N-2619 
  22-08-2024 12:12 PM   
ಅಧಿಕಾರ ಮತ್ತು ಸಂಪತ್ತಿನ ಹಪಾಹಪಿ!
ಪರಮಪೂಜ್ಯ ಜಗದ್ಗುರುಗಳವರಿಗೆ ಭಕ್ತಿ ಪೂರ್ವಕ ಪರಿಣಾಮಗಳು.
ಪರಮಪೂಜ್ಯ ಶ್ರೀ ಗಳವರು ತಮ್ಮ ಪೂರ್ವಾಶ್ರಮ ತಂದೆ ತಾಯಿಯವರವನ್ನು ಮನೆಯನ್ನುಬಿಟ್ಟು, ವಿದೇಶದಲ್ಲಿ ವ್ಯಾಸಂಗ ಮಾಡಿದ್ದರು ಹಿರಿಯ ಜಗದ್ಗುರುಗಳವರ ಮಾರ್ಗದರ್ಶನದಂತೆ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
"ಸಮಾಜಕ್ಕಾಗಿ ಪೂಜ್ಯಶ್ರೀಗಳವರ ಕೊಡುಗೆ ಅಪಾರ " ಸಮಾಜದ ಎಲ್ಲ ವರ್ಗದವರಿಗೂ ಒಳಿತನ್ನು ಬಯಸಿರುವವರು ಪೂಜ್ಯಶ್ರೀಗಳವರು.
1)ಸೂಳೆಕೆರೆಯಿಂದ ಸಿರಿಗೆರೆ ಹಾಗೂ ಸುತ್ತಮುತ್ತ ಎಲ್ಲಾ ಜನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
2) ಎಲ್ಲ ವರ್ಗದ ಜನರಿಗೆ ನ್ಯಾಯ ಪೀಠದಲ್ಲಿ ನ್ಯಾಯ
3) ನೂರಾರು ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿರುವುದು
4) ಬಡ ಮಕ್ಕಳಿಗೆ ಉಚಿತ ಊಟ ವಸತಿ ಶಿಕ್ಷಣದ ವ್ಯವಸ್ಥೆ
ಆಧುನಿಕ ಬಸವಣ್ಣನವರ ರೀತಿಯಲ್ಲಿ ಸಮಾಜವನ್ನು ಮೇಲೆತ್ತುವ ಕಾರ್ಯವನ್ನು ಮಾಡಿರುವ ಪೂಜ್ಯಶ್ರೀಗಳವರು.....
ಲೇಖನದಲ್ಲಿ ಉಲ್ಲೇಖಿಸಿರುವಂತೆ
ಅಧಿಕಾರ ಮತ್ತು ಅಂತಸ್ತಿಗೆ ಅಪಹಪಿಸುವ ಜನ ಯಾವತ್ತೂ ಕೂಡ ಸಮಾಜದ ಒಳಿತಿಗಾಗಿ ಸಮಾಜದ ಉದ್ದಾರಕ್ಕಾಗಿ ಒಳ್ಳೆಯ ಮಾರ್ಗದಲ್ಲಿ ನಡೆದುಕೊಂಡಿರುವುದಿಲ್ಲ. ಸಮಾಜದಲ್ಲಿ ಇದ್ದರೆ ತಮಗೆನು ಲಾಭ ಎಂದು ಯೋಚಿಸುತ್ತಾರೆ ಲಾಭ ಇಲ್ಲದಿದ್ದರೆ ಇಲ್ಲಿ ಒಂದು ಗಳಿಗೆಯೂ ಇರಲು ಬಯಸುವುದಿಲ್ಲ. ಇವರು ಒಂದು ರೀತಿಯ ಬಂಡವಾಳ ಶಾಹಿಗಳು, ಸಮಾಜದಲ್ಲಿ ಒಳಿತನ್ನು ಮಾಡುವ ಹಾಗೆ ನಟನೆ ಮಾಡುವ ಮುಖವಾಡವನ್ನು ಧರಿಸಿರುವರು..... ಮುಖವಾಡ ಧರಿಸಿ ನಟನೆ ಮಾಡುವವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ...
ಜೈ ತರಳಬಾಳು
ಜೈ ಶ್ರೀ 1108 ಡಾ:ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ....
ಸಂದೀಪ್ ಹೆಂಚಿನಮನೆ
ಸಿರಿಗೆರೆ