N-2556 

  20-06-2024 07:47 AM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಜಗದ್ಗುರುಗಳವರ "ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ಕಾಯುತ್ತಿದೆ" ಅಂಕಣ ಕುರಿತು ನನ್ನ ಪ್ರತಿಕ್ರಿಯೆ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ವಿಶೇಷ ಸ್ಥಾನವಿದೆ. ದೇಶವನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇದೊಂದೇ ನಮ್ಮ ದೇಶದಲ್ಲಿ ಇರುವ ವ್ಯವಸ್ಥೆ. ನಮ್ಮಲ್ಲಿ ರಾಜಾಡಳಿತ ವ್ಯವಸ್ಥೆ ಅಳಿದು ಹೋಗಿ ದಶಕಗಳೇ ಕಳೆದು ಹೋಗಿವೆ. ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕೆಲವೇ ಕೆಲವು ವರ್ಷಗಳು ಮಾತ್ರ ವ್ಯವಸ್ಥಿತವಾಗಿ ಚುನಾವಣೆಗಳು ಈ ದೇಶದಲ್ಲಿ ನಡೆದವು. ನಂತರ ಚುನಾವಣೆಗಳ ದಿಕ್ಕೇ ಬದಲಾಗಿ ಹೋಯಿತು.

ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯ ಚಾರಿತ್ರ್ಯ ಮತ್ತು ನೈತಿಕ ಬಲವನ್ನು ನೋಡದೆ ಅವನ ಹಣಬಲ ಮಾತ್ರ ನೋಡಿ ತಮ್ಮ ಪಕ್ಷದಿಂದ ಟಿಕೆಟ್ ಕೊಟ್ಟು ಸ್ಪರ್ಧಿಸುವಂತೆ ಮಾಡುವ ರಾಜಕೀಯ ಪಕ್ಷಗಳು ಇಂದಿನ ವ್ಯವಸ್ಥೆಯಲ್ಲಿವೆ. ತನ್ನ ಪಕ್ಷದ ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದರೂ ಪರವಾಗಿಲ್ಲ ಅವನ ಬಳಿಯಲ್ಲಿ ಮತದಾರರಿಗೆ ಹಂಚಲು ಹಣವಿದ್ದರೆ ಸಾಕು, ಅವನು ಗೆದ್ದು ಬರುತ್ತಾನೆ ಎಂಬ ಸಣ್ಣ ನಂಬಿಕೆ ಹುಟ್ಟಿದರೂ ಅವನಿಗೆ ಟಿಕೆಟ್ ಸಿಗುವುದು ಖಚಿತ.

ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಮಯ. ಎಂದಿನಂತೆ ಸಂಜೆ ವಾಕ್ ಮಾಡುತ್ತಿದ್ದೆ. ಕತ್ತಲು ಮೆಲ್ಲನೆ ಆವರಿಸಿತ್ತು. ಪಾರ್ಕಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಮೂರು ಜನರು `ನಮಸ್ಕಾರ ಸರ್` ಎಂದರು. ಅವರ ಕೈಯಲ್ಲಿ ಒಂದಷ್ಟು ಪೇಪರ್ ಕಂಡವು. ಇವರು ಚುನಾವಣೆಗೆ ಸಂಬಂಧಪಟ್ಟವರು ಎಂದು ತಕ್ಷಣವೇ ಗ್ರಹಿಸಿದೆ. "ನಮಸ್ಕಾರ, ಹೇಳಿ ಸರ್ ಏನು ವಿಷಯ?" ಎಂದೆ. "ನಾನು ವಕೀಲ ಕುಮಾರ್. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ದಯವಿಟ್ಟು ತಮ್ಮ ಮತವನ್ನು ನನಗೆ ನೀಡಿ" ಎಂದು ಮತ ಯಾಚಿಸಿದರು. "ಆಯ್ತು ಸರ್" ಅಂತಾ ಹೇಳಿದ ಮೇಲೆ ಸ್ವಲ್ಪ ಹೊತ್ತು ಅವರೊಂದಿಗೆ ಮಾತುಕತೆ ಮುಂದುವರಿಸಿದೆ. "ಅಲ್ಲ ಸರ್ ಹಣದ ರುದ್ರ ನರ್ತನ ನಡೆಯುವ ಈ ಚುನಾವಣೆಯಲ್ಲಿ ನೀವೇಕೆ ಸ್ಪರ್ಧೆ ಮಾಡಿ ಸಮಯ ಹಣ ಎರಡನ್ನೂ ಕಳೆದುಕೊಳ್ಳುತ್ತೀರಾ?" ಎಂದೆ. "ಸರ್ ಹಣವಿದ್ದರೆ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬೇಕೇ. ಹಣ ಇಲ್ಲದಿದ್ದರೆ ಸುಮ್ಮನೆ ಇರಬೇಕೇ. ಎಲ್ಲರೂ ಸುಮ್ಮನೆ ಕುಳಿತರೆ ವ್ಯವಸ್ಥೆಯಲ್ಲಿ ಬದಲಾವಣೆ ತರುವವರು ಯಾರು?" ಎಂದರು. "ಏನೋ ಸರ್ ನಿಮಗೆ ಒಳ್ಳೆಯದಾಗಲಿ" ಎಂದು ನಾನು ಅಲ್ಲಿಂದ ಹೊರಟೆ, ಅವರು ಸಹ ಹೊರಟು ಹೋದರು. ಅವರು ಮಾತನಾಡುವಾಗ ವ್ಯವಸ್ಥೆಯ ಬಗ್ಗೆ ಅವರಿಗಿರುವ ಅಸಮಾಧಾನ ಎದ್ದು ಕಾಣುತಿತ್ತು. ಆದರೆ ಅವರಿಗೆ ಅದನ್ನು ಬದಲಿಸುವ ಶಕ್ತಿ ಇರಲಿಲ್ಲ. ಉತ್ತಮ ಆಲೋಚನೆ ಇರುವವನಿಗೆ ಅವಕಾಶವಿಲ್ಲ. ಇದು ಎಲ್ಲಾ ಕ್ಷೇತ್ರಗಳಲ್ಲಿ ಆವರಿಸಿರುವ ಕೆಟ್ಟ ಪರಿಸ್ಥಿತಿ.

ಸದ್ಯದ ಚುನಾವಣಾ ವ್ಯವಸ್ಥೆ ಸರಿ ಹೋಗಲೇ ಬೇಕು ಎನ್ನುವುದಾದರೆ ಚುನಾವಣೆಗಳಲ್ಲಿ ಹರಿಸುವ ಹಣಕ್ಕೆ ಕಡಿವಾಣ ಹಾಕಬೇಕು. ಇದಂತೂ ಅಸಾಧ್ಯದ ಮಾತು. ಚುನಾವಣೆ ಬಂತೆಂದರೆ ಅಭ್ಯರ್ಥಿಯ ಆಪ್ತರ ಮನೆಗಳೇ ರಿಸರ್ವ್ ಬ್ಯಾಂಕಿನ ನಗದು ವಿಭಾಗದಂತೆ (Cash vault) ಕಾಣಿಸುತ್ತವೆ. ಚುನಾವಣೆಯ ಹಿಂದಿನ ಕೆಲವೇ ದಿನಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅವರ ಮನೆಗಳಿಂದ ವ್ಯವಸ್ಥಿತವಾಗಿ ಒಂದೊಂದು ಬೂತಿಗೆ ಇಷ್ಟಿಷ್ಟು ಹಣ ಎಂದು ವಿಲೇವಾರಿ ಆಗುತ್ತದೆ. ಅದನ್ನು ನಾಜೂಕಾಗಿ ಮತದಾರರಿಗೆ ತಲುಪಿಸುವ ಜವಾಬ್ದಾರಿ ಆ ಬೂತಿನ ಪ್ರಮುಖನದ್ಧು. ಇಲ್ಲಿ ಹಣ ಪ್ರವಾಹದಂತೆ ಹರಿಯುವುದಿಲ್ಲ. ಅದರ ಬದಲು ಕವಲಾಗಿ ಚಿಕ್ಕ ಚಿಕ್ಕ ಮೊತ್ತಗಳಲ್ಲಿ ಅಧಿಕಾರಿಗಳ ಕಣ್ಣಿಗೆ ಕಾಣದಂತೆ ಲೆಕ್ಕಕ್ಕೆ ಸಿಗದಂತೆ ಹರಿದು ಹೋಗುತ್ತದೆ. ಇದನ್ನು ತಡೆಯಲು ಸಾಧ್ಯವೇ ಇಲ್ಲ. ಎಂತಹ ಚುನಾವಣಾ ಸುಧಾರಣೆ ತಂದರೂ ಸಹ ಹಣದ ಹರಿವನ್ನು ತಗ್ಗಿಸಲು ಸಾಧ್ಯವೇ ಇಲ್ಲ. ಒಂದು ಎಂಎಲ್ಎ ಚುನಾವಣೆಗೆ ಇತ್ತೀಚೆಗೆ 50 ಕೋಟಿ ಹಣ ಖರ್ಚಾಗುತ್ತದೆ ಎಂದು ನನ್ನ ಪರಮಾಪ್ತ ಶಾಸಕರೊಬ್ಬರು ತುಂಬಾ ಬೇಸರದಿಂದ ಹೇಳಿದ ಮಾತು ನೆನಪಾಗುತ್ತಿದೆ. ಹಾಗೆಯೇ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಪರವಾಗಿ ಸುಮಾರು 150 ಕೋಟಿ ರೂಪಾಯಿ ಹಣ ಹೊಳೆಯು ಹರಿದಿದೆ ಎಂದು ಆ ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ್ದು ಕೇಳಿಸಿಕೊಂಡು ದಿಗ್ಭ್ರಮೆ ಆಯಿತು. ಇತ್ತೀಚೆಗಂತೂ ಗ್ರಾಮಪಂಚಾಯಿತಿ ಚುನಾವಣೆ ಅಂದರೂ ಕನಿಷ್ಟ 5 ಲಕ್ಷ ರೂಪಾಯಿ ಖರ್ಚಾಗುತ್ತವೆ ಅಂತಾ ಮುಂದಿನ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ನನ್ನ ಗೆಳೆಯನೊಬ್ಬ ಬೇಸರದಿಂದ ಹೇಳಿದ. ಇದನ್ನೆಲ್ಲಾ ನೋಡುತ್ತಿದ್ದರೆ ಪ್ರಜಾಪ್ರಭುತ್ವ ಸಂಪೂರ್ಣ ಹಣಬಲದ ಮೇಲೆ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.

ಚುನಾವಣೆಗಳಲ್ಲಿ ಪಾರದರ್ಶಕತೆ ತರಲು ಪ್ರಯತ್ನ ಮಾಡುತ್ತಿರುವ ಚುನಾವಣಾ ಆಯೋಗದ ಬಗ್ಗೆಯೇ ಅಸಮಾಧಾನ ಹೊರಹಾಕುವ ರಾಜಕೀಯ ಪ್ರಮುಖರು ಇರುವ ಈ ಕಾಲದಲ್ಲಿ ಎಂತಹ ಪ್ರಾಮಾಣಿಕ ಮತ್ತು ನಿರ್ಭೀತ ವ್ಯಕ್ತಿಯೇ ಆಯೋಗದ ಜವಾಬ್ದಾರಿ ವಹಿಸಿಕೊಂಡರೂ ಸುಧಾರಣೆ ತರುವುದು ತುಂಬಾ ಕಷ್ಟ.

ಬ್ಯಾಲೆಟ್ ಪೇಪರ್ ಬಳಸಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಅಕ್ರಮ ಹೆಚ್ಚಾಗುತ್ತಿದೆ ಎಂದು ಹೇಳಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಜಾರಿಗೆ ತರಲಾಯಿತು. ಆದರೆ ಈಗ ಈ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೇ ಅನುಮಾನ ಇದೆ ಎಂದು ದೂರುವ ವ್ಯವಸ್ಥೆ ಹುಟ್ಟಿಕೊಂಡಿದೆ. ಒಂದೊಮ್ಮೆ ಮತ್ತೆ ಬ್ಯಾಲೆಟ್ ಪೇಪರ್ ಚುನಾವಣೆ ಬಂತೆಂದರೆ ಕತೆ ಮುಗಿಯಿತು. ಕೇವಲ ಹಣವಿದ್ದರೆ ಟಿಕೆಟ್ ಸಿಗುವುದಿಲ್ಲ, ಜೊತೆಗೆ ಆ ಅಭ್ಯರ್ಥಿಯ ಸುತ್ತಲೂ ದೌರ್ಜನ್ಯ ಮಾಡುವ ಪುಂಡರ ಗುಂಪು ಇರಬೇಕು ಎಂದು ಪಕ್ಷಗಳು ನೋಡಲು ಆರಂಭಿಸುತ್ತವೆ. ಮತಗಟ್ಟೆಗಳಲ್ಲಿ ದೌರ್ಜನ್ಯ ಮಾಡಿ ಯಾರಿಗೆ ಮತ ಹಾಕುತ್ತೇವೆ ಎಂದು ಬ್ಯಾಲೆಟ್ ಪೇಪರ್ ತೋರಿಸಿ ಮತ ಹಾಕಬೇಕಾಗುತ್ತದೆ. ಇದು ಪ್ರಜಾಪ್ರಭುತ್ವವನ್ನು ಇನ್ನೂ ಶೋಚನೀಯ ಸ್ಥಿತಿಗೆ ತಳ್ಳುತ್ತದೆ.

ಚುನಾವಣೆಗಳಲ್ಲಿ ಅಭ್ಯರ್ಥಿ ಎಷ್ಟೇ ಹಣದ ಹೊಳೆ ಹರಿಸಿದರೂ ಸಹ ಅದಕ್ಕೆಲ್ಲಾ ಸೊಪ್ಪು ಹಾಕದೆ ತಮ್ಮ ಮತವನ್ನು ಮಾರಿಕೊಳ್ಳದೆ ಸ್ವಇಚ್ಛೆಯಿಂದ ಮತ ಹಾಕುವ ಮತದಾರರ ಸಂಖ್ಯೆ ಹೆಚ್ಚಾದರೆ ಸುಧಾರಣೆಗಳು ತಂತಾನೇ ಆಗುತ್ತವೆ. ಮತವನ್ನು ಮಾರಿಕೊಂಡು ಅಭ್ಯರ್ಥಿಯ ಋಣಕ್ಕೆ ಸಿಲುಕಿ ಭ್ರಷ್ಟ ವ್ಯವಸ್ಥೆಗೆ ಮಣೆ ಹಾಕಿದರೆ ಅಭ್ಯರ್ಥಿಗಿಂತ ಮತದಾರರೇ ಹೆಚ್ಚು ಭ್ರಷ್ಟರಾಗುತ್ತಾರೆ. ವ್ಯವಸ್ಥೆಯನ್ನು ಸುಧಾರಿಸುವ ಶಕ್ತಿ ಈಗಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಇಲ್ಲ. ಆದರೆ ಅಂತಹ ಶಕ್ತಿ ಮತದಾರನಿಗೆ ಇದೆ. ಒಬ್ಬೊಬ್ಬ ಮತದಾರನೂ ಎಚ್ಚೆತ್ತುಕೊಂಡರೆ ಮತ್ತೊಬ್ಬ ಟಿ.ಎನ್. ಶೇಷನ್ ತಾನಾಗಿಯೇ ಹುಟ್ಟಿ ಬಂದಂತೆ. ಪ್ರತಿಯೊಬ್ಬ ಮತದಾರನು ಮತ ಚಲಾಯಿಸುವ ಸಮಯದಲ್ಲಿ ಭ್ರಷ್ಟ ವ್ಯವಸ್ಥೆಗೆ ಸೆಡ್ಡು ಹೊಡೆದು ಮತ ಚಲಾಯಿಸಿದರೆ ಸಾಕು. ವ್ಯವಸ್ಥೆ ತಾನಾಗಿಯೇ ಸುಧಾರಣೆ ಆಗುತ್ತದೆ. ಇದೇ ಟಿ.ಎನ್. ಶೇಷನ್ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ನಾಗರೀಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಎಲ್ಲೆಲ್ಲಿ ಭ್ರಷ್ಟ ವ್ಯವಸ್ಥೆ ಇದೆಯೋ ಅಲ್ಲೆಲ್ಲಾ ಆ ವ್ಯವಸ್ಥೆಯಲ್ಲಿ ಬದುಕಿರುವ ಜನರೇ ಬದಲಾವಣೆಗೆ ನಾಂದಿ ಹಾಡಬೇಕು. ಅಂಜದೆ ಅಳುಕದೆ ನಿರ್ಭೀತವಾಗಿ ವ್ಯವಸ್ಥೆಗಳನ್ನು ಬದಲಿಸುವ ಮನಸ್ಸು ಮಾಡಬೇಕು. ನಾವು ಬದಲಾದರೆ ವ್ಯವಸ್ಥೆಗಳನ್ನು ಸುಲಭವಾಗಿ ಬದಲಾಯಿಸಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟಬೇಕಾದ ನಾವೇ ಗಂಟೆ ಕಟ್ಟುವವರು ಯಾರು ಎಂದು ಬುದ್ದಿವಂತಿಕೆಯಿಂದ ಪ್ರಶ್ನೆ ಮಾಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತೇವೆ. ಮೊದಲು ನಾವು ಬದಲಾಗಬೇಕಿದೆ. ನಾವು ಬದಲಾದರೆ ಟಿ.ಎನ್.ಶೇಷನ್ ಅವರು ಮತ್ತೆ ಹುಟ್ಟಿಬಂದಂತೆ.

ಹಣವನ್ನು ಕೊಟ್ಟು ಮತ ಕೊಂಡುಕೊಳ್ಳುವ ಅಭ್ಯರ್ಥಿ ಭ್ರಷ್ಟನಾದರೆ, ಹಣಕ್ಕಾಗಿ ಸೀರೆಗಾಗಿ ಕುಕ್ಕರ್ ಗಾಗಿ ವಾಚಿಗಾಗಿ ಮದ್ಯಕ್ಕಾಗಿ ಮತ ಮಾರಿಕೊಳ್ಳುವ ಜನರು ಕಡುಭ್ರಷ್ಟರು. ಇಬ್ಬರೂ ಪಾಪಿಗಳು. "ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ" ಎಂಬ ಸಾಂಸ್ಕೃತಿಕ ನಾಯಕ ಭಕ್ತಿ ಭಂಡಾರಿ ಬಸವಣ್ಣನವರ ಮಾತು ನೆನಪಾಗುತ್ತಿದೆ. ಮತವನ್ನು ಮಾರಿಕೊಂಡು ಹಣ ಪಡೆಯುವ ಮತದಾರರು ಆ‌ ಹಣ ಯಾವುದಕ್ಕೆ ಸಲ್ಲುತ್ತದೆ ಎಂದು ಮೊದಲು ಯೋಚಿಸಬೇಕು.

ಮನಸ್ಸನ್ನು ಜಾಗೃತಗೊಳಿಸಿ ಯೋಚನೆಗೆ ಹಚ್ಚುವ ಮತ್ತೊಂದು ಶಕ್ತಿಶಾಲಿ ಸಂದೇಶ ಇರುವ ಅಂಕಣವನ್ನು ಕರುಣಿಸಿದ ಜಗದ್ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು.
ಪ್ರಸನ್ನ ಯು, ಸನ್ನದು ಆರ್ಥಿಕ ಗುರಿಯೋಜಕರು
ಸಿರಿಗೆರೆ

N-2556 

  16-06-2024 09:08 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ತರಳಬಾಳು ಜಗದ್ಗುರು ಶ್ರೀ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳ ಚರಣಗಳಿಗೆ ನಮಸ್ಕರಿಸುತ್ತಾ ಅವರ ಜನುಮದಿನದ ಈ ಪವಿತ್ರ ದಿನದಂದು 16. June ಸದಾ ನಮಗೆ ಆರೋಗ್ಯ ಮತ್ತು ಹರುಷದಿಂದ ದೊರಕುತಿರಲಿ. ಶ್ರೀ ಗುರುಗಳು ನಮ್ಮ ನಮನವನ್ನು ಅರ್ಪಿಸಿಕೊಳ್ಳಲು ಬೇಡುವ ತಮ್ಮ ಪ್ರೌಢಶಾಲಾ ಸಹಪಾಠಿಗಳ ಪರವಾಗಿ. ನಿಮ್ಮ ಪ್ರಭುದೇವ್ ಎಮ್ ಎಸ್‌ ಮತ್ತು 1960-63 ರ ಶಿವಮೊಗ್ಗ ಪ್ರೌಢಶಾಲಾ ಸಹಪಾಠಿ ಗೆಳೆಯರು.👏
Prabhudev M S
SHIVAMOGGA

N-2556 

  16-06-2024 06:05 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 Guruji. 💐🙏

1. With My Respects to Guruji’s efforts to bring awareness in Society is laudable. 👏👏

2. However, it is disappointing that, We expect change by writing Articles. , not by Actions . !!

3. I respect and revered your contributions to Society- in many areas - like Protecting & preserving Irrigation Tanks , Tree planting, Community development- cultural & Religious - awareness. Etc. etc.
But failed to bring Liquor Lobby under control & to prevent our youth addicted.
I realized - Myself Being honest and accepting good governance, doesn’t help, unless we act collectively, to bring change., by educating ( Moral Values in Schools) and by force ( Legislation).

4. I am not sorry to bring to your Notice and with Humble Request - we the Society under your stewardship and leadership failed to create at least 100 good Politicians who can stand against all the evils listed in your Articles and Rest of the Reactions.

5. Why do we expect another Sheshan.
Each House , a village - can have a Sheshan , to create awareness and prevent any malpractices.

6. We as society under the Leadership of All Mataadhipati’s failed collectively to create a Society with Good Governance.

7. Gandhi ji once said - “ if you want to change the society , you be the first Change”.

8. If we could bring 100 contestants together under your Leadership , and 10 people from each village , they take oath - for not To be corrupt and Loyal to constitutional Values , and loyal to Matt Principles , that is the beginning.

9. Also during “ Taralabalu Mahotsav “- instead of inviting- Hasya Kavi , oath of commitment, would help bring, change. At least a beginning in that direction.

10. Just like - Sri. Shankaracharya - Dharmagurus , can bring change in the society.

11. As a respect and Followers of Sri. Basavanna , a Revolutionary , We should NOT create more New Castes and Jasthis, but Unite all as one Hindu. , Sanathana Dharma.

12. Matt should not accept any Funds / donations from Corrupt politicians.
No corrupt politicians should donate to Any Matt activities.

13. Any initiative in this Direction, we are ready to follow your footsteps and Guidance.

With due Respects 🙏💐 , I humbly request , not to take this as criticism, but an honest feeling, with the intention of involvement in the Future efforts., under your leadership , guidance and advice.

Kind Regards.
Soma Shekhar.
Canada.





Soma Shekhar.
Toronto , Canada

N-1561 

  16-06-2024 05:10 PM   

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ

 ಗುರುಗಳ ಶ್ರೀ ಪಾದಗಳಿಗೆ
ನಮಸ್ಕರಿಸುತ್ತಾ..🙏🏼
ಹಾಗೂ ಜನ್ಮ ದಿನಾಚರಣೆ ಶುಭಾಶಯಗಳು ಗುರುಗಳೇ..

`ಮೃತ್ಯುಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು. ಮೃತ್ಯುಲೋಕ, ದೇವಲೋಕ ಬೇರಿಲ್ಲ. ಸತ್ಯವ ನುಡಿವುದು ದೇವಲೋಕ, ಮಿಥ್ಯವ ನುಡಿವುದೇ ಮೃತ್ಯು ಲೋಕ, ಇದು ಶರಣರ ಬದುಕಿನ ಸಂದೇಶವಾಗಿತ್ತು...

ಯಾವುದೇ ವ್ಯಕ್ತಿ ಇನ್ನೊಬ್ಬರ ಸಂತೋಷ ಮತ್ತು ದುಃಖಗಳಿಗೆ ಪ್ರತಿಕ್ರಿಯಿಸುತ್ತಾರೋ ಅಂತಹವರು ಉನ್ನತ ಮಟ್ಟದ ಆಧ್ಯಾತ್ಮಿಕ ಒಕೂಟವನ್ನು ಪಡೆದುಕೊಂಡಿರುತ್ತಾರೆ.. ಎಂದು ಭಗವದ್ ಗೀತೆಯಲ್ಲಿ ಓದಿರುವೆ..
ಅಂತಹ ಒಂದು ಉತ್ತಮ ಉದಾರಣೆಗೆ ಸಾಕ್ಷಿಯಾಗಿ ನಿಲ್ಲುವ ಗುರುಗಳು ಅಥವಾ ಸ್ವಾಮೀಜಿ ಎಂದರೆ ನೀವುಗಳು ನಮಗೆ..

ಅನ್ನದಾನಮ್ ಎನ್ನುವ ಹೆಸರಿನಲ್ಲಿ ಆಹಾರ ದಾಸೋಹ.
ವಿದ್ಯಾ ದಾನಮ್ ಹೆಸರಿನಲ್ಲಿ ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿರುವ ಗುರುವು ನೀವು ,
ದಿನವೂ ನೀವುಗಳು ಮಾಡುವ ಪುಣ್ಯ ಕೆಲಸಗಳಲ್ಲಿ
ನಿಮ್ಮ ಹುಟ್ಟನ್ನು ಕಾಣುವ ನಮಗೆ ದಿನವೂ ನಿಮ್ಮ ಜನ್ಮದಿನಚರಣೆಯೇ ಗುರುಗಳೇ..

ಜನ್ಮದಿನಚರಣೆ ಅಂದರೆ ಏನು ಎನ್ನುವ ಮಹತ್ವವನ್ನು ತಿಳಿಸಿಕೊಟ್ಟಿದ್ದೀರಿ.. ಅದೆಷ್ಟೋ ವಿಚಾರಗಳು ನಿಮ್ಮ ಲೇಖನಗಳನ್ನು ಓದಿ ತಿಳಿದುಕೊಳ್ಳುವಂತ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕಾಗಿ ಅನಂತ ಧನ್ಯವಾದಗಳು ಗುರುಗಳೇ..

ಶ್ರೀ ಮಠದ ಭಕ್ತಳು..
ಕೆ . ಜಿ . ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಕರ್ನಾಟಕ. ದಾವಣಗೆರೆ ಜಿಲ್ಲೆ .ಚನ್ನಗಿರಿ. ಪಾಂಡೋಮಟ್ಟಿ

N-2556 

  16-06-2024 03:40 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಲೇಖನ ತುಂಬಾ ಅದ್ಭುತವಾಗಿದೆ. ಇಲ್ಲಿಯ ಮಾತುಗಳೆಲ್ಲವೂ ಅಕ್ಷರ ಸಹ ಸತ್ಯ. ನಮ್ಮ ಚುನಾವಣೆಗಳಲ್ಲಿ ಕೆಳಹಂತದಿಂದ ಮೇಲಿನ ಹಂತದವರೆಗೂ ಸಮಗ್ರ ಬದಲಾವಣೆ ಆಗಬೇಕಾಗಿದೆ. ಹಾಗಾಗಿ ನಮ್ಮ ದೇಶಕ್ಕೆ ಚುನಾವಣಾ ಅಕ್ರಮ ತಡೆಯಲು ಇನ್ನೊಬ್ಬ ಶೇಷನ್ ಬರಬೇಕಾಗಿದೆ
ಆಂಜನೇಯ. T
ಮರಿಕುಂಟೆ

N-2554 

  16-06-2024 12:15 PM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 ಪರಮ ಪೂಜ್ಯ ಶ್ರೀ ಗಳಿಗೆ ಮೊದಲು ಜನ್ಮದಿನಾಚರಣೆ ಅಂಗವಾಗಿ ಚರಣ ಕಮಲಗಳಿಗೆ ಪ್ರಣಾಮಗಳನ್ನು ಸಲ್ಲಿಸುತ್ತಾ
ವಿಜಯಪುರದಲ್ಲಿ ಅಭಿನಯಿಸಲಿರುವ ಶರಣ ಸಂಕುಲ ಮಲ್ಲ ಕಂಬ ಮಲ್ಲಿ ಹಗ್ಗದ ಮೂಲಕ ಎಲ್ಲರನ್ನೂ ರಂಜಿಸಿ ಸಿರಿಗೆರೆ ಹಾಗೂ ಶ್ರೀ ಮಠದ ಕೀರ್ತಿಯನ್ನು ಹೆಚ್ಚಿಸಿರುವ ಎಲ್ಲಾ ಕಲಾವಿದರಿಗೂ ನನ್ನ ಅಭಿನಂದನೆಗಳು ಇದಕ್ಕೆ ಸಲಹೆ ಸಹಕಾರ ಆಶೀರ್ವಾದ ದಯಪಾಲಿಸಿದ ಪೂಜ್ಯರಿಗೆ ನನ್ನ ಭಕ್ತಿ ಪೂರ್ವಕ ಪ್ರಣಾಮಗಳು

ಶಿವಸ್ವಾಮಿ ಜಿ ಡಿ
Sirigere Karnataka India

N-1561 

  16-06-2024 11:27 AM   

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ

 The various ways of defining Birthday is illustrated, it is incredible and very meaningful.
Worth reading
Dr B Y Yuvaraj
Chitradurga

N-2556 

  15-06-2024 03:43 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಗುರುಗಳಿಗೆ ಅನಂತ್ ನಮಸ್ಕಾರಗಳು.ಮತ್ತೆ ಟೀ.ಎನ್.ಶೇಷನ್ ಮರುಳಿ ಬರಬೇಕು ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಇದು ಅತ್ಯಂತ ಅವಶ್ಯಕ ವಾದದ್ದು.ಆದರೆ ಹಣಕ್ಕಾಗಿ ಮತ್ತು ಪವರ್ ಗೆ ಬಡದಾಡುತ್ತೀರ್ ವ ನಮ್ಮ ಜನ್ ಅದಕ್ಕೆ ಅವಕಾಶ ಕೊಡುವಂತ್ತಿಲ್.ದೇಶದ್ ಭವಿಷ್ಯ ಚಿಂತಾಜನಕ ವಾಗಿದೆ.
P. G. Savadatti
Goregaon Dist:-Raigad pin 402103

N-2554 

  15-06-2024 01:29 PM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 These programs lead to good culture among students
Marulasiddapa S
Kabbur

N-2556 

  15-06-2024 01:00 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಗುರುವರ್ಯರಿಗೆ ನಮೋನಮಃ 🙏🙏ದಿನಾಂಕ 13 - 6- 24 ರ ಗುರುವಾರದ ಬಿಸಿಲು ಬೆಳದಿಂಗಳು ಅಂಕಣದ *ಮತ್ತೊಬ್ಬ ಶೇಷನ್ ಗಾಗಿ ಭಾರತ ಕಾಯುತ್ತಿದೆ* ಲೇಖನವು ಸಂಚಲನ ಮೂಡಿಸಿತು. ಮತದಾರರು ಉಚಿತ ಲಾಲಸೆಗೆ ತಮ್ಮ ಮತಗಳನ್ನು ಮಾರಿಕೊಂಡಿರುವುದು ದೇಶದ ಭವಿಷ್ಯಕ್ಕೆ ಮಾರಕ. ಟಿ ಎನ್ ಶೇಷನ್ ಅವರಂತಹ ಗಜಕೇಸರಿ ಮನುಷ್ಯರೇ ಹೀನಾಯವಾಗಿ ಸೋತಿದ್ದರು ಎಂದು ಹೇಳಿದ್ದಾರೆ ಸ್ವಾಮೀಜಿಯವರು. ಎಂತಹ ವ್ಯಕ್ತಿತ್ವದ ಮಹಾನುಭಾವರು ಶೇಷನ್ ರವರು. ಭ್ರಷ್ಟ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಇಂತಹವರನ್ನು ಚುನಾಯಿಸದೆ ಅನರ್ಹರನ್ನು ಆರಿಸುತ್ತಿದ್ದೇವೆ. ದೇಶದ ಮುಂದಿನ ಭವಿಷ್ಯ ನೆನೆದರೆ ಭಯವಾಗುತ್ತದೆ. ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸ್ಥಿತಿ ಏನಾಗುವುದು ಎಂಬ ಆತಂಕ ಕಾಡುತ್ತಿದೆ.

ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ - ಎಂದು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುವಂತೆ ಅವನೇ ಮತ್ತೊಮ್ಮೆ ಹುಟ್ಟಿ ಬರಬೇಕು - ಮಹಾನ್ ದೇಶಭಕ್ತರಾದ ಸರ್ದಾರ್ ಪಟೇಲ್, ಶೇಷನ್, ವಾಜಪೇಯಿ ಇವರುಗಳೊಂದಿಗೆ.
ಶಕುಂತಲಾ ಸಿದ್ದರಾಜು, ಹೊಸದುರ್ಗ


N-2556 

  15-06-2024 12:58 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯ ಗುರುಗಳಿಗೆ ಪ್ರಣಾಮಗಳು.

ಬಿಸಿಲು ಬೆಳದಿಂಗಳು ಅಂಕಣ:
*ಮತ್ತೊಬ್ಬ ಟಿ ಎನ್ ಶೇಷನ್ ಗಾಗಿ ಭಾರತ ಕಾಯುತ್ತಿದೆ!*

ಇದೀಗ ತಾನೇ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ನಿರೀಕ್ಷಿಸಿದ್ದ ಫಲಿತಾಂಶ ಕಾಣದೆ ಪ್ರಜೆಗಳು ಅವಕ್ಕಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಗುರುಗಳ ಅಂಕಣ ಸಮಯೋಚಿತವಾದದ್ದು .ಅವರ ಅಂಕಣದಿಂದ ತಿಳಿದಿದ್ದು ನಮ್ಮ ದೇಶವಲ್ಲದೆ ಇತರ ದೇಶದಲ್ಲೂ ಸಹ ಇದೇರೀತಿ ನಡೆದ ಘಟನೆಯನ್ನು ಚರ್ಚಿಲ್ ರ ಉದಾಹರಣೆಯೊಂದಿಗೆ ತಿಳಿಸಿದ್ದಾರೆ.
ಚುನಾವಣೆಯಲ್ಲಿ ನಾವು ಅಂದುಕೊಂಡಿದ್ದು ನಿರೀಕ್ಷಿಸಿದ್ದು ಯಾವುದು ಆಗದು. ಏಕೆಂದರೆ ಅಂಬೇಡ್ಕರ್ ಮತ್ತು ಶೇಷನ್ ರಂಥವರು ಸಹ ಚುನಾವಣೆಯಲ್ಲಿ ಸೋತಿದ್ದು ಪರಮಾಶ್ಚರ್ಯಕರವಾಗುತ್ತದೆ .ಪ್ರಜೆಗಳ ಮನಸ್ಥಿತಿ ಹೀಗೆ ಎಂದು ತಿಳಿಯಲು ಅಸಾಧ್ಯ ಎನ್ನುವುದು ಸಾಬೀತಾಗುತ್ತದೆ. ಈಗೀಗ ಚುನಾವಣೆ ಬಂತು ಎಂದರೆ ಅದೆಲ್ಲಿಂದಲೊ ಹಣದ ಹೊಳೆ ಹರಿದು ಬರುತ್ತದೆ.ಹಣದ ಆಮಿಷಕ್ಕೆ ಮುಗ್ದ ಜನರು ಅವರಿಗೆ ಮತ ಚಲಾಯಿಸುತ್ತಾರೆ. ಹಣದ ಆಮಿಶ, ಇತರ ಪಕ್ಷಗಳ ಬಗ್ಗೆ ಆರೋಪ,ಅವಹೇಳನಗಳು, ಒಳಗೊಳಗೆ ನಡೆಯುವ ಕರಾಮತ್ತುಗಳು ಸೇರಿ ಫಲಿತಾಂಶ ಊಹಿಸಲು ಕಷ್ಟವಾಗಿದೆ. ಅನ್ಯಾಯಕ್ಕೆ ಅಧರ್ಮಕ್ಕೆ ಜಯ ಸಿಗುತ್ತದೆ; ಕಷ್ಟಪಟ್ಟು ಕೆಲಸ ಮಾಡಿದವರಿಗೆ ನಿರಾಸೆ ತರುತ್ತದೆ. ಇದೆಲ್ಲ ನೋಡಿದಾಗ ಪ್ರಜೆಗಳಲ್ಲಿ ಜಾಗೃತ ಪ್ರಜ್ಞೆ ಬೆಳೆಯಬೇಕು ಸ್ವಾರ್ಥ ಬದಿಗಿಟ್ಟು ಚಿಂತನೆಗಳನ್ನು ಪ್ರಯೋಗಕ್ಕೆ ಒಳಪಡಿಸಿಕೊಂಡು ನಿತ್ಯ ಸತ್ಯ ಕಂಡುಕೊಳ್ಳಬೇಕು ಎಂದೆನಿಸುತ್ತದೆ.

ಮತ ಎಲ್ಲರ ಹಕ್ಕು, ಪ್ರಜೆಗಳು ತಮ್ಮ ಅಭ್ಯರ್ಥಿಗಳ ಬಗ್ಗೆ ಚೆನ್ನಾಗಿ ವಿವೇಕದಿಂದ ತಿಳಿದು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಬೇಕು.
ಶೇಷನ್ ರವರು ತಮ್ಮ ಬಾಳಿನಲ್ಲಿ ಒಬ್ಬ ಕುರಿ ಕಾಯುವವನಿಂದ ಪಾಠ ಕಲಿತಿದ್ದು ನಮಗೂ ಸಹ ಪಾಠ ವಾಗುತ್ತದೆ.

ಎಷ್ಟೆಲ್ಲಾ ವಿಷಯಗಳನ್ನು ತಿಳಿಸಿ ಕೊಟ್ಟ ಗುರುಗಳಿಗೆ ಸಾದರ ಪೂರ್ವಕ ವಂದನೆಗಳು. ನಮಗೆ ಗುರುಗಳ ಅಂಕಣದ ಬಗ್ಗೆ ಮೆಲಕು ಹಾಕುತ್ತ ನಮ್ಮಭಾವನೆಗಳು ಪ್ರಕಟವಾಗುವಂತೆ ಮಾಡುತ್ತಿರುವ ರಾ.ವೆಂಕಟೇಶ ಶೆಟ್ಟಿ ಯವರಿಗೆ ಧನ್ಯವಾದಗಳು.
ಕಾಂತಾರಾಮುಲು. ಬೆಂಗಳೂರು.


N-2556 

  15-06-2024 12:55 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯ ಗುರುಗಳ ಚರಣಾರವಿಂದಗಳಿಗೆ ನಮಸ್ಕರಿಸುತ್ತಾ

ಮತ್ತೊಬ್ಬ ಶೇಷನ್ ಬಂದರೂ ದೇಶದ ಸನಾತನಿಗಳೆನಿಸಿಕೊಂಡ ನಮ್ಮ ಮನಸ್ಥಿತಿ ಬದಲಾಗಲಾರದು. ಇಲ್ಲಿನ ಅವ್ಯವಸ್ಥೆಯೇ!! ಹತ್ತು ಹಲವು ಜಾತಿಗಳು, ಅವರವರ ಜಾತಿಗೆ ಸೇರಿದ ಮಠ ಮತ್ತು ಮಠಾಧೀಶರುಗಳು, ಅವರವರ ಜಾತಿಯ ಏಳಿಗೆಗಾಗಿ ಶ್ರಮಿಸುತಿರುವ ಚಿತ್ರಣ ನಮ್ಮ ಕಣ್ಣ ಮುಂದೆ ಸ್ಪಷ್ಟವಾಗಿದೆ. ರಾಜಕೀಯ ನೇತಾರರನ್ನು ಬಿಟ್ಟು, ನಮ್ಮ ಜನ ನಂಬುವುದು ಮಠಾಧಿಪತಿಗಳನ್ನು ಮಾತ್ರ. ಹೀಗಿರುವಾಗ ಎಲ್ಲಾ ಮಠದ ಗುರುವರ್ಯರು ಒಂದೆಡೆ ಸೇರಿ ದೇಶದ ಉದ್ಧಾರಕ್ಕಾಗಿ ಯಾವ ಪಕ್ಷವನ್ನು ಗೆಲ್ಲಿಸಬೇಕು ಎಂಬ ಖಡಕ್ ಸಂದೇಶ ಜನಮನಕ್ಕೆ ಯಾಕೆ ತಲುಪಿಸಲಿಲ್ಲ. ಶತಮಾನಗಳ ಹಿಂದೆ ಆದಿ ಶಂಕರರು, ಇದೇ ಭರತ ಖಂಡದಲ್ಲಿ ಅನ್ಯ ಮತೀಯ ಪ್ರಭಾವದಿಂದ ತುಳಿಯಲ್ಪಟ್ಟ ವೈದಿಕ ಧರ್ಮದ ಪುನರುಜ್ಜೀವನ ಮಾಡಲಿಲ್ಲವೆ; ನಮ್ಮೊಳಗಿನ ಕಚ್ಚಾಟವನ್ನು ಹತೋಟಿಗೆ ತರಲು ಪಂಚಾಯತನ ಪೂಜಾ ವಿಧಾನವನ್ನು ತಿಳಿಸಿಕೊಟ್ಟು ಐಕ್ಯತೆ ಸಾಧಿಸಲಿಲ್ಲವೆ. ಬೇಡದ ವಿಷಯಾಸಕ್ತಿಯಲ್ಲಿ ನಮ್ಮವರ ಬುದ್ಧಿ ಬಹಳ ಚುರುಕು. ಇಂದು ಜನಸಾಮಾನ್ಯರಿಗೆ ದೇಶದ ಹಿತದೃಷ್ಟಿಗಿಂತ ಸ್ವಹಿತವೇ ಭೂತಾಕಾರವಾಗಿ ಕಾಣಿಸುತಿದೆ. ಈಗ ನಮ್ಮ ಧರ್ಮಗುರುಗಳೇ ಒಗ್ಗಟ್ಟಾಗಿ ಧರ್ಮ ದಂಡವನ್ನು ಹಿಡಿದು ಜನರ ಮನದಲ್ಲಿ ನಮ್ಮ ಮುಂದಿನ ಭವಿಷ್ಯದ ಸ್ಪಷ್ಟ ಚಿತ್ರಣ ನಿಲ್ಲಿಸಬೇಕಿದೆ. ಹೆಂಡ ಕುಡಿದ ಮರ್ಕಟದಂತೆ ಕುಣಿಯುವ ನಮ್ಮವರನ್ನು ಹತೋಟಿಗೆ ತರುವುದೇ ಈಗ ನಮ್ಮ ಮುಂದೆ ಇರುವ ದೊಡ್ಡ ಸವಾಲು. ಜೈ ಗುರುದೇವ.
ಚೋಂದಮ್ಮ ಕೆ.ಪಿ, ಬೆಂಗಳೂರು


N-2556 

  15-06-2024 08:37 AM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಬುದ್ದಿಗಳ ಬರಹ..
ಹತ್ತು ಕಟ್ಟುವಲ್ಲಿ ಓಂದು ಮುತ್ತು ಕಟ್ಟಿದಂತೆ.
Shankaranand Banashankari KAS
India

N-2554 

  15-06-2024 08:17 AM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 💐🙏
GP manju


N-2554 

  15-06-2024 08:06 AM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 no
nagaraj baseganni
havari

N-2554 

  15-06-2024 07:32 AM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 Hi gm
Unni Krishna
India

N-0 

  15-06-2024 01:10 AM   

 



N-2557 

  14-06-2024 05:04 PM   

ಸಿರಿಗೆರೆ: ಸಂಸ್ಕಾರ-ಸಂಸ್ಕೃತಿ-ಯೋಗ ಸಪ್ತಾಹ-2024

 ಮೊನ್ನೆ ಹೀಗೇ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ.ಅದರಲ್ಲಿ ಒಬ್ಬರು ಇತ್ತೀಚೆಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರು.
ಅವರು ಹೇಳುವಂತೆ ಇಂದಿನ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುತ್ತಿರುವುದು ಯಾವುದೇ ಅಚ್ಚರಿ ಅಲ್ಲ.100ಕ್ಕೆ 98 ಕೆಲವೊಮ್ಮೆ 100 ಕ್ಕೆ 100 ಅಂಕ ಗಳಿಸುವುದು ಅಚ್ಚರಿಯೇ ಅಲ್ಲ ಅಂತ ಹೇಳುತ್ತಿದ್ದರು.ಆದರೆ ಮಕ್ಕಳಿಗೆ ಅಂಕಗಳಿಸುವುದನ್ನು ಹೇಳಿಕೊಡುತ್ತಿರುವ ಶಿಕ್ಷಕರು ಅವರಿಗೆ ಆದರ್ಶ ಮಾತು ಸಾಮಾಜಿಕ ಮೌಲ್ಯ ಹೇಳಿಕೊಡುವಲ್ಲಿ ಸೋಲುತ್ತಿದ್ದಾರೆ ಅಂತ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು.
ಅದು ನಿಜವೂ ಅನ್ನಿಸುತ್ತಿದೆ.ಈಗ ಶಿಕ್ಷಣ ಕ್ಷೇತ್ರ (ಜೊತೆಯಲ್ಲಿ ಆರೋಗ್ಯ ಕ್ಷೇತ್ರವೂ) ಸಂಪೂರ್ಣ ಉದ್ದಿಮೆಯ ಸ್ವರೂಪ ಪಡೆದುಕೊಂಡಿದೆ.ಈಗ ಅವು ಸೇವಾಕ್ಷೇತ್ರ ಆಗಿ ಉಳಿದಿಲ್ಲ.ಇಂತಹ ಸಮಯದಲ್ಲಿ ಈಗ ಮಾಡುತ್ತಿರುವಂತಹ ಕೆಲಸಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಆಶಿಸುತ್ತೇವೆ.ಸಾಷ್ಟಾಂಗ ನಮಸ್ಕಾರಗಳೊಂದಿಗೆ.🙏
ಮಲ್ಲಿಕಾರ್ಜುನ.ಎಂ.ಎನ್.
India

N-2556 

  14-06-2024 02:14 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯ ಗುರುಗಳಿಗೆ ಪ್ರಣಾಮಗಳು...

*ಮತ್ತೊಬ್ಬ ಟಿ.ಎನ್.ಶೇಷನ್ ಗಾಗಿ ಭಾರತ ಕಾಯುತ್ತಿದೆ!*
ಅಂಕಣ ಪ್ರತಿಕ್ರಿಯೆ.

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ಕೊಟ್ಟರೆ ಮಾತ್ರ ಮತದಾನ ಮಾಡಲು ಮತಗಟ್ಟೆಗೆ ಬರುವ ಜನಸಂಖ್ಯೆ ಹೆಚ್ಚು. ಅಪರೂಪದ ಎಂಬಂತೆ ಕೆಲವು ಬುದ್ಧಿಜೀವಿಗಳು, ದೇಶದ ಅಭಿವೃದ್ಧಿ ಚಿಂತಕರು, ನಿಷ್ಠಾವಂತರು ಮಾತ್ರ ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸುತ್ತಾರೆ. ಪ್ರಜೆಗಳು ನಾವು ಬೇಡ ಎಂದರೂ ಸಹ ಬೆಳದಿಂಗಳಲ್ಲಿ ಹಣ ಚೆಲ್ಲುವ ರಾಜಕಾರಣಿಯ ಕಾರ್ಯಕರ್ತರೇ ತಮ್ಮ ತಮ್ಮ ರಾಜಕಾರಣಿಗಳ ಗೆಲುವನ್ನ ನಿರ್ಧರಿಸುತ್ತಿರುವ ಕಾಲವನ್ನು ನಾವು ನೋಡುತ್ತಿದ್ದೇವೆ. ರಾಜಕಾರಣವೇ ಹಾಗೆ. ನಿಷ್ಠಾವಂತ ಬುದ್ದಿವಂತ ಮೂಲೆಗುಂಪಾದರೆ ಹಣ ಬಲ ಇರುವ ವ್ಯಕ್ತಿ ಗೆಲುವು ಸಾಧಿಸುತ್ತಾನೆ ಎಂಬುದಕ್ಕೆ ಶ್ರೀಗಳು ನೀಡಿರುವ ಕ್ಲೆಮೆಂಟ್ ಅಟ್ಲಿಯವರ ಲೇಬರ್ ಪಕ್ಷದ ಗೆಲುವು ಹಾಗೂ ಚರ್ಚಿಲ್ ಅವರ ಉದಾಹರಣೆಗಳೇ ಸಾಕ್ಷಿ.

ಇಂದಿನ ನಮ್ಮ ದೇಶಕ್ಕೆ ನಿಜಕ್ಕೂ ಸಹ ಟಿ.ಎನ್.ಶೇಷನ್ ರಂತಹ ಮುಖ್ಯ ಚುನಾವಣಾ ಆಯೋಗದ ಆಯುಕ್ತರ ಅವಶ್ಯಕತೆ ಇದೆ. ಚುನಾವಣೆಯನ್ನು ಪಾರದರ್ಶಕಗೊಳಿಸಿ ಚುನಾವಣೆ ನಡೆಸುವ ಕಾಲ ಬರಬೇಕಿದೆ. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶೇಷನ್ ಅವರ ಪತ್ನಿ ಹಕ್ಕಿಯ ಗೂಡಿಗೆ ಆಸೆ ಪಟ್ಟಾಗ ಶೇಷನ್ ಹಾಗೂ ಅವರ ಸಹಾಯಕ ಹಣ ನೀಡುತ್ತೇವೆ ಎಂದರೂ ಸಹ ಆ ಅನಕ್ಷರಸ್ಥ ಹಳ್ಳಿಯ ಹುಡುಗ ಆ ಹಕ್ಕಿಯ ಹಾಗೂ ತಾಯಿಯ ಸಂಬಂಧವನ್ನು ಅರಿತು ಹೇಳಿದ ಹಾಗೆ ಎಲ್ಲಾ ಮತಬಾಂಧವರು ತಮ್ಮ ತಮ್ಮ ಮನೆಯ ಬಾಗಿಲಿಗೆ ಚುನಾವಣೆಯ ಹಿಂದಿನ ರಾತ್ರಿ ಹಣ ನೀಡಲು ಬರುವ ಪಕ್ಷದ ಕಾರ್ಯಕರ್ತರಿಗೆ ಉತ್ತರಿಸಿದರೆ ಸಾಕೆನಿಸುತ್ತದೆ.

ಶ್ರೀಗಳು ತಮ್ಮ ಲೇಖನದಲ್ಲಿ ಮತಗಳ ಮಾರಾಟ, ಜಾತಿ ಜಾತಿಗಳ ಸಂಘರ್ಷ, ಮತಗಟ್ಟೆಗಳು ಅಭ್ಯರ್ಥಿಗಳ ಜೂಜಾಟದ ಕೇಂದ್ರಗಳಾಗಿರುವುದರ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ಶ್ರೀಗಳ ಈ ಅಂಕಣವನ್ನು ಓದಿದ ಪ್ರಜೆಗಳಾದರೂ ಸಹ ಪಾರದರ್ಶಕವಾಗಿ ಮತ ಚಲಾಯಿಸಲಿ....


ಪ್ರತಿಕ್ರಿಯೆ ಬರೆಯಲು ಅವಕಾಶ ನೀಡಿದ ರಾ. ವೆಂಕಟೇಶ್ ಶೆಟ್ಟಿ ಸರ್ ಅವರಿಗೆ ಅಭಿನಂದನೆಗಳು.
ಸುನಿಲ್ ಕುಮಾರ್. ಎಸ್.ಎಂ ಶಿಕ್ಷಕರು ಹಾಗೂ ಪತ್ರಕರ್ತರು ವಿಜಯ ಕರ್ನಾಟಕ ದಿನಪತ್ರಿಕೆ. ಸಿರಿಗೆರೆ.


N-2556 

  14-06-2024 02:08 PM   

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

 ಪೂಜ್ಯ ಗುರುಗಳವರ ಪಾದಕಮಲಗಳಿಗೆ ವಂದಿಸುತ್ತಾ..

ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!
ಲೇಖನ ಎಲ್ಲಾ ಚುನಾವಣಾ ಅಧಿಕಾರಿಗಳಿಗೂ ಹಾಗೂ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಅಭ್ಯರ್ಥಿಗಳಿಗೂ ಕಣ್ಣು ತೆರೆಸುವಂತಿದೆ..
ಆದರೆ ದುರಾದೃಷ್ಟವಶಾತ್ ಇಂಥ ಜ್ಞಾನವನ್ನು ನೀಡುವಂತಹ ಲೇಖನವನ್ನು ಓದುವಂಥ ತಾಳ್ಮೆ ಯಾವ ಚುನಾವಣೆ ಅಧಿಕಾರಿಗಳಿಗೆ , ಹಾಗೂ ಚುನಾವಣಾ ಕಣಕ್ಕಿಳಿಯುತ್ತಿರುವಂತಹ ಅಭ್ಯರ್ಥಿಗಳಿಗೆ ಇದೆ?
ಅದೇ ನಮ್ಮ ದುರದೃಷ್ಟ ಕೂಡ ..
ಕಾಂಚಾಣ ಲೋಕವನ್ನೆಲ್ಲ ಒಂದೇ ನಿಮಿಷದಲ್ಲಿ ಚಣಚಣವೆಂದು ಆಡಿಸುತ್ತಿದೆ..
ಇಲ್ಲಿ ಯಾರಿಗೂ ಬಹುಮತ ಬರಲಿಲ್ಲ..
ಅದಕ್ಕೆ ಕಾರಣ ಆ ಕ್ಷೇತ್ರಗಳ ಅಭ್ಯರ್ಥಿಗಳು..
ಇಲ್ಲಿ ಪ್ರಧಾನಿ ಅಭ್ಯರ್ಥಿಗಳು ಮುಖ್ಯವಾಗುವುದಕ್ಕಿಂತ ನಮ್ಮ ಕ್ಷೇತ್ರದ ಅಭ್ಯರ್ಥಿಗಳು ನಮಗೆ ಮುಖ್ಯವಾಗುತ್ತಾರೆ.. ಏಕೆಂದರೆ ನಮಗೆ ಯಾವುದೇ ಸಂದರ್ಭ ಬಂದರೂ ನಾವು ಮತ ಹಾಕಿದವರನ್ನು ಕಾಣಲು ಧಾವಿಸುತ್ತೇವೆ..
ನೇರವಾಗಿ ಪ್ರಧಾನಿಯವರನಂತೂ ಸಂಪರ್ಕಿಸಲು ಸಾಧ್ಯವಿಲ್ಲ.. ಹಾಗಾಗಿ ಇಲ್ಲಿ ಯಾರಿಗೂ ಬಹುಮತ ಬಂದಿಲ್ಲ..
ಮತದಾರರ ಅಳಲು ಕೇಳುವಂತಹ ತಾಳ್ಮೆ ಗೆದ್ದ ಅಭ್ಯರ್ಥಿಗಳಿಗೆ ಎಲ್ಲಿದೆ ಗುರುಗಳೇ..!
ನಯವಿನಯವಿಲ್ಲದ ಅವರ ಮಾತುಗಳಿಂದ ಮತ್ತೊಮ್ಮೆ ವೋಟ್ ಮಾಡಲೇಬಾರದು ಅನ್ನಿಸುತ್ತದೆ.. ಇದಕ್ಕೆ ಅತೀ ದೊಡ್ಡ ಕಾರಣ ಇದು ಹಣ ಅಧಿಕಾರದ ಮದವಲ್ಲವೇ?

ಈ ದೇಶದ ಅಕ್ರಮಗಳನ್ನು ತಡೆಯುವಂತಹ ಅಧಿಕಾರಿಗಳನ್ನು ನಮ್ಮಲ್ಲಿ ಉಳಿಸಿಕೊಳ್ಳುವ ಯೋಗ್ಯತೆ ನಮ್ಮಗಳಿಗೆ ಉಳಿದಿಲ್ಲ..
ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಅಂದಿಗೂ , ಇಂದಿಗೂ ಕಾಡುತ್ತಿದೆ.. ಹಣವೇ ಎಲ್ಲದ್ದಕ್ಕೂ ಮೂಲ. ಇಂದು ಎಂತೆಂಥ ವ್ಯಕ್ತಿಗಳು ಮಾಡಬಾರದ ಕೆಲಸವನ್ನು ಮಾಡಿ ಗಳಿಸಿದ ಯಶಸ್ಸು ಮತ್ತು ಜನರ ನಂಬಿಕೆಗಳಿಗೆ ಪೆಟ್ಟು ಕೊಡುತ್ತಿದ್ದಾರೆ ..
ಇದಕ್ಕೆ ರಾಜಕಾರಣಿಯು ಹಾಗೂ ಸಿನಿಮಾ ನಟರು ಹೊರತಾಗಿಲ್ಲ. ಹಣದ ಮದವೊಂದೇ ಇಲ್ಲಿ ಆಳುತ್ತಾ ಇರುವುದು ಎನ್ನುವ ಸತ್ಯ ಇಲ್ಲಿಯವರೆಗೂ ನನಗೆ ತಿಳಿದಿದ್ದು..
ಯಾರು ಯಾರನ್ನು ಬದಲಾಯಿಸಲು ಈ ಪ್ರಪಂಚದಲ್ಲಿ ಸಾಧ್ಯವೇ ಇಲ್ಲ..
ಪ್ರಪಂಚ ಬದಲಾಗಬೇಕೆಂದಿದ್ದರೆ ನಿಮ್ಮಂತಹ ಜಗದ್ಗುರುಗಳಿಂದಲೇ ಸಾಧ್ಯ. ನಿಮ್ಮ ಒಂದೊಂದು ಲೇಖನವನ್ನು ಓದಿದಾಗಲೂ ಒಂದೊಂದೇ ವಿಚಾರದಲ್ಲಿ ಬದಲಾಗುತ್ತಾ ಬಂದಿದ್ದರೆ ಈಗ ನಾವು ಎಲ್ಲೋ ಇರುತ್ತಾ ಇದ್ದೆವು..
ಈ ಮಾತನ್ನು ಹೇಳುವುದಕ್ಕೆ ನನಗೆ ನಿಜವಾಗ್ಲೂ ತುಂಬಾ ದುಃಖವಾಗುತ್ತಿದೆ ಗುರುಗಳೇ..
ಲೇಖನ ಪದೇ ಪದೇ ಚಿಂತನೆಗೆ ಹಚ್ಚುವಂತಿದೆ ಗುರುಗಳೇ ಅಭಿನಂದನೆಗಳು..

ಶ್ರೀ ಮಠದ ಭಕ್ತಳು

ಕೆ.ಜಿ ಸರೋಜಾ ನಾಗರಾಜ್, ‌ ಪಾಂಡೋಮಟ್ಟಿ..