N-1817 

  05-10-2024 07:56 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ಧರ್ಮ ಮತ್ತು ಕಾನೂನಿನ ಮಧ್ಯೆ ತುಂಬಾ ಅಂತರವಿದೆ. ಕಾನೂನನ್ನು ಯಾರು ಹೇಗೆ ಬೇಕೋ ಹಾಗೆ ತಿರುಗಿಸಬಹುದು. ಆಂದರೆ ಅವರಿಗೆ ಬೇಕಾದ ಹಾಗೆ... ಧರ್ಮ ಹಾಗಲ್ಲ. ಅದಕ್ಕೆ ಅದರದೇ ಆದ ಕಟ್ಟುಪಾಡು ಇರುತ್ತದೆ.

ಇಂಥಾ ಮಹತ್ತರ ಕೆಲಸವನ್ನು ಅನೇಕ ದಶಕಗಳಿಂದಲೂ ಜಗದ್ಗುರುಗಳು ದಯಪಾಲಿಸುತ್ತಾ ಬಂದಿರುವದು ನಮ್ಮೆಲ್ಲರ ಹೆಮ್ಮೆ.
D N Basavaraj agrahara
ಅಗ್ರಹಾರ, ಹೊಳಲ್ಕೆರೆ ತಾ, ಕರ್ನಾಟಕ

N-1817 

  05-10-2024 07:17 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ಪೂಜ್ಯ ಗುರುಗಳವರ ಪಾದಕಮಲಗಳಿಗೆ ನಮಸ್ಕರಿಸುತ್ತಾ

ನ್ಯಾಯಾಲಯದಲ್ಲಿ ನ್ಯಾಯ ಸಿಗುವುದೇ ಇಲ್ಲ ಎನ್ನಲಾಗದು. ಶೇ 50 ಪ್ರಕರಣಗಳಲ್ಲಿ ಸಿಗುವುದಿಲ್ಲ.
ದೂರುದಾರ ವಕೀಲರಿಗೆ ಮಾಹಿತಿ ಕೊಡುವುದರಲ್ಲಿ ಸುಳ್ಳು ಹೇಳಿಕೆಗಳೇ ಜಾಸ್ತಿ. ಸಾಕ್ಷಿದಾರರ ಪ್ರಾಮಾಣಿಕತೆ ಬಹುತೇಕ ಕಡೆ ಇರದೇ ಕೋರ್ಟ್ ನಲ್ಲಿ ನಿಜ ನ್ಯಾಯ ಸಿಗುವುದಿಲ್ಲ.
ಪೂಜ್ಯರ ನ್ಯಾಯಸ್ಥಾನದಲ್ಲಿ ಪ್ರಮುಖ ಸಾಕ್ಷಿದಾರರು ಸಲಹೆ ಪಡೆಯುವುದರಿಂದ ನ್ಯಾಯ ಸಿಗುತ್ತದೆ. ಎನ್ನುವುದರಲ್ಲಿ ನಂಬಿಕೆ
ಜೈತರಳಬಾಳು!
ಮಹೇಶ್ B.R
ಸೂಗೂರ ಶಿವಮೊಗ್ಗ ತಾ

N-1817 

  05-10-2024 07:15 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ಪರಮಪೂಜ್ಯರ ಪಾದಾರವಿಂದಗಳಿಗೆ ನಮಸ್ಕರಿಸಿ
ನಿರಪರಾಧಿಗಳು ಶಿಕ್ಷೆಯಾಗಬೇಕೆಂದು ಎಂಬ ಸತ್ಯಾಂಶವನ್ನು ಸತ್ಯಶೋಧನೆಯನ್ನು ಪರಾಮರ್ಶಿಸಿದ ಸನ್ನಿವೇಶದ ಹಿನ್ನೆಲೆಯ ಪ್ರಸಂಗಗಳು ಬಹಳ ಸೂಕ್ಷ್ಮವಾಗಿವೆ. ತಮ್ಮೊಳಗಿನ ದಿವ್ಯದ್ರಷ್ಟಿಯಲ್ಲಿ ಇಂಥಹ ನ್ಯಾಯ ಸಿಗಲು ಸಾಧ್ಯತೆಯನ್ನು ಕಾಣಬಹುದಾಗಿದೆ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2683 

  05-10-2024 10:41 AM   

ಜಗತ್ತಿಗೆ ಬಸವಧರ್ಮ ಎಂದೆಂದಿಗೂ ಪ್ರಸ್ತುತ : ಶ‍್ರೀ ತರಳಬಾಳು ಜಗದ್ಗುರುಗಳವರು

 ನಮ್ಮಗುರುಗಳು ಮಾಗಡಿ ತಾಲೂಕು ರಾಮನಗರ ಜೆಲ್ಲೆ ಹುಲಿಕಲ್ ಗ್ರಾಮಕ್ಕೆ 3 10 2024ರಂದು ಶುಂಠಿ ಮಠಕ್ಕೆ ಬಂದು ಆಶೀರ್ವಾಚನ ನೀಡಿರುತ್ತಾರೆ ಬಹಳ ಖುಷಿ ಯಾಗಿದೆ 2014ರಲ್ಲಿ ಬಂದು ಆಶೀರ್ವಾಚನ ನೀಡಿದ್ದರು
ಕಲ್ಲೇಶ್
ತುರುವೇಕೆರೆ

N-2683 

  05-10-2024 08:53 AM   

ಜಗತ್ತಿಗೆ ಬಸವಧರ್ಮ ಎಂದೆಂದಿಗೂ ಪ್ರಸ್ತುತ : ಶ‍್ರೀ ತರಳಬಾಳು ಜಗದ್ಗುರುಗಳವರು

 ಬಸವಣ್ಣ ಮತ್ತು ಅವರ ಅನುಯಾಯಿಗಳು,ಶರಣರು ಸಮಾನತೆಯ ಹರಿಕಾರಾಗಿ ಅನುಭವ ಮಂಟಪ ಪರಿಕಲ್ಪನೆ ಎಂದರೆ ನಮ್ಮ ಸರ್ಕಾರ ದ ರಚನೆ.
ಇವರು ಜಗಕೆ ಮಾನವತೆ ಜ್ಯೋತಿ ಬೆಳಗಿದವರು . ಅದಕೆ `ಜಗಜ್ಯೋತಿ` ಬಸವೆಶ್ವರ ರಾಗಿ ಅಜರಾಮರ.
ಮತಾಂಧರಿಗೆ ಬಸವಣ್ಣನವರ,ಶರಣರ ವಚನಗಳು ದಾರಿದೀಪ ವಲ್ಲವೇ?
ಧೀರ್ಘ ದಂಡ ಪ್ರಣಾಮಗಳು.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2683 

  05-10-2024 08:11 AM   

ಜಗತ್ತಿಗೆ ಬಸವಧರ್ಮ ಎಂದೆಂದಿಗೂ ಪ್ರಸ್ತುತ : ಶ‍್ರೀ ತರಳಬಾಳು ಜಗದ್ಗುರುಗಳವರು

 World can achieve peace and prosperity only by adopting the principles of equality, soulfulness, devotion, humility and feeling of oneness taught by the Lord Jagajyoti Basavanna. Looking at the various political and communal tensions between several nations as on date, the principles of Basavanna can make big impact in bringing these tensions to minimum or null. Every creature must be treated equal. Everyone has right to live and achieve salvation. All this is possible only by acceptance, adoption and admiring the principles of Basavadharma. Spiritual gurus, Social Reformers and Lingayat leaders must take gaint steps to get parliamentary approval for this religion (Basava Dharma or Lingayata Dharma).
ಶರಣು ಶರಣಾರ್ಥಿಗಳು. 🙏
Prasanna U
Sirigere

N-2677 

  05-10-2024 01:38 AM   

ಮುತ್ತುಗದೂರು ಕೆರೆಗೆ ಹರಿದು ಬಂದ ತುಂಗಭದ್ರೆ

 ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. The yeoman services you have rendered will be there forever. *Excellent connection!*

The recent implementations in Sasvehalli and nearby villages demonstrate the project`s expansion and impact:

_Sasvehalli Village:_
1. Rejuvenated 3 defunct tanks, increasing water storage capacity by 30%.
2. Connected 5 surrounding villages through tank-to-tank connectivity.
3. Benefited 500+ farmers, improving crop yields by 25%.
4. Enhanced groundwater recharge, raising water tables by 2 meters.

_Nearby Villages:_

1. Hosur Village: Revitalized 2 tanks, supporting 300 farmers.
2. Kallur Village: Reconnected 4 tanks, benefiting 200 farmers.
3. Mallenahalli Village: Restored 1 tank, improving water security for 150 farmers.

*_Key Outcomes:*

1. Increased water availability for irrigation.
2. Improved crop diversity and yields.
3. Enhanced livelihoods for farmers.
4. Strengthened community engagement and ownership.

*_Lessons Learned:*_

1. Community participation is crucial for success.
2. Local leadership and ownership are vital.
3. Integration with existing government programs enhances impact.

_Future Plans for Sasvehalli and Nearby Villages:_

1. Expand tank connectivity to 10 more villages.
2. Introduce solar-powered pump sets.
3. Establish a farmer training center for sustainable agriculture practices.
4. Develop a water management mobile app for real-time monitoring.

1. Explore possibilities for scaling up the project.
2. Discuss strategies for sustaining community engagement.
3. Learn more about the project`s monitoring and evaluation framework.
4. Understand the role of government partnerships in the project`s success.👏 Yours Prabhudev M S
Prabhudev M S
SHIVAMOGGA

N-2682 

  04-10-2024 06:05 PM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 ಏತ ನೀರಾವರಿ ಯೋಜನೆಗಳಿಂದ ಬರಪೀಡಿತ ಪ್ರದೇಶ ಅಭಿವೃದ್ಧಿ ಅವಶ್ಯ ಎಂದು ಕೇಂದ್ರ ಕೃಷಿ ಸಂಶೋಧನಾ ನಿರ್ದೇಶಕ ಸುಬ್ರಮಣoತಿಳಿಸಿರುತ್ತಾರೆ
ಪೂಜ್ಯರ ಯೋಜನೆಗಳು ಪೂರಕವಾಗಿವೆ ನದಿ ನೀರು ಸಮುದ್ರ ಸೇರುತ್ತಿದ್ದು ಯೋಜನೆಗಳಿಂದ ಬಳಕೆ ಮಾಡಿಕೊಳ್ಳಬೇಕಾಗಿದೆ ಜನರ ಬದುಕು ಹಸನುಗೊಳ್ಳುತ್ತಾದೆ ಪೂಜ್ಯರ ಕಾರ್ಯ ಅಭಿನಂದನಾರ್ಹವಾಗಿದೆ.
🙏🙏🙏🚩🚩🚩
ಮಹೇಶ್ B.R
ಸೂಗೂರ ಶಿವಮೊಗ್ಗ ತಾ

N-2682 

  04-10-2024 02:59 PM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 Baragala peedita pradeshgalige bega&tvarithagatiyalli kelasa sagabeku
Manohara A T
kadur chikmagalore karnataka

N-2682 

  04-10-2024 01:44 PM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 Which is most useful to the Society.
H M Maheswarappa
Shivamogga/Karnataka/India

N-2682 

  04-10-2024 12:23 PM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 ಬರದ ನಾಡಿನ ಭಗಿರಥ ರಾಗಿದ್ದೀರಿ ನೀವು ಅನಂತ ಕೋಟಿ ನಮನಗಳು
ರೈತರ ಜೀವನಾಡಿಗಳು ನೀವು
subhash s Shirageri
Ranibennur

N-2682 

  04-10-2024 11:43 AM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 `ಏತ,`ನೀರಾವರಿ ಯೋಜನೆಗಳು ಏತಕ್ಕೆ ಬೇಕು ಅಂದ್ರೆ ,ನೀರಾವರಿ ಸೌಲಭ್ಯ ಇರುವ ಪ್ರದೇಶದಂತೆ
ಬಯಲು ಸೀಮೆಯ ಜನರು ಕೂಡ ಯಾವುದೇ ವರಿ ಇಲ್ಲದೆ ನೀರಾವರಿಯ ಜನಕ್ಕೆ ತಕ್ಕಂತೆ ಬೆಳೆ ಬೆಳೆಯಲು, ಬದುಕಲು ಕಾರಣವಲ್ಲವೆ.
ಇದರ ನಿಟ್ಟಿನಲ್ಲಿ ತರಳಬಾಳು ಶ್ರೀಗಳು, ಸರ್ಕಾರ ಜೂತೆ ನೀರಾವರಿ ಹೋರಾಟ ಮಾಡಿ ಜಲ ಭಗೀರಥರಾದರು. ರೈತರಿಗೆ ನೀರುಣಿಸಿದರೆ. ಸರ್ಕಾರ ಕೆ ರೈತರು ಸಾಲಕೂಡುವಷ್ಟು ಸಾಹುಕಾರರು ಆಗುತ್ತಾರೆ.ಎಂದು ಶ್ರೀಗಳ ಆಶಯ.ಇಲ್ಲಿ ಯಾವುದೇ ರೀತಿಯ ರಾಜಕೀಯ ಕಾರಣಗಳಿಲ್ಲ ,ಬರೀ ಜಲ ಕಾರಣ ಮಾತ್ರ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2680 

  04-10-2024 09:01 AM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಪೂಜ್ಯರ ಅಡಿದಾವರೆಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳು.
ಧರ್ಮ ಮತ್ತು ಕಾನೂನು ಕೈ ಜೋಡಿಸಿದಾಗ!

ಪೂಜ್ಯರು ಇಂದಿನ ಅಂಕಣದಲ್ಲಿ ಧರ್ಮ ಮತ್ತು ಕಾನೂನಿನ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಧರ್ಮ ಮತ್ತು ಕಾನೂನು ಕೈ ಜೋಡಿಸಿದರೆ ಏನಾಗುತ್ತದೆ ಎಂದರೆ ಮುತ್ತುಗದೂರು ಮತ್ತು ಅಲ್ಲಿನ ಸುತ್ತಮುತ್ತಲ ಹಳ್ಳಿಯ ರೈತರ ಬಾಳು ಬಂಗಾರವಾಯಿತು. ಮತ್ತು ಆ ಒಬ್ಬ ರೈತನಿಗೆ ಸಿಕ್ಕ ನ್ಯಾಯ ಅವರ ನಿರೀಕ್ಷೆಗೂ ಮೀರಿದ ಹಣವು ಅವರಿಗೆ ಸಿಕ್ಕಿದೆ. ಇದಕ್ಕೆಲ್ಲ ಕಾರಣರಾದ ತಮಗೆ ಜನರು ಎಷ್ಟು ಚಿರಋಣಿ ಯಾಗಿದ್ದರೂ ಸಾಲದು.

ಈ ಅಂಕಣವನ್ನು ಓದಿದ ಮೇಲೆ ನನ್ನ ಮನಸ್ಸಿಗೆ ಅನಿಸಿದ್ದು
*ಗುರುವೇ ನಿಮ್ಮನ್ನು ನಂಬಿ ಕೆಟ್ಟವರಿಲ್ಲ
ಗುರುವೇ ನಿಮ್ಮನ್ನು ನೋಯಿಸಿ ನೆಮ್ಮದಿಯಿಂದ ಬದುಕುಳಿದವರಿಲ್ಲ*.

ಶ್ರೀಮತಿ ವಿದ್ಯಾಮೂರ್ತಿ.
Goppenahalli.
ವಿದ್ಯಾಮೂರ್ತಿ
Goppenahalli

N-2680 

  04-10-2024 08:05 AM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಶರಣು ಶರಣು

ಜ್ಞಾನ ಸಂಪಾದನೆ, ಲೋಕ ವಿವೇಚನೆ ಇರುವ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶ್ರೀ ಡಾ .ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು
ವಿಶ್ವ ಗುರು. ಇಂಥ ಗುರುಗಳನ್ನ ಪಡೆದ ಭಕ್ತರೆ ಧನ್ಯರು
ಶ್ರೀ ತರಳಬಾಳು ಜಗದ್ಗುರು ಜೈ
ಭಕ್ತರ ಸಾಮ್ರಾಜ್ಯ ಸೃಷ್ಟಿಸುವ ಶಕ್ತಿ ನಮ್ಮ ಮಠ ನಮ್ಮ ಗುರುಗಳ ಒಳ್ಳೆಯ ಸಂದೇಶ ಒಳ್ಳೆಯ ಕಾರ್ಯಗಳೆ ಶಕ್ತಿ

ಸಿ. ಆರ್. ರಾಮನಗೌಡ. ಸಂಗಮೇಶ್ವರ
ಸಿ. ಆರ್. ರಾಮನಗೌಡ
ಸಂಗಮೇಶ್ವರ

N-2680 

  03-10-2024 08:23 PM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಶ್ರೀಗಳವರ ಲೇಖನವನ್ನು ಓದಿದೆ. ನ್ಯಾಯ ವಿಚಾರಣೆಯಲ್ಲಿ ಧರ್ಮ ಇರಬೇಕು. ನ್ಯಾಯ ಕೇಳಿ ಬಂದವರಿಗೆ ನ್ಯಾಯ ಸಿಗಬೇಕು. ನ್ಯಾಯ ವಿಳಂಬವಾಗಬಾರದು.ಈಗ ನಮ್ಮ ದೇಶದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿ ಮುಖದಮೆಗಳು ವಿಚಾರಣೆ ಹಂತದಲ್ಲಿವೆ ತಿಳಿದು ಬಂದಿದೆ. ಎವಿಡೆನ್ಸ್ ಪಾರ್ಟಿ ಸವಾಲು, ವಾದ ವಿವಾದ ಕೊನೆಗೆ ನಿರ್ಣಯ ಇವೆಲ್ಲ ಆಗಬೇಕು. ಅಂದರೆ ಸುಮಾರು 500 ವರ್ಷಗಳು ಬೇಕು.
ಕೆ. ಸಿದ್ದನಗೌಡ.
ಉಜ್ಜಯಿನಿ. ವಿಜಯನಗರ ಜಿಲ್ಲೆ.

N-2680 

  03-10-2024 08:17 PM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಶ್ರೀಗಳ ವರ ಲೇಖನವನ್ನು ಓದಿದೆ. ಕಾನೂನಿನಲ್ಲಿ ಧರ್ಮ ಸೇರಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನ್ಯಾಯ ವಿಳಂಬವಾಗಬಾರದು. ಒಂದು ವರದಿ ಪ್ರಕಾರ ಸುಮಾರು ಐದು ಕೋಟಿ ಮೊಕದ್ದಮೆಗಳು ವಿಚಾರಣೆ ಹಂತದಲ್ಲಿವೆ ಒಂದು ತಿಳಿದು ಬಂದಿದೆ. ಇವೆಲ್ಲ ಬಗೆಯರಿ ಬೇಕೆಂದರೆ ಸುಮಾರು 500 ವರ್ಷಗಳು ಬೇಕು. ಹಲವಾರು ವರ್ಷದವರಿಗೆ ವಿಚಾರಣೆ ಮುಂದುವರಿಯುತ್ತದೆ . ಅಷ್ಟರೊಳಗೆ ಕಕ್ಷಿದಾರರೇ ಸಾಯಬಹುದು . ಆದಷ್ಟು ಅಜ್ಜಾರ್ನಿಗಳು ಕಡಿಮೆಯಾಗಬೇಕು. ಈಗಿನ ವಕೀಲರನ ಮಾತನಾಡಿಸುವಂತಿಲ್ಲ. ಪ್ರತಿ ಮಾತಿಗೂ ದುಡ್ಡು ಕೊಡಬೇಕು. ಬಡ ಕಕ್ಷಿದಾರ ಏನು ಮಾಡುತ್ತಾನೆ. ನ್ಯಾಯದಲ್ಲಿ ಧರ್ಮ ಇರಲಿ ಎಂದು ಆಶಿಸುತ್ತಾ ಈ ಸಣ್ಣ ಲೇಖನ ಮುಗಿಸುತ್ತೇನೆ. ಸಿದ್ದನಗೌಡ ಉಜ್ಜಯಿನಿ
ಕೆ. ಸಿದ್ದನಗೌಡ.
ಉಜ್ಜಯಿನಿ. ವಿಜಯನಗರ ಜಿಲ್ಲೆ.

N-2680 

  03-10-2024 08:05 PM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಪೂಜ್ಯ ಗುರುವರ್ಯರ ಪಾದಕಮಲಗಳಲ್ಲಿ ನಮಸ್ಕರಿಸುತ್ತಾ

ತುಂಗಾಭದ್ರಾ ನದಿಯಿಂದ ಮಹತ್ವಾಕಾಂಕ್ಷಿ 121 ಕೆರೆ ತುಂಬುವ ಏತ ನೀರಾವರಿ ಸಾಸ್ವೇಹಳ್ಳಿ ಯೋಜನೆ ಸಮಯದಲ್ಲಿ ರೈತನಿಗೆ ನ್ಯಾಯ ಒದಗಿಸುವಲ್ಲಿ
ಪೂಜ್ಯರ ಕಾರ್ಯದಿಂದ ರೈತನು ಕಾಮಗಾರಿಗೆ ಅನುಮತಿಸಿದ್ದು ಈಗ 6ರಿಂದ 8 ಕೋಟಿ ರೈತನಿಗೆ ಪರಿಹಾರ ಒದಗಿದ್ದು ಸ್ವಾಗತಾರ್ಹ ಕಾರ್ಯವಾಗಿದೆ. ನೊಂದ ರೈತ ನೆಮ್ಮದಿ ಪಡೆಯುವಂತಾಗಿದೆ
ಪೂಜ್ಯರ ಪಾದಕಮಲಗಳಿಗೆ ನಮಸ್ಕರಿಸುತ್ತಾ
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್ ||
ಓಂ ಶಾಂತಿಃ, ಶಾಂತಿಃ ಶಾಂತಿಃ! – ಶಾಂತಿಮಂತ್ರ
ಜೈತರಳಬಾಳು
ಮಹೇಶ್ ಸೂಗೂರು
ಸೂಗೂರ ಶಿವಮೊಗ್ಗ ತಾ

N-2483 

  03-10-2024 04:07 PM   

ಮದ್ರಾಸ್ ಹೈಕೋರ್ಟಿನ ‘ಪೂರ್ಣಪೀಠ’ದ ಮುಂದೆ...

 Dharma is above the Law
H M Maheswarappa
Shivamogga,Karnataka,India

N-2680 

  03-10-2024 02:43 PM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಜೈ ಶ್ರೀ ತರಳಬಾಳು. ಗುರುಗಳ ಪಾದಾರ ವಿಂದ ಗಳಿಗೆ ನಮೋ ನಮಃ.
Virupakshappa.C.G.
Chinnasamudra.Dvg, Karnataka.

N-2680 

  03-10-2024 02:20 PM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

 ಪೂಜ್ಯ ಗುರುಗಳಲ್ಲಿ ವಂದಿಸುತ್ತಾ,

ಇಂದಿನ ಲೇಖನ ಸಮಯೋಚಿತ ಮತ್ತು ಅರ್ಥಪೂರ್ಣ. ಬಹಳಷ್ಟು ಮಠದ ಸ್ವಾಮಿಗಳು ಮಂತ್ರಗಳನ್ನು, ಶ್ಲೋಕ ಗಳನ್ನು ಮತ್ತು ವಚನಗಳನ್ನು ತಮ್ಮ ಪೂಜೆ, ಭಾಷಣಗಳಲ್ಲಿ ಉಪಯೋಗಿಸಿದರೆ ತಾವು ಬಿಸಿಲು ಬೆಳದಿಂಗಳು ಅಂಕಣದಲ್ಲಿ ಎಲ್ಲ ಶ್ಲೋಕ, ಮಂತ್ರಗಳನ್ನು ಶರಣರ ಮತ್ತು ಪ್ರಸ್ತುತ ವಿಷಯದ ಬಗ್ಗೆ ಉದಾಹರಣೆ ಕೊಟ್ಟು ವಚನಗಳ ಮೂಲಕ ತಿಳಿ ಹೇಳುವುದೇ ವಿಶೇಷ. ನಮ್ಮ ಧರ್ಮ ಶ್ರೇಷ್ಠವೋ ನಿಮ್ಮದೋ ಎಂದು ಧರ್ಮಾಂಧತೆಯನ್ನ ಬಿತ್ತುವರು ತಮ್ಮ ಅಂಕಣವನ್ನು ಸದಾ ಓದಬೇಕು. ಬರೀ ಸ್ವಾಮೀಜಿಗಳಾದರೆ ಸಾಲದು, ಈಗಿನ ವಿಧ್ಯಮಾನದಲ್ಲಿ, ಸಾಮಾಜಿಕ , ಆರ್ಥಿಕ, ವಿಜ್ಞಾನದಂತ ವಿಷಯವನ್ನು ಸಂಶೋಧಿಸಿ ಅದನ್ನು ಮಾನವ ಕುಲದ ಒಳಿತಿಗೆ ಬಳಸುವರೆ ನಿಜವಾದ ಜಗದ್ಗುರು. ಅದನ್ನು ಅಕ್ಷರಶ ಅನುಸರಿಸುತ್ತಿರುವರು ತರಳಬಾಳು ಜಗದ್ಗುರುಗಳು. ಕಳೆದ ಒಂದೂವರೆ ದಶಕದಿಂದ ತಮ್ಮ ಅಂಕಣವನ್ನು ಓದುತ್ತಾ ಬಂದಿರುವ ಅದೆಷ್ಟೋ ಹೃದಯಗಳು ಈಗಾಗಲೇ ಧರ್ಮ ಯಾವುದು ಕಾನೂನು ಯಾವುದು, ಅಲ್ಲಿರುವ ಸೂಕ್ಷ್ಮತೆ, ಕೂದಳಲೇ ಅಂತರದ ಆಳವನ್ನು ಅರಿಯುತ್ತಿವೆ ಎಂಬುದು ನನ್ನ ಅಂಬೋಣ. ತಾವು ಹೆಸರಿಸಿದ ರೈತನ ಜಮೀನಿನ ನ್ಯಾಯವನ್ನು ಸದ್ದರ್ಮ ಪೀಠ ಆಯಾ ತೀರ್ಪನ್ನು ಕೊಡಲು ಸಾಧ್ಯವೇ ಹೊರತು ಕಾನೂನಿಂದ ರಚಿತ ನ್ಯಾಯಾಲಗಳಿಗೆ ತಮ್ಮ ತೀರ್ಪನ್ನು ಈ ರೀತಿ ಮಂಡಿಸುವ ನಮ್ಯತೆ ಸಾಧ್ಯವಾಗುವುದಿಲ್ಲ. ಮಧ್ಯ ಪ್ರಸ್ತಾಪಿಸಿದ “ಶ್ರೇಯಾಂಸಿ ಬಹು ವಿಘ್ನಾನಿ” (ಒಳ್ಳೆಯ ಕಾರ್ಯಗಳಿಗೆ ಅನೇಕ ವಿಘ್ನಗಳು) ಶ್ಲೋಕ ಮನಸಿಗೆ ತುಂಬಾ ಹಿಡಿಸಿತು. ತುಂಗಭದ್ರೆ ಇನ್ನು ಹರಿಯಲಿ, ರೈತರು ಸದಾ ಹಸನ್ಮುಖಿಗಳಾಗಲಿ....
Chandru
ಬೆಂಗಳೂರು