N-2548 
  06-06-2024 07:52 PM   
ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು
ಪೂಜ್ಯರಿಗೆ ವಂದಿಸುತ್ತಾ
ಗುರುಗಳ *ಆರಬ್ ನೆಲದ ಮಂದಿರ ಮಸೀದಿ* ಅಂಕಣ ಓದಿದ ಮೇಲೆ ಹಲವಾರು ವಿಚಾರಗಳು ನನ್ನ ಮನ ತಟ್ಟಿದವು. ಬಸವ ಜಯಂತಿ ಸಂದರ್ಭಕ್ಕಾಗಿ ಗುರುಗಳು ಅರಬ್ ರಾಷ್ಟ್ರದ ದುಬೈ ನಗರವನ್ನು ಭೇಟಿ ಮಾಡಿದ್ದು ಅಲ್ಲಿನ ಹಲವಾರು ಧಾರ್ಮಿಕ ಸಂಗತಿಗಳನ್ನು ಪ್ರಸ್ತಾಪ ಮಾಡಿರುತ್ತಾರೆ.
ಇಲ್ಲಿನ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ವಿಶೇಷವಾಗಿ ಧಾರ್ಮಿಕ ಸೌಹಾರ್ದತೆಯನ್ನು ಇಲ್ಲಿ ಕಾಣಬಹುದು ಎಂದು ಗುರುಗಳು ತಿಳಿಸಿದ್ದಾರೆ.
ದುಬೈನ ಶೇಕ್ ರವರು ಇಲ್ಲಿ ಎಲ್ಲಾ ಮತದವರಿಗೆ ಅಂದರೆ ಮಸೀದಿ ಮಂದಿರಗಳಿಗೆ ಅವಕಾಶ ನೀಡಿರುತ್ತಾರೆ. ವಿಶಾಲ ಜಾಗದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದ ವಿಶೇಷತೆಯನ್ನು ಲೇಖನದಲ್ಲಿ ವಿವರಿಸಲಾಗಿದೆ.
ಭಾರತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ರಾಜಕೀಯಕ್ಕೆ ಧರ್ಮದ ದುರ್ಬಳಕೆ ಮಾಡಿಕೊಳ್ಳುತ್ತಿವೆ. ನಾವು ಅರಬರಿಂದ ಧರ್ಮ ಸಹಿಷ್ಣುತೆಯನ್ನು ಕಲಿಯಬೇಕಾಗಿದೆ. ಸನಾತನ ಹಿಂದೂ ಧರ್ಮದ ನಾಡಿನಲ್ಲಿ ಅದಕ್ಕೆ ಧಕ್ಕೆ ತರುವ ಪ್ರಯತ್ನಗಳು ನೀರಂತರವಾಗಿ ನಡೆಯುತ್ತಿವೆ. ಅರಬ್ ನಾಡಿನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆಯೆಂದು ಗುರುಗಳ ಲೇಖನದಲ್ಲಿ ಉಲ್ಲೇಖವಾಗಿದೆ.
ಈ ಅಂಕಣಕ್ಕೆ ಪ್ರತಿಕ್ರಿಯೆ ನೀಡಲು ಪ್ರೋತ್ಸಾಹ ನೀಡುತ್ತಿರುವ ಆತ್ಮೀಯ ವೆಂಕಟೇಶ ಶೆಟ್ಟರಿಗೆ ನನ್ನ ಧನ್ಯವಾದಗಳು.
ಅಶೋಕ ಟಿ ಎನ್, ಬೆಂಗಳೂರು