N-2680 
  03-10-2024 12:27 PM   
ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!
ಧರ್ಮ ಮತ್ತು ಕಾನೂನುಗಳು ಸಮನ್ವಯತೆಯನ್ನು ಸಾಧಿಸಿ, ಒಂದೇ ಸೂರಿ ನಡಿ ಬರುವುದು ಬಹು ಅಸಾಧ್ಯವಾದ ಮಾತೇ ಸರಿ! ಅಂತದ್ದರಲ್ಲಿ ಎರಡೂ ಒಂದೇ ಸೂರಿ ನಡಿ ಬಂದು ಸಾಧಿಸಿದಂತ ಉದಾಹರಣೆ ಬಡ ರೈತನಿಗೆ ದೊರೆತ ಜಯ, ಇತ್ತೀಚಿನ ದಿನಮಾನಗಳಲ್ಲಿ ಧರ್ಮ ಹಾಗೂ ಕಾನೂನುಗಳನ್ನು ಒಂದೇ ಸೂರಿ ನಡಿ ತರುವುದು ಅಸಾಧ್ಯವಾದ ಮಾತು, ಇಂತಹ ಅಸಾಧ್ಯವಾದದನ್ನು ಸಾಧ್ಯ ಮಾಡುವ ಖ್ಯಾತಿ ನಮ್ಮ ಶ್ರೀ ಗಳಿಗವರಿಗಷ್ಟೇ ಸಲ್ಲುತ್ತದೆ,
ಧರ್ಮದ ವಿವಿಧ ಅರ್ಥಗಳನ್ನು,ವ್ಯಾಖ್ಯಾನಗಳನ್ನು ಶ್ರೀಗಳು ಅತ್ಯಂತ
ಅಚ್ಚುಕಟ್ಟಾಗಿ ತಿಳಿಸಿದ್ದಾರೆ, ""ಮನೋ ಧರ್ಮಕ್ಕಿಂತ ಶ್ರೇಷ್ಠವಾದ ಧರ್ಮ ಪ್ರಪಂಚದಲ್ಲಿಯೇ ಇಲ್ಲವೆಂದು"" ಮಹಾಮಾತೆ
ಅಕ್ಕಮಹಾದೇವಿಯವರು ಒಂದೆಡೆ
ತಿಳಿಸಿರುತ್ತಾರೆ, ಅದರಂತೆ ನಮ್ಮ ಶ್ರೀಗಳ ಮನೋಧರ್ಮಕ್ಕಿಂತ,ದೊಡ್ಡ ಧರ್ಮ ಯಾವುದೂ ಇಲ್ಲ ಎಂದಿನಿಸುತ್ತಿದೆ, ಧರ್ಮ, ಕಾನೂನು,ಮಾನವೀಯತೆ, ಪರಿಸರ ಪ್ರಜ್ಞೆ, ರೈತ ಪರ ಕಾಳಜಿ, ಉತ್ತಮ ಆಡಳಿತ ನೀಡುವಲ್ಲಿ ರಾಜಕಾರಣಿಗಳಿಗೆ ಅವರ ಶಕ್ತಿಶಾಲಿ ನುಡಿಗಳು, ರೈತಪರ, ಜನಪರ ಅಭ್ಯುದಯಕ್ಕೆ ಯೋಜಿಸಬಹುದಾದ ಅವರ ಆಲೋಚನೆಗಳು, ಸಾಧಿಸಲಾಗದನ್ನು ಸಾಧಿಸಿ ತೋರುವ ಅವರ ಅಪ್ರತಿಮ ಜಾಣ್ಮೆ,ಅತಿ ಮುಖ್ಯವಾಗಿ ಅವರ ಸಹನೆ, ಸಂಪನ್ನತೆ, ಇವೆಲ್ಲವುಗಳ ಸಮ್ಮಿಲನವೇ ನಮ್ಮ ಶ್ರೀಗಳು, ಅಗಣ್ಯ, ಅದ್ಭುತ, ಅತ್ಯದ್ಭುತ,
ಧರ್ಮವನ್ನೇ ತಳಹದಿಯಾಗಿಟ್ಟುಕೊಂಡು, ಕಾನೂನಿನ ದಾರಿಯಲ್ಲಿ ಹೋಗುತ್ತಾ, ಘನ ನ್ಯಾಯಾಲಯಗಳು ಕೂಡ ಇವರ ತೀರ್ಮಾನಗಳನ್ನ ಒಪ್ಪುವ ಮಟ್ಟಿಗೆ, ಅಲ್ಲಿ ವಿಚಾರಣೆಯಲ್ಲಿರುವ ಹಲವಾರು ಕೇಸುಗಳಲ್ಲಿ ಸದ್ದರ್ಮ ನ್ಯಾಯ ಪೀಠದ ವಿಚಾರ ಬಂದಾಗ ದಾವೆಗಳನ್ನು ಶ್ರೀಮಠಕ್ಕೆ ವರ್ಗಾಯಿಸುವ ಮಟ್ಟಕ್ಕೆ ಬಂದಿರುವುದು ನಿಜಕ್ಕೆ,
ಧರ್ಮ ಹಾಗೂ ಕಾನೂನಿನ ಸಂಮ್ಮಿಳಿತವೇ ಸರಿ
ಸಮಾಜದ ಮರ್ಯಾದೆಯನ್ನು ಹಾಳು ಮಾಡುವಂತಹ ಮಠಾಧೀಶರಿರುವ ಇಂತಹ ಕಾಲದಲ್ಲಿ,ಈ ಸಮಾಜದಲ್ಲಿ ಹುಟ್ಟಿ ಇಂತಹ
ಶ್ರೀಗಳನ್ನು ಪಡೆದ ನಾವೇ ಧನ್ಯರು,
ಮಲ್ಲಾಪುರ ಶ್ರೀಧರ್
ದೊಡ್ಡಮಲ್ಲಾಪುರ