N-2458 
  07-08-2024 01:15 PM   
ತಾಯಿಯ ಮಡಿಲನ್ನು ಸೇರಿದ ವೀರ ಯೋಧ
ಅಂಕಣ ಪ್ರತಿಕ್ರಿಯೆ* *ತಾಯಿಯ ಮಡಿಲನ್ನು ಸೇರಿದ ವೀರ ಯೋಧ*
*ಶ್ರೀ ಗುರುಗಳ ಪಾದಗಳಿಗೆ ನಮಸ್ಕರಿಸುತ್ತ.....*
1999ರಲ್ಲಿ ಜರುಗಿದ ಕಾರ್ಗಿಲ್ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ಮಹತ್ತರ ಸಾಧನೆಯಾಗಿದೆ. ಹಲವಾರು ಯೋಧರ ತ್ಯಾಗ ಬಲಿದಾನಗಳಿಂದ ವಿಜಯವನ್ನು ಸಾಧಿಸಿದ ಭಾರತವು, ಜುಲೈ ೨೬ ನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸುತ್ತಿದೆ.
ಅದರಲ್ಲಿ ವಿಶಿಷ್ಟ ಸಾಧನೆಗೈದ ಕೆಲವು ಯೋಧರ ಯಶೋಗಾಥೆಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಶ್ರೀ ಗುರುಗಳ ಇಂದಿನ ಲೇಖನದಲ್ಲಿ , ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ 4590 ಅಡಿ ಎತ್ತರದಲ್ಲಿರುವ ಟೋಲೋಲಿಂಗ್ ಶಿಖರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ,` ವೀರಚಕ್ರ` ಪ್ರಶಸ್ತಿಗೆ ಭಾಜನರಾಗಿದ್ದ ಕರ್ನಲ್ ರವೀಂದ್ರನಾಥ ಅವರ ಸೇನಾ ಸಾಧನೆಯನ್ನು ,ಅವರ ಕುಟುಂಬದವರಲ್ಲಿದ್ದ ದೇಶಭಕ್ತಿಯ ಸೇವೆಯನ್ನು ಮನ ಮಿಡಿಯುವ ರೀತಿಯಲ್ಲಿ ತಿಳಿಸಿದ್ದಾರೆ. ಇಂತಹ ಅಪ್ರತಿಮ ವೀರ ಕರ್ನಲ್ ರವೀಂದ್ರನಾಥ ಅವರು ತಮ್ಮ ಬದುಕಿಗೆ ಅಂತಿಮ ವಿದಾಯವನ್ನು ಹೇಳಿರುವುದು ನೋವಿನ ಸಂಗತಿಯಾಗಿದೆ.
ಅದರ ಜೊತೆಗೆ ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗಿ ವೀರ ಮರಣ ಅಪ್ಪಿದ ರಾಜಸ್ಥಾನ ಯೋಧನ ಪತ್ನಿಯು ತನ್ನ ಪತಿಯ ಜೇಬಿನಲ್ಲಿ ಬರೆದಿಟ್ಟ ಆ ಕೆಚ್ಚೆದೆಯ ಸಾಲುಗಳನ್ನು ಓದಿದಾಗ ಆ ವೀರ ವನಿತೆಯ ದೇಶಭಕ್ತಿಗೆ ತಲೆಬಾಗಿದೆ.
ಒಟ್ಟಾರೆ ಇಬ್ಬರ ಯೋಧರ ಕುಟುಂಬಗಳಲ್ಲಿರುವ ಆ ತಾಯಂದಿರ ದೇಶಭಕ್ತಿಯ ಸೇವೆ ಅಮೋಘವಾದದ್ದು. ಈ ಒಂದು ಲೇಖನಕ್ಕೆ ಪ್ರತಿಕ್ರಿಯೆ ಬರೆಯಲು ಸ್ಪೂರ್ತಿಯ ಚಿಲುಮೆಯಾದ ನನ್ನ ನೆಚ್ಚಿನ ಗುರುಗಳಾದ ಶ್ರೀಯುತ *ರಾ.ವೆಂಕಟೇಶ ಶೆಟ್ಟಿ ಸರ್* ಅವರಿಗೆ ಅನಂತ ನಮನಗಳು.
ಪ್ರೀತಿ. ಎಸ್.ಗೊಬ್ಬಾಣಿ ಧಾರವಾಡ.