N-2615 
  17-08-2024 02:19 PM   
ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!
ಮೊನ್ನೆ ದಿನ ದಾವಣಗೆರೆ ಯಲ್ಲಿ ನಡೆದ ಪೂಜ್ಯರ ವಿರುದ್ಧವಾಗಿ ಸಭೆ ಯಲ್ಲಿ ಭಾಗವಹಿಸಿದ ಜನರು ನಮ್ಮ ಸಮಾಜ ದವರೇ ಎಂದು ಅನುಮಾನ ಬರುತ್ತದೆ.
ಇತರೇ ಲಿಂಗಾಯತರು ನಮ್ಮ ಸಮಾಜದವರನ್ನು ನಿಕೃಷ್ಟ ವಾಗಿ ಕಾಣುತ್ತಿದ್ದ ಕಾಲ ಇತ್ತು. ಅದು ಈಗಿನ ಪೀಳಿಗೆ ಯವರಿಗೆ ಅನುಭವಕ್ಕೆ ಬಂದಿರುವುದಿಲ್ಲ. ಏಕೆಂದರೆ ಇವರುಗಳು ಪ್ರಬುದ್ಧ ರಾಗುವ ಸಮಯಕ್ಕೆ ಆಗಲೇ ನಮ್ಮ ಸಮಾಜ ಉನ್ನತೀಕರಿಸಿಕೊಂಡಿದ್ದು ಕಾರಣ. ಇದಕ್ಕೆ ಕಾರಣಕರ್ತರಾಗಿದ್ದು ಶ್ರೀ ತರಳಬಾಳು ಮಠ. ಆಗಿನ ಸಂಕಷ್ಟ ಪರಿಸ್ಥಿತಿ ಯಲ್ಲಿ ಪೀಠ ಏರಿದ ಹಿರಿಯ ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಪೂಜ್ಯರು ತಮ್ಮ ಸಕಲ ಶಕ್ತಿಯನ್ನು ಉಪಯೋಗಿಸಿ ಸಮಾಜ ವನ್ನು ಉದ್ದಾರ ಮಾಡಿದರು. ಅದಕ್ಕೆ ನಮ್ಮ ಸಮಾಜದ ಅಧ್ಯಕ್ಷ ರಾಗಿದ್ದ ಶರಣ ಮಾಗನೂರು ಬಸಪ್ಪ , ಎಲ್ ಸಿದ್ದಪ್ಪ ಅಂತಹ ಶಿಷ್ಯವೃಂದ ವೂ ಕಾರಣ. ಇಂತಹ ಭಕ್ತರು ನಿಸ್ವಾರ್ಥ ದಿಂದ ಕಟ್ಟಿದ ಸಮಾಜ ಮತ್ತು ಮಠ ವನ್ನು ಈಗ ಕೆಲ ಸ್ವಾರ್ಥಿ ಗಳು ಹಾಳುಗೆಡವಲು ಪ್ರಯತ್ನನಿಸುತ್ತಿರುವುದು ಖಂಡನಿಯ.
ಮೊನ್ನೆ ಅಪೂರ್ವ ರೆಸಾರ್ಟ್ ನಲ್ಲಿ ನಡೆದ ಸಭೆ ಯಲ್ಲಿ ಭಾಗವಹಿಸಿದ ಜನರು ನಮ್ಮ ಸಮಾಜದ ಹಿತಚಿಂತಕರೇ. ಶಾಮನೂರು ಶಿವಶಂಕರಪ್ಪ ನವರನ್ನು ಮೊನ್ನೆ ಸಭೆಯ ರೂವಾರಿ ಅಣಬೇರು ರಾಜಣ್ಣ ಹಾದಿ ತಪ್ಪಿಸಿದ್ದಾರೆ. ಶಂಕರಪ್ಪ ನವರು ಸ್ವಲ್ಪ ಆಲೋಚನೆ ಮಾಡಬೇಕಿತ್ತು. ೬೦ ವರ್ಷಕ್ಕೆ ನಿವೃತ್ತ ಆಗಬೇಕು ಎನ್ನುವ ಶಂಕರಪ್ಪ ನವರು ತಮಗೆ ೯೦ ವರ್ಷ ಗಳಾದರು ಯಾಕೆ ಶಾಸಕ ಆಗಿದ್ದಾರೆ. ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಅಸೆ ಪಟ್ಟಿದ್ದ ರಾಜಣ್ಣ ಆ ಪಟ್ಟ ಸಿಗದೇ ಇದ್ದದ್ದಕ್ಕೆ ಉರಿ ಬಿದ್ದು ಸಭೆಯ ಆಯೋಜನೆ ಮಾಡಿದ್ದಾರೆ. ಸಮಾಜದಿಂದ ಶಂಕರಪ್ಪ , ರಾಜಣ್ಣ ಹೊರೆತು ಅವರಿಂದ ಸಮಾಜ ಅಲ್ಲ.
ನಮ್ಮ ಸಮಾಜ ಮತ್ತು ಮಠ ದ ಕೀರ್ತಿ ಯನ್ನು ಪ್ರಪಂಚದ ತುಂಬಾ ಹರಡಿದ ಕೀರ್ತಿ ಈಗಿನ ಪೂಜ್ಯ ಗುರು ಗಳದ್ದು. ಪೂಜ್ಯರ ಪೀಠತ್ಯಾಗ ಕೇಳುತ್ತಿರುವ ಇವರಿಗೆ , ಪೂಜ್ಯ ರಿಂದ ಈಗ ಸಮಾಜ ಕ್ಕೆ ಮತ್ತು ಮಠಕ್ಕೆ ಆಗಿರುವ ದ್ರೋಹ ಏನು ಎಂದು ಸಮಸ್ತ ಭಕ್ತರಿಗೆ ತಿಳಿಸುವ ಅವಶ್ಯಕತೆ ಇದೆ. ಸಮಾಜ ಎಂದರೆ ಕೆಲ ಸ್ವಾರ್ಥಿ ಗಳು ಅಲ್ಲಾ. ಇದನ್ನು ಅವರು ತಿಳಿದುಕೊಳ್ಳ ಬೇಕು. ತಮ್ಮ ಉಸಿರು ಇರುವವರೆಗೂ ಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯರೇ ನಮ್ಮ ಗುರು ಗಳು. ನಮ್ಮ ಸಮಾಜಕ್ಕೆ ಪೂಜ್ಯರೇ ಸುಪ್ರೀಂ.
Nagaraja K K
Davanagere.