N-2596 
  07-08-2024 07:27 AM   
ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ
ಈ ಕೆಳಗಿನ ವಚನಗಳ ರೀತಿಯಲ್ಲಿಯೇ ನಮ್ಮ ಪರಮಪೂಜ್ಯರಿರುವಾಗ, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಠದ ಘನತೆ ಧಕ್ಕೆ ತರುವವರಿಗೆ ಭಕ್ತರೇ ಸರಿಯಾಗಿ ಪಾಠ ಕಲಿಸುವ ಕಾಲ ಬರುತ್ತದೆ.
ವಚನ - 1
ಕಾಮ ಕ್ರೋಧಾದಿಗಳನು ಸುಟ್ಟು
ಕಾವಿ ಬಟ್ಟೆಯನು ತಾನು ತೊಟ್ಟು
ಕಾಲ ಜ್ಞಾನದ ವಿಭೂತಿಯ ಧರಿಸಿ
ಕಾಲನ ಜಯಿಸುವ ಮಾರ್ಗವ ಬೋಧಿಸಿ
ಭಕ್ತರ ಹೃದಯ ಸಿಂಹಾಸನವೇರಿ
ಭಕ್ತಿಯ ಪರಂಜ್ಯೋತಿಯನು ಬೆಳಗಿದಿರಿ
ಶ್ರೀ ತರಳಬಾಳು ಸದ್ಗುರುವೇ ಜಗದ
ತರಳರನು ಸನ್ಮಾರ್ಗದಲ್ಲಿ ಮುನ್ನಡೆಸಿದಿರಿ.
ವಚನ - 2
ಭಕ್ತರ ಹೃದಯ ಸಿಂಹಾಸನವೇರಿದ ಗುರುವೇ
ಜನರ ಮನೆಮನದಿ ಪೂಜಿಸುವ ಮಹಾಗುರುವೇ
ತರಳರ ಬಾಳನುದ್ದರಿಸಲು ಬಂದ ಜಗದ್ಗುರುವೇ
ಕಾಯಕ ಕಾಲ ಕಾಸಿನ ಮಹತ್ವ ಸಾರಿದ ಪ್ರಭುವೇ
ಶ್ರೀ ತರಳಬಾಳು ಸದ್ಗುರುವೇ ಶರಣು ಶರಣೆಂಬೆ.
ವಚನ - 3
ಮಾರ್ಜಾಲ ತನ್ನ ಮರಿಯನು
ಮಮತೆಯಿಂದ ರಕ್ಷಿಸುವಂತೆ
ಮರ್ಕಟದ ಮರಿಯು ತನ್ನಯ
ಮಾತೆಯನು ಆಶ್ರಯಿಸುವಂತೆ
ಮತ್ಸ್ಯದ ಮರಿಯು ತನ್ನಯ
ವಾತ್ಸಲ್ಯದ ತಾಯಿಯ ಸ್ಮರಿಸುವಂತೆ
ಶ್ರೀ ತರಳಬಾಳು ಸದ್ಗುರುವು ತನ್ನಯ
ಶಿಷ್ಯರ ತಪ್ಪು ಒಪ್ಪುಗಳನು ಪರಿಶೀಲಿಸಿ
ಮಾರ್ಜಾಲ, ಮರ್ಕಟ, ಮತ್ಸ್ಯಗಳ
ಕಿಶೋರ ನ್ಯಾಯದ ತರಹ ಪೊರೆಯುವರು.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ. 9591417815.
ಶಿವಮೂರ್ತಿ ಹೆಚ್
ಬಸಾಪುರ ಗ್ರಾಮ, ದಾವಣಗೆರೆ.