N-2594 
  05-08-2024 08:54 AM   
ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು
ಯಾವುದೇ ಮಠದ ಗುರುವೆಂದರೆ , ಗುರು ಸ್ಥಾನವೆಂದರೆ - ಅದೊಂದು ಅಧಿಕಾರವೋ, ಅನಿವಾರ್ಯತೆಯೋ, ಅವಶ್ಯಕತೆಯೋ ಅಲ್ಲ ಬದಲಾಗಿ ಅದು ಒಂದು ಗುಂಪಿಗಿರುವ/ ಒಂದು ಜಾತಿ-ಧರ್ಮಕ್ಕಿರುವ/ ಮಸಿ ಹಿಡಿದಿರುವ ಸಮಾಜದ ಏಳಿಗೆಗಾಗಿರುವ "ಅಭಯ ಹಸ್ತ".
ಸಮಾಜದಲ್ಲಿ ಗುರು ಸ್ಥಾನದಲ್ಲಿ ಇರುವ ಯಾವುದೇ ವ್ಯಕ್ತಿಯಾದರೂ ಶೇ. ೯೫% ಸನ್ಯಾಸಿಗಳಾಗಿರುತ್ತಾರೆ, ಇಂದ್ರೀಯ ನಿಯಂತ್ರಣವನ್ನು ಅರಿತಿರುವವರಾಗಿರುತ್ತಾರೆ, ಅಂತರಂಗವನ್ನು ಮತ್ತು ಬಹಿರಂಗವನ್ನೂ ಶುದ್ಧಿಯಾಗಿಟ್ಟುಕೊಳ್ಳುವ ನಿರಂತರ ಪ್ರಯತ್ನದಲ್ಲಿರುತ್ತಾರೆ. ಎಂತಹ ಕೈ ಮೀರಿ ಹೋಗುವಂತ ಸಂದರ್ಭದಲ್ಲಿಯೂ ಸಮಾಧಾನಿಯಾಗಿ, ಬುದ್ಧಿವಂತಿಕೆಯಿಂದ, ಸಮಾಜದ ಒಳಿತಿಗಾಗಿ, ಕುಳಿತಿರುವ ಕುರ್ಚಿಯ ಬೆಲೆಯನ್ನು ಒಂದಿಷ್ಟು ಕೆಳಗಿಡದ ಹಾಗೆ ವರ್ತಿಸುವ ಎಲ್ಲಾ ರೀತಿಯ ಪ್ರಜ್ಞೆಯ ಜೊತೆ ಜೊತೆಯಲ್ಲಿ ಸ್ವಂತ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವಂತಹ ಪರಿಸ್ಥಿತಿಗಳಲ್ಲಿ ನಿಂತು, ಜಯಿಸಿ, ಸರಿಯಾದ ತೀರ್ಮಾನಗಳನ್ನು, ಸಮಯಕ್ಕೆ ಸರಿಯಾಗಿ ಆಗಬೇಕಾದ ಕೆಲಸಗಳನ್ನು, ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಗುರು ಸ್ಥಾನದಲ್ಲಿರುವವರಿಗೆ ಯಾವುದೇ ಗುಂಪು, ಜಾತಿ, ಸರಕಾರ ಆ ವ್ಯಕ್ತಿಗೆಂದು ಮಾತ್ರ ಯಾವುದೇ ರೀತಿಯ ಸಹಕಾರಗಳನ್ನು ಕೊಡುವುದಿಲ್ಲ ಬದಲಾಗಿ ಆ ಸ್ಥಾನಕ್ಕೆ ನೀಡುವ ಬೆಲೆಯಿಂದಾಗಿ ಆ ಸ್ಥಾನದಲ್ಲಿರುವ ವ್ಯಕ್ತಿಗೆ ಅತೀ ಮೂಲಭೂತ ಅವಶ್ಯಕತೆಗಳು ಶ್ರೀಮಂತ ರೀತಿಯಲ್ಲಿ ದೊರೆಯುತ್ತವೆ. ಅಲ್ಲದೇ ಅವರಿಗಾಗಿ ಯಾವುದೇ ಬಗೆಯ ವ್ಯಕ್ತಿಗತವಾಗಿ ಯಾವ ಮೂಲೆಯಿಂದಲೂ ದೊರಕುವ `Return Income` ಅಲ್ಲ.
ಹೀಗಿದ್ದಾಗ, "ಮಠಾಧೀಶರಿಗೆ ನಿವೃತ್ತಿ" ಎನ್ನುವ ಕೆಟ್ಟ ಆಲೋಚನೆ ಎಷ್ಟು ಸರಿ??
ಅಲ್ಲದೆ.. ಸಾಮಾನ್ಯವಾಗಿ ನಿವೃತ್ತಿಯ ಮುಂಚೆ ಯಾವುದೇ ನೌಕರನ ಕೆಲಸದ ರೀತಿ, ಕೆಲಸದಲ್ಲಿನ ಸಮಯ ಪ್ರಜ್ಞೆ, ನೌಕರನಾಗಿ ಆತನಿಗಿರುವ ನಿರ್ಬಂಧಗಳು, ರಜಾ ದಿನಗಳು, ಒಟ್ಟು ಕೆಲಸ ಮಾಡಿದ ದಿನಗಳು ಇತ್ಯಾದಿಗಳನ್ನು ತೂಗಿ, ಅಳೆದು ನಿವೃತ್ತಿಉ ಮುಂದಿನ ಜೀವನಕ್ಕೆ, ಕುಟುಂಬಕ್ಕೆ ಅನುಕೂಲವಾಗುವಂತೆ ಒಂದಿಷ್ಟು ಮೊತ್ತವನ್ನು, ಸನ್ಮಾನವನ್ನು, ಒಂದು ಕುರ್ಚಿಯನ್ನು ಕೊಡುತ್ತಾರೆ.
ಹೀಗಿರುವಾಗ, ಸಮಾಜದ ಒಳಿತಿಗಾಗಿ ಹಗಲು-ರಾತ್ರಿ ಶ್ರಮಿಸುತ್ತಾ ಸ್ವಂತದವರನ್ನು ಮರೆತು (ನೆನಪಾದರೂ ಮರೆತಂತೆ) ಒಂದು ಗುಂಪಿನ ಒಳಿತಿಗಾಗಿ, ತಾನಿರುವ ಪೀಠದ ಬೆಲೆ, ಅದನ್ನೇರಿರುವವರ ನಿಷ್ಠೆ-ನಿಯಮಗಳನ್ನು ಕಣ್ಣಿನಲ್ಲಿಟ್ಟು, ಏಷ್ಟೋ ರಾತ್ರಿಗಳು ಕಣ್ಮುಚ್ಚದೆಯೇ, ಭಕ್ತಿ ಎಂಬ ಬೃಹತ್ ನಂಬಿಕೆ ಇಟ್ಟಿರುವ ನನ್ನನ್ನು, ನನ್ನ ಕುಟುಂಬದವರನ್ನು ಕಣ್ಮುಚ್ಚಿ ಸುಖ ನಿದ್ರೆಯಲ್ಲಾಕ್ಕಿದ್ದಾರೋ... ಆ ಮಠದ ಕಾಲೇಜಿನಲ್ಲಿ ಒಬ್ಬ ತಂದೆಯ ಓದಿನಿಂದ ಶುರುವಾದ ಆ ಭಕ್ತಿಬಂಧವು ಆ ತಂದೆಯು ಆಗಿನ ಗುರುಗಳ ಪೂಜಾ ಮರಿಯಾಗಿ ಭಕ್ತಿಯನ್ನು ಆಳವಾಗಿಸುತ್ತಾ, ಬಂಧವನ್ನು ಬಿಗಿಯಾಗಿಸುತ್ತ ಗುರುವಿಗೆ ತಕ್ಕ ಶಿಷ್ಯನಾಗಿ, ಅದೇ ಮಠದ ಸಹಾಯದಿಂದ, ದೊರೆತ ವಿದ್ಯಾ-ಬುದ್ದಿಯಿಂದ ಅಲ್ಲಿಯೇ ಒಂದು ಕೆಲಸವನ್ನು ಪಡೆದು ಕಷ್ಟದ ಜೀವನವನ್ನು ಮೂರು ಹೊತ್ತಿನ ಊಟದ ವರೆಗೆ ಸರಿಮಾಡಿಕೊಂಡು ಪ್ರತಿ ರಾತ್ರಿ ಗುರುಗಳನ್ನು, ಮಠವನ್ನು ದೇವರು-ದೇವಸ್ಥಾನದಂತೆ ನೆನೆದು, ಭಕ್ತಿಯಿಂದ ನಮಿಸಿ, ಪ್ರಾರ್ಥಿಸಿ ನಿದ್ದೆಗೆ ಜಾರುತ್ತಿರುತ್ತಾನೆ.
Bhomika madapura
Davanagere , Karnataka, India