N-2631 
  29-08-2024 02:05 PM   
ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ
666. ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗೆ ಉಣಿಸಬಾರದು;
ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು;
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.
-ಬಸವಣ್ಣ
677. ಛಲಬೇಕು ಶರಣಂಗೆ ʼಪರಧನವನೊಲ್ಲೆನೆಂಬʼ
ಛಲಬೇಕು ಶರಣಂಗೆ ʼಪರಸತಿಯನೊಲ್ಲೆನೆಂಬʼ
ಛಲಬೇಕು ಶರಣಂಗೆ ʼಪರದೈವವನೊಲ್ಲೆನೆಂಬʼ
ಛಲಬೇಕು ಶರಣಂಗೆ ʼಲಿಂಗಜಂಗಮ ಒಂದೆʼ ಎಂಬ
ಛಲಬೇಕು ಶರಣಂಗೆ ʼಪ್ರಸಾದ ದಿಟವೆಂಬʼ
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ.
ರೈತ ತರಳರ.. ಬಾಳಿನಲ್ಲಿ ತರಳಬಾಳು ಭಗೀರಥರ ಜಲತೀರ್ಥ.ಯುವ ತರಳರ ಬಾಳಿಗೆ ತರಳ-ಬಾಳು.ಎನ್ನುವ ಪಂಚಾಕ್ಷರಿ ಮಂತ್ರ. ಮತ್ತು ಛಲದಲ್ಲಿ ಯಾವ ಜಾಲವಿಲ್ಲದೇ ಬದುಕಿನಲಿ ಬದುಕಿರಿ ಎಂದು ಜಲಾರ್ಶೀವಾದವಲ್ಲವೆ...
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ