N-2557 

  14-06-2024 08:48 AM   

ಸಿರಿಗೆರೆ: ಸಂಸ್ಕಾರ-ಸಂಸ್ಕೃತಿ-ಯೋಗ ಸಪ್ತಾಹ-2024

 ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ, ಉತ್ತಮ ಪ್ರಜೆಗಳಾಗಲು ಬುನಾದಿ. ಇದೆ ಕಾರಣಕ್ಕೆ ನಮ್ಮ ಮಗಳನ್ನು ನಾನು ಈ ಶಾಲೆಗೆ ಸೇರಿಸಿರುವೆ. 🙏
ವಸಂತರಾಜ, ರೇವಣಗೌಡ, ಕಲ್ಲಪ್ಪಗೌಡ್ರ
ಬೆನಕನಕೊಂಡ. ರಾಣೇಬೆನ್ನೂರ ತಾಲ್ಲೂಕು

N-2557 

  14-06-2024 08:40 AM   

ಸಿರಿಗೆರೆ: ಸಂಸ್ಕಾರ-ಸಂಸ್ಕೃತಿ-ಯೋಗ ಸಪ್ತಾಹ-2024

 Yoga is a important for our life yoga is best exercise
Manya .c
Karnatak

N-2557 

  14-06-2024 07:23 AM   

ಸಿರಿಗೆರೆ: ಸಂಸ್ಕಾರ-ಸಂಸ್ಕೃತಿ-ಯೋಗ ಸಪ್ತಾಹ-2024

 ಸಂಸ್ಕಾರ, ಸಂಸ್ಕೃತಿ,ಯೋಗ.ಇವುಗಳು ನಮ್ಮ ಈಗಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳಲ್ಲಿ ಕೂಡಬೇಕಾಗಿದೆ.ಇದರಿಂದ ಮಕ್ಕಳ ಶಾರೀರಿಕ ಮಾನಸಿಕ ಭಾವನಾತ್ಮಕ ಸಂಬಂಧಗಳು ಪ್ರಶ್ನಾತೀತ ವಾಗೇ ಸಬಲೀಕರಣ ವಾಗಲು ಈ ತರಹದ ಸಪ್ತಾಹ ಆಚರಣೆ ಯಶಸ್ವಿ ಆಗುತ್ತವೆ..ಆದರೆ ಇವುಗಳು ಕನಿಷ್ಠ ವಾರಕೂಮ್ಮೆಯಾದರೂ ಆಟ ಪಾಠದ ಜೊತೆಗೆ ಉಪಾಧ್ಯಾಯರು ಗಳು ನೀಡಿದರೆ ಖಂಡಿತಾ ಮಕ್ಕಳ ಮನಸು ವಿಕ‌ಸಿತವಾಗುತ್ತದಲ್ಲವೆ!.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2556 

  13-06-2024 11:14 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಈಗಿನ ರಾಜಕೀಯ ನೇತಾರರು ಓದಿ ಅರ್ಥ ಮಾಡಿಕೊಳ್ಳಲು ಸೂಕ್ತವಾದ ಲೇಖನ ಇದಾಗಿದೆ ಪೂಜ್ಯರಿಗೆ ಅನಂತ ಪ್ರಣಾಮಗಳು
Shivaprakash Shivapura
Shivapura ಕರ್ನಾಟಕ India

N-2556 

  13-06-2024 10:07 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 TN ಶೇಷನ್ ವೆಂಕಟಾಚಲ ಸಂತೋಷ ಹೆಗ್ಡೆ ಕಿರಣ್ ಬೇಡಿ ಅಣ್ಣಾ ಹಜಾರೆ ವಿಶ್ವೇಶ್ವರಯ್ಯ ಇನ್ನೂ ಮುಂತಾದ ಮಹಾನಿಯರು ಭಾರತಾಂಬೆಯ ಮಡಿಲಲ್ಲಿ ಮತ್ತೆ ಹುಟ್ಟಿಬರಲಿ ಅನ್ನೋದು ನಮ್ಮಗಳ ಆಶಯವೂ ಕೂಡ ಆದರೂ ಅವಕಾಶ ಇದೆ ಇರುವ ನಮ್ಮ ನಾಡಿನ ಸಂಪನ್ಮೂಲ ಭವಿಷ್ಯದ ಪ್ರತಿಭೆಗಳನ್ನು ಸಂಸ್ಕಾರ. ಉತ್ತಮ ಶಿಕ್ಷಣ ಜೀವನ ಮೌಲ್ಯ ಆದರ್ಶ ಇವೆಲ್ಲವನ್ನೂ ಒದಗಿಸಬಲ್ಲ ಶಿಕ್ಷಣ ನೀತಿ ಕಾನೂನು ನಮ್ಮ ಜನಪ್ರತಿಗಳ ಆಯ್ಕೆ ಇವೆಲ್ಲವೂ ಅತ್ಯವಶ್ಯ ಎನ್ನುವುದು ಅಷ್ಟೇ ಸತ್ಯಾ
ಜಿ. ಈ


N-2556 

  13-06-2024 09:32 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯ ಗುರುಗಳವರ ಪಾದಕಮಲಗಳಿಗೆ ವಂದಿಸುತ್ತಾ..

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!
ಲೇಖನ ಎಲ್ಲಾ ಚುನಾವಣಾ ಅಧಿಕಾರಿಗಳಿಗೂ ಹಾಗೂ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಅಭ್ಯರ್ಥಿಗಳಿಗೂ ಕಣ್ಣು ತೆರೆಸುವಂತಿದೆ..
ಆದರೆ ದುರಾದೃಷ್ಟವಶಾತ್ ಇಂಥ ಜ್ಞಾನವನ್ನು ನೀಡುವಂತಹ ಲೇಖನವನ್ನು ಓದುವಂಥ ತಾಳ್ಮೆ ಯಾವ ಚುನಾವಣೆ ಅಧಿಕಾರಿಗಳಿಗೆ , ಹಾಗೂ ಚುನಾವಣಾ ಕಣಕ್ಕಿಳಿಯುತ್ತಿರುವಂತಹ ಅಭ್ಯರ್ಥಿಗಳಿಗೆ ಇದೆ..
ಅದೇ ನಮ್ಮ ದುರದೃಷ್ಟ ಕೂಡ ..
ಕಾಂಚಾಣ ಲೋಕವನ್ನೆಲ್ಲ ಒಂದೇ ನಿಮಿಷದಲ್ಲಿ ಚಣಚಣವೆಂದು ಆಡಿಸುತ್ತಿದೆ..
ಇಲ್ಲಿ ಯಾರಿಗೂ ಬಹುಮತ ಬರಲಿಲ್ಲ..
ಅದಕ್ಕೆ ಕಾರಣ ಆ ಕ್ಷೇತ್ರಗಳ ಅಭ್ಯರ್ಥಿಗಳು..
ಇಲ್ಲಿ ಪ್ರಧಾನಿ ಅಭ್ಯರ್ಥಿಗಳು ಮುಖ್ಯವಾಗುವುದಕ್ಕಿಂತ ನಮ್ಮ ಕ್ಷೇತ್ರದ ಅಭ್ಯರ್ಥಿಗಳು ನಮಗೆ ಮುಖ್ಯವಾಗುತ್ತಾರೆ.. ಏಕೆಂದರೆ ನಮಗೆ ಯಾವುದೇ ಸಂದರ್ಭ ಬಂದರೂ ನಾವು ಮತ ಹಾಕಿದವರನ್ನು ಕಾಣಲು ದಾವಿಸುತ್ತೇವೆ..
ನೇರವಾಗಿ ಪ್ರಧಾನಿಯವರನಂತೂ ಸಂಪರ್ಕಿಸಲು ಸಾಧ್ಯವಿಲ್ಲ.. ಹಾಗಾಗಿ ಇಲ್ಲಿ ಯಾರಿಗೂ ಬಹುಮತ ಬಂದಿಲ್ಲ..
ಮತದಾರರ ಆಳಲು ಕೇಳುವಂತ ತಾಳ್ಮೆ ಗೆದ್ದ ಅಭ್ಯರ್ಥಿ ಗಳಿಗೆ ಎಲ್ಲಿದೆ ಗುರುಗಳೇ..
ನಯವಿನಯವಿಲ್ಲದ ಅವರ ಮಾತುಗಳು ಮತ್ತೊಮ್ಮೆ ವೋಟ್ ಮಾಡಲೇ ಬಾರದು ಅನ್ನಿಸುತ್ತದೆ.. ಇದು ಅತೀ ದೊಡ್ಡ ಕಾರಣ ಇದು ಹಣ , ಅಧಿಕಾರದ ಮದವಲ್ಲವೇ..

ಈ ದೇಶದ ಅಕ್ರಮಗಳನ್ನು ತಡೆಯುವಂತ ಅಧಿಕಾರಿಗಳನ್ನು ನಮ್ಮಲ್ಲಿ ಉಳಿಸಿಕೊಳ್ಳುವ ಯೋಗ್ಯತೆ ನಮ್ಮಗಳಿಗೆ ಉಳಿದಿಲ್ಲ..
ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಅಂದಿಗೂ , ಇಂದಿಗೂ ಕಾಡುತ್ತಿದೆ.. ಹಣವೇ ಎಲ್ಲದ್ದಕ್ಕೂ ಮೂಲ ಇಂದು ಎಂತೆಂಥ ವ್ಯಕ್ತಿಗಳು ಮಾಡಬಾರದ ಕೆಲಸವನ್ನು ಮಾಡಿ ಗಳಿಸಿದ ಯಶಸ್ಸು ಮತ್ತು ಜನರ ನಂಬಿಕೆಗಳಿಗೆ ಪೆಟ್ಟು ಕೊಡುತ್ತಿದ್ದಾರೆ ..
ಇದಕ್ಕೆ ರಾಜಕಾರಣಿಯು ಹಾಗೂ ಸಿನಿಮಾ ನಟರು ಹೊರತಾಗಿಲ್ಲ..
ಯಾವ ವಯಸ್ಸು ಯಾರನ್ನು ಕೇಳುತ್ತಿಲ್ಲ ಹಣದ ಮದವೊಂದೇ ಇಲ್ಲಿ ಅಳುತ್ತಾ ಇರುವುದು ಎನ್ನುವ ಸತ್ಯ ಇಲ್ಲಿಯವರೆಗೂ ನನಗೆ ತಿಳಿದಿದ್ದು..
ಯಾರು ಯಾರನ್ನು ಬದಲಾಯಿಸಲು ಈ ಪ್ರಪಂಚದಲ್ಲಿ ಸಾಧ್ಯವೇ ಇಲ್ಲ..
ಪ್ರಪಂಚ ಬದಲಾಗಬೇಕೆಂದಿದ್ದರೆ ನಿಮ್ಮಂತ ಜಗದ್ಗುರುಗಳು ಬರೆದ ನಿಮ್ಮ ಒಂದೊಂದು ಲೇಖನವನ್ನು ಓದಿದಾಗಲೂ ಒಂದೊಂದೇ ವಿಚಾರದಲ್ಲಿ ಬದಲಾಗುತ್ತಾ ಬಂದಿದ್ದರೆ ಈಗ ನಾವು ಎಲ್ಲೋ ಇರುತ್ತಾ ಇದ್ದೆವು..
ಈ ಮಾತನ್ನು ಹೇಳುವುದಕ್ಕೆ ನನಗೆ ನಿಜವಾಗ್ಲೂ ತುಂಬಾ ದುಃಖವಾಗುತ್ತಿದೆ ಗುರುಗಳೇ..
ಲೇಖನ ಪದೇ ಪದೇ ಚಿಂತನೆಗೆ ಹಚ್ಚುವಂತಿದೆ ಗುರುಗಳೇ ಅಭಿನಂದನೆಗಳು..

ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಕರ್ನಾಟಕ. ದಾವಣಗೆರೆ ಜಿಲ್ಲೆ .ಚನ್ನಗಿರಿ. ಪಾಂಡೋಮಟ್ಟಿ

N-2556 

  13-06-2024 08:50 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಶ್ರೀಗುರುಭ್ಯೋ ನಮಃ…
ತ್ರಿಮೂರ್ತಿ ಸ್ವರೂಪಿಗಳಾದ ಗುರುಗಳ ಚರಣಾರವಿಂದಗಳಲ್ಲಿ ಪೊಡಮಡುತ್ತಾ,ಗುರುಗಳ ಇಂದಿನ ದಿ. ೧೩, ಜೂನ್ ೨೦೨೪ರ ಅಂಕಣ,”ಮತ್ತೊಬ್ಬ ಟಿ ಎನ್ ಶೇಷನ್ ಗಾಗಿ ಭಾರತ ಕಾಯುತ್ತಿದೆ!”, ಗಾಗಿ ನನ್ನ ಪ್ರತಿಕ್ರಿಯೆ.

ಹೆಣ್ಣು, ಹೊನ್ನು, ಮಣ್ಣು ಎನ್ನುವ ಮೂರು ಲಾಲಸೆಗಳು ಎಂಥಾ ಹೃದಯವನ್ನಾದರೂ ಅಲುಗಾಡಿಸಿಬಿಡುತ್ತವೆ ಎಂಬುದಕ್ಕೆ ಮಹಾಭಾರತವೇ ಉದಾಹರಣೆಯಾಗಿ ನಿಲ್ಲುತ್ತದೆ. ಚಕ್ರವರ್ತಿಗಳಾದಿಯಾಗಿ, ಇಂದಿನ ಘನ ಮಂತ್ರಿ ಮಹೋದಯರೂ, ಅವರ ಸಂತತಿಗಳೂ, ಅದೆಷ್ಟು ಜನ್ಮಗಳಿಗಾಗುವಷ್ಟು ಆಸ್ತಿ ಪಾಸ್ತಿಗಳಿದ್ದರೂ, ಈ ಮೂರು ವಸ್ತುಗಳ ಮೋಹಕ್ಕೆ ಮತ್ತೆ ಮತ್ತೆ ತಮ್ಮ ನಿಯತ್ತನ್ನ ಬಿಟ್ಟೇ ಬದುಕುತ್ತಿದ್ದಾಗ, ಈಗಿನ ಬಹುಪಾಲು ಕೆಳ ಹಾಗೂ ಮಧ್ಯಮ ವರ್ಗದ ಜನಸಾಮಾನ್ಯರು ನೋಟಿಗಾಗಿ ವೋಟು ಹಾಕದೇ ಬಿಟ್ಟಾರೇ? ನಮ್ಮ ಮನೆಯ ಕೆಲಸದವಳಿಗೆ ಹೀಗೇ ಮಾತನಾಡುವಾಗ,”ನೀನು ಯಾರಿಗೆ ವೋಟು ಹಾಕಿದ್ಯೇ…..?”, ಎಂದೆ. ಆಕೆ,”ನಾನು…..ಪಾರ್ಟಿಗೆ ಹಾಕಿದೆ ಆಂಟೀ”, ಎಂದಳು.ನಾನು,”ಆ ಪಾರ್ಟಿ …..ಸಮುದಾಯವನ್ನೇ ಬೆಂಬಲಿಸುತ್ತದೆ. ಮುಂದೆ ದೇಶವನ್ನೇ ಮಾರಿಕೊಂಡರೂ ಆಶ್ಚರ್ಯವಿಲ್ಲ. ಅಂಥವರಿಗೆ ಹಾಕಿದೀಯಲ್ಲಾ”, ಎಂದು ಬೇಸರಿಸಿಕೊಂಡಾಗ,”ಅಯ್ಯೋ ಆಂಟೀ,ನಮ್ ಜೀವನಕ್ಕೆ ಯಾರು ಅನುಕೂಲ ಮಾಡಿಕೊಡ್ತಾರೋ ಅವರಿಗೆ ಹಾಕೋದ್ರಲ್ಲೇನು ತಪ್ಪಿದೇ? ಎಂದಾಗ,ಅವಳಿಗೆ ಈ ರಾಜಕೀಯ ತಂತ್ರಗಳನ್ನ ವಿವರಿಸಿ ಹೇಳಿದೆ ಆದರೆ, ಅರ್ಥ ಮಾಡಿಸದೆ ಸೋತೆ.ದೇಶದ ಉನ್ನತಿಗೆ ಬೇಕಾಗುವ ಯಾವ ಬದಲಾವಣೆಯನ್ನಾದರೂ ಬುಡದಲ್ಲೇ ಮಾಡಬೇಕೆ ವಿನಹ, ನಡುನಡುವೆ ವ್ಯವಸ್ಥೆಯನ್ನು ಸರಿಪಡಿಸುವುದು ಬಹಳ ಅವಸ್ಥೆಯೇ ನಿಜ. ಶ್ರೀ ಟಿ ಎನ್ ಶೇಷನ್ ರಂಥ ದಕ್ಷ, ಹಾಗೂ ಮೇರು ವ್ಯಕ್ತಿತ್ವದವರ ಮುಂದಾಳತ್ವದಿಂದ ಮಾತ್ರವೇ ದೇಶದಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆಗಳಾಗಲು ಸಾಧ್ಯ.ಮತ್ತೊಮ್ಮೆ ಆ ಜೀವ ಹುಟ್ಟಿ ಬರಲಿ.

ಒಂದೆರೆಡು ಸಾಲು ಬರೆಯಲು ಅವಕಾಶ ಮಾಡಿಕೊಟ್ಟ ಗುರುಮಠದ ಸರ್ವರಿಗೂ ನನ್ನ ಸಾದರಪೂರ್ವಕ ಪ್ರಣಾಮಗಳು.
ರೂಪ ಮಂಜುನಾಥ, ಹೊಳೆನರಸೀಪುರ.


N-2556 

  13-06-2024 08:44 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವುದು ಮತದಾನವಲ್ಲ: ಮತಗಳ ಮಾರಾಟ*

*ಮತ್ತೊಬ್ಬ ಟಿ.ಎನ್.ಶೇಷನ್ ಗಾಗಿ ಭಾರತ ಕಾಯುತ್ತಿದೆ*

ಗುರುಗಳು ಎಂದಿನಂತೆ ಮತ್ತೊಂದು ಜ್ವಲಂತ ಸಮಸ್ಯೆಯ ಕಡೆಗೆ ನಮ್ಮ ಗಮನವನ್ನು ಸೆಳೆದಿದ್ದಾರೆ. "ಮತ್ತೊಬ್ಬ ಟಿ.ಎನ್.ಶೇಷನ್ ಗಾಗಿ ಭಾರತ ಕಾಯುತ್ತಿದೆ" ಎಂದಿದ್ದಾರೆ. ಆದರೆ ಸಂಪೂರ್ಣ ಹದಗೆಟ್ಟಿರುವ ಪರಿಸ್ಥಿತಿಯನ್ನು ಗಮನಿಸಿದಿರೆ, ಒಬ್ಬ ಶೇಷನ್‌ ಬಂದು ಇವೆಲ್ಲವನ್ನೂ ಸರಿಪಡಿಸಬಲ್ಲನೇ ಎನ್ನುವ ಸಂದೇಹ ಮೂಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಬ್ರಾಹಂ ಲಿಂಕನ್‌ ಹೇಳಿರುವುದನ್ನು ಗಮನಿಸೋಣ: "*Democracy is a government of the people, by the people and for the people*". ಮೇಲಿನ ವಾಕ್ಯವನ್ನು ಗಮನಿಸಿದರೆ ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಧಾನ ಎನ್ನುವುದು ಅರಿವಾಗುತ್ತದೆ. ಮೊದಲು ಜನರು ಬದಲಾಗಬೇಕು. ಅವರು ಆಸೆ ಆಮಿಷಗಳಿಗೆ ಬಲಿಯಾಗಬಾರದು, ತಾತ್ಕಾಲಿಕ ಲಾಭಗಳಿಗೆ ಆಸೆ ಪಡಬಾರದು. ಪ್ರತಿನಿಧಿಗಳನ್ನು ಆರಿಸುವಾಗ ಯಾರು ದೇಶವನ್ನು ಸರಿಯಾದ ರೀತಿಯಲ್ಲಿ ಆಳುತ್ತ ಪ್ರಜೆಗಳ ಉನ್ನತಿಗೆ ಶ್ರಮಿಸಬಲ್ಲರು ಎಂದು ಗಮನಿಸಿ ಮತದಾನ ಮಾಡಬೇಕು. ತಿಳಿದೂ ತಿಳಿದೂ ದುಷ್ಟರಿಗೆ, ದೋಚುವವರಿಗೆ ಮತ ಹಾಕಕೂಡದು. ಇನ್ನೊಬ್ಬ ಮಹಾಶಯ ಹೇಳಿರುವಂತೆ "*Democratic system can only be as good as the people who create it*". ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯು ಅದನ್ನು ನಿರ್ಮಿಸುವ ಜನರಷ್ಟೇ ಉತ್ತಮವಾಗಿರುತ್ತದೆ. ಜನರು ಉತ್ತಮರಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಿರುತ್ತದೆ, ಮತ್ತು ಜನರು ಅಧಮರಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಷ್ಟೇ ಕೆಟ್ಟದಾಗಿರುತ್ತದೆ ಎಂದರ್ಥ. ಆದ್ದರಿಂದ ಒಬ್ಬ ಶೇಷನ್‌ ಬಂದರೂ, ತಾತ್ಕಾಲಿಕ ಬದಲಾವಣೆಗಳನ್ನು ಮಾತ್ರ ತರಲು ಸಾಧ್ಯ. ಸ್ವಲ್ಪ ಕಾಲದಲ್ಲಿ ಮತ್ತೆ ಯಥಾಸ್ಥಿತಿಗೆ ಮರಳುತ್ತೇವೆ. *ಪ್ರಜಾಪ್ರಭುತ್ವ ವ್ಯವಸ್ಥೆಯು ಮೂಲಭೂತವಾಗಿ ಉತ್ಕೃಷ್ಟವಾಗಬೇಕಿದ್ದರೆ ಪ್ರತಿಯೊಬ್ಬ ಪ್ರಜೆಯೂ ಒಬ್ಬ ಟಿ.ಎನ್.ಶೇಷನ್ ಆಗಬೇಕು!* ಎಲ್ಲರೂ ಅಲ್ಲದಿದ್ದರೂ ಬಹುಸಂಖ್ಯೆಯ ಪ್ರಜೆಗಳಾದರೂ ಬದಲಾಗಬೇಕು. ಏಕೆಂದರೆ "*Democracy is all about Majoriy!*"

ಈ ಸಮಸ್ಯೆಯ ಬಗ್ಗೆ ಚಿಂತನೆಗೆ ಅವಕಾಶ ನೀಡಿದ ಗುರುಗಳಿಗೂ, ಅವರ ವಾಣಿಯನ್ನು ನಮಗೆ ತಲುಪಿಸುತ್ತಿರುವ ವೆಂಕಟೇಶ ಶೆಟ್ಟಿಯವರಿಗೂ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.

ಕೃಷ್ಣಕವಿ, ಬೆಂಗಳೂರು


N-2556 

  13-06-2024 08:36 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪರಮ ಪೂಜ್ಯ ಗುರುಗಳಿಗೆ ಶಿರಸಾಷ್ಟಾಂಗ ನಮನಗಳು

ಶ್ರೀ ಗುರುಗಳ ಅಂಕಣ ಬರಹ
*ಮತ್ತೊಬ್ಬ ಟಿ. ಎನ್. ಶೇಷನ್ ಗಾಗಿ ಭಾರತ ಕಾಯುತ್ತಿದೆ*

ಲೇಖನ ಬರಹದಲ್ಲಿ ಈಗಿನ ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ಮತದಾನದ ಅವ್ಯವಸ್ಥೆಯ
ಬಗ್ಗೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದಾರೆ.ಇತ್ತೀಚೆಗೆ ಮತದಾನವೆನ್ನುವುದು *ನನ್ನ ದೇಶ,ನನ್ನ ಮತ ನನ್ನ ಹಕ್ಕು*‌ ಅನ್ನುವುದರ ಬದಲಾಗಿ *ನಿಮ್ಮ ಮತ ನಮ್ಮ ಹಣ* ಅನ್ನುವಂತಾಗಿದೆ. ಕಾಂಚಾಣಂ ಕಾರ್ಯಸಿದ್ಧಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಟಿ.ಎನ್.ಶೇಷನ್ ರವರು ತಮ್ಮ ಜೀವಿತಾವಧಿಯಲ್ಲಿ ಅಕ್ರಮ ಮತದಾನಕ್ಕೆ ತಡೆಯೊಡ್ಡಿ ರಾಜಕಾರಣಿಗಳು ಪತರುಗುಟ್ಟುವಂತೆ ಮಾಡಿದ್ದರು ಎಂದು ಓದಿದಾಗ ಅವರ ಕಾರ್ಯ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರ ಅಧಿಕಾರ ಮೊಟಕುಗೊಳಿಸಿ,ಅವರನ್ನು ಪರಾಭವಗೊಳಿಸಿದರೂ ಯಾವುದನ್ನು ಲೆಕ್ಕಿಸದೆ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದ ಅವರ ನಡೆ ನಿಜಕ್ಕೂ ಅಮೋಘವಾದದ್ದು. ಇತ್ತೀಚಿನ ಅನಾಚಾರ,ಅವ್ಯವಸ್ಥೆಯ ರಾಜಕಾರಣ ಮತದಾನಕ್ಕೆ ಮತ್ತೊಬ್ಬ ಶೇಷನ್ ಅವರಂತ ವ್ಯಕ್ತಿಗಳು ಅಧಿಕಾರಕ್ಕೆ ಬಂದರೆ ನಮ್ಮ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂದಂಗಾಗುತ್ತದೆ.

ರಾ.ವೆಂಕಟೇಶ ಶೆಟ್ಟಿ ಸರ್ ಗೆ ನಮನಗಳು
ಜಯಶ್ರೀ ಕಿಣಗಿ, ಹಿಡಕಲ್ ಡ್ಯಾಮ್


N-2556 

  13-06-2024 08:14 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಶ್ರೀ ಗುರುಗಳ ಚರಣಾರವಿಂದಗಳಿಗೆ ಶಿರಸಾಷ್ಟಾಂಗ ನಮನಗಳು.

ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿರುತ್ತೀರಿ. ಈಗ ಹಣದ ಆಮಿಷಕ್ಕೆ ಬಲಿಯಾಗಿ ಒಳ್ಳೆಯ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಪ್ರಕ್ರಿಯೆಯೇ ತಿರುವು ಮುರುವಾಗಿದೆ. ನೋಡಲು ವಿದ್ಯಾವಂತ, ಬುದ್ಧಿವಂತರೆನಿಸಿಕೊಂಡು ಸಮಾಜದಲ್ಲಿ ತಲೆಯೆತ್ತಿ ತಿರುಗುವಂತಹ ವ್ಯಕ್ತಿಗಳೇ ಹಣದ ಆಮಿಷಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ. ತಾವು ಹೇಳಿದಂತೆ ಇನ್ನೊಬ್ಬ ಶೇಷನ್ ಎಂದು ಹುಟ್ಟಿ ಬರುತ್ತಾರೋ ಗೊತ್ತಿಲ್ಲ.?! ಶೇಷನ್ ಅವರು ತಮ್ಮ ಹೆಂಡತಿ ಆಸೆಪಟ್ಟು ಕೇಳಿದ ಹಕ್ಕಿ ಗೂಡನ್ನು ದನ ಕಾಯುವ ಹುಡುಗನಿಗೆ ಅದನ್ನು ಕಿತ್ತು ತರಲು ಹೇಳಿದಾಗ ಆ ಹುಡುಗನು ಕೊಟ್ಟಂತಹ ಉತ್ತರ ಹೃದಯಂಗಮವಾಗಿದೆ ಮತ್ತು ಅದು ಶೇಷನ್ ಅವರ ಮನದಾಳದಲ್ಲಿ ಉಳಿದು ಹೋದ ಸಂಗತಿ ನಿಜಕ್ಕೂ ಅಭಿನಂದನೀಯ. ಇಂತಹ ವ್ಯಕ್ತಿಗಳು ಹುಟ್ಟಿ ಬಂದು ಮುಂದಿನ ಚುನಾವಣೆಗಳಲ್ಲಿ ಚುನಾವಣಾಧಿಕಾರಿಯಾದರೆ ಮಾತ್ರವೇ ಭಾರತದ ಉಳಿವು. ಇಲ್ಲದಿದ್ದರೆ ಹಂತ ಹಂತವಾಗಿ ನಮ್ಮನ್ನು ನಾವೇ ಇತರರಿಗೆ ಮಾರಿಕೊಳ್ಳುತ್ತೇವೆ. ನಂತರ ಈ ಸ್ವಾತಂತ್ರ್ಯ ಎನ್ನುವುದು ಲವಲೇಶವೂ ಉಳಿಯುವುದಿಲ್ಲ. ಗುರುಗಳೇ ನಿಮ್ಮ ಪ್ರಸ್ತುತಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಿಮಗೆ ಪ್ರಣಾಮಗಳು. ನಿಮ್ಮ ಒಂದೊಂದು ಲೇಖನವೂ ಸಂಗ್ರಹ ಯೋಗ್ಯವಾಗಿದೆ. ಹಲವಾರು ಪುಸ್ತಕಗಳನ್ನು ಉಚಿತವಾಗಿ ಎಲ್ಲರಿಗೂ ತಲ್ಪುವಂತೆ ಮಾಡುತ್ತಿರುವ ನಿಮಗೆ ಹಾಗೂ ನಿಮ್ಮ ಶಿಷ್ಯರಾದ ರಾ.ವೆಂಕಟೇಶ ಶೆಟ್ಟಿಯವರಿಗೂ ವಂದಿಸುತ್ತಾ, ತಮ್ಮ ಚರಣಾರವಿಂದಗಳಿಗೂ ನಮಿಸುತ್ತಾ,

ತಮ್ಮ ಆಶೀರ್ವಾದವನ್ನು ಬೇಡುವ,
ಎಂ.ಜೆ.ನಾಗಲಕ್ಷ್ಮಿ, ಚಿಕ್ಕಮಗಳೂರು.


N-2556 

  13-06-2024 08:03 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯರಿಗೆ ಪ್ರಣಾಮಗಳು, ಎಲ್ಲಿಯವರೆಗೆ ಮಾರ್ಗ ದರ್ಶನ ಮಾಡುವ ಮಠಗಳು ಜಾತಿಯ ಪರವಾಗಿ ಕೆಲಸ ಮಾಡುತ್ತವೆಯೊ ಕಣ್ಣ ಎದುರಿಗೆ ಕಂಡ ಅನ್ಯಾಯವನ್ನು ಕಂಡು ಕಾಣದಂತೆ ಜಾಣ ಕುರುಡನ್ನು ಪ್ರದರ್ಶನ ಮಾಡುತ್ತವೆಯೊ ಅಲ್ಲಿಯವರೆಗೆ ಯಾವ ಶೇಷನ್ ಬಂದರು ಬದಲಾವಣೆಯನ್ನು ತರಲು ಸಾದ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ
Basavantha
Mysore

N-2556 

  13-06-2024 08:03 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಬಿಸಿಲು ಬೆಳದಿಂಗಳು*
*ಅಂಕಣ ೧೨.೦೬.೨೦೨೪*
*ಮತ್ತೊಬ್ಬ ಟಿ ಎನ್ ಶೇಷನ್ ಗಾಗಿ ಭಾರತ ಕಾಯುತ್ತಿದೆ!*

ಶ್ರೀ ಗುರುಭ್ಯೋ ನಮಃ

ಎಂದಿನಂತೆ ಗುರುಗಳು ಸಮಯೋಚಿತ ಚಿಂತನೆಗೆ ಹಚ್ಚುವ ವಿಷಯವನ್ನು ಇಂದಿನ ಅಂಕಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆ ಯಾವುದೇ ದೊಡ್ಡ ಅಹಿತಕರ ಘಟನೆಗಳಿಲ್ಲದೇ ನಡೆದಿದೆ ಎಂದರೆ ಅದಕ್ಕೆ ಕಾರಣ ಶ್ರೀ ಟಿ ಎನ್ ಶೇಷನ್ ರವರು ಮಾಡಿದ ಸುಧಾರಣೆಗಳು. ಆದಾಗ್ಯೂ ಈ ಸಾರಿ ಚುನಾವಣಾ ಆಯೋಗ ಜಪ್ತಿ ಮಾಡಿದ ಹಣ, ಚಿನ್ನ, ಮದ್ಯ ಮುಂತಾದವುಗಳು ಶ್ರೀ ಶೇಷನ್ ರವರು ಜಾರಿಗೆ ತಂದಿದ್ದ ಸುಧಾರಣೆಗಳನ್ನು ಮತ್ತಷ್ಟು ಬಿಗಿಗೊಳಿಸಬೇಕಾದ ಅವಶ್ಯಕತೆ ಇದೆ ಎಂಬುದನ್ನು ತಿಳಿಸುತ್ತವೆ. ಆದರೆ ಅದಕ್ಕೆ ಇನ್ನೊಬ್ಬ ಶೇಷನ್ ಬಂದರೆ ಸಾಲದು. ಬಿಟ್ಟಿ ಹಣ ಮತ್ತು ಬಿಟ್ಟಿ ಸೌಕರ್ಯ ಗಳಿಗೆ ಬಾಯ್ಬಿಡುವಂತಹ ಜನರ ಮತ್ತು ಮತದಾನವನ್ನೇ ಮಾಡದೆ ಕೇವಲ ಟೀಕೆ ಮಾಡುವ ಜನರ ಮನಸ್ಥಿತಿ ಬದಲಾಗಬೇಕು. ಅದು ಸಾದ್ಯವೇ ಇಲ್ಲವೇನೋ ಎಂಬಂತಾಗಿದೆ ಇಂದಿನ ಪರಿಸ್ಥಿತಿ. ಆದರೆ ಒಂದು ಘಟ್ಟದಲ್ಲಿ ಅದು ಕೂಡ ಸಾಧ್ಯವಾಗಬಹುದು ಎಂದು ಆಶಿಸೋಣ. ಗುರುಗಳಿಗೆ ಪ್ರಣಾಮ. ಶ್ರೀ ಗಳ ಅಂಕಣವನ್ನು ನಸುಕಿನಲ್ಲಿಯೇ ನಮಗೆ ತಲುಪಿಸಿ ಪ್ರತಿಕ್ರಿಯೆಗಳನ್ನು ಬರೆಯಲು ಪ್ರೋತ್ಸಾಹಿಸುತ್ತಿರುವ ಶ್ರೀ ವೆಂಕಟೇಶ ಶೆಟ್ಟಿಯವರಿಗೆ ವಂದನೆಗಳು.
ಸಿ. ಆರ್ ಕೃಷ್ಣ‌ಸ್ವಾಮಿ, ಬೆಂಗಳೂರು


N-2556 

  13-06-2024 05:43 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 *ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವುದು ಮತದಾನವಲ್ಲ: ಮತಗಳ ಮಾರಾಟ.*
*ಮತ್ತೊಬ್ಬ ಟಿ.ಎನ್.ಶೇಷನ್ ಗಾಗಿ ಭಾರತ ಕಾಯುತ್ತಿದೆ.*
ಪರಮಪೂಜ್ಯರ ಈ ಲೇಖನ ಬ್ರಷ್ಟ ರಾಜಕೀಯ (ಅ)ವ್ಯವಸ್ಥೆ ಬ್ರಷ್ಟ ಮತದಾರ ಮನಸ್ಥಿತಿಯ ಚಿತ್ರಣದ ಅನಾವರಣ ಮಾಡಿ ಭ್ರಷ್ಟಾಚಾರ ರಾಜಕೀಯ ಧುರೀಣರು ಹಾಗೂ ಭ್ರಷ್ಟಾಚಾರದ ಅಮಲಿನಲ್ಲಿ ತೇಲಾಡುತ್ತಿರುವ ಮತದಾರ ಪ್ರಭುಗಳಿಗೆ ಬಹಳಷ್ಟು ಮಾರ್ಮಿಕವಾಗಿ ಚಾಟಿ ಬೀಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಮಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ KPCC ತಮ್ಮ ಪಕ್ಷದ MLA ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಯಾರ ಬಳಿ 100 ಕೋಟಿ ರೂಪಾಯಿಗೂ ಹೆಚ್ಚಿನ (ಬ್ಯಾಂಕ್ ಅಕೌಂಟ್ ನಲ್ಲಿ) ಹಣ ಇದೆಯೋ ಅವರಿಗೆ ಪಕ್ಷದ MLA ಟಿಕೆಟ್ ಖಚಿತವಾಗಿ ನೀಡಲಾಗುವುದೆಂದು ಘೋಷಣೆ ಮಾಡಿದ್ದರೆಂದು ಕಾಂಗ್ರೆಸ್ ಪಕ್ಷದ ಧುರೀಣರೊಬ್ಬರ ರಹಸ್ಯ ಮಾತು. ಇದು ಎಷ್ಟರ ಮಟ್ಟಿಗೆ ಸರಿ?
ಇನ್ನು ಮುಂದೆ ಆರ್ಥಿಕವಾಗಿ ದುರ್ಬಲರಿರುವ ಪ್ರಾಮಾಣಿಕ ದಕ್ಷ ಸೇವಾ ಮನೋಭಾವ ಇರುವ ಸಾಮಾನ್ಯ ಪ್ರಜೆ ಚುನಾವಣೆ ನಿಲ್ಲುವ ಪ್ರಶ್ನೆಯೇ ಇಲ್ಲ.
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಚುನಾವಣಾ ಅಭ್ಯರ್ಥಿಯ ಅಯ್ಕೆಯ ಅಳತೆಗೋಲು ಕೋಟ್ಯಾದೀಶರೇ ಆಗಿರಬೇಕು. ಪ್ರಜಾಪ್ರಭುತ್ವದ ಅಸ್ತಿತ್ವವೇ ಇಲ್ಲ.
ಜಾತ್ಯತೀತ ದೇಶದಲ್ಲಿ ಎಲ್ಲೆಲ್ಲೂ ಪರಸ್ಪರ ಜಾತಿಗಳ ಸಂಘರ್ಷ ಹೆಂಡ, ಹಣ, ಸೀರೆ, ಮತ್ತು ಕುಕ್ಕರ್ ಗಳ ಸೀಟಿಯ ಆರ್ಭಟ - ನರ್ತನ ತಾಂಡವಾಡುತ್ತಿದೆ. ಚುನಾವಣೆಗಳು ಪ್ರಜಾಪ್ರಭುತ್ವದ ಅಣಕವಾಗಿವೆ. ಅಭ್ಯರ್ಥಿಗಳ ಜೂಜಾಟ ಕೇಂದ್ರಗಳಾಗಿವೆ. *ಇಂತಹ ವಿಪರೀತ ಆಕ್ರಮ ಅವ್ಯವಸ್ಥೆ ಮಟ್ಟ ಹೊಡೆಯಿರಿ ಕಟ್ಟಲು ಮತ್ತೊಬ್ಬ ಶೇಷನ್ ಗಾಗಿ ದೇಶ ಕಾಯುತ್ತಿದೆ.*
*ಎನ್ನುವ ಈ ಲೇಖನದ ಲೇಖಕರಾದ ಪರಮಪೂಜ್ಯ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶಯದ ಕನಸು ನನಸಾಗಬೇಕೆಂಬ ಮಾತು ನಿಜಕ್ಕೂ ಸಾಮಾನ್ಯ ಪ್ರಾಮಾಣಿಕ ನಾಗರಿಕ ಪ್ರಬುದ್ಧ ಮತದಾರರ ಪರಿಕಲ್ಪನೆಯಾಗಿದೆ. ಗಾಂಧೀಜಿ ಕಂಡ ರಾಮರಾಜ್ಯ ಚುನಾವಣೆಯ ವ್ಯವಸ್ಥೆಯ ಮೇಲೆ ನಿಂತಿದೆ.

- ಜಿ.ಎ.ಜಗದೀಶ್
ಎಸ್ ಪಿ ನಿವೃತ್ತ
ಬೆಂಗಳೂರು.
G.A.Jagadeesh
Bengaluru City.

N-2556 

  13-06-2024 05:15 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 *ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವುದು ಮತದಾನವಲ್ಲ: ಮತಗಳ ಮಾರಾಟ.*
*ಮತ್ತೊಬ್ಬ ಟಿ.ಎನ್.ಶೇಷನ್ ಗಾಗಿ ಭಾರತ ಕಾಯುತ್ತಿದೆ.*
ಪರಮಪೂಜ್ಯರ ಈ ಲೇಖನ ಬ್ರಷ್ಟ ರಾಜಕೀಯ (ಅ)ವ್ಯವಸ್ಥೆ ಬ್ರಷ್ಟ ಮತದಾರ ಮನಸ್ಥಿತಿಯ ಚಿತ್ರಣದ ಅನಾವರಣ ಮಾಡಿ ಭ್ರಷ್ಟಾಚಾರ ರಾಜಕೀಯ ಧುರೀಣರು ಹಾಗೂ ಭ್ರಷ್ಟಾಚಾರದ ಅಮಲಿನಲ್ಲಿ ತೇಲಾಡುತ್ತಿರುವ ಮತದಾರ ಪ್ರಭುಗಳಿಗೆ ಬಹಳಷ್ಟು ಮಾರ್ಮಿಕವಾಗಿ ಚಾಟಿ ಬೀಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಮಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ KPCC ತಮ್ಮ ಪಕ್ಷದ MLA ಅಭ್ಯರ್ಥಿಗಳ ಆಯ್ಕೆ ಮಂಡಕ್ಷಿ ಮಾನದಂಡ ಯಾರ ಬಳಿ 100 ಕೋಟಿ ರೂಪಾಯಿಗೂ ಹೆಚ್ಚಿನ (ಬ್ಯಾಂಕ್ ಅಕೌಂಟ್) ಹಣ ಇದೆಯೋ ಅವರಿಗೆ ಪಕ್ಷದ MLA ಟಿಕೆಟ್ ನೀಡಲಾಗುವುದೆಂದು ಘೋಷಣೆ ಮಾಡಿದ್ದರೆಂದು ಕಾಂಗ್ರೆಸ್ ಪಕ್ಷದ ಧುರೀಣರೊಬ್ಬರ ರಹಸ್ಯ ಮಾತು. ಇದು ಎಷ್ಟರ ಮಟ್ಟಿಗೆ ಸರಿ?
ಇನ್ನು ಮುಂದೆ ಆರ್ಥಿಕವಾಗಿ ದುರ್ಬಲರಿರುವ ಪ್ರಾಮಾಣಿಕ ದಕ್ಷ ಸೇವಾ ಮನೋಭಾವ ಇರುವ ಸಾಮಾನ್ಯ ಪ್ರಜೆ ಚುನಾವಣೆ ನಿಲ್ಲುವ ಪ್ರಶ್ನೆಯೇ ಇಲ್ಲ.
ಈ ಬಾರಿ ಮೊಉಪಾಧ್ಯಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಚುನಾವಣಾ ಅಭ್ಯರ್ಥಿಯ ಅಯ್ಕೆಯ ಅಳತೆಗೋಲು ಕೋಟ್ಯಾದೀಶರೇ ಆಗಿರಬೇಕು. ಪ್ರಜಾಪ್ರಭುತ್ವದ ಅಸ್ಥಿತ್ವವೇ ಇಲ್ಲ.
ಜಾತ್ಯತೀತ ದೇಶದಲ್ಲಿ ಎಲ್ಲೆಲ್ಲೂ ಪರಸ್ಪರ ಜಾತಿಗಳ ಸಂಘರ್ಷ ಹೆಂಡ ಹಣ ಸೀರೆ ಕುಕ್ಕರ್ ಗಳ ಸೀಟಿಯ ಆರ್ಭಟ - ನರ್ತನ ತಾಂಡವಾಡುತ್ತಿದೆ. ಚುನಾವಣೆಗಳು ಪ್ರಜಾಪ್ರಭುತ್ವದ ಅಣಕವಾಗಿವೆ. ಅಭ್ಯರ್ಥಿಗಳ ಜೂಜಾಟ ಕೇಂದ್ರಗಳಾಗಿವೆ. *ಇಂತಹ ವಿಪರೀತ ಆಕ್ರಮ ಅವ್ಯವಸ್ಥೆ ಮಟ್ಟ ಹೊಡೆಯಿರಿ ಕಟ್ಟಲು ಮತ್ತೊಬ್ಬ ಶೇಷನ್ ಗಾಗಿ ದೇಶ ಕಾಯುತ್ತಿದೆ.*
ಎನ್ನುವ ಈ ಲೇಖನದ ಲೇಖಕರಾದ ಪರಮಪೂಜ್ಯ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶಯದ ಕನಸು ನನಸಾಗಬೇಕೆಂಬ ಮಾತು ನಿಜಕ್ಕೂ ಸಾಮಾನ್ಯ ಪ್ರಾಮಾಣಿಕ ನಾಗರಿಕ ಪ್ರಬುದ್ಧ ಮತದಾರರ ಪರಿಕಲ್ಪನೆಯಾಗಿದೆ. ಗಾಂಧೀಜಿ ಕಂಡ ರಾಮರಾಜ್ಯ ಚುನಾವಣೆಯ ವ್ಯವಸ್ಥೆಯ ಮೇಲೆ ನಿಂತಿದೆ.

ಜಿ.ಎ.ಜಗದೀಶ್
ಎಸ್ ಪಿ ನಿವೃತ್ತ
ಬೆಂಗಳೂರು.
G.A.Jagadeesh
BENGALURU CITY.

N-2556 

  13-06-2024 04:10 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

  Cash less sistam and tit rules is problem solution.
Prasannakumar j u
Honnur a/p Davangere T/D

N-2556 

  13-06-2024 03:57 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪರಮಪೂಜ್ಯ ತರಳಬಾಳು ಜಗದ್ಗುರುಗಳ ಪಾದಗಳಿಗೆ ನಮಸ್ಕರಿಸುತ್ತಾ...ಪೂಜ್ಯರ ಈ ಲೇಖನ ಅದ್ಭುತವಾಗಿ ಮೂಡಿಬಂದಿದೆ. ಇಂದಿನ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ.ಆಮಿಷಗಳಿಗೆ ಭಾರತೀಯ ಜನರು ಬಹುಬೇಗ ಬೀಳುತ್ತಾರೆ ಆದಕಾರಣ ಉತ್ತಮ ರಾಜಕೀಯ ವ್ಯವಸ್ಥೆ ತರುವಲ್ಲಿ ನಾವು ಎಡವುತ್ತಿದ್ದೇವೆ.ಅದು ಸಾಧ್ಯವಾಗಬೇಕಾದರೆ ದೇಶದ ಜನರ ಮನಸ್ಥಿತಿ ಬದಲಾಗಬೇಕು."You can see how principles have been modified in favour of money: nations sold for money, honour for money; families split for money, friends separated for money, people killed for money, made slaves to money". ಚರ್ಚಿಲ್ ರವರ ಈ ಮಾತುಗಳು ಅಕ್ಷರಶಃ ಸತ್ಯ ಬುದ್ದೀ..ಜೈ ತರಳಬಾಳು ಜಗದ್ಗುರು... ಜೈ ಶಿವ....
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.

N-2556 

  13-06-2024 03:16 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪರಮಪೂಜ್ಯರ ಈ ಲೇಖನ ಪ್ರಸ್ತುತ ಚುನಾವಣೆಯಲ್ಲಿ ನಡೆದ ವಿದ್ಯಮಾನಗಳಿಗೆ ಅನುಗುಣವಾಗಿದೆ.ಕೇವಲ ಕಠಿಣವಾದ ಕಾನೂನನ್ನು ಜಾರಿಗೊಳಿಸುವ ಮೂಲಕ ಪರಿಶುದ್ಧ ಚುನಾವಣೆ ನಡೆಸಲು ಸಾಧ್ಯವಿಲ್ಲ. ಬದಲಾಗಿ ಮತದಾರನ ಕಠಿಣವಾದ ಮನಸ್ಥಿತಿ ಬದಲಾಗಬೇಕಿದೆ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕೆಂಬ ಮನೋಭಾವನೆ ಮೊದಲು ಪ್ರತಿಯೊಬ್ಬ ಮತದಾರರಲ್ಲೂ ಮೂಡಬೇಕು ಆಗ ಮಾತ್ರ ಪರಿಶುದ್ಧ ಚುನಾವಣೆ ನಡೆಸಲು ಸಾಧ್ಯ.manjunatha ks.surahonne.
MANJUNATHA k s
Surahonne.nyamathi taluk.

N-2556 

  13-06-2024 03:10 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 *ಮತ್ತೂಬ್ಬ ಶೇಷನ್ ಅವರಿಗಾಗಿ ದೇಶ ಕಾಯುತ್ತಿದೆ* ಎಂಬ ಶೀರ್ಷಿಕೆಯಲ್ಲಿ ಶ್ರೀ ಗುರುಗಳು ರೂಪಿಸಿದ ಇಂದಿನ ಅಂಕಣ ಬರಹ ನಿಜಕ್ಕೂ ಮೌಲ್ಯಯುತ ಹಾಗೂ ಅತ್ಯಂತ ಪ್ರಸ್ತುತವಾಗಿದೆ. ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಯ ಫಲಿತಾಂಶ ಹಲವು ಬಗೆಯ ಅತಿರೇಕಗಳನ್ನು ಮತ್ತು ಕೆಲವರು ಅಭಿವ್ಯಕ್ತಿಸಿದ ಸೊಕ್ಕು, ಹಮ್ಮು, ಭರವಸೆ, ಚರ್ಚೆ, ವಿಶ್ಲೇಷಣೆ, ಸಮೀಕ್ಷೆಗಳನ್ನು ಹುಸಿಯಾಗಿಸಿದೆ. ಇದಕ್ಕೆ ಕಾರಣ ಪ್ರಜ್ಞಾವಂತ ಮತದಾರರು, ಇದೇ ನಿಜವಾದ ಅರ್ಥದಲ್ಲಿ ಜೀವಂತವಾಗಿರುವ ಪ್ರಜಾಪ್ರಭುತ್ವ.
ಮಾನ್ಯ ಶೇಷನ್ ಅವರ ಅವಧಿಯಲ್ಲಿ ಬದಲಾದ ನಮ್ಮ ಚುನಾವಣೆ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ. ಆದರೆ ಈಗ ಎಲ್ಲ ಅವ್ಯವಹಾರಗಳು ಗುಪ್ತಗಾಮಿನಿಯಾಗಿ ಅನಿಯಂತ್ರಿತವಾಗಿವೆ. ಅಪಾರ ಜ್ಞಾನ, ಅನುಭವ, ಇಚ್ಛಾಶಕ್ತಿ, ಪ್ರಾಮಾಣಿಕ, ನಿಸ್ವಾರ್ಥ ಅಧಿಕಾರಿಯಾಗಿದ್ದ ಶೇಷನ್ ಅಂಥವರು ಈ ದೇಶದ ಚುನಾವಣೆ ವ್ಯವಸ್ಥೆಯನ್ನು ಮತ್ತು ಪ್ರಜಾಪ್ರಭುತ್ವವನ್ನು ಮತ್ತಷ್ಟು ಚೆಂದವಾಗಿ ಕಟ್ಟಲು ಮತ್ತೇ ಬರುವಿಕೆಗಾಗಿ ನಮ್ಮ ದೇಶ ಮತ್ತು ನಮ್ಮ ದೇಶದ ಎಲ್ಲಾ ಪ್ರಗತಿಪರ ಮನಸ್ಸುಗಳು ಕಾಯುತ್ತಿವೆ ಎಂಬುದು ಸತ್ಯ. ಈ ಬಗೆಯಲ್ಲಿ ಗುರುಗಳು ತಮ್ಮ ವಿಚಾರಗಳನ್ನು ಬರಹದಲ್ಲಿ ಅಭಿವ್ಯಕ್ತಿಸಿದ್ದು ನಿಜಕ್ಕೂ ಅರ್ಥಪೂರ್ಣ ಹಾಗೂ ಪ್ರಸ್ತುತ ದಿನಗಳಲ್ಲಿ ತೀರಾ ಅಗತ್ಯವಾಗಿದೆ. ಪೂಜ್ಯರಿಗೆ ಶರಣು ಶರಣಾರ್ಥಿಗಳು 🙏
ವೆಂಕಟೇಶ ಜನಾದ್ರಿ, ಕಲಬುರ್ಗಿ.


N-2556 

  13-06-2024 03:01 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯರ ಪಾದಗಳಿಗೆ ನಮಿಸುತ್ತ ಇಂದಿನ ಅಂಕಣ *ಮತ್ತೊಬ್ಬ T N ಶೇಷನ್ ಗಾಗಿ ಭಾರತ ಕಾಯುತ್ತಿದೆ*. ಎಂಬ ಅಂಕಣವನ್ನು ಓದುತ್ತಾ ನನ್ನ ಅಭಿಪ್ರಾಯದಲ್ಲಿ ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ ಚುನಾವಣೆ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯ ನಂತರ ಅವರು ಚುನಾವಣೆಗೆ ನಿಂತಾಗ ಅವರು ಸಹ ಸೋಲುತ್ತಾರೆ ಎಂದರೆ ಎಲ್ಲಿದೆ ನ್ಯಾಯ?. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಿಯತ್ತಾಗಿ ಇದ್ದವನನ್ನು ಆರೋಪಿಯನ್ನಾಗಿ ಮಾಡುತ್ತಾರೆ. ಪ್ರಾಮಾಣಿಕವಾಗಿ ಚುಣಾವಣೆ ಮಾಡಬೇಕಂದರೆ 2 ಎಕರೆ ಜಮೀನು ಇರಬೇಕು ಬಿಪಿಎಲ್ ಕಾರ್ಡ್ ಹೊಂದಿರಬೇಕು, ತಂದೆ ತಾಯಿಗಳನ್ನು ಸಾಕಲು ಯೋಗ್ಯವಂತನು, ಡಿಗ್ರಿ ಪಾಸ್ ಆಗಿರಬೇಕು. ಇಷ್ಟು ಯೋಗ್ಯತೆ ಇರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ಟಿ,ಎನ್, ಶೇಷನ್ ರಂತ ಪ್ರಾಮಾಣಿಕ ವ್ಯಕ್ತಿಗಳು ಸಹ ಬೇಕಾಗಿಲ್ಲ. ನಮ್ಮ ಪೂಜ್ಯರು ಈ ಸಲಹೆ ಗಳನ್ನು ಕೊಡಬೇಕಾಗಿ ವಿನಂತಿ.

*ಕೆ. ಜಿ ಮಂಜನಗೌಡ*
ಭರಮಸಾಗರ*
ಮಂಜನಗೌಡ ಕೆ. ಜಿ.
ಭರಮಸಾಗರ

N-2556 

  13-06-2024 02:56 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯರ ಪಾದಗಳಿಗೆ ನಮಿಸುತ್ತ ಇಂದಿನ ಅಂಕಣ *ಮತ್ತೊಬ್ಬ T N ಶೇಷನ್ ಗಾಗಿ ಭಾರತ ಕಾಯುತ್ತಿದೆ*. ಎಂಬ ಅಂಕಣವನ್ನು ಓದುತ್ತಾ ನನ್ನ ಅಭಿಪ್ರಾಯದಲ್ಲಿ ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ ಚುನಾವಣೆ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯ ನಂತರ ಅವರು ಚುನಾವಣೆಗೆ ನಿಂತಾಗ ಅವರು ಸಹ ಸೋಲುತ್ತಾರೆ ಎಂದರೆ ಎಲ್ಲಿದೆ ನ್ಯಾಯ?. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಿಯತ್ತಾಗಿ ಇದ್ದವನನ್ನು ಆರೋಪಿಯನ್ನಾಗಿ ಮಾಡುತ್ತಾರೆ. ಪ್ರಾಮಾಣಿಕವಾಗಿ ಚುಣಾವಣೆ ಮಾಡಬೇಕಂದರೆ 2 ಎಕರೆ ಜಮೀನು ಇರಬೇಕು ಬಿಪಿಎಲ್ ಕಾರ್ಡ್ ಹೊಂದಿರಬೇಕು, ತಂದೆ ತಾಯಿಗಳನ್ನು ಸಾಕಲು ಯೋಗ್ಯವಂತನು, ಡಿಗ್ರಿ ಪಾಸ್ ಆಗಿರಬೇಕು. ಇಷ್ಟು ಯೋಗ್ಯತೆ ಇರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ಟಿ,ಎನ್, ಶೇಷನ್ ರಂತ ಪ್ರಾಮಾಣಿಕ ವ್ಯಕ್ತಿಗಳು ಸಹ ಬೇಕಾಗಿಲ್ಲ. ನಮ್ಮ ಪೂಜ್ಯರು ಈ ಸಲಹೆ ಗಳನ್ನು ಕೊಡಬೇಕಾಗಿ ವಿನಂತಿ.
ಮಂಜನಗೌಡ ಕೆ. ಜಿ, ಭರಮಸಾಗರ