N-1495 
  21-08-2024 08:58 PM   
ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ
ನಮಸ್ತೆ ಗುರುಗಳೇ..
"ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ ."
ಇಂದಿನ ಪರಿಸ್ಥಿತಿಗೇ ಅಂದೆ ಲೇಖನವನ್ನು ಬರೆದಿದ್ದೀರಿ ನೀವುಗಳು..
ಆದರೆ ಅದನ್ನು ಓದುವಂತ ತಾಳ್ಮೆ , ಮನಸ್ಸು ಇರಬೇಕಲ್ಲ ಕಿಡಿಗೇಡಿಗಳಿಗೆ..
ಅಮ್ಮ...
ಈ ಭೂಮಿಗೆ ನಮ್ಮನ್ನು ತಂದ ದೇವತೆ. ಉಸಿರು ನೀಡಿದ ಜನ್ಮದಾತೆ. ದಾರಿ ತೋರಿದ ಗುರು. ಜಗತ್ತಿನಲ್ಲಿ ಅತ್ಯಂತ ವಿಶಾಲವಾದ, ನಿಷ್ಕಲ್ಮಷವಾದ ಪ್ರೀತಿ ತಾಯಿಯದ್ದು. ಆಕೆಯ ಪ್ರೀತಿಗೆ, ತ್ಯಾಗಕ್ಕೆ ಬೆಲೆ ಕಟ್ಟಲು ಅಥವಾ ಅದನ್ನು ಮರಕಳಿಸಲು ಸಾಧ್ಯವೇ ಇಲ್ಲ. ..
ಆದರೂ ಅದೆಷ್ಟು ಮನಸ್ಸನ್ನು ಗಟ್ಟಿಮಾಡಿಕೊಂಡು ಧರ್ಮವನ್ನು ಪರಿಪಾಲನೆ ಮಾಡಿದ್ದೀರಿ ಗುರುಗಳೇ ಆ ಕ್ಷಣದಲ್ಲಿ ನಿಮ್ಮ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲು ಕೂಡ ಅಸಾಧ್ಯ..
ಅಮ್ಮಾ ಕಣ್ಣಿಗೆ ಕಾಣುವ ದೇವರು. ತನ್ನ ಕುಟುಂಬ, ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಟ್ಟವಳು ಅಮ್ಮ. ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ವಾತ್ಸಲ್ಯ ಮೂರ್ತಿ ಅಂತ ದೇವತೆಯನ್ನೇ ತೊರೆದು ಬಂದಿರುವಂತ ನಿಮ್ಮ ತ್ಯಾಗಕ್ಕೆ ಯಾರು ಕೂಡ ಬೆಲೆ ಕಟ್ಟಲು ಸಾಧ್ಯವಿಲ್ಲ..
ನಿಮ್ಮಗಳ ಬಗ್ಗೆ ಮಾತನಡುವುದಕ್ಕೂ ಒಂದಲ್ಲ ನೂರು ಬಾರಿ ಆಲೋಚನೆ ಮಾಡಬೇಕು..
ಕರುಳ ಸಂಬಂಧವನ್ನೇ ತೊರೆದು ಬರುವುದು ಸಾಮಾನ್ಯರಿಂದ ಸಾಧ್ಯವಿಲ್ಲ..
“ಮಠ ಮತ್ತು ಸಮಾಜದ ಋಣದಲ್ಲಿ ನಾನು ಸಾಯಬಾರದು, ನಿಮಗೆ ಕೆಟ್ಟ ಹೆಸರು ಬರಬಾರದು! ತೆಗೆದುಕೊಳ್ಳಿ “ ಎಂದು ಹೇಳಿದಾಗ ನಮ್ಮ ಹೃದಯ ಕಲಕಿತು. ಕಂಠ ಬಿಗಿಯಿತು. ಸೌಜನ್ಯಕ್ಕಾದರೂ ಬೇಡವೆಂದು ಹೇಳಲು ಆಶ್ರಮಧರ್ಮ ಒಪ್ಪಲಿಲ್ಲ! ವೆಂದು ಅದೆಷ್ಟು ನೋವಿನಿಂದ ಹೇಳಿದ್ದೀರಿ ಗುರುಗಳೇ..
ಒಬ್ಬ ತಾಯಿಯ ಮನಸ್ಸು ಇನ್ನೊಬ್ಬ ತಾಯಿಗೆ ಅರಿಯಲು ಸಾಧ್ಯ ಆದರೆ ಅಂತ ತಾಯಿ ಹೃದಯ ನಿಮ್ಮಲ್ಲಿದೆ ಗುರುಗಳೇ..
ಹೆತ್ತ ತಾಯಿಗೆ ವೈಯಕ್ತಿಕವಾಗಿ ಒಂದು ಬಿಡಿಗಾಸೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹುಟ್ಟಿದ್ದೇ ತಪ್ಪಾಯಿತ್ತೇ ಎಲೆ ಲಿಂಗವೇ! ಎಂದು ಪರಿತಪಿಸುವಂತಾಯಿತು. ಈ ಸಂದರ್ಭದಲ್ಲಿ ಆವಿರ್ಭವಿಸಿದ ನಿಮ್ಮ ಹೃದಯದ ಭಾವನೆಗಳನ್ನು ಅರಿಯದವರು ನಿಮ್ಮನ್ನು ಪ್ರೆಶ್ನೆ ಮಾಡುತ್ತಾರೆ ..
ಬಿಟ್ಟು ಬಿಡಿ ಗುರುಗಳೇ ನಿಮ್ಮ ಆರೋಗ್ಯ ನಮ್ಮಂತ ಭಕ್ತರಿಗೆ ಮುಖ್ಯ..
ಯುಗಾದಿಯ ಸಿಡಿಮದ್ದುಗಳ ಆರ್ಭಟವು ಹೊರಗೆ ಕೇಳಿ ಬರುತ್ತಿದ್ದರೆ, ನಮ್ಮ ಹೃದಯದಲ್ಲಿ ಆವಿರ್ಭವಿಸಿದ ಭಾವನೆಗಳ ಸಿಡಿಮದ್ದುಗಳು ಬೇರೆಯವರಿಗೆ ಕೇಳಿಸದಂತೆ ಸಿಡಿದು ಹೃದಯದ ಭೌಮಾಕಾಶದಲ್ಲಿ ಹೊಗೆಯಾಡಲಾರಂಭಿಸಿದ್ದವು!
ಯುಗಾದಿಯಲ್ಲಿ ಸಿಡಿಮದ್ದು
ಇದರ ಒಳಅರ್ಥ ಅದರ ನೋವು ಯಾತನೆಗಳು ನಿಮಗಷ್ಟೇ ಗೊತ್ತು ಗುರುಗಳೇ..
"ಬಹಳಷ್ಟು ಸಾರಿ ಬೆಂಕಿ ಹಚ್ಚುವುದು ಹೊರಗಿನವರಾದರೂ, ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಜನ ನಮ್ಮೊಂದಿಗೆ ಇರುವವರೆ.." ಆಗಿರುತ್ತಾರೆ..
`ಮೃತ್ಯುಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು. ಮೃತ್ಯುಲೋಕ, ದೇವಲೋಕ ಬೇರಿಲ್ಲ. ಸತ್ಯವ ನುಡಿವುದು ದೇವಲೋಕ, ಮಿಥ್ಯವ ನುಡಿವುದೇ ಮೃತ್ಯು ಲೋಕ, ಇದು ಶರಣರ ಬದುಕಿನ ಸಂದೇಶವೆನ್ನುವುದು ಅರಿತು ಬಾಳಬೇಕು ಎನ್ನುವ ಸಂದೇಶ ಹೊತ್ತ ಲೇಖನ ಎಲ್ಲರ ಕಣ್ಣು ತೆರೆಸುವಂತಿದೇ..
ಧನ್ಯವಾದಗಳು ..
ಶ್ರೀಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ , ಚನ್ನಗಿರಿ ತಾಲ್ಲೂಕು .