N-2600 

  07-08-2024 07:09 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

  ಸಾಧು ಸಮಾಜದ ಆತ್ಮೀಯರೇ, ಟ್ರಸ್ಟ ಕನ್ನಡಿ ಯಂತೆ ಸ್ಪಷ್ಟವಾಗಿದೆ. ದುಷ್ಟ ಶಕ್ತಿಗಳ ಕೃತ್ಯ ವಿದು. ಸಾಧು ಸಮಾಜ ಕಟ್ಟುವ ಕೆಲಸ ಆಗಬೇಕು, ಹೊ ಡೆ ಯುವ ಕೆಲಸ ಮಾಡಬಾರದು , ಸಾಧು ಸಮಾಜ ದಿಗಂತದ ವರೆಗೆ ಯಶ್ಸ ಸು ಕಾಣಲಿ ಎಂದು ಆಶಿಸುವ
ಪ್ರೊ ಎನ್. ಕೆ. ಗೌಡ ( ನಿ ವೃತ್ತ )
ದಾವಣಗೆರೆ ಕರ್ನಾಟಕ ಭಾರತ

N-2600 

  07-08-2024 06:53 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 Namastte guruji don`t worry we are all with you, some idiots politics can play there game in matt but we hav power to stop them, please take care of your self
SUMANTH G M
shimoga

N-2594 

  07-08-2024 06:05 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 The so called leaders who are face of public should not give statements like this, we support dr gurugalu forever 🙏🙏🙏
PRAMOD
India

N-2600 

  07-08-2024 06:04 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಭಾನುವಾರದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸೋಮವಾರದ ಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ ಮಾನ ಮರ್ಯಾದೆ ಇದ್ದರೆ ಮಠಕ್ಕೆ ಬಂದು ಶರಣಾಗಿ
Nagaraja N S
Kadur

N-2600 

  07-08-2024 05:48 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಉತ್ತಮ ಕೆಲಸ ಮಾಡುವ ಉನ್ನತ ಮಟ್ಟದ ಲ್ಲಿ ಮಠ ವನ್ನು ಮುನ್ನಡಿಸುವ ನೀರಾವರಿ ಮೂಲಕ ಕೆರೆಗೆ ನೀರು ತುಬಿಸುವ ನಮ್ಮ ಮೆಚ್ಚಿನ ಸ್ವಾಮೀಜಿ ಯವರಿಗೆ ನಮ್ಮ ಸಹಕಾರ ಸದಾ ಇರುತ್ತದೆ 🙏🙏🙏🙏 ಶಿವ ಶಿವ ಶಿವ 🙏

ಅಂಬಳಿ ರವೀಂದ್ರ ಗೌಡ
ಅಮರ ಸದನ, ವಾರ್ಡ್ಹ 3, ವಿವೇಕಾನಂದ ನಗರ ಹಳೇ ಹಗರಿಬೊಮ್ಮನಹಳ್ಳಿ

N-2600 

  07-08-2024 05:43 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 No
K B jayanna
Kadur karanataka india

N-2600 

  07-08-2024 05:28 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ನಮ್ಮ ಮಠದ ಬಗ್ಗೆ ಹಾಗೂ ನಮ್ಮ ಗುರುಗಳ ಬಗ್ಗೆ ಗೌರವದಿಂದ ಮಾತನಾಡಬೇಕ್ ಯಾರೇ ಆಗಲಿ ಜೈ ತರಳಬಾಳು ಜೈ ಜಗದ್ಗುರು 🙏🙏🙏
Manjunatha p
Kakabalu

  07-08-2024 03:47 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಮಠದ ವಿರುದ್ಧ ಮತ್ತು ನಮ್ಮ ಡಾ ಗುರುಗಳ ವಿರುದ್ಧ ದನಿ ಯಾತ್ತುವವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತೆ ಗೌರವದಿಂದ ಇದ್ದಾರೆ ಸರಿ ಇಲ್ಲದಿದ್ದರೆ.............?

ಶೇಖರ್ ಡಿ ಬಣಕಾರ್ ವಕೀಲರು

N-2600 

  07-08-2024 03:18 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಪೂಜ್ಯ ಗುರುಗಳೇ ಅವರಿಗೆ ಇ ವಿಷಯ ಗೊತ್ತು ಇದ್ದೆ ಇರುತ್ತೆ ಆದರೆ ನಮ್ಮ ಮಠದ ಶಿಷ್ಯರಿಗೆ ಇದುವರೆಗೂ ಇ ವಿಷಯ (ಕೇಲವರಿಗೆ ಬಿಟ್ಟು )ಗೊತ್ತು ಇರಲಿಲ್ಲ ಇವಾಗ ಇ ವಿಷಯ ಪ್ರತಿ ಯೊಬ್ಬರಿಗೂ ತಿಳಿದಿದ್ದು ಇದರಿಂದ 🎉 ಮಠದ ಮೇಲಿನ ಗೌರವ ಹಾಗೂ ಗುರುಗಳ ಮೇಲಿನ ಭಕ್ತಿ ಮತೋಷ್ಟು ಹೆಚ್ಚಾಗಿದೆ.

🔴 ಶಿವ 🔴

🙏🙏 ನಮ್ಮ ಮಠ ನಮ್ಮ ಗುರುಗಳು 🙏🙏
Halesha D
ತೂಲಹಳ್ಳಿ

N-2600 

  07-08-2024 02:53 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. "ಸುಳ್ಳು ಆರೋಪ ಮಾಡುವುವರಿಗೆ ಇಲ್ಲಿದೆ ಉತ್ತರ". ೧೯೯೦ ರಲ್ಲಿನ ವಿವರಗಳನ್ನು ಪರಿಶೀಲಿಸಿದಾಗ ವಿವರಗಳು ಕನ್ನಡಿಯಷ್ಟು ನಿಚ್ಚಳವಾಗಿವೆ. ಎಲ್ಲಾ ಗೊತ್ತಿದ್ದು ಇಲ್ಲ ಸಲ್ಲದ ಅಪಾದನೆಗಳನ್ನು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ಸೂಕ್ತವಾಗಿ ತಾವು ನಿಭಾಯಿಸಲು ಶಕ್ತರಿರುವಿರಿ. ಮಠದ ಭಕ್ತಿ ಮತ್ತು ಸಹಾಯವನ್ನು ಸೇವಿಸಿರುವ ಇವರನ್ನು ಯಾವ ರೀತಿಯಲ್ಲಿ ಕರೆಯಬೇಕೋ ತಿಳಿಯುತ್ತಿಲ್ಲ. ಇವರಿಗೆ ಶಿವನು ಒಳ್ಳೆಯ ಬುಧ್ದಿಯನ್ನು ಕರುಣಿಸಿ ಒಳ್ಳೆಯ ಮಾರ್ಗದಲ್ಲಿ ಹೋಗಲು ದಾರಿ ತೋರಲಿ. ಈ ನಮ್ಮ ಸಿರಿಗೆರೆ ಮಠದ ದೊಡ್ದ ಸಾಮ್ರಾಜ್ಯವನ್ನು ತಮ್ಮ ನಂತರ ತಮ್ಮಂತೆ ನಿಭಾಯಿಸಿಕೊಂಡು ಹೋಗುವ ಉತ್ತರಾಧಿಕಾರಿ ತಮ್ಮ ಮಾರ್ಗದರ್ಶನದಲ್ಲಿ ಬರಲಿ ಎಂದು ಬೇಡುವ ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ

Prabhudev M S
SHIVAMOGGA

N-2600 

  07-08-2024 02:40 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 "ನಡೆ ನೆರಳಾಗಲಿ"
____________________
ಇಂದಾಗಿವೆ ರೆಸಾರ್ಟ್, ದೊಡ್ಡಸ್ಥನದ ಪ್ರತಿಬಿಂಬ,
ಜನಸಾಮಾನ್ಯರ ಬಾಯಿಯಲ್ಲಿ ಕೆಳೋದು,ಹೇಳೋದೊಂದು ಮತಿ ಬಿಂಬ
ಅಲ್ಲಿ ನಡೆಯುವ ಸಭೆ ಸಮಾರಂಬಕ್ಕೆ
ಹೋಗುವವರಿಗಿರುವುದು ಇಂಬು
ಹೊರಬರುವಾಗ್ಗೆ ಅವರವರ ಬುಜಗಳಾಗುವವು ಒಬ್ಬರಿಗೊಬ್ಬರ ತಲೆದಿಂಬು
ಇಂಥವರ ಅಜೆಂಡಾ ಹಿಂಬಾಲಿಸಿಕೊಂಡವರಿಗೆ ಖಾಲಿ ಚೊಂಬು.

ನಶೆಯ ಮನಬಂದಂತೆಯ ಮಾತು
ಕಿಶೆಯಲ್ಲಿಯ ರೊಕ್ಕ ದಂತೆ.
ಕಾಂಗ್ರೆಸ್ ಪ್ರಚಾರ ,ಕೈ ಗೆ ಜೈ ,ಇತ್ತು ಕಾರು ಬಾಗಿಲಿಗೆ ಕೈ ಸಿಕ್ಕಾಗ ,ನಶೆದಾತನು ಕೈ ಗೆ ಜೈ ಎಂದಂತೆ,
ಮಠದ ಭಕ್ತರು ರೆಸಾರ್ಟ್ ಸಭೆಯ
ಕುರಿತು ಕಿಂಚಿತ್ ಅಂಜಿ ಅಳುಕಿ ವಿಚಲಿತರಾಗಿ ಬೇಡಿ.

ನಾಳೆ ನಾವು ಇಲ್ಲ,ನೀವು ಇಲ್ಲ ,ಹೊತ್ತೋಯ್ಯುವುದು ಭೂತಯ್ಯನ ಮಗ ಅಯ್ಯು ಸಿನಿಮಾದ ದ್ರಶ್ಯಾವಳಿ.
ಸತ್ಯ ಅರಿಯದೆ ,ಮಿತ್ಯದ ದುಂಬಾಲಿಗಿಲ್ಲ ಸಾಮಾಜಿಕ ಮನ್ನಣೆ.
ಸಾಮಾಜಿಕ ಮನ್ನಣೆ ,ಎಂಟಾಣೆಯ
ವಸ್ತುಎಂದರಿದಿರೆ,
ಆಗುವಿರೆಲ್ಲ ಅಡುಗೆ ಮನೆಯ ಮಸಿ ಬಟ್ಟೆಯಂತಲ್ಲವೆ.
ಬಿಸಿಲಿಗೆ ಮರದ ನೆರಳಿನಂತೆ,ನಮ್ಮಗಳ ನಡೆಯೇ
ಜೀವನದ ಕನಸಾಗಿಸೋಣ.

ಶೇಬಪಾಆಡೂರು
(ಶೇಖರಗೌಡ ಪಾಟೀಲ)
ಹರಪನಹಳ್ಳಿ
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2600 

  07-08-2024 02:34 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಅಲ್ಲಿ ಸೇರಿರುವ ಮಹಾನ್ ನಾಯಕರುಗಳು ಸಮಾಜದ ಹುದ್ದಾರಕ್ಕೆ ಅವರ ಕೊಡುಗೆ ಏನಿದೆ ಎಂದು ಆತ್ಮಸಾಕ್ಷಿ ಯನ್ನು ಕೇಳಿಕೊಂಡು. ಅವರು ಸಾದು ಸಮಾಜಕ್ಕೆ ನೀಡಿದ ಕೊಡುಗೆಯನ್ನ ಸಮಾಜಕ್ಕೆ ತಿಳಿಸಿ ಮಠದ ಬಗ್ಗೆ ಮಾತಾಡಿದರೆ ಸಮಾಜ ಒಪ್ಪಬಹುದು.
G Munegowda
Davanagere

N-2600 

  07-08-2024 02:34 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ವಿಷ ಜಂತುಗಳು ಅರ್ಥ ಮಾಡಿಕೊಳ್ಳಬೇಕು
Nagaraja kuriyar
Chikkenahalli Chitradurga

N-2600 

  07-08-2024 02:33 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಶ್ರೀ ಗುರುಗಳಿಗೆ ನಮ್ಮಯ ದೀರ್ಘ ದಂಡ ನಮಸ್ಕಾರಗಳು. It is really hurting to the behaviours of some people since 2 days. These are the people / personalities whom your kind self has cared for decades after the exit of reverend Senior Swamiji. Unfortunate that these improperly guided mindsets are behaving in a way to bring unrest. Sir we know thar your goodwill and care towards we devotees will strengthen you to resolve the untoward developments smoothly. Prabhudev M S & Family Shivamogga
Prabhudev M S
SHIVAMOGGA

N-2458 

  07-08-2024 02:24 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿಯ ಮಡಿಲನ್ನು ಸೇರಿದ ವೀರ ಯೋಧ

ಶ್ರೀಗಳು ಬರೆದ ಈ ಅಂಕಣ ಎಲ್ಲಾರ ಮನಸ್ಸನ್ನು ಒಂದು ಭಾರಿ ಯೋಚಿಸುವಂತೆ ಮಾಡುತ್ತದೆ., ಕಾರಣ ದೇಶದ ಮೇಲೆ ಇರುವ ಅಭಿಮಾನ.
ನಾನು ಎಸ್ ಎಸ್ ಎಲ್ ಸಿ ಮುಗಿಸುವ ಸಂದರ್ಭದಲ್ಲಿ ಈ ಯುದ್ದ ನಡೆಯುತ್ತಿತ್ತು. ಒಂದು ಕಡೆ ಪರೀಕ್ಷೆ ಎನ್ನುವ ಯುದ್ದ, ಇನ್ನೊಂದು ಕಡೆ ಕಾರ್ಗಿಲ್ ಯುದ್ದ . ಈ ಸಂದರ್ಭದಲ್ಲಿ ಪರೀಕ್ಷೆ ಎನ್ನುವ ಯುದ್ಧ ಗೆದ್ದಾಯಿತು, ಸ್ವಲ್ಪ ದಿನದಲ್ಲೆ ಬೆಂಗಳೂರಿನ ಮಾಣಿಕ್ ಷಾ ಪೇರೆಡ್ ಮೈದಾನದಲ್ಲಿ ಸೇನೆಗೆ ಸೇರಲು ಒಂದು ಅವಕಾಶ ಬಂತು. ನಾನು ಕೂಡ ಅದರಲ್ಲಿ ಭಾಗವಹಿಸಿದ್ದೆ. ಆದರೆ ದುರದೃಷ್ಟ ನಾನು ಉತ್ತಿರ್ಣನಾಗಲಿಲ್ಲ. ಕಾರಣ ಒಂದು ತಿಂಗಳ ಹಿಂದೆ ನನಗೆ ಬಸ್ಸಿನಲ್ಲಿ ಅಪಘಾತವಾಗಿತ್ತು . ಮತ್ತೆ ಅವಕಾಶ ಬರುವಷ್ಟರಲ್ಲಿ ನನಗೆ ಸೇನೆಗೆ ಸೇರುವ ವಯೋಮಿತಿ ಮುಗಿದಿತ್ತು. ಅದರೆ ಧೃತಿಗೆಡದೆ ವಿದ್ಯಾಭ್ಯಾಸ ಮುಂದುವರೆಸಿ M A ರಾಜ್ಯಶಾಸ್ತ್ರ ಮುಗಿಸಿದೆ . ಅದರೆ ಸೈನ್ಯ ಕ್ಕೆ ಸೇರದಿರುವ ಕೊರಗು ಕಾಡುತ್ತಿತ್ತು ಅದುದರಿಂದ ನಾನು ವ್ಯವಸಾಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು 15 ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡುತ್ತಿದ್ದೇನೆ ಮತ್ತು ಯಶಸ್ವಿಯಾಗಿ ಮುಂದುವರೆಯುತ್ತಿದ್ದೇನೆ. 25 ದೇಶಿ ಹಸುಗಳು ಸಹ ನನ್ನೊಟ್ಟಿಗೆ ಇವೆ ಎಂದು ಹೇಳಲು ತುಂಬಾ ಖುಷಿ ನನಗೆ . ಶ್ರೀಗಳ ಈ ಲೇಖನ ನನಗೆ ಹಳೆಯ ನೆನೆಪುಗಳನ್ನ ಮತ್ತೆ ಮೇಲುಕು ಹಾಕುವಂತೆ ಮಾಡಿತು.
ಧನ್ಯವಾದಗಳು ಶ್ರೀಗಳಿಗೆ. ವೆಂಕಟೇಶ ಶೇಟ್ಟಿಯವರಿಗೆ ಅನಂತ ಅನಂತ ಧನ್ಯವಾದಗಳು.
ಜ್ಞಾನೇಶ್ವರ ಕೆ ಆರ್ ದೊಡ್ಡಸಿದ್ದವ್ವನಹಳ್ಳಿ. ಚಿತ್ರದುರ್ಗ

N-2600 

  07-08-2024 02:23 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಕಳ್ಳರ ಗ್ಯಾಂಗ್ ನಲ್ಲಿ ಕೆಲವು ಸುಳ್ಳು ಮಂತ್ರಿ ರಾಜಕಾರಣಿಗಳು ಸೇರಿ ಬದಲಾವಣೆ ಮಾಡಿ ಬಿಡ್ತೇವೆ ಅನ್ನೋಕೆ ಇದು ನೀವು ಆಳ್ವಿಕೆ ಮಾಡೋ ಪಾರ್ಟಿ ಪಕ್ಷ ಅನ್ಕೊಂಡ್ರಾ ಮಠ ಗುರು ಭಕ್ತರು ಪರಂಪರೆ ಇಟ್ಕೊಂಡು ಬಂದಿರೋ ಮಠ ನೀವ್ಯಾರೋ 4ಮಂದಿ ಸೇರಿ ಹೇಳೋದಲ್ಲ ಪ್ರತಿಯೊಬ್ಬ ಸಾದು ಲಿಂಗಾಯತನಿಗೂ ಮಠ ಸೇರಿದ್ದು ಎಲ್ಲರು ಅಭಿಪ್ರಾಯ ಮುಖ್ಯ ನೀವೇನ್ ಬದಲಾಯಿಸೋದು ಮಣ್ಣು ನಿಮ್ಮನ್ನ ನಾವು ಚುನಾವಣೆನಲ್ಲಿ ಬದಲು ಮಾಡಿ ರೆಟರ್ಮೆಂಟ್ ಕೊಟ್ರೆ ನಿಮ್ ಶರ್ಟ್ ನಿಮ್ ಕೈಲಿ ಬದಲಾಯಿಸಿಕೊಳ್ಳೋಕೆ ಆಗಲ್ಲ ಸಮಾಜದಿಂದ ನೀವು ನಿಮ್ಮಿಂದ ಸಮಾಜ ಅಲ್ಲ
ಅಣ್ಣಪ್ಪ ಪಿ ಹುಣಸಿಕಟ್ಟೆ

  07-08-2024 02:19 PM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 Matada bakataralli savinaya prarthane dayamadi yaru ketta helikegalannu kodabedi yakendare egagale bere matagalige holisidare namma matakke swalpa maryade ede Ella baktaru idannu arthamadikolli Jai taralabalu jai vishwabandu marulasidda
MARULASIDDESHWARA
India

N-2458 

  07-08-2024 02:14 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಪೂಜ್ಯರಿಗೆ ನಮಸ್ಕರಿಸುತ್ತಾ

ತಾಯಿಯ ಮಡಿಲನ್ನು ಸೇರಿದ ವೀರಯೋಧ - ಎಂಬ ಅಂಕಣದಲ್ಲಿ ಗುರುಗಳು 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಕಾರ್ಗಿಲ್ ಯುದ್ಧದ ಪ್ರಸ್ತಾಪ ಮಾಡಿದ್ದಾರೆ. ಕರ್ನಲ್ ರವೀಂದ್ರನಾಥ ಅವರು ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದರು. ಕಾಲನ ಕರೆ ಯಾರನ್ನೂ ಬಿಡುವುದಿಲ್ಲ. ಬೆಳಗಿನ ವಾಯು ವಿಹಾರ ಮುಗಿಸಿ ಬಂದವರು ಸಾವಿಗೆ ಶರಣಾಗಿದ್ದರು. ಅಂತಿಮ ವಿದಾಯ ಹೇಳಲು ದಾವಣಗೆರೆಗೆ ಹೋಗಿದ್ದ ಗುರುಗಳಿಗೆ ಹಿಂದೆ ಅವರಾಡಿದ ಮಾತುಗಳು ನೆನಪಾದವು. ಅದನ್ನು ಗುರುಗಳು ಉಲ್ಲೇಖಿಸಿದ್ದು ಹೀಗೆ. ಸೇನಾ ಪಡೆಯ ಕಮಾಂಡರ್ ಆಗಿದ್ದ ಅ ವರು ತಮ್ಮ ಸಹೋದ್ಯೋಗಿ ಗುಂಡೇಟಿಗೆ ಬಲಿಯಾದಾಗ, ಅವನ ಹೆಂಡತಿ ಪತ್ರದಲ್ಲಿಬರೆದ ವೀರಾ ವೇಷದ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಎಲ್ಲ ಯೋಧರನ್ನು ಧೃತಿಗೆಡದಂತೆ ಹುರಿದಿಂಬಿಸಿ ಕರ್ನಲ್ ರವೀಂದ್ರನಾಥ ತಮ್ಮ ಅಪಾರ ದೇಶ ಭಕ್ತಿ ಮೆರೆದಿದ್ದಾರೆ.

ಮಠದಿಂದ ಕರ್ನಲ್ ಅವರನ್ನು ಸನ್ಮಾನಿಸಿದಾಗ, ಅವರ ತಂದೆ ಬಸಪ್ಪ ಮೇಷ್ಟ್ರು ಹಾಗೂ ತಾಯಿ ಸರೋಜಮ್ಮನವರನ್ನು ಸನ್ಮಾನಿಸಲಾಗಿತ್ತು. ಸರೋಜಮ್ಮನವರು ಗುರುಗಳ ವಿದೇಶಿ ಯಾತ್ರೆ ಸಂದರ್ಭದಲ್ಲಿ ಓಂ ಶಾಂತಿ ವಿಶ್ವಶಾಂತಿ ಎಂಬ ಶಾಂತಿ ಮಂತ್ರವನ್ನು ಬರೆದಿದ್ದು ನೋಡಿ ಗುರುಗಳು ಮೂಕವಿಸ್ಮಿತರಾಗಿದ್ದರು. ಅವರ ತಾಯಿಯನ್ನು ಯುದ್ಧದ ಬಗ್ಗೆ ಪ್ರಶ್ನಿಸಿದಾಗ, ರಸ್ತೆ ಅಪಘಾತಗಳಲ್ಲಿ ಎಷ್ಟೋ ಜನ ಸಾಯುತ್ತಾರೆ. ಆದರೆ ನನ್ನ ಮಗ ದೇಶಕ್ಕಾಗಿ ಹೋರಾಡಿ ಸತ್ತಿದ್ದರೆ ಇನ್ನೂ ಹೆಚ್ಚು ಸಂತೋಷ ಪಡುತ್ತಿದ್ದೆ ಎನ್ನುತ್ತಾರೆ. ಇದಲ್ಲವೇ ವೀರಯೋಧನ ತಂದೆ ತಾಯಿಗಳ ದೇಶಭಕ್ತಿ ಎಂದು ಗುರುಗಳು ಅಂಕಣವನ್ನು ಮುಗಿಸುತ್ತಾರೆ. ಕರ್ನಲ್ ರವೀಂದ್ರನಾಥ ಅಂತಹ ಯೋಧರು ನಮ್ಮ ನಾಡಿನಲ್ಲಿ ಹುಟ್ಟಿ ಬರಬೇಕು.

ಗುರುಗಳ ಅಂಕಣಗಳಿಗೆ ಪ್ರತಿಕ್ರಿಯೆ ನೀಡಲು ಪ್ರೋತ್ಸಾಹಿಸುತ್ತಿರುವ ರಾ ವೆಂಕಟೇಶ ಶೆಟ್ಟರಿಗೆ ಅನಂತ ಧನ್ಯವಾದಗಳು.

ರಾಜೇಶ್ವರಿ ಹರೀಶ್, ಕಡಬ