವರು
*ಸಿರಿಗೆರೆ ಮಠ ಸರ್ವಜನಾಂಗದ ಶಾಂತಿಯ ತೋಟವಾಗಿದೆ.*
ಇದು ಅಕ್ಷರಶಃ ನಿಜ. ಇವತ್ತು ಬಹಳಷ್ಟು ಮಠಗಳು ನಿರ್ಧಿಷ್ಟವಾಗಿ ತಮ್ಮ ತಮ್ಮ ಜಾತಿಯ ಜನಗಳಿಗೆ ಮಾತ್ರ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ.ಅದು ತಮ್ಮ ತಮ್ಮ ಜಾತಿಯ ಜನರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿಸುವುದು,ಚುನಾವಣಾ ಟಿಕೆಟ್ ಕೊಡಿಸುವುದು,ಮೀಸಲಾತಿ ಕೇಳುವುದು ಇನ್ನೂ ಮುಂತಾದ ಕೆಲಸವನ್ನೇ ಬೇರೆ ಬಹಳಷ್ಟು ಮಠಗಳು ಮಾಡುತ್ತವೆ.
ಆದರೆ ಸಿರಿಗೆರೆ ಮಠದ ಕೆಲಸ, ಎಲ್ಲಾ ಜನಾಂಗದ ಹಿತಕ್ಕಾಗಿ. ಅದು ರೈತರ ಹಿತ ಕಾಯಲು, ಬೆಳೆವಿಮೆ ಮಾರ್ಪಡಿಸುವುದು,ಆಸಕ್ತಿ ವಹಿಸಿ ಸರ್ಕಾರದ ಗಮನ ಸೆಳೆದು ಕೆರೆಗಳಿಗೆ ಏತ ನೀರಾವರಿ ಕೆಲಸ ಮಾಡುವ ಮೂಲಕ,ಎಲ್ಲಾ ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡುವುದು, ಅತಿ ಕಡಿಮೆ ಖರ್ಚು ಮತ್ತು ಸಮಯದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವುದು ಇನ್ನೂ ಮುಂತಾದ ಸರ್ವಜನರ ಹಿತ ಕಾಯುವ ಕೆಲಸ ಮಾಡುತ್ತದೆ.
ಮುಖ್ಯವಾಗಿ ಇಂದು ಧಾರ್ಮಿಕ ಸಂಘರ್ಷಗಳು ಹೆಚ್ಚು ಆಗಿ ಸಾಮಾಜಿಕ ಸಾಮರಸ್ಯ ಕೆಡುತ್ತಿರುವಾಗ ಸಂಘರ್ಷ ಉಂಟಾದ ಜಾಗದಲ್ಲಿ ಸಾಮರಸ್ಯ ನಡಿಗೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾರೆ.
ಹಾಗಾಗಿ ನಿಜ ಅರ್ಥದಲ್ಲಿ ಸಿರಿಗೆರೆ ಒಂದು ಜಾತಿಯ ಮಠ ಆಗಿರದೇ ಸರ್ವ ಜನಾಂಗದ ಶಾಂತಿಯ ತೋಟ ಆಗಿದೆ.
ಮಲ್ಲಿಕಾರ್ಜುನ.
India