N-2619 
  23-08-2024 08:46 AM   
ಅಧಿಕಾರ ಮತ್ತು ಸಂಪತ್ತಿನ ಹಪಾಹಪಿ!
ಪೂಜ್ಯ ಗುರುಗಳಿಗೆ ಶಿರಬಾಗಿ ನಮಸ್ಕರಿಸುತ್ತಾ
ಹಿರಿಯ ಲಿಂಗೈಕ್ಯ ಜಗದ್ಗುರುಗಳು ಸಮಾಜವನ್ನು ಒಗ್ಗೂಡಿಸಿದರು ಆ ಒಗ್ಗೂಡಿಸಿದ ಸಮಾಜಕ್ಕೆ ಸೂಕ್ತ ಸ್ಥಾನಮಾನ ರಾಜ್ಯ ಅಂತರಾಜ್ಯದಲ್ಲಿ ದೇಶ ವಿದೇಶಗಳಲ್ಲಿ ಬೆಳೆಸಿದ ಕೀರ್ತಿ ನಮ್ಮ ಜಗದ್ಗುರುಗಳದ್ದು. ಅಷ್ಟೇ ಅಲ್ಲದೆ ರೈತರ ಒಡನಾಡಿಯಾಗಿ ಆಧುನಿಕ ಭಗೀರಥರಾಗಿ ಸಮಾಜಕ್ಕೆ ಭಕ್ತರಿಗೆ ಸದಾ ಸ್ಪೂರ್ತಿ ಶಿಲೆಯಾಗಿರುವ ನಮ್ಮ ಜಗದ್ಗುರುಗಳನ್ನು ನಮ್ಮದೇ ಸಮಾಜದವರು ನಿಂದಿಸಿರುವುದು ನಮಗೆ ತುಂಬಾ ನೋವುಂಟು ಮಾಡಿದೆ.
ಇಂತಹ ನೂರು ಸಮಾಜಘಾತಕ ವ್ಯಕ್ತಿಗಳು ನಮ್ಮ ಗುರುಗಳ ಮೇಲೆ ಅಪವಾದ ಮಾಡಿದರು ಅದನ್ನು ಎದುರಿಸಿ ಅದಕ್ಕೆ ತಕ್ಕ ಉತ್ತರ ಕೊಡುವ ಬುದ್ಧಿವಂತಿಕೆ ನಮ್ಮ ಗುರುಗಳಿಗಿದೆ. ಇಂದು ಎಂದಿಗೂ ನಮಗೆ ನೀವೇ ಮಾರ್ಗದರ್ಶಿಗಳು ನೀವೇ ನಮ್ಮ ಮಠದ ಪೀಠಾಧಿಪತಿಗಳು ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತಾ..
ಬಂದೋಳ್ ಮಂಜುನಾಥ್
ಅಧ್ಯಕ್ಷರು ತಾಲೂಕು ಸಾಧು ಲಿಂಗಾಯತ ಸಮಾಜ ಹರಪನಹಳ್ಳಿ
ಬಂದೋಳ್ ಮಂಜುನಾಥ್
ಗುಂಡಗತ್ತಿ ಹರಪ್ಪನಹಳ್ಳಿ ತಾಲೂಕು