N-2623 
  23-08-2024 08:55 PM   
‘ಖೂನಿ’ ಮಾಡಿಸಿದ್ದಾರೆಂದು ದೊಡ್ಡ ಗುರುಗಳ ಮೇಲೆ ಆಗಿನ ರಾಜಕಾರಣಿಗಳು ಮಾಡಿದ್ದ ಸುಳ್ಳು ಆರೋಪ!
ಹಿರಿಯ ತರಳಬಾಳು ಶ್ರೀಗಳ ದಿಟ್ಟ ಹೆಜ್ಜೆಯ ಗುರುತೇ ಈಗಿನ ಶ್ರೀ ಗಳು.
ತಾವು ಕೂಡ ಅವರಂತೆ ಧೀರಕ್ರಮದಲ್ಲಿ ಸದ್ಧರ್ಮವಾಗಿರುವುದು ನಮ್ಮ ಸಮಾಜದಲ್ಲಿನ ಧರ್ಮದ ಪ್ರತೀಕ.
ಕೆಲವರು ಚಟಕ್ಕೆ, ಹಠಕ್ಕೆ ಬಿದ್ದು ಹಂದಿಯಂತಿದ್ದು ಧರ್ಮದ ತಿರುಳಿರುವುದಿಲ್ಲಾ.
ಗುರುವಿನ ಅಂತರ್ಯದ ಅರಿವಾದಾಗ ಕುರುಕ್ಷೇತ್ರ ಹೋಗುತ್ತದೆ, ಗುರು ಕ್ಷೇತ್ರ ಬರುತ್ತದೆ.ಗುರುವೇ ದಿವ್ಯಶಕ್ತಿ, ಅಂತಹ ಗುರುವಿನ ದಿವ್ಯಶಕ್ತಿಯೇ ತಾವು.
ಗುರುಪರಂಪರೆಯಲ್ಲಿನ ದುರಂತಗಳೇ ಪೀಠದ ಅಧಮ್ಯ ಶಕ್ತಿ ಯಾಗಿ ಮಾರ್ಪಟ್ಟಿದೆ ಅಂದರೂ ತಪ್ಪಿಲ್ಲ.
ಸತ್ಯಂ ಶಿವಂ ಸುಂದರಂ . ಪ್ರಾಪಂಚಿಕ ಸತ್ಯ, ಆದರೆ ಕೆಲವರು ನಿತ್ಯಂ ಮಿತ್ಯಂ ಸುಂದರ.....ರಂ(ಮ್) ಎಂದು ಅವರವರ ಮನಸಿನ ಉತ್ಕಟ ಕುಟುಕು ಇಚ್ಛೆ.ಸಾಧಕರ
ಮಾರ್ಗದ ದೀಪವೇ ಗುರುತ್ವ ವಲ್ಲವೇ?
೧.ರಾಮಕೃಷ್ಟ ಪರಮಹಂಸರು ನರೇಂದ್ರನನ್ನು ವಿವೇಕಾನಂದರಾದಂತೆ
೨.ನವಕೋಟಿ ನಾರಾಯಣ ಶ್ರೀನಿವಾಸ ಚಾರ್ಯರಿಂದ ಪುರಂದರದಾಸರು ಆದಂತೆ.
ಸಾಧು ಸಮಾಜದ ಧೈರ್ಯ ಸಿಂಹ ,ಭಕ್ತರಹೃದಯ ಸಿಂಹಾಸನಾಧೀಶ್ವರ ಗುರುಆರ್ಶೀವಾದದ ಫಲವೇ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ರಾದಂತೆ.ತರಳಬಾಳು ಗುರುಪರಂಪರೆಯ ಚಿರಮಭಿ ವರ್ಧತಾಂ ತರಳ ಬಾಳು ಸಂತಾನಶ್ರೀ.....ಗಳಾಗಿ ಶ್ರೀಮಠದ, ಸಮಾಜದ ಏಳಿಗೆಗೆ ಶ್ರಮಿಸಿದ್ದೀರಿ.
ತನು ಶುದ್ದಿಯಿಲ್ಲದವಂಗೆ ತೀರ್ಥದ ಫಲವೇನು?
ಮನಶುದ್ದಿ ಯಿಲ್ಲದವಂಗೆ ಮಂತ್ರದ ಫಲವೇನು?.
"ಭಕ್ತರಾದೂಡೆ ಭಯ ಭಕ್ತಿ ತುಂಬಿರಬೇಕು"
ಗುರುನಡೆ ಶುದ್ಧ ,ಹಾಂಗೇ ಭಕ್ತರ ನಡೆ ಶುದ್ಧವಾಗಿರಬೇಕು.
ಹರಮುನಿದರೆ ಗುರುಕಾಯ್ವನು,ಗುರು ಮುನಿದರೆ ಇನ್ಯಾರಿಗೆ ಹೇಳಬೇಕು?.
ಏನೇ ಆಗಲಿ ನಿಮ್ಮೊಲುಮೆ ನಿಷ್ಠೆ ಭಕ್ತರ ಮೇಲಿರಲಿ,ಕೈ ಹಿಡಿದು. ಎಲ್ಲರನ್ನು ನೀವು ನೆಡಿಸಿರೆಂದು ಪಾದಕಮಲಗಳಲ್ಲಿ ಪ್ರಾರ್ಥನೆ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ