N-2548 
  10-06-2024 05:00 PM   
ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು
ಶ್ರೀ ಗುರುಭ್ಯೋ ನಮ:
ಬಿಸಿಲು ಬೆಳದಿಂಗಳು ಅಂಕಣ,*ಅರಬ್ ನೆಲದ ಮಂದಿರ ಮಸೀದಿ*
ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಅರಬ್ ದೇಶ ದಲ್ಲಿ ರಾಜ ಪ್ರಭುತ್ವದ ಆಳ್ವಿಕೆಯಲ್ಲಿಎಲ್ಲಾ ಧರ್ಮೀಯರಿಗೆ ಮಂದಿರ,ಮಸೀದಿ ಹಾಗು ಚರ್ಚು ನಿರ್ಮಿಸಲು ಅವಕಾಶ ಕೊಟ್ಟಿರುವುದಲ್ಲದೆ ಯಾವುದೇ ಘರ್ಷಣೆ, ಕೋಮುಗಲಭೆಗಳು ಉಂಟಾಗದಂತೆ ಮಾಡಿರುವ ಆಡಳಿತದ ವೈಖರಿ ಅಚ್ಚರಿ ಮೂಡಿಸುತ್ತದೆ.
ಬಸವ ಜಯಂತಿ ಪ್ರಯುಕ್ತ ಅರಬ್ ದೇಶದ ಆಹ್ವಾನದ ಮೇರೆಗೆ ಗುರುಗಳು ತಮ್ಮ ಪ್ರವಾಸ ಕೈಗೊಂಡು ನಮಗೆ ಅನೇಕ ಮಾಹಿತಿಗಳನ್ನು ತಿಳಿಸಿದ್ದಾರೆ. ಅಹಿಂಸಾವಾದಿಗಳು, ಹಾಗೂ ಶಾಂತಿ ಪ್ರಿಯರು ಆದ ಭಾರತೀಯರು ನಲವತ್ತುಲಕ್ಷ ಮಂದಿ ನೆಲೆಸಿದ್ದಾರೆ ಎಂದರೆ ಸಾಮಾನ್ಯ ವಿಷಯವೇ.
ನ್ಯೂಟನ್ ನ ಗುರುತ್ವಾಕರ್ಷಣೆಯು ಬೌದ್ಧಿಕ ವಿಷಯವಾದರೆ ಅಲ್ಲಿ ಸಿಗುವ ಆಕರ್ಷಕ ವರಮಾನದ ಆಮಿಷ ಇಲ್ಲಿಯ ಯುವ ಪ್ರತಿಭೆಗಳನ್ನು ಸೆಳೆಯುತ್ತಿರುತ್ತದೆ. ಪೌರತ್ವ ಸಿಗದ ಕಾರಣ ಅವರು ಮತ್ತೆ ಮರಳಿ ಮಣ್ಣಿಗೆ ಬರುವ ಅವರನ್ನು ಪಕ್ವವಾದ ಹಣ್ಣುಗಳೆಂದು ಸುಂದರವಾಗಿ ಬಣ್ಣಿಸಿದ್ದಾರೆ.
ಕಡೆಯದಾಗಿ ದೀಪಾವಳಿ ಸಂಧರ್ಭದಲ್ಲಿ ಹಿಂದೂ ಮನೆಗಳ ಮುಂದೆ ಝಗಮಗಿಸುವ ವಿದ್ಯುದ್ದೀಪಾಲಂಕಾರ ನೋಡಲು ಎಲ್ಲಾ ಧರ್ಮೀಯರು ನೋಡಲು ಬರುತ್ತಾರೆ. ಆದರೆ ಭಾರತದಲ್ಲಿ ಪರಧರ್ಮ ಸಹಿಷ್ಣುತೆ ಕಾಣೆಯಾಗಿ ದೀಪ ಹಚ್ಚುವ ಬದಲು ಬೆಂಕಿ ಹಚ್ಚಲು ಧರ್ಮಗಳು ರಾಜಕೀಯ ಕಾರಣಕ್ಕೆ ದುರ್ಬಳಕೆ ಯಾಗುತ್ತಿದೆ ಎನ್ನುವುದು ವಿಷಾದ ಹಾಗೂ ಸತ್ಯವಾದ ಮಾತು.
ಪ್ರತಿಕ್ರಿಯೆ ಬರೆಯಲು ಪ್ರೋತ್ಸಾಹ ಕೊಡುತ್ತಿರುವ ರಾ.ವೆಂಕಟೇಶ ಶೆಟ್ಟಿ ಯವರಿಗೆ ಧನ್ಯವಾದಗಳು.
ಕಾಂತಾರಾಮುಲು, ಬೆಂಗಳೂರು.