N-1495 
  20-08-2024 12:15 PM   
ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು; ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ: ಅದ್ದಗಾಣಿಯ ಗೆಲ್ಲ!
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ!
…... ….....
ನಮ್ಮ ಪೂಜ್ಯರು ಬಸವಣ್ಣನವರು ಹೇಳಿದ ಹಾಗೆ ಸ್ವಲ್ಪ " ಮಹದೇವ ಶೆಟ್ಟಿ", ಅವರ ಪೂರ್ವಾಶ್ರಮದ ಮಾತೃಶ್ರೀ ಅವರು ಹಣ ವಾಪಸ್ ಮಾಡಿದಾಗ ಸೌಜನ್ಯಕ್ಕೂ ಬೇಡ ಎಂದು ಹೇಳಲಿಲ್ಲ, ಎಂದು ತಿಳಿಸಿದ್ದಾರೆ. ಹೌದು ಹಣಕಾಸಿನ ವ್ಯವಹಾರದಲ್ಲಿ ಅದರಲ್ಲೂ ಸಾರ್ವಜನಿಕರ ಹಣವನ್ನು ಜತನದಿಂದ ಕಾಪಾಡುವುದನ್ನು ನಾನು ಸ್ವತಃ ಕಂಡಿದ್ದೇನೆ.
ಉದಾಹರಣೆಗೆ ಮಠದ ಮುಖ್ಯ ಖಜಾನೆಯಿಂದ, ಮಠದ ಬೇರುಂದು ಆಂಗ ಸಂಸ್ಥೆಗೆ ತುರ್ತು ಸಂದರ್ಭದಲ್ಲಿ ಒಂದೆರಡು ತಿಂಗಳಿಗೆ ತಾತ್ಕಾಲಿಕವಾಗಿ ಹಣ ವರ್ಗಾವಣೆ ಯಾಗಿರುತ್ತದೆ. ಆಗ ಅಂಗಸಂಸ್ಥೆಯ ಮುಖ್ಯಸ್ಥ, ಹೇಳಿದ ಸಮಯಕ್ಕೆ ಮುಖ್ಯ ಖಜಾನೆಗೆ ಹಣ ವರ್ಗಾವಣೆ ಮಾಡದಿದ್ದರೆ, ನಿರಂತರವಾಗಿ ಸಂದೇಶಗಳ ಮುಖಾಂತರ ಒತ್ತಡ ಬರುವುದುನ್ನು ಬ್ರಹ್ಮನಿಂದಲೂ ತಪ್ಪಿಸಿಕೊಳ್ಳಲಾಗದು 😀.
ಈ ರೀತಿ ಆಡಳಿತದಲ್ಲಿ ಬಿಕ್ಕಟ್ಟು ಇಲ್ಲದಿದ್ದಲ್ಲಿ, ಅದು ಮಠವೇ ಆಗಲಿ, ಸರಕಾರವೇ ಆಗಲಿ ದಿವಾಳಿಯಾಗುವುದು ಖಚಿತ. ಕೆಲವರಿಗೆ ಇದು ಅನೇಕ ಕಾರಣಗಳಿಗಾಗಿ ಇಷ್ಟವಾಗದೇ ಇರಬಹುದು, ಆದರೆ ಬಹುಪಾಲು ಭಕ್ತರಿಗೆ ಪೂಜ್ಯರ ಬಿಕ್ಕಟ್ಟಿನ ಆಡಳಿತ ಅತ್ಯಂತ ಇಷ್ಟವಾದ ಸಂಗತಿ.
Dr. KP. Basavaraj
Banglore