N-2590 

  30-07-2024 08:27 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಅಸಾಧ್ಯ ಆದುದನ್ನು ಸಾಧ್ಯ ಮಾಡಿದ ನಮ್ಮ ತರಳಬಾಳು ಜಗದ್ಗುರುಗಳು
ಶಿವಕುಮಾರ್ ಕಮ್ಮತ್ತಹಳ್ಳಿ
ಕಮ್ಮತ್ತಹಳ್ಳಿ ಹರಪನಹಳ್ಳಿ

N-2586 

  30-07-2024 08:10 AM   

ರೈತರಿಗೆ ಬಲ ನೀಡುವ ನೀರಿನ ಗ್ಯಾರಂಟಿ ನೀಡಿ : ಶ್ರೀ ತರಳಬಾಳು ಜಗದ್ಗುರುಗಳವರು

 ಗುರುಗಳು ರೈತರ ಪಾಲಿಗೆ ದೇವರು
ಶಿವಕುಮಾರ್ ಕಮ್ಮತ್ತಹಳ್ಳಿ
ಕಮ್ಮತ್ತ ಹಳ್ಳಿ

N-2590 

  30-07-2024 07:18 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಅಸಾಧಾರಣ ಕಾರ್ಯ... ಜೈ ತರಳಬಾಳು..
Lokesh C
Un Hodigere ited States

N-2589 

  29-07-2024 01:05 PM   

ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ 86ನೆಯ ಶ್ರದ್ಧಾಂಜಲಿ ಹಾಗೂ ವೀರಗಾಸೆ ಸ್ಪರ್ಧೆ

 Good
Santosh shettar
Araleshwera tq, Hanagal Di,Haveri

N-2458 

  28-07-2024 09:14 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿಯ ಮಡಿಲನ್ನು ಸೇರಿದ ವೀರಯೋಧರ ನೈಜಕಥೆಯನ್ನು ವಿವರಿಸುತ್ತ ಎಲ್ಲರ ಕಣ್ತೆರೆಸುವ ಅಂಕಣವು ಹೃದಯಸ್ಪರ್ಶಿಯಾಗಿದೆ. ಜೊತೆಗೆ ನಾಡೊಳಗೆ ಸುಖವಾಗಿ ಐಶಾರಾಮಿ ಜೀವನ ನಡೆಸುವವರು ಒಮ್ಮೆ ಆತ್ಮಾವಲೋಕನ ಮಾಡುವಂತೆ ಪ್ರೇರೇಪಿಸುತ್ತದೆ.

ಗಡಿರಕ್ಷಕ ಯೋಧರ ಜೀವನ ಅದೆಷ್ಟು ದುರ್ಗಮ,ಸಾಹಸವನ್ನೇ ಹಾಸಿ ಹೊದ್ದು ಹಗಲು ರಾತ್ರಿಯೆನ್ನದೆ ಕಟ್ಟೆಚ್ಚರದ ನಡೆಯಿಂದಷ್ಟೇ ನಾವಿಲ್ಲಿ ಸುಖದ ಸೂರ್ಯೋದಯ ನೋಡಲು ಸಾಧ್ಯವಾಗಿದೆ. ಕಗ್ಗತ್ತಲನ್ನು ಲೆಕ್ಕಿಸದೆ ದುರ್ಗಮವಾದ ಪರ್ವತ ಹತ್ತಿ ಕಾರ್ಯಾಚರಣೆಗೆ ಸಜ್ಜಾಗುವ ಅವರ ಬಾಳು ಅವಿಸ್ಮರಣೀಯ. ತನ್ನ ಮಡದಿ ಬರೆದಿದ್ದ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ವೀರಮರಣ ಅಪ್ಪಿದ ಯೋಧನ ಸಾಹಸ ಅಪ್ರತಿಮ. ಆ ಪತ್ರದ ಒಕ್ಕಣೆಯೂ ಸಾಹಸದ ಪ್ರತಿಬಿಂಬ. ಕಣ್ಣಿಗೆ ಕಾಣುವ ರಕ್ಷಣಾದೇವರ ಪಾತ್ರ ಯೋಧರದು .ಕಾರ್ಗಿಲ್ ಯುದ್ದ ನಡೆದು ಇಪ್ಪತ್ತೈದು ವರ್ಷ ಸರಿದಿದೆ. ಆ ಯುದ್ದದಲ್ಲಿ ದೇಹತ್ಯಾಗ ಮಾಡಿದವರ ಸ್ಮರಣೆಗಾಗಿ ಇಂದು ಹಲವು ಕಡೆ ಸ್ಮರಣಾರ್ಥ ಕಾರ್ಯಕ್ರಮ ನಡೆಯುತ್ತಿರುವಾಗ ಈ ಅಂಕಣದ ಮೂಲಕ ಒಂದಷ್ಟು ನೆನಪುಗಳ ಅವಲೋಕನ ಸಕಾಲಿಕ. ಶ್ರೀ ಗುರುಗಳಿಗೆ ನನ್ನ ಅನಂತ ನಮನಗಳು. ಪ್ರತಿ ಅಂಕಣವನ್ನು ಪ್ರೀತಿಯಿಂದ ಎಲ್ಲರಿಗೆ ತಲುಪಿಸಲು ಶ್ರಮಿಸುತ್ತಿರುವ ರಾ.ವೆಂಕಟೇಶ ಶೆಟ್ಟರಿಗೆ ವಂದನೆಗಳು.
ಟೀಕಾ. ಸುರೇಶ ಗುಪ್ತ, ಚಿತ್ರದುರ್ಗ


N-2458 

  28-07-2024 09:09 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಬಿಸಿಲು ಬೆಳದಿಂಗಳು* ಸರಣಿಯ *ತಾಯಿಯ ಮಡಿಲನ್ನು ಸೇರಿದ ವೀರ ಯೋಧ* ಸಂಚಿಕೆಯ ಕುರಿತು ನನ್ನ ಅನಿಸಿಕೆ.

ಈ ಬಾರಿ ಈ ಸಂಚಿಕೆಯನ್ನು ಕಾರ್ಗಿಲ್ ಯುದ್ಧದ ವರ್ಷಾಚರಣೆಯ ಸಂದರ್ಭದಲ್ಲಿ ಪುನಃ ಪ್ರಕಟಿಸಿದ್ದು ತುಂಬಾ ಸಮಂಜಸವಾದದ್ದು. ಆ ಸಂದರ್ಭದಲ್ಲಿ ದೇಶವನ್ನು ಕಾಯಲು ತಮ್ಮ ಜೀವವನ್ನೆ ಅರ್ಪಿಸಿದ ಹುತಾತ್ಮರನ್ನು ನೆನೆಯುವುದು ತುಂಬಾ ಔಚಿತ್ಯಪೂರ್ಣಹಾಗೂ ಮನಕಲಕುವ ವಿಷಯ.

ಯುದ್ಧವನ್ನು ಭಾರತದಂತಹ ಶಾಂತಿ ಪ್ರಿಯ ರಾಷ್ಟ್ರ ಎಂದೂ ಯಾರ ಮೇಲೂ ಹೇರಿಲ್ಲ ; ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದಾಗ ಅನಿವಾರ್ಯವಾಗಿ ಇರುವ ಶಕ್ತಿಯನ್ನೆಲ್ಲಾ ಬಳಸಿ ಶತ್ರುವನ್ನು ಹಿಮ್ಮೆಟ್ಟಿಸುವುದು ನಮ್ಮ ಕರ್ತವ್ಯ. ಯುದ್ಧವೆಂದರೆ ಸುಮ್ಮನೆ ಅಲ್ಲ; ಹಾನಿ ಎರಡೂ ಕಡೆಯೂ ಇರುತ್ತದೆ. ಬೇಡವೆಂದರೂ ಎದೆ ಒಡ್ಡಲೇಬೇಕಾದ ಪರಿಸ್ಥಿತಿ. ಯುದ್ಧವೆಂದರೆ ಗೆದ್ದವನು ಸೋತ ; ಸೋತವನು ಸತ್ತ ಎನ್ನುವ ಮಾತಿದೆ. ವಿಜಯಿಯಾದರೂ ಅಮೂಲ್ಯವಾದ ಸೇನಾನಿಗಳನ್ನು ಕಳೆದುಕೊಳ್ಳುವ ದೌರ್ಭಾಗ್ಯ ಕಟ್ಟಿಟ್ಟ ಬುತ್ತಿ. ಹಾಗೆಂದು ಕೈಕಟ್ಟಿ ಕುಳಿತರೆ ದೇಶದ ಸಾರ್ವಭೌಮತ್ವಕ್ಕೆ ಅಪಾಯ. ಬಿಸಿ ತುಪ್ಪವಾದರೂ ನುಂಗಲೇ ಬೇಕು.

ಇಂತಹ ೧೯೯೯ ರ ಕಾರ್ಗಿಲ್ ಯುದ್ಧದಲ್ಲಿ ವೀರಾವೇಷದಿಂದ ಹೋರಾಡಿದ ಕರ್ನಲ್ ರವೀಂದ್ರನಾಥರವರನ್ನು ನೆನೆದುದು ನಮಗೆಲ್ಲ ಸ್ಪೂರ್ತಿದಾಯಕ. ಅವರಿಗೆ ವೀರಚಕ್ರ ದೊರೆತಿದ್ದುದು ಸೇನಾ ಮನೋಬಲವನ್ನು ಇನ್ನಷ್ಟು ಹೆಚ್ಚಿಸಲಿಕ್ಕೆ ಸಾಕು. ಅವರು ಯೋಧರನ್ನು ಧೃತಿಗೆಡದಂತೆ ಹುರಿದುಂಬಿಸಿ ವೀರಾವೇಶದಿಂದ ಹೋರಾಡಿ ಗೆಲುವಿನ ಭಾಗವಾಗಿ ದೇಶಭಕ್ತಿಯನ್ನು ಮೆರೆದಿದ್ದಾರೆ. ಅವರು ತಮ್ಮ ನಿವೃತ್ತಿ ಜೀವನವನ್ನು ಸಹ ವ್ಯರ್ಥವಾಗಿಸದೆ ಯಶಸ್ವಿ ಉದ್ಧಿಮೆದಾರರಾಗಿ ರೂಪುಗೊಂಡಿದ್ದರು. ಅವರ ತಂದೆ ತಾಯಿಯರು ಗುರುಗಳೊಡನೆ ಕೈಗೂಡದ ವಿದೇಶಿ ಪ್ರವಾಸದ ಹಣವನ್ನು ತಮಗಾಗಿ ಉಳಿಸಿಕೊಳ್ಳಲು ಬಯಸದೆ ಜನರಿಗೆ ಮನೆಕಟ್ಟಿಕೊಳ್ಳಲು ತಮ್ಮ ಜಮೀನಿನಲ್ಲಿಯೆ ಉಚಿತ ನಿವೇಶನಗಳನ್ನು ಹಂಚಿ ದೇಶ ಸೇವೆಯನ್ನು ಸಲ್ಲಿಸಿದ್ದಾರೆ.

ಅವರ ತಾಯಿಯವರು ಪ್ರವಾಸದ ಅವಕಾಶ ವಂಚಿತರಾದರೂ ಹೊರಟವರ ಶ್ರೇಯಸ್ಸನ್ನು ಬಯಸಿ ಅವರು ಹಿಂದಿರುಗುವವರೆಗೂ ಪ್ರತಿನಿತ್ಯ ಪೂಜಾಗೃಹದಲ್ಲಿ ಕುಳಿತು ದೇವರ ಪ್ರಾರ್ಥನೆ ಮಾಡಿದ್ದು ಅವರಿಗೆ ಜನರ, ದೇಶದ ಮೇಲಿದ್ದ ಅತೀವ ಪ್ರೇಮವನ್ನ ಸೂಚಿಸುತ್ತದೆ. ಇಂತಹ ಸಾಧ್ವಿಗಳ ಮಗನಾಗಿ ಹುಟ್ಟಿದ ಕರ್ನಲ್ ರವೀಂದ್ರನಾಥರು ನಿಜಕ್ಕೂ ಪುಣ್ಯವಂತರು. ಹೆತ್ತವರಿಗೆ ನಿಜಕ್ಕೂ ಗೌರವವನ್ನು ತಂದಿದ್ದಾರೆ. ಅವರು ತಮ್ಮ ಸಂತೃಪ್ತ ಜೀವನವನ್ನು ನಡೆಸಿ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ತುಂಬಾ ಖೇದವೆನಿಸಿತು. ಇಂತಹ ಅಮೂಲ್ಯ ರತ್ನಗಳನ್ನು ಕಾರ್ಗಿಲ್ ವರ್ಷಾಚರಣೆಯ ಸಂದರ್ಭದಲ್ಲಿ ನೆನೆದ ಗುರುಗಳು "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬಂತೆ ಬಾಳಿ ತಾಯಿಯ ಮಡಿಲನ್ನು ಸೇರಿದ ಕರ್ನಲ್ ರವೀಂದ್ರನಾಥ್ ದೇಶದ ಜನತೆಯ ನೆನಪಿನಲ್ಲಿ ಚಿರಾಯುವಾಗಿ ನೆಲೆಸಲಿ ಎಂದು ಆಶೀರ್ವದಿಸಿದ ಪರಮ ಪೂಜ್ಯ ಗುರುಗಳಿಗೆ ಪ್ರಣಾಮಗಳು.

ಗುರುಗಳ ಆಶೀರ್ವಚನವನ್ನು ನಮಗೆಲ್ಲ ತಲುಪಿಸಿ ಸಾಹಿತ್ಯಸೇವೆಯ ಮೂಲಕ ಗುರುಗಳ ಸೇವೆಯನ್ನು ಮಾಡುತ್ತಿರುವ ರಾ.ವೆಂಕಟೇಶ ಶ್ರೇಪ್ಠಿಯವರಿಗೆ ಧನ್ಯವಾದಗಳು.
ನಾರಾಯಣ ದೊಂತಿ, ಚಿತ್ರದುರ್ಗ


N-2458 

  28-07-2024 09:02 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಪರಮಪೂಜ್ಯ ಶ್ರೀಗುರುಗಳವರು ಈ ಸಂಚಿಕೆಯಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಆ ಯುದ್ಧದಲ್ಲಿ ಭಾಗವಹಿಸಿದ್ದ ಕರ್ನಲ್ ರವೀಂದ್ರನಾಥ ಅವರ ಸಾಧನೆಯ ಸ್ಮರಣೆಯ ಮೂಲಕ ಆಚರಿಸಿದಂತಿದೆ. ಕಾರ್ಗಿಲ್ ಯುದ್ಧ ಮುಗಿದ ನಂತರ ದಾವಣಗೆರೆಯ ಧ.ರಾ.ಮ ವಿಜ್ಞಾನ ಕಾಲೇಜಿನ ಕಾರ್ಯಕ್ರಮದಲ್ಲಿ ಶ್ರೀಯುತ ರವೀಂದ್ರನಾಥರು ಮಾತನಾಡುತ್ತ ಪ್ರತಿ ಸೈನಿಕರು 3D- Destination, Determination, Direction ನ್ನು ಪಾಲಿಸುವ ಕ್ರಮದ ರೋಚಕತೆಯನ್ನು ವಿವರಿಸಿದ್ದರು. ಅವರ ಸಾಧನೆಗೆ "ವೀರಚಕ್ರ" ಸನ್ಮಾನ ದೊರೆತದ್ದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಶ್ರೀಮತಿ ಸರೋಜಮ್ಮ ಅವರ ದೈವ ಭಕ್ತಿ ಸೋಮೇಶ್ವರ ಶತಕದಲ್ಲಿ ಪ್ರಸ್ತಾಪಿಸಿದ ಸದ್ಭಕ್ತರ ಭಕ್ತಿಯ ಶಕ್ತಿ ಯೋಧರಂತೆ ದೇಶವನ್ನು ನಂಬಿದವರನ್ನು ಕಾಯುತ್ತದೆ ಎಂದು ಉಲ್ಲೇಖಿಸಿರುವ ಕವಿವಾಣಿಯನ್ನು ಸ್ಮರಿಸುವಂತಿದೆ.
ಶಿವಕುಮಾರ ಕೆ.ಎಂ, ಬೆಂಗಳೂರು.p


N-2458 

  28-07-2024 08:18 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಶ್ರೀ ಗುರುಗಳ ಚರಣಕ್ಕೆ ಪೊಡಮಟ್ಟು* "ಬಿಸಿಲು ಬೆಳದಿಂಗಳು "ಅಂಕಣ ಬರಹಕ್ಕೆ ಪ್ರತಿಕ್ರಿಯೆ
ಈ ಸಲದ ಬರಹವು ಅತಿ ವಿಶೇಷತೆಯಿಂದ ಕೂಡಿದೆ.
*ತಾಯಿಯ ಮಡಿಲು ಸೇರಿದ ವೀರ ಯೋಧ* ಜುಲೈ 26 ,1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ,ನಮ್ಮ ದೇಶದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ದಿನ.ನೂರಾರು ವೀರ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು,ಬಲಿದಾನಗೈದು,ಕುತಂತ್ರಿ ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತಾಂಬೆಯ ಮುಡಿಗೆ ವಿಜಯ ಪತಾಕೆಯನ್ನು ಏರಿಸಿದರು. ಕರ್ನಲ್ ರವೀಂದ್ರನಾಥರಂತಹ ವೀರ ಯೋಧರ ಬಗ್ಗೆ ಗುರುಗಳು ಬರೆದಿದ್ದನ್ನು ಓದಿದಾಗ ಹೆಮ್ಮೆಯೆನಿಸಿತು.ಅದೇ ರೀತಿ ಈ ಯುದ್ದದಲ್ಲಿ ವೀರಮರಣ ಹೊಂದಿರುವ ಯೋಧರ ಕುರಿತು ಓದಿದಾಗ ಮನ ಕಲಕಿದಂತಾಯಿತು.ಈಗಿನ ಪೀಳಿಗೆಗೆ 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದಷ್ಟೆ ಗೊತ್ತು.ಅದರ ಇನ್ನೊಂದು ಭಾಗವಾಗಿ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಬಗ್ಗೆಯೂ ಮನದಟ್ಟು ಮಾಡಿಸಬೇಕು.21 ದಿನಗಳವರೆಗೆ ನಡೆದ ಈ ಯುದ್ದದಲ್ಲಿ, ತಮ್ಮ ಪ್ರಾಣ ಬಲಿಕೊಟ್ಟು ದೇಶ ರಕ್ಷಣೆ ಮಾಡಿ ವಿಜಯಿಗಳಾದ ಹೆಮ್ಮೆಯ ಭಾರತಾಂಬೆಯ ಪುತ್ರರರ ಸ್ಮರಣಾರ್ಥವೇ ಈ ಕಾರ್ಗಿಲ್ ವಿಜಯ ದಿವಸ.ಸ್ವಾತಂತ್ರ್ಯ ದಿನದಷ್ಟೆ ಇದು ಕೂಡ ನಮ್ಮೆಲ್ಲರಿಗೂ ಮಹತ್ವದ ದಿನ.ಇತ್ತೀಚೆಗೆ ಇದು ನಮ್ಮ ರಾಜಕಾರಣಿಗಳ ಕೈಯಲ್ಲಿ ಸಿಕ್ಕು ಅವರವರ ಪಕ್ಷದ ಆಡಂಬರ ದಿನವಾಗಿದೆ. ತಮ್ಮ ಬದುಕಿನ ಹಂಗು ತೊರೆದು,ಚಳಿ,ಮಳೆ,ಗಾಳಿಗೆ
ಹೆದರದೆ,ಎಲ್ಲವನ್ನೂ,ಎಲ್ಲರನ್ನೂ ,ತೊರೆದು ದೇಶವನ್ನು ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೆ ಗೌರವಪೂರ್ವಕ ನಮನಗಳು.🙏🙏🏻
ಜಯಶ್ರೀ ಕಿಣಗಿ, ಹಿಡಕಲ್ ಡ್ಯಾಮ್


N-2458 

  27-07-2024 10:36 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತರಳಬಾಳು ಜಗದ್ಗುರು ಶ್ರೀ ಯವರಿಗೆ ಅನಂತ ಪ್ರಣಾಮಗಳು 🙏ಭಾರತಮಾತೆಯ ಪುತ್ರ ವೀರ ಯೋಧ ಕರ್ನಲ್ ರವೀಂದ್ರನಾಥ್ ಅವರ ಬಗ್ಗೆ ತಂದೆ ಬಸಪ್ಪ ತಾಯಿ ಸರೋಜಮ್ಮ.ಅವರ ಆಧ್ಯಾತ್ಮ, ವಿಚಾರ. ಪೂಜೆ ಅವರ ಆದರ್ಶ ಸೇವೆ ಉತ್ತಮವಾದ ಕೊಡುಗೆ, ಮತ್ತೊಬ್ಬರಿಗಾಗಿ ಅವರ ಹೃದಯದಮಿಡಿತ ತ್ಯಾಗ ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಿ. ಈ ನಾಡಿನ ಮಣ್ಣಿನಲ್ಲಿ ಅಂತ ಮಹಾ ಚೇತನಗಳು ಮತ್ತೆ ಮತ್ತೇ ಹುಟ್ಟಿಬರಲಿ. ಈ ದೇಶಸೇವೆಗೆ ಬದುಕು ಮುಡುಪಾಗಿಟ್ಟ ನಮ್ಮ ನೆಚ್ಚಿನ ಯೋಧ ಕರ್ನಲ್ ರವೀಂದ್ರನಾಥ್ ರವರಿಗೆ ಕನ್ನಡಿಗರ ಪರವಾಗಿ ಕೋಟಿ ಕೋಟಿ ನಮನಗಳು 🙏🙏💐🌹
Shivarudrappa M
Chitradurga

N-2458 

  27-07-2024 06:25 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಪೂಜ್ಯ ಗುರುಗಳು ಕಾರ್ಗಿಲ್ ಯುದ್ಧದಲ್ಲಿ ದೇಶಸೇವೆಗೆಂದು ಹುತಾತ್ಮರಾದ ಶ್ರೀ ರವೀoದ್ರನಾಥ್ ಅವರನ್ನು ಸ್ಮರಿಸಿದ್ದಾರೆ.ಕಾರ್ಗಿಲ್ ಕಲಿಗಳು ಹೇಡಿ ಪಾಕಿಸ್ತಾನಿಗಳನ್ನು ಹಿಮೆಟ್ಟಿಸಿದರು. ಹಲವರು ಅಂಗಾoಗಗಳನ್ನು ಕಳೆದುಕೊಂಡು ಅಂಗವಿಕಲರಾದರು. ಅವರುಗಳದ್ದು ಸಾರ್ಥಕ ಜನ್ಮ!ಇವರುಗಳೂ ನಮ್ಮ ಹಾಗೇ ಸಂಬಂಧಗಳನ್ನು ಹೊಂದಿದವರು.ಇವರಿಗೂ ಪ್ರೀತಿಸುವ ಹೃದಯಗಳಿವೆ. ಅಪ್ಪಾ ಎಂದು ಕರೆಯುವ ಮುದ್ದುಮಕ್ಕಳಿವೆ. ಇವರಿಗಾಗಿ ಮಿಡಿವ ಹೃದಯಗಳು ಇವೆ. ಆದರೆ ತಮ್ಮ ವ್ಯಯಕ್ತಿಕ ಆಸೆ ಆಕಾoಕ್ಷೆಗಳನ್ನು ಬದಿಗಿಟ್ಟು ದೇಶಸೇವೆ ಎಂಬ ಆದರ್ಶಕ್ಕೆ ತಮ್ಮ ಪ್ರಾಣವನ್ನು ಮುಡುಪಾಗಿಡುವ ಭರತ ಮಾತೆಯ ಕಿರೀಟದ ಈ ವಜ್ರಗಳಿಗೆ ನನ್ನ ನಮನಗಳು.
ನಾನು ಈಗ ಮೊನ್ನೆ ಹೊತ್ತಿ ಉರಿಯುತ್ತಿದ್ದ ಸ್ಯೆನ್ಯಕ್ಕೆ ಅವಶ್ಯವಿದ್ದ ಪ್ರಾಣರಕ್ಷಕಗಳನ್ನು ರಕ್ಷಿಸಲು ಹೋಗಿ ಬೆಂಕಿಗೆ ಬಲಿ ಆದ ಕೇವಲ ಐದು ತಿಂಗಳ ಹಿಂದೆ ಮದುವೆ ಆಗಿದ್ದ ಅಗ್ನಿವೀರ ಡಾಕ್ಟರ್ ಅಜೇಯ್ಕುಮಾರ್ ರವರನ್ನೂ ಸ್ಮರಿಸುತ್ತಿದ್ದೇನೆ.

ಹೆಚ್ಚು ಕಡಿಮೆ ದಿನ ಬಿಟ್ಟು ದಿನ ಓದುತ್ತಿದ್ದೇವೆ. ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಸಹಾ ಒಮ್ಮೊಮ್ಮೆ ಉಗ್ರರೆoಬ ರಕ್ಕಸರ ದಾಳಿಯಿಂದ ಹುತಾತ್ಮರಾಗುವ ನಮ್ಮ ಸ್ಯೆನಿಕರ ಕಥೆಗಳನ್ನು ಓದುತ್ತಿದ್ದೇವೆ.

ನಾವೊಮ್ಮೆ ತವಾoಗಿಗೆ ಭೀಟಿ ನೀಡಿದಾಗ ನಮ್ಮ ಸ್ಯೆನಿಕರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಕಂಡು ಮನ ಮರುಗಿತು. ಅಲ್ಲೇ ಒಂದು ದೇವಸ್ಥಾನದಲ್ಲಿ ಕಾವಲು ಕುಳಿತ್ತಿದ್ದ ಇಬ್ಬರು ಸ್ಯೆನಿಕರು ಹೇಳಿದ್ದು: ಸದಾ ಕಣ್ಣಾಗಿರಬೇಕು. ಶತ್ರು ಯಾವ ರೂಪದಲ್ಲಿ, ಯಾವ ಸಮಯದಲ್ಲಿ ಬರುವ ಎಂದು ತಿಳಿಯುವುದಿಲ್ಲ. ನಮ್ಮಗಳ ಜೊತೆಗೆ ಫೋಟೋ ಕೂಡಾ ತೆಗೆಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ತಮ್ಮ ಚಹರೆ ಶತ್ರುಗಳಿಗೆ ತಿಳಿಯುತ್ತದೆ ಎಂದು. ಯುದ್ಧ ಶುರು ಆದರೆ ಸರಿಯಾದ ಊಟ ಇಲ್ಲ, ನಿದ್ದೆ ಇಲ್ಲ. ಅವರ ಪ್ರಾಣವೇ ಅಪಾಯದಲ್ಲಿ ಇರುತ್ತದೆ. ಆದರೂ ದೇಶದ ಸಲುವಾಗಿ ತಮ್ಮ ಸ್ವಂತ ಸುಖವನ್ನೆಲ್ಲ ತೊರೆದು ಸಾರ್ಥಕ ಬಾಳು ಬಾಳುವ ಈ ತ್ಯಾಗ ಮೂರ್ತಿ ಗಳಿಗೆ ಹೃದಯ ತುಂಬಿದ ಒಂದು ವಂದನೆಯನ್ನು ಸಲ್ಲಿಸೋಣವೇ?
ಕಮಲಮ್ಮ, ದಾವಣಗೆರೆ


N-2458 

  27-07-2024 06:15 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿ ಮಡಿಲನ್ನು ಸೇರಿದ ವೀರ ಯೋಧ*

ಶ್ರೀ ಗುರುಗಳವರು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬರೆದಿರುವ ವಿಶೇಷ ಲೇಖನವನ್ನು ಓದಿದಾಗ ನಿಜವಾಗಿ ಕಣ್ಣೀರು ಬಂದಿತು. ಆ ಹೆತ್ತ ತಾಯಿಯ ನೋವು ಮತ್ತು ದೇಶಾಭಿಮಾನ,ಆ ವೀರ ಸೈನಿಕನ ವೀರಾವೇಶದ ಹೋರಾಟ, 4590 ಅಡಿ ಎತ್ತರದಲ್ಲಿ ಹಾರಿಸಿದ ತ್ರಿವರ್ಣ ಧ್ವಜ, ಅವರಿಗೆ ಸಿಕ್ಕ ವೀರ ಚಕ್ರ, ರೋಮಾಂಚನವಾಗುವಂತಹ ಘಟನೆಗಳು ಇವು. ಯೋಧನ ಪತ್ನಿ ಬರೆದ ಪತ್ರ ಗುಂಡೇಟು ತಿನ್ನುವ ಪರಿಸ್ಥಿತಿ ಬಂದರೆ ಎದೆಯನ್ನು ಕೊಡು ನಿನ್ನ ಬೆನ್ನಿನ ಮೇಲೆ ಅಲ್ಲ.... ಎಂತಹ ಮಾತು. ತಾಯಿಯು ಸಾಧ್ವಿ ,ದೈವ ಭಕ್ತೆ, ಹೆಂಡತಿಯೂ ದೇಶಾಭಿಮಾನಿ,ಅವರಲ್ಲಿ ಎಂತಹ ದೇಶಭಕ್ತಿ ಇದೆ. ಆ ತಾಯಿಯ ಮಾತುಗಳು ನನ್ನ ಮಗ ದೇಶಕ್ಕಾಗಿ ಸತ್ತಿದ್ದರೆ ಸನ್ಮಾನಕ್ಕಿಂತಲೂ ಹೆಚ್ಚಿನ ಸಂತೋಷಪಡುತ್ತಿದ್ದೆ ಎಂಬ ಮಾತುಗಳು. ಎಂತಹ ದೇಶಭಕ್ತಿ. ಹೌದು. ಪ್ರತಿಯೊಬ್ಬ ತಾಯಿಯು, ಪತ್ನಿಯು, ಸಹೋದರಿಯು, ತನ್ನ ಮನೆಯ ಗಂಡು ಮಕ್ಕಳನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಬಿಟ್ಟರೆ ನಮ್ಮ ಭಾರತ ದೇಶಕ್ಕೆ ಅದಕ್ಕಿಂತ ದೊಡ್ಡ ಉಡುಗೊರೆ ಏನಿದೆ ಅಲ್ಲವೇ? ತಾಯಿನಾಡಿಗಾಗಿ ಬಾಳಿ ಬದುಕಿದ, ಭೂಮಿಯ ಒಡಲು ಸೇರಿದ, ಕರ್ನಲ್ ರವೀಂದ್ರನಾಥ್ ರವರಿಗೆ ಹೃನ್ಮನ ಗಳಿಂದ ವಂದನೆಗಳು ಹಾಗೂ ಎಲ್ಲಾ ಭಾರತೀಯರ ನೆನಪಿನಲ್ಲಿ ಅವರು ಶಾಶ್ವತವಾಗಿ ನೆಲೆಸಲಿ. ಇಂತಹ ಒಂದು ಅದ್ಭುತ ದೇಶಭಕ್ತರ ಬಗ್ಗೆ ನಮಗೆ ತಿಳಿಸಿದ ಗುರುಗಳಿಗೂ ಹಾಗೂ ಲೇಖನವನ್ನು ಕಳಿಸಿದ ವೆಂಕಟೇಶ ಶೆಟ್ಟಿ ಸರ್ ರವರಿಗೂ ನನ್ನ ಹೃತ್ಪೂರ್ವಕ ವಂದನೆಗಳು

ಮಹಬೂಬಿ🙏🙏🙏 ಚಿತ್ರದುರ್ಗ


N-2458 

  27-07-2024 06:10 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಪರಮ ಪೂಜ್ಯರಿಗೆ ಪ್ರಣಾಮಗಳು,
*ತಾಯಿಯ ಮಡಿಲನ್ನು ಸೇರಿದ ವೀರಯೋಧ* ಲೇಖನದ ಬಗ್ಗೆ ನನ್ನ ಅನಿಸಿಕೆಗಳು.

1999 ರಲ್ಲಿ ಜರುಗಿದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಕರ್ನಲ್ ರವೀಂದ್ರನಾಥ್ ಅವರು ವಾಯುವಿಹಾರ ಮುಗಿಸಿ ಮನೆಯ ಮೆಟ್ಟಿಲು ಹತ್ತುವಾಗ ಹಠಾತ್ತನೆ ನಿಧಾನರಾದ ಸುದ್ದಿ ಬಹಳ ಬೇಸರ ತಂದ ವಿಚಾರ ಆದರೆ ಸಾರ್ಥಕ ಜೀವನ ನಡೆಸಿ ಒಳ್ಳೆಯ ಸಾವನ್ನು ಪಡೆದರು ಎಂಬುದು ಅಷ್ಟೇ ಪ್ರಮುಖವಾದ ವಿಚಾರ ಎನಿಸಿತು. ಅಂಥ ಮಹನೀಯರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ರೋಚಕ ಕಥೆ ಎಂಥವರನ್ನೂ ರೋಮಾಂಚನ ಗೊಳಿಸುತ್ತದೆ. ಅವರ ದೇಶ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರ ಅವರಿಗೆ "ವೀರಚಕ್ರ" ನೀಡಿರುವುದು ಅಷ್ಟೇ ಹೆಮ್ಮೆಯ ಸಂಗತಿ.

ಶ್ರೀಯುತ ಬಸಪ್ಪ ಮಾಸ್ತರ್ ಅವರ ಅವರ ಉದಾರತೆ ಹಾಗೂ ಶ್ರೀಮತಿ ಸರೋಜಮ್ಮ ಅವರ ದೈವಭಕ್ತಿ ಆದರ್ಶಪ್ರಾಯವಾದುದು.

ಶ್ರೀಗಳು 1994 ಮತ್ತು 2000 ಇಸವಿಯಲ್ಲಿ "ವಿಶ್ವಶಾಂತಿ ಯಾತ್ರೆ" ಹಮ್ಮಿಕೊಂಡು 250 ಜನ ಹಳ್ಳಿಯ ಜನರಿಗೆ ವಿದೇಶ ಪ್ರಯಾಣ ಮಾಡಿಸಿರುವ ವಿಷಯ ಪರಮ ಪೂಜ್ಯರು ಕೈಗೊಂಡ ಅತ್ಯಂತ ವಿಶಿಷ್ಟ ಕಾರ್ಯಗಳಲ್ಲಿ ಉತ್ತಮವಾದುದು. ಇನ್ನೂ ಟಿಕೇಟು ಹೋರಾಟಗಾರರ ಬಗ್ಗೆ ಶ್ರೀಗಳು ಪ್ರಸ್ತಾಪಿಸಿ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ತಿವಿದಿರುವುದು ಸಮಂಜಸವಾಗಿದೆ.

ಪರಮಪೂಜ್ಯರ ಲೇಖನ ವಿಶಿಷ್ಟ ಅನುಭವಗಳ ಗಣಿ ಹಾಗೂ ಜ್ಞಾನಸುಧೆ ಎಂದರೆ ಸರಿ ಎನಿಸುತ್ತದೆ.
ಪರಮ ಪೂಜ್ಯರಿಗೆ ಮತ್ತೊಮ್ಮೆ ಪ್ರಣಾಮಗಳು
ಶ್ರೀಯುತ ರಾ. ವೆಂಕಟೇಶ್ ಶೆಟ್ಟಿ ಗುರುಗಳಿಗೆ ಧನ್ಯವಾದಗಳು.
ರಾಜಕುಮಾರ್ ಉಪಾಸೆ, ಬೆಂಗಳೂರು ಶರಣು ಶರಣಾರ್ಥಿ🙏🙏💐💐


N-2458 

  27-07-2024 12:20 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿಯ ಮಡಿಲನ್ನು ಸೇರಿದ ವೀರ ಯೋಧ

ಈ ಅಂಕಣವನ್ನು ಓದುವಾಗ ನನಗೆ ನನ್ನ ಕಾಲೇಜು ದಿನಗಳ ನೆನಪು ಬಂತು. ನಾನು ಪಿಯುಸಿ ಓದುವಾಗ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು. ಆಗ ನನ್ನ ಗೆಳೆಯ ಗೆಳತಿಯರೆಲ್ಲರು ಒಟ್ಟು ಗೂಡಿ ಸೈನಿಕರಿಗೆ, ಯುದ್ದಕ್ಕೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಕೈಲಾದಷ್ಟು ಹಣವನ್ನು ನೀಡಬೇಕು ಎಂದು ತೀರ್ಮಾನಿಸಿ ಶಿಕ್ಷಕರ ಹತ್ತಿರ ಕೇಳಿದಾಗ ಶಿಕ್ಷಕರು ಮೊದಲು ನೂರು ರೂಪಾಯಿ ನೀಡಿದರು. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಪ್ರತಿಯೊಂದು ವಿದ್ಯಾರ್ಥಿಯಿಂದಲೂ ಹತ್ತು ರೂಪಾಯಿಯಂತೆ ಒಟ್ಟುಗೂಡಿಸಿ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಕ್ಷಣಗಳು ಈಗ ಕಣ್ಣು ಮುಂದೆ ಬಂದುವು. ಹಳೆಯ ನೆನಪುಗಳನ್ನು ಹೊಸದಾದ ಮೆಲುಕು ಹಾಕುವಂತಾಯಿತು!

ಆದರೆ ನಾವುಗಳು ಸೈನಿಕರನ್ನು ನೋಡಿ ಅವರಿಗೆ ಗೌರವ ಸಲ್ಲಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನಮ್ಮ ಮಕ್ಕಳನ್ನು ಭಾರತದ ಸಂಪತ್ತು, ಭಾರತೀಯ ಶ್ರೀಮಂತಿಕೆಯ ಆಚಾರ ವಿಚಾರಗಳನ್ನು ತಿಳಿಸುವ ಮುಖಾಂತರ ಪ್ರತಿಯೊಂದು ಮಗುವು ಸೈನಿಕನಂತೆ ಪ್ರತಿ ಮನೆಯಲ್ಲೂ ಬೆಳೆಯಬೇಕು ಅನ್ನುವುದು ನನ್ನ ಆಸೆ.

ಈ ಅಂಕಣವನ್ನು ಓದಿ ಒಂದಿಷ್ಟು ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟರುವ ಶ್ರೀಗಳಿಗೆ ಮತ್ತು ವೆಂಕಟೇಶ ಶೆಟ್ಟಿಯವರಿಗೆ ಅನಂತ ಅನಂತ ಧನ್ಯವಾದಗಳು
ಜ್ಞಾನೇಶ್ವರ ಕೆ ಆರ್, ದೊಡ್ಡಸಿದ್ದವ್ವನಹಳ್ಳಿ ಚಿತ್ರದುರ್ಗ


N-2458 

  27-07-2024 12:08 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಪರಮಪೂಜ್ಯ ಗುರುಗಳ,”ಬಿಸಿಲು ಬೆಳದಿಂಗಳು”, ಅಂಕಣದ ,”ತಾಯಿಯ ಮಡಿಲನ್ನು ಸೇರಿದ ವೀರ ಯೋಧ”, ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ…..

ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ತಮ್ಮ ಪರಿವಾರವನ್ನೆಲ್ಲಾ ತ್ಯಾಗ ಮಾಡಿ, ದೇಶಕ್ಕಾಗಿ ಹೋರಾಡುವ ನಮ್ಮ ನಿಜವಾದ ನಾಯಕರನ್ನು ಗುರುತಿಸಲಾರದ, ಹಾಗೂ ಅವರ ಕುಟುಂಬಕ್ಕೆ ಸರಿಯಾಗಿ ಭದ್ರತೆ ಕಲ್ಪಿಸಲಾರದ ಶತಮೂರ್ಖರು ನಾವು.ಅದೇ ಒಂದು ಚಲನಚಿತ್ರದಲ್ಲಿ ಯೋಧನಾಗಿ ನಟಿಸಿದ ನಾಯಕನಿಗೆ ನೂರಾರು ಕೋಟಿ ಸಂಭಾವನೆ ಕೊಟ್ಟು ಜೈಜೈಕಾರ ಹಾಕುವ ಕಡು ಮೂರ್ಖರೂ ನಾವೇ.ಈಗಿನ ಕಾಲದಲ್ಲಿ ಅಸಲಿತನಕ್ಕಿಂತಲೂ ನಕಲೀತನಕ್ಕೇ ಬೆಲೆ ಜಾಸ್ತಿ ಎನ್ನುವುದು ವಿಪರ್ಯಾಸ!
ಇತ್ತೀಚೆಗೆ ಎಲ್ಲರಿಗೂ ತಿಳಿದಿರುವಂತೆ ಒಬ್ಬ ನಾಯಕನಟ, ಒಂದು ಕೊಲೆಯ ಕೇಸಿನಲ್ಲಿ ಸಿಕ್ಕಿಕೊಂಡು ಜೈಲಿನ ಕಂಬಿಗಳ ಹಿಂದೆ ಇದ್ದರೆ, ಆತನ ಅಭಿಮಾನಿ ಮಹಾಮಾತೆಯೊಬ್ಬಳು ತನ್ನ ಒಂದು ವರ್ಷದ ಮಗುವಿಗೆ ಜೈಲಿನ ಖೈದಿಯ ವೇಷ ಹಾಕಿ, ಆ ನಾಯಕನ ಖೈದಿ ಸಂಖ್ಯೆಯನ್ನು ತನ್ನ ಮಗುವಿನ ಬಟ್ಟೆಯ ಮೇಲೆ ಲಗತ್ತಿಸಿ, ತನ್ನ ಪ್ರೀತಿ, ಅಭಿಮಾನವನ್ನು ಮೆರೆದಿದ್ದು ವೈರಲ್ ಆಗಿ, ನೋಡಲು ಅಸಹ್ಯವೆನಿಸಿತ್ತು. ಜೀವನದಲ್ಲಿ ಯಾರನ್ನು ಆದರ್ಶವಾಗಿ ಇಟ್ಟುಕೊಂಡು ಮಕ್ಕಳನ್ನು ಬೆಳಸಬೇಕು ಎಂಬುದೇ ಇಲ್ಲದಿದ್ದರೆ ಹೇಗೇ? ಮುಂದಿನ ಪ್ರಜೆಗಳಾಗಬೇಕಾದ ಮಕ್ಕಳು ತಮ್ಮ ತಂದೆತಾಯಿಯರನ್ನು ಅನುಸರಿಸುವುದು ಸಹಜ ತಾನೇ?
ನಿಜವಾಗಿಯೂ ತಮ್ಮ ಮಕ್ಕಳನ್ನು ದೇಶದ ರಕ್ಷಣೆಗಾಗಿ ಕಳುಹಿಸಿಕೊಡುವ ವೀರಮಾತೆಯರು, ತಮ್ಮ ಸಂಗಾತಿಗಳನ್ನು ಕಳಿಸಿಕೊಡುವ ಧರ್ಮಪತ್ನಿಯರು, ತಮ್ಮ ಗುಂಡಿಗೆ ಎಷ್ಟು ಕಠಿಣ ಮಾಡಿಕೊಂಡು ಎಲ್ಲ ವಿಪತ್ತುಗಳನ್ನ ಎದುರಿಸುವ ಸಿದ್ದತೆ ಮಾಡಿಕೊಳ್ಳಬೇಕು. ಇಂಥ ತ್ಯಾಗ ಸಾಮಾನ್ಯರಿಗೆ ಸಾಧ್ಯವಿಲ್ಲ.ಹಾಗೂ ಅವರ ತ್ಯಾಗಕ್ಕೆ ಏನು ಕೊಟ್ಟರೂ ಕಡಿಮೆಯೇ! ಸರಕಾರ ಇಂಥ ನಿಜವಾದ ಯೋಧರನ್ನು ಸಕಲ ಅನುಕೂಲಗಳನ್ನೂ ಕೊಟ್ಟು ಗೌರವಿಸಿದರೆ, ಆಗ ಆ ಸ್ಥಾನದಲ್ಲಿರುವವರಿಗೆ ಸೂಕ್ತ ಮನ್ನಣೆ ಸಿಕ್ಕಂತಾಗುತ್ತದೆ. ವೀರ ಯೋಧರಿಗೂ, ಅವರ ಕುಟುಂಬಗಳಿಗೂ, ಇಂಥ ಲೇಖನ ಬರೆದ ಗುರುಗಳಿಗೂ, ಇದನ್ನು ನಮಗೆಲ್ಲ ತಲುಪಿಸಲು ನೆರವಾದ ಗುರು ಮಠದ ಎಲ್ಲರಿಗೂ ನನ್ನ ಶಿರಸಾಷ್ಟಾಂಗ ಪ್ರಣಾಮಗಳು. ವಂದನೆಗಳು.
ರೂಪ ಮಂಜುನಾಥ, ಹೊಳೆನರಸೀಪುರ.


N-2458 

  27-07-2024 12:03 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಓಂ ಶ್ರೀಗುರು ಬಸವಲಿಂಗಾಯ ನಮಃ
ಶ್ರೀಗಳ ಪಾದಾರವಿಂದಕ್ಕೆ ಶರಣು‌ ಶರಣಾರ್ಥಿ
🙏🙏🙏🙏
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಶ್ರೀಗಳ ಲೇಖನ ಹೆಚ್ಚು ಪ್ರಸ್ತುತವೆನಿಸುತ್ತದೆ.
ಕಾರ್ಗಿಲ್, ಭಾರತ ದೇಶದ ನಕಾಶೆಯನ್ನು ಗಮನಿಸಿದಾಗ ತಿಲಕವಿಡುವ ಜಾಗದಲ್ಲಿದೆ ಎಂದು ಓದಿದ ನೆನಪು. ನೆರೆ ದೇಶ ಬಹಳವಾಗಿ ನಮ್ಮ ಭೂಮಿಯನ್ನು ಆಕ್ರಮಿಸಿದೆ. ಕಾರ್ಗಿಲ್ ಯುದ್ಧ ಈಗಿನ ಯುವಕರಿಗೆ ಒಂದು ದೇಶ ಭಕ್ತಿಯ ಪಾಠ. ತಾಯ್ನಾಡಿನ ರಕ್ಷಣೆಗಾಗಿ ತಮ್ಮ ವೈಯಕ್ತಿಕ ಜೀವನದ ಸುಖವನ್ನೂ ಲೆಕ್ಕಿಸದೇ ಹೋರಾಡಿ ಮಡಿದ ಎಷ್ಟೋ ವೀರಯೋಧರ ನೆನಪು ಮನದೊಳಗೆ ಮೂಡಿದಾಗ ಈಗಲೂ ಕಣ್ಞೀರು ಕೆನ್ನೆಯನ್ನು ನಮಗರಿವಿಲ್ಲದೆಯೇ ಸ್ಪರ್ಶಿಸುತ್ತದೆ. ಯುದ್ಧ ಸಂದರ್ಭದಲ್ಲಿ ಕರುನಾಡಿನ ಕರ್ನಲ್ ರವೀಂದ್ರನಾಥ ಅವರ ಬಳಿ ರಾಜಸ್ತಾನದ ನವ ವಿವಾಹಿತ ಹುತಾತ್ಮರಾದಾಗ ಸಾಮಾನ್ಯ ಮನುಷ್ಯರಾದರೆ ಯುದ್ಧದ ಸಹವಾಸವೇ ಬೇಡ ಎಂದು ಬಿಡುತ್ತಿದ್ದರು. ರವೀಂದ್ರನಾಥ್ ಮಣ್ಣಿನ ರಕ್ಷಣೆಗಾಗಿ ನಿಂತವರು. ರಾಜಾಸ್ತಾನದ ಯೋಧನ ಪತ್ನಿಯ ಮಾತಿನಿಂದ ಎದೆ ಝಲ್ ಎನ್ನುತ್ತದೆ. ಎದುರಾಳಿಗೆ ಬೆನ್ನು ತೋರಿಸಿದೇ ಎದೆಗೊಟ್ಟು ಹೋರಾಡು ಎನ್ನುತ್ತಾರೆಂದರೆ ಆ ತಾಯಿಗೆ ಅದೆಷ್ಟು ದೇಶ ಭಕ್ತಿ? ರವೀಂದ್ರನಾಥ್ ಅವರೂ ದೇಶ ಸೇವೆ ಮಾಡಿ ನಮ್ಮ ಕರುನಾಡಿಗೆ ಕೀರ್ತಿ ಕಳಶವಾಗಿದ್ದಾರೆ. ಅವರ ತಾಯಿಯೂ ತನ್ನ ಸುಖ ಬಯಸದೇ ಮಠದ ಭಕ್ತರ ಸುಖಕ್ಕಾಗಿ ಮಂತ್ರ ಪಠಣೆ ಮಾಡುತ್ತಾರೆಂದರೆ ಅಂತಹ ತಾಯಿಯ ಗರ್ಭದಲ್ಲಿ ರವೀಂದ್ರನಾಥ್ ಅಂತವರೇ ಜನಿಸುತ್ತಾರೆ. ಶ್ರೀಗಳು ಲೇಖನದ ಆರಂಭದಲ್ಲಿ ದೇಶ ಕಾಯುವ ಜನರ ಮಧ್ಯೆ ದೇಶ ಆಳುವ ಜನರ Truth ಪ್ರಸ್ತಾಪಿಸಿದ್ದಾರೆ. ಅವರಿಗೂ ಯೋಧರಿಗೂ ಹೋಲಿಕೆ ಆಕಾಶ ಭೂಮಿಯೆಂದರೆ ತಪ್ಪಾಗಲಾರದು. ಈ ಲೇಖನ ಬಹಳ ವರ್ಷಗಳ ಹಿಂದೆ ಓದಿದ ನೆನಪು. ಮತ್ತೆ ಲೇಖನ ಓದಲು ಅವಕಾಶ ನೀಡಿದ ಹಿರಿಯರಾದ ವೆಂಕಟೇಶ ಶೆಟ್ಟಿಯವರಿಗೆ ನಮಸ್ಕಾರಗಳು.

ಈ ಲೇಖನ ಯುವ ಜನತೆ ಓದಬೇಕು. ಆಗ ಕೆಲವರಲ್ಲಾದರೂ ದೇಶ ಭಕ್ತಿಯ ಕಿಡಿ ಹೊತ್ತಿ ದೇಶ ಸೇವೆಗೆ ಸೇರುವ ನಿರ್ಧಾರ ಮಾಡಿದರೆ ಲೇಖನವೂ ಸಾರ್ಥಕ್ಯವನ್ನು ಪಡೆಯುತ್ತದೆ.

ನಮಸ್ಕಾರಗಳು
ಚೌಳೂರು ಲೋಕೇಶ್, ಶಿಕ್ಷಕರು ನಾಯಕನಹಟ್ಟಿ


N-2458 

  27-07-2024 11:57 AM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಈ ಬಾರಿ ಬಿಸಿಲು ಬೆಳದಿಂಗಳು
ಅಂಕಣದಲ್ಲಿ ಪೂಜ್ಯ ಗುರುಗಳು
ವೀರಯೋಧರ ಬಗ್ಗೆ ಬರೆದಿದ್ದಾರೆ.

ನಮ್ಮ ದೇಶದ ಗಡಿ ಕಾಯುವ ವೀರ ಯೋಧರು ಮತ್ತು ನಮ್ಮ ದೇಶದ ಬೆನ್ನೆಲುಬು ಆದಂತಹ ರೈತರು
ನಮ್ಮ ದೇಶದ ಎರಡು ಕಣ್ಣುಗಳು‌ ಇದ್ದಂತೆ. ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ನಮ್ಮ ದೇಶವನ್ನು ಕಾಪಾಡುವ ವೀರ ಯೋಧರು ತಮ್ಮ ತಂದೆ, ತಾಯಿ ಬಂಧು ಬಳಗ ಹಾಗೂ ಹೆಂಡತಿ ಮಕ್ಕಳನ್ನು ಬಿಟ್ಟು ನಮ್ಮ ದೇಶವನ್ನು ಕಾಪಾಡಲು ಯುದ್ಧ ಮಾಡಲು ಹೋಗುತ್ತಾರೆ. ಹೋದವರು ರಜೆಗೆಂದು ಮರಳಿ ಬಂದಾಗ ಅದೆಂತಹ ಸಂಭ್ರಮ ಯೋಧರ ಮನೆಯಲ್ಲಿ! ಎಲ್ಲಾ ಹಬ್ಬಗಳನ್ನೂ ನಮ್ಮ ಯೋಧರು ಬಂದಾಗಲೇ ಆಚರಿಸುತ್ತಾರೆ ಯೋಧರ ಮನೆಯಲ್ಲಿ. ರಜೆ ಮುಗಿದು ವಾಪಾಸು ತೆರಳುವಾಗ ಎಷ್ಟು ದುಃಖ! ಎಲ್ಲರನ್ನೂ ಬಿಟ್ಟು ಹೋಗುವುದು ಒಂದು ಕಡೆ ದುಃಖ; ಮತ್ತೊಂದು ಕಡೆ ನಾನು ಮತ್ತೆ ಮರಳಿ ಬರುತ್ತೇನೊ ಇಲ್ಲವೊ, ಇದೇ ಕೊನೆ ಏನೋ ಎಂದು ಏನೇನೆಲ್ಲಾ ಯೋಚನೆ ಮಾಡುತ್ತಾರೆ. ಆದರೂ ಎಲ್ಲವನ್ನೂ ಮರೆತು ತನ್ನವರೆಲ್ಲರನ್ನೂ ಬಿಟ್ಟು, ತಂದೆ ತಾಯಿಗೆ ಬಂಧು ಬಳಗದವರಿಗೆ, ಮನೆಯ ದೇವರಿಗೆ ನಮಸ್ಕರಿಸಿ ನಗು ನಗುತ್ತಾ ಹೋಗುತ್ತಾರೆ ನಮ್ಮ ಯೋಧರು! ಕೆಲ ಯೋಧರು ರಿಟಾರ್ಯ ಆಗುವವರೆಗೂ ನಮ್ಮ ದೇಶದ ಸೇವೆ ಮಾಡಿ ಮುಗಿಸಿ
ಯುದ್ಧ ಗೆದ್ದು ಬರುತ್ತಾರೆ. ಇನ್ನು ಕೆಲವು ನತದೃಷ್ಟರು ನಮ್ಮ ದೇಶಕ್ಕೋಸ್ಕರ ಯುದ್ಧ ಮಾಡುವಾಗಲೇ
ವೀರ ಮರಣ ಹೊಂದುತ್ತಾರೆ.

ಇಂತಹ ಭಾರತ ಮಾತೆಯ ಮಕ್ಕಳಾದಂತಹ ಯೋಧರನ್ನು ಪಡೆದ ನಾವೆಲ್ಲರೂ ಪುಣ್ಯವಂತರು.
ನಮ್ಮ ದೇಶ ಕಾಯುವ ವೀರ ಯೋಧರಿಗೆ ನನ್ನ ಭಕ್ತಿಯ ನಮಸ್ಕಾರಗಳು..

ಗುರುಗಳಿಗೆ ಶರಣು ಶರಣಾರ್ಥಿಗಳು.
ಸುವರ್ಣ ಎಸ್ ಪಾಟೀಲ, ವಳಗೆರಿ ✍️


N-2458 

  27-07-2024 11:30 AM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಜೈ ಗುರುದೇವ*

ಶ್ರೀ ಗುರುಗಳ ಕೃತಿ "*ಏಳು ಹೆಜ್ಜೆಗಳ ಏಳು ಬೀಳು* ಪುಸ್ತಕದ "ನಿಮ್ಮೊಂದಿಗೆ" ಯಲ್ಲಿ ಬರೆದ ವಿಷಯ ಕುರಿತು ನನ್ನ ಪ್ರತಿಕ್ರಿಯೆ.

ಗುರುಗಳು ಈ ಲೇಖನದಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿಗಳಾಗಿ ಭಾಗವಹಿಸುವವರ ಕುರಿತು ಮನ ಮುಟ್ಟುವಂತೆ ಬರೆದಿದ್ದಾರೆ. ನಾನು ನನ್ನ ಜೀವನದ 25 ವರ್ಷಗಳ ಕಾಲ ಆರ್ಯ ವೈಶ್ಯ ಸಂಘದಲ್ಲಿ ನಿರ್ದೇಶಕನಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ ಹಾಗೂ ಕೊನೆಗೆ 10 ವರ್ಷಗಳ ಕಾಲ *ಅದ್ಯಕ್ಷನಾಗಿ* ಸೇವೆಯನ್ನು ಸಲ್ಲಿಸಿದ್ದೇನೆ.ನನ್ನ ಸೇವೆಯನ್ನು ಗುರುತಿಸಿ ನಮ್ಮ ಮತ್ತು ಬೇರೆ, ಬೇರೆ ಸಮಾಜಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸಿ ಅವರು ಕೊಡುವ ಗೌರವ ಆತಿಥ್ಯಗಳನ್ನು ಸ್ವೀಕರಿಸಿರುತ್ತೇನೆ. ಆ ಸಂಧರ್ಭಗಳಲ್ಲಿ ನನಗೆ ಬಂಂತಹ ಸಾವಿರಾರು ಶಾಲುಗಳು, ಮುತ್ತಿನ ಹಾರಗಳು,ಮೆಮೆಂಟೋಗಳನ್ನು ಏನು ಮಾಡಬೇಕೆಂದು ಪರಿತಪಿಸುವಂತಾಗಿದೆ. ಶ್ರೀ ಗುರುಗಳು ಏಕೋ,ಏನೋ ಇವುಗಳನ್ನು ಸಾಮಾನ್ಯವಾಗಿ ಹೇಗೆ ವಿತರಿಸಬೇಕೆಂಬುದನ್ನು ಬರೆದಿಲ್ಲ. ನನ್ನ ಪ್ರಕಾರ ಕೆಲಸಕ್ಕೆ ಬಾರದ ಇಂತಹ ವಸ್ತುಗಳನ್ನು ಆಯೋಜಕರು ನೀಡದೆ ಒಂದು ಗುಲಾಬಿ ಹೂವನ್ನು ಕೊಡುವದರ ಮೂಲಕ ಸನ್ಮಾನಿಸಿದರೆ , ಅವರಿಗೆ ಖರ್ಚು ವೆಚ್ಚ ಕಡಿಮೆ ಆಗುವುದರೊಂದಿಗೆ ಸನ್ಮಾನಿತರಿಗೂ ಅನುಕೂಲವಾಗುವುದೆಂದು ನನ್ನ ಭಾವನೆ.
ನಾನೇನೂ ಬಹಳ ಸಾಹಿತ್ಯವನ್ನು ಅರಿತವನಲ್ಲ ನನಗೆ ತಿಳಿದಿದ್ದನ್ನು ಬರೆದಿದ್ದೇನೆ. ಈ ನನ್ನ ಬರವಣಿಗೆಗೆ ಗುರುಗಳ ಆಶೀರ್ವಾದ ರೂಪದಲ್ಲಿ ಏನು ಮಾಡಬೇಕೆಂದನ್ನು ತಿಳಿಸಲು ವಿನಂತಿಸುತ್ತೇನೆ
ಇಂತಿ ನಮಸ್ಕಾರಗಳು
.ಕಾಶಿ ವಿಶ್ವನಾಥ ಶೆಟ್ಟಿ S.N, ಮಾಲೀಕರು, ಶ್ರೀ ಗುರುರಾಜ ಫರ್ನೀಚರ್ಸ್ ಚಿತ್ರದುರ್ಗ


N-2458 

  26-07-2024 09:21 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿಯ ಮಡಿಲನ್ನು ಸೇರಿದ ವೀರ ಯೋಧ* ಅಂಕಣಕ್ಕೆ ಪ್ರತಿಕ್ರಿಯೆ

ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡುವ ವೀರ ಯೋಧರಿಗೂ ಟಿಕೇಟು ಹೋರಾಟಗಾರರಿಗೂ ಅಜಗಜಾಂತರ ವ್ಯತ್ಯಾಸ. ತಾಯ್ನೆಲದ ಸೇವೆಯಲ್ಲಿ ನಿರತರಾಗಿ ಪ್ರಾಣಾರ್ಪಣೆಗೆ ಸಿದ್ಧರಾಗಿರುವ ವೀರ ಸೈನಿಕರೆಲ್ಲಿ, ಸ್ವಾರ್ಥ ಲಾಲಸೆಗಳಿಂದ ತುಂಬಿ ದೇಶಸೇವೆಯ ಸೋಗು ಹಾಕಿದ ಕಪಟ ವೇಷಧಾರಿಗಳೆಲ್ಲಿ!

ವೀರ ಯೋಧನ ಪತ್ನಿಯ ಪತ್ರ ನಿಜಕ್ಕೂ ಹೃದಯ ವೇಧಕ. ಮಿಲಿಟರಿ ಸೇವೆಯಿಂದ ನಿವೃತ್ತರಾದ ನಂತರ ಕರ್ನಲ್ ರವೀಂದ್ರನಾಥ್ ರವರು ಮತ್ತು ಅವರ ಸಹೋದರರೂ ತಮ್ಮ ತಂದೆಯವರ ಕಾರ್ಯದಲ್ಲಿ ಕೈಜೋಡಿಸಿ ಭಾರತದಲ್ಲಿ ಪ್ರಪ್ರಥಮ ವಾಟರ್ ಕಟ್ಟಿಂಗ್ ಮೆಷಿನ್, ಲೇಸರ್ ಕಟ್ಟಿಂಗ್ ತಂತ್ರಜ್ಞಾನವನ್ನು ಅಳವಡಿಸಿರುವುದು ಹೆಮ್ಮೆಯ ಸಂಗತಿ. *ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ* ಎಂಬ ಸೂಕ್ತಿಗೆ ಜೀವತುಂಬುವ ಕರ್ನಲ್ ರವೀಂದ್ರನಾಥ್ ರವರಂತಹ ಕುಟುಂಬಗಳ ಸಂಖ್ಯೆ ವರ್ಧಿಸಲಿ. ವಿಶ್ವಗುರುವಾಗುವ ಭಾರತದ ಕನಸು ಬೇಗ ನನಸಾಗಲಿ.
ಪೂರ್ಣಿಮ ಭಗವಾನ್, ಬೆಂಗಳೂರು.


N-2458 

  26-07-2024 07:37 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ಕರ್ನಲ್ ರವೀಂದ್ರನಾಥ್ ಅಮರರಾಗಿದ್ದಾರೆ.
ಅವರ ಆತ್ಮಕ್ಕೆ ಚಿರ ಶಾಂತಿ ಕೋರುತ್ರೇನೆ.

ಸ್ವಾಮೀಜಿಯವರ ಬರಹಗಳು ಸದಾ ಹೃದಯ ಸ್ಪರ್ಶಿ ಆಗಿರುತ್ತವೆ.

ಇದರಲ್ಲಿ ವಿವಿರಿಸಿರುವ ಕರ್ನಲ್ ರವೀಂದ್ರನಾಥ ಅವರ ಬಗೆಗಿನ ಲೇಖನವೂ ಅದಕ್ಕೆ ಹೊರತಾಗಿಲ್ಲ.
ಕರ್ನಲ್ ರವೀಂದ್ರನಾಥ ಅವರ ಧೀರತ್ವದ ಜೊತೆಗೆ ರಾಜಾಸ್ಥಾನದ ಯೋಧನ ಪತ್ನಿಯ ಪತ್ರ , ನಮ್ಮ ಹೃದಯ ತಟ್ಟುತ್ತದೆ.
ಹಾಗೇ ,
ಕರ್ನಲ್ ಅವರ ತಂದೆ ತಾಯಿವರೂ ಎಂತಹ ಹೃದಯವಂತರು ಎಂಬುದನ್ನು ವಿವಿರಿಸಿದ್ದಾರೆ .

ವಿದ್ಯಾವಂತರಾಗಿರದೆ ಇದ್ದರೂ ತಾಯಿಯವರು , ಯುದ್ಧದಲ್ಲಿ ಒಂದು ಪಕ್ಷ ಮಗ ಮಡಿದಿದ್ದರೆ ಏನನ್ನಿಸುತ್ತಿತ್ತು ಎಂಬ ಪ್ರಶ್ನೆಗೆ ನೀಡಿದ ಉತ್ತರ ಅವರ ಉತ್ಕಟ ದೇಶಭಕ್ತಿಯ ದ್ಯೋತಕವಾಗಿದೆ.
ತಂದೆಯವರು ತಮ್ಮ ವಿದೇಶ ಪ್ರವಾಸದ ಹಣವನ್ನು ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡಿರುವುದು ಅವರ ಮಾನವೀಯ ಹೃದಯವಂತಿಕೆಗೆ ನಿದರ್ಶನವಾಗಿದೆ‌
ಬಸಪ್ಪ ಮಾಸ್ತರ ಹಾಗೂ ಅವರ ಪತ್ನಿ ಸರೋಜಮ್ಮ ಅವರಿಗೂ ಗೌರವಪೂರ್ವಕ ನಮನಗಳು. ನಮ್ಮ ಭಾರತದ ಸೈನಿಕರ ಶೌರ್ಯ ಪ್ರಪಂಚದಲ್ಲೆ ಹೆಸರು ಮಾಡಿದೆ. ಕೇವಲ ನಮ್ಮ ದೇಶದ ಗಡಿಗಳಲ್ಲೆ ಅಲ್ಲದೆ ,
ವಿಶ್ವಸಂಸ್ಥೆಯ ಶಾಂತಿ ಪಾಲನಾ ಸೈನ್ಯದಲ್ಲಿಯೂ ನಮ್ಮ ಯೋಧರ ಸೇವೆ ಅನನ್ಯ.

ಕಾರ್ಗಿಲ್ ಯುದ್ಧ ಒಂದೇ ಅಲ್ಲ , ಇದುವರೆಗೆ ನಡೆದ ವಿವಿಧ ಸೇನಾ ಕಾರ್ಯಾಚರಣೆಗಳಲ್ಲಿ ,
ಚೈನಾ , ಪಾಕಿಸ್ತಾನ ಆಕ್ರಮಣಗಳ ವಿರುದ್ಧ ಹೋರಾಡಿದ ಭಾರತ ಮಾತೆಯ ಎಲ್ಲಾ ವೀರಪುತ್ರರಿಗೆ ಹೃದಯಪೂರ್ವಕ ನಮನಗಳು.

ಓದುಗರಿಗೆ ಇಂತಹ ಮನಮುಟ್ಟುವ , ಪ್ರಭಾವಯುತವಾದ ಲೇಖನ ಬರೆದ ಸ್ವಾಮೀಜಿಯವರಿಗೆ ಅನಂತಾನಂತ ವಂದನೆಗಳು ಮತ್ತು ನಮನಗಳು .

ತೋಂಟದಾರ್ಯ ಸಂಪಿಗೆ
Bengaluru

N-2458 

  26-07-2024 05:57 PM   

ತಾಯಿಯ ಮಡಿಲನ್ನು ಸೇರಿದ ವೀರ ಯೋಧ

 ತಾಯಿಯ ಮಡಿಲನ್ನು ಸೇರಿದ ವೀರ ಯೋಧ" ಎಂಬ ಶೀರ್ಷಿಕೆಯಲ್ಲಿ ಶ್ರೀ ಗುರುಗಳು ನಿರೂಪಿಸಿದ ಬರಹ ನಿಜಕ್ಕೂ ಎನ್ನ ಮನ ಮಿಡಿಯಿತು. ಕರ್ನಾಟಕ ಮೂಲದ ಕರ್ನಲ್ ರವೀಂದ್ರನಾಥ ಅವರ ಇಲ್ಲದಿರುವಿಕೆಯ ಇಂದಿನ ಶೂನ್ಯದಲ್ಲಿ ಅವರ ಸಾಧನೆ , ನಿಲುವುಗಳು ಅರ್ಥವಂತಿಕೆಯನ್ನು ಕೊಟ್ಟಿವೆ. ಅವರ ಕಣ್ಣುಗಳು ಮತ್ತೊಬ್ಬರು ನೋಡುವಿಕೆಯಲ್ಲಿ ಅವರನ್ನು ಜೀವಂತವಾಗಿ ಉಳಿಸಿವೆ. ಅವರ ಅನುಭವ ಹೇಳುತ್ತಿರುವಾಗ ಯೋಧನ ಪತ್ನಿ ಬರೆದಂತೆ "ಗುಂಡು ತಾಗುವುದಿದ್ದರೆ ನಿನ್ನ ಎದೆಯನ್ನೊಡ್ಡು ಬೆನ್ನನ್ನು ಒಡ್ಡಬೇಡ" ಎಂಬ ನುಡಿ ಪ್ರೇರಣೆಯಾಗಿ ಗೆಲುವು ಸಾಧ್ಯವಾಗಿದ್ದು, ಕರ್ನಲ್ ಅವರ ತಾಯಿ "ನನ್ನ ಮಗ ದೇಶಕ್ಕಾಗಿ ಹೋರಾಡಿ ಸತ್ತಿದ್ದರೆ ಈ ಸನ್ಮಾನಕ್ಕಿಂತ ಹೆಚ್ಚಿನ ಸಂತೋಷವಾಗುತ್ತಿತ್ತು" ಎಂಬ ಜೀವನಾಡಿಯ ಮಾತುಗಳಿಂದ ಕರ್ನಲ್ ಅವರು ಇಂದಿಗೂ ಜೀವಂತವಾಗಿದ್ದಾರೆ. ಇಂತಹ ಹಲವು ಬಗೆಯ ವಿಚಾರಗಳನ್ನು ತಿಳಿಸಿದ ಗುರುಗಳಿಗೆ ಶರಣು. 🙏
ವೆಂಕಟೇಶ ಜನಾದ್ರಿ ಕಲಬುರ್ಗಿ.