N-2651 

  13-09-2024 07:22 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 A good program under the best leadership of Swamiji.
Sharanabasava
India

N-2169 

  13-09-2024 01:46 AM   

ಶ್ರೀ ತರಳಬಾಳು ಜಗದ್ಗುರುಗಳವರ ಸಂಕಲ್ಪ ಸಾಕಾರ...!

 ಕೆರೆಗಳಿಗೆ ಸಿರಿಗೆರೆ ತರಳಬಾಳು ಮುದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶ್ರೀ ಶ್ರೀ1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವರು ನೀರು ಹರಿಸಿ ಬರದ ನಾಡನ್ನು ನೀರಿನಿಂದ ಸಮೃದ್ದಗೊಳಿಸಿರುವ ಕಾರ್ಯ ಶ್ಲಾಘನಿಯವಾದ ಕಾರ್ಯ
ಭಕ್ತರು ಎಂದೆಂದಿಗೂ ಮರೆಯುಂತದ್ದಲ್ಲ 🙏🙏🙏
ಮಹೇಶ್ BR ಸೂಗೂರು
ಸೂಗೂರು ಶಿವಮೊಗ್ಗ ತಾ

N-2648 

  12-09-2024 07:55 PM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 Always Swamiji takes good decision,
We worship them , no chance to misuse of
fund of Taralabalu Mutt.
M Eswarappa
Haadonahalli, Shimoga taluk

N-2647 

  12-09-2024 05:11 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಸಿರಿಗೆರೆ ಮಠಕ್ಕೆ ಪರಮ ಪೂಜ್ಯ ಡ॥ಶಿವಮೂತಿ೯ ಶಿವಾಚಾಯ೯ರೇ ಮಠಾಧಿಪತಿಗಳಾಗಿರಲಿ. ಅವರ ಶಕ್‌ತಿ ಕುಂದಿದಮೇಲೆ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಲಿ. ಮಠದ ಆಸ್‌ತಿ ಮಠದ ಹೆಸರಿನಲ್ಲೇ ಇರುತ್ತದೆ. ಈಗಿನ ಸಕಾ೯ದಲ್ಲಿ ವೀರಶೈವರಿಗೆ ಬೆಲೆ ಇಲ್ಲದಿರುವಾಗ, ಸಧುಲಿಂಗಾಯತ ಸಮಾಜದ ಕೆಲವು ಮುಖಂಡರು ತಪ್ಪು ಹೇಳಿಕೆ ಕೊಡಬಾರದು. ಸಾಧು ಸಮಾಜದ ಸಮಸ್‌ಥ ಭಕ್‌ತರು ಪೂಜ್ಯ ಗುರುಗಳ ಪರವಾಗಿದ್ದಾರೆ..
ಹೆಚ್‌ ಎಸ್‌ ಚನ್ನಪ್ಪ s/o ಹೆಚ್‌ ಎಸ್‌ ರುದ್ರಪ್ಪನವರು
Hosakoppa, Nyamathi tk, Karnataka

N-2647 

  12-09-2024 02:21 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 Swmijiya.mansu.odedare.bakta.klada.sarvanasave.sari
Manjapp.s
Beeravara

N-2647 

  12-09-2024 02:19 PM   

  12-09-2024 12:26 PM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

  ಆಸ್ಪತ್ರೆ ಚಿಕಿತ್ಸೆಗೆ ನೆರವು ಶ್ರೀಮಠದ ಉದಾರತೆಯನ್ನು ತೋರಿಸುತ್ತದೆ ಚಿಕಿತ್ಸೆಗೆ ಬಡನರಿಗೆ ಹಣಕಾಸಿನ ತೊಂದರೆ ಇರುತ್ತದೆ ಸಹಾಯ ಸಿಗದಿದ್ದರೇ ನೋವಿನಲ್ಲಿರಬೇಕಗಿರುತ್ತದೆ ಅವರಿಗೆ ಸಹಾಯ ಅವಶ್ಯವಾಗಿರುತ್ತದೆ
25 ಲಕ್ಷ ಭಕ್ತರ ಕಾಣಿಕೆ ಭಕ್ತರ ಕಷ್ಟಗಳಿಗೆ ಕೊಟ್ಟಿರುವುದರಲ್ಲಿ ಕ್ರಮ ಸರಿಯಾಗಿದೆ ಇದನ್ನು ಕೊರೊನ ಅವಧಿಯಲ್ಲಿ ಕೊಟ್ಟಿರುವುದನ್ನ ದುರ್ಬಳಿಕೆ ಎನ್ನುತ್ತಿರುವ ಮಠದ ವಿರೋಧಿಗಳ ಹೇಳಿಕೆಯನ್ನು ಖಂಡಿಸುತ್ತೇವೆ
ಮಹೇಶ್ BR ಸೂಗೂರು
ಸೂಗೂರು

N-2648 

  12-09-2024 11:52 AM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಇಷ್ಟೆಲ್ಲಾ ನೊಂದುಕೊಳ್ಳುವಂತ ಸನ್ನಿವೇಶ ನಿರ್ಮಾಣವಾಗಿದ್ದಾದರೂ ಏಕೆ ? ಹೇಗೆ?ಇದೇ ಬಂಡವಾಳಶಾಹಿಗಳು ಗುರುಗಳ, ಮಠದ ಅತ್ಯಾಪ್ತ ಭಕ್ತರೇ ಅಲ್ಲವೇ ? ಅವರ ಕಾಣಿಕೆ ಇಲ್ಲದೆ ಮಠದ ಕಾರ್ಯ ಚಟುವಟಿಕೆಗಳು ನಡೆದಿದೆಯೇ?ಹಾಗಾದರೆ ಮುಂದಾದರು ಬಂಡವಾಳಶಾಹಿಗಳಿಗೆ ಮಠದಲ್ಲಿ ಪ್ರವೇಶವಿಲ್ಲ ಎಂದು ತೀರ್ಮಾನವಾಗಲಿ.ಯಾವುದೆ ಫಲಾಪೇಕ್ಷೆ ಬಯಸದ ರೈತಾಪಿ ಭಕ್ತರೇ ಮಠದ ನಿಜ ಆಸ್ತಿಯಾಗಲಿ.ಮುಂದೆ ಈ ರೀತಿಯ ಸನ್ನಿವೇಶಗಳು ಉದ್ಭವಿಸುವುದೆ ಬೇಡ.

ಅಂದ ಹಾಗೆ ಮುಂದಿನ ಪೀಳಿಗೆಗೆ ಗುರುಗಳ ಸಂದೇಶವಾದರೂ ಏನು ? ಈ ನಮ್ಮ ವಿಶಿಷ್ಟ ಪರಂಪರೆಯುಳ್ಳ ಮಠದ ಉತ್ತಮ ಗುಣವುಳ್ಳ ಉತ್ತರಾಧಿಕಾರಿಯಾದರು ಯಾರೆಂದು ನಿರ್ಧಾರವಾಗದೆ ಇದ್ದಲ್ಲಿ ಈ ಜಂಜಾಟಕ್ಕೆ ಕೊನೆಯಿಲ್ಲ.
ಓಂಕಾರ್‌ ಗುರುಸಿದ್ದಪ್ಪ ಕೊಟ್ರೆ
ಬೆಂಗಳೂರು

N-2648 

  12-09-2024 09:59 AM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ನಾಣ್ಣುಡಿಯಂತೆ ಸತ್ಯದ ಹಾದಿಯಲ್ಲಿ ನಡೆಯುವ ಶ್ರೀಗಳವರು ಶ್ರೀಮಠದ ಎಲ್ಲಾ ಕಾರ್ಯಕ್ರಮಗಳನ್ನು ಸಾಂಗೋಪವಾಗಿ ನಡೆಸುತ್ತಾ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೇ ಶ್ರದ್ಧಾಂಜಲಿಯನ್ನು ಸದ್ಭಕ್ತರೊಂದಿಗೆ ಆಚರಿಸಲು ಸನ್ನದ್ಧರಾಗಿದ್ದಾರೆ .
ಆರೋಪ ಮಾಡುವ ಭಕ್ತರು. ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಾ ಸುಖವಿಲ್ಲದೆ ಒದ್ದಾಡುವಂತಾಗಿದೆ .ಸತ್ಯಕ್ಕೆ ಜಯವಾಗಲಿ.🙏
ಪಿ.ಪಿ .ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ

N-2648 

  12-09-2024 09:36 AM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಮನೆಯ ಜಗಳವನ್ನು ಮನೆಯಲ್ಲಿ ಬಗೆಹರಿಸಿಕೊಳ್ಳಿ. ಒಂದೇ ತಾಯಿಯ ಗರ್ಭದಲ್ಲಿ ಜನಿಸಿದ ಮಕ್ಕಳೇ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಅಂತಹುದರಲ್ಲಿ ಲಕ್ಷಾಂತರ ಜನ ಸಮುದಾಯದ ಪ್ರತಿನಿಧಿಸುವ ಸಾಧು ಲಿಂಗಾಯತ ಸಮುದಾಯದ ತರಳಬಾಳು ಮಠ ಮತ್ತು ಗುರುಗಳ ಮೇಲೆ ಯಾವುದೇ ವೈಮನಸ್ಸು, ಇದ್ದರೆ ಮಠದ ಅಂಗಳದಲ್ಲಿ ಬಗೆಹರಿಸಿಕೊಳ್ಳಿ. ನಮ್ಮ ಮನೆಯ ಜಗಳಕ್ಕೆ ಕಂಡವರು ಪಂಚಾಯಿತಿಗೆ ಬಂದರೆ ನಮ್ಮ ಮನೆ ಗೌರವ ಹಾಳಾಗುತ್ತದೆ. ನಗುವವರ ಬಾಯಿಗೆ ತುತ್ತಾಗುತ್ತೆವೆ. ಕೆಟ್ಟರೆ ಆಳಿಗೊಂದು ಮಾತು ಆಳಿಗೊಂದು ಕಲ್ಲು ಎಂಬಂತೆ ನಮ್ಮ ಮೇಲೆ ಒಡೆದು ಆಳುವ ನೀತಿ ಇತತರರು ಅನುಸರಿಸುತ್ತಾರೆ.
ಹಿರಿಯರು ಕಿರಿಯರು ನಿಮ್ಮ ನಡವಳಿಕೆಗಳೇ ಮುಂದಿನ ಪೀಳಿಗೆಯ ಸಾಧು ಲಿಂಗಾಯತ ಸಮುದಾಯದ ಗೌರವ ಘನತೆ ಅಡಗಿದೆ... ದೊಡ್ಡ ರಾಜಕಾರಣಿಗಳ ಸಮಸ್ಯೆ ಇಲ್ಲ..‌ಆದರೆ ಮಧ್ಯಮ ವರ್ಗದ ರೈತರು, ಜನರು ಇತರ ಸಮುದಾಯದ ನಡುವೆ ಇರುವಾಗ ನಮ್ಮ ಮಠ ‌ಸಮುದಾಯಕ್ಕೆ ಕೀಳಾಗಿ ಕಾಣುತ್ತಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಕೀಳಾಗಿ ಕಾಣುತ್ತಾರೆ. ನನೆಪಿರಲಿ. ನಮ್ಮ ಜನಾಂಗದ ಹೆಣ್ಣು ಮಕ್ಕಳಿಗೆ ಸಿಗದ ಗೌರವ ನಮ್ಮ ಸಮುದಾಯಕ್ಕೆ ಎಂದು ಸಿಗುವುದಿಲ್ಲ. ಇದು ನನ್ನ ಅನುಭವ. ಸಮಸ್ಯೆ ಸಾವಿರ ಇರಲಿ ಮಠದ ಅಂಗಳದಲ್ಲಿ ಬಗೆಹರಿಸಿಕೊಳ್ಳಿ. ಬೀದಿಯಲ್ಲಿ ನಿಂತುಕೊಂಡು ಬಟ್ಟೆ ಹರಿದುಕೊಂಡು, ಇಡಿ ಮಠ ಗುರುಗಳು ಸಮುದಾಯದ ಮೂರನ್ನು.... ಆಡಿಕೊಳ್ಳುವಂತೆ ಮಾಡಬೇಡಿ.... ಕ್ಷಮೆ ಕೇಳುವುದದಲ್ಲಿ ಅಂತಹದ್ದು ಎನು ಕಳೆದುಕೊಳ್ಳುವುದಿಲ್ಲ...ಸಾವಿರ ತಪ್ಪು ಇರಲಿ ಕ್ಷಮೆ ಕೇಳಿ ಎಲ್ಲರೂ ಮೊದಲಿನಂತೆ ಇರಿ.... ಗುರುಗಳು ಭಕ್ತರು ಒಬ್ಬರನ್ನೊಬ್ಬರು ಕ್ಷಮೆ ಕೇಳುವುದದಲ್ಲಿ ಅಂತಹದ್ದು ಎನು ಕಳೆದುಕೊಳ್ಳುವುದಿಲ್ಲ. ಸಮಾಜಕ್ಕಾಗಿ ದಯವಿಟ್ಟು ಎಲ್ಲಾ ನಿಲ್ಲಿಸಿ ಮೊದಲಿನಂತೆ ಇರಿ.... ನಿಮ್ಮದೇ ತರಳಬಾಳು ಸಾಮ್ರಾಜ್ಯ ಸ್ಥಾಪಸಿ... ನಿಮ್ಮ ಅಸ್ತಿತ್ವ ಉಜ್ಜಯಿನಿಯಲ್ಲಿದೆ..... ಉಜ್ಜಯಿನಿಯೇ ನೋಡಿ ನಗುವಂತೆ ಆಗಿದೆ....
ಬದಲಾವಣೆಯೇ ಜೀವಂತಿಕೆಯ ಲಕ್ಷಣ ನನೆಪಿರಲಿ....
ಬಿಂದು ಆರ್ ಡಿ ರಾಂಪುರ
ದಾವಣಗೆರೆ

  12-09-2024 08:03 AM   

ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಸುಳ್ಳು ಆರೋಪಗಳಿಂದ ನಮ್ಮ ಶ್ರೀಗಳಿಗೆ ನೋವು ಕೊಡುತ್ತಿದ್ದಾರೆ ಹೇ ಬಂಡವಾಳ ಶಾಹಿ ಆಗಿದ್ದು ನಮ್ಮ ಶ್ರೀಗಳ ಹೆಸರು ಮತ್ತು ಕೆಲವರು ಮಠದ ಆಸ್ತಿ ನುಂಗಿ ಬಂಡವಾಳಶಾಹಿ ಆಗಿರೋದು ಹಾದಿ-ಬೀದಿಯಲ್ಲಿ ಮಾತಾನಾಡುತ್ತಾ ಏಕೇ ಮಠ ಮತ್ತು ಶ್ರೀಗಳ ಬಗ್ಗೆ ಇಲ್ಲ ಸಲ್ಲದ ಮಾತು ಆಡುತ್ತಿದ್ದೀರಿ.
ಲೋ ಹುಚ್ಚಪ್ಪಗಳಿರಾ ಒಂದೇ ಒಂದು ಬಾರಿ ಸಿರಿಗೆರೆಗೆ ಬನ್ನಿ ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ತೂ ನಿಮ್ಮ ಜನ್ಮಕ್ಕಿಷ್ಟು ನಮ್ಮ ಗುರುಗಳು ಅಪ್ಪಟ ಅಪರಂಜಿ ಬುದ್ದಿ ತಮ್ಮಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತೇನೆ ತಾವು ನೋವು ಮಾಡಿಕೊಳ್ಳಬೇಡಿ 🌹🌹🌹
ಚನ್ನಬಸಮ್ಮ
ಹಾನಗಲ್ ಹಾವೇರಿ

N-2623 

  12-09-2024 06:54 AM   

‘ಖೂನಿ’ ಮಾಡಿಸಿದ್ದಾರೆಂದು ದೊಡ್ಡ ಗುರುಗಳ ಮೇಲೆ ಆಗಿನ ರಾಜಕಾರಣಿಗಳು ಮಾಡಿದ್ದ ಸುಳ್ಳು ಆರೋಪ!

 ಈಗಲೂ ಇಂತಹ ‌ಸ್ವಾಮಿಗಳನ್ನು ಮತ್ತು ಉದರ ನಿಮಿತ್ಯಂ ಬಹುಕೃತ ವೇಷ ಎಂಬಂತಹ ರಾಜಕಾರಣಿಗಳನ್ನು ಅವರ ಪುಡಾರಿ ಹಿಂಬಾಲಕರನ್ನು ನೋಡುತ್ತಿದ್ದೇವೆ... ... ದೊಡ್ಡ ಸಮುದಾಯವೇ ಡಾ.ಜಗದ್ಗುರುಗಳ ಬೆನ್ನಿಗೆ ಇದೆ...ಅಂಜಿಕೆ ಅಳುಕಿಲ್ಲದೇ ನಿಮ್ಮ ಜೊತೆ ಇರುತ್ತೇವೆ.ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ...ಶಿವ ಶಿವ ಶರಣು ಶರಣು ಮಹಾಪ್ರಭು..
ಈರಣ್ಣ ಬಣಕಾರ ಗುಂಡಗಟ್ಟಿ ಹಿರೇಕೆರೂರು
Karnatka

N-2647 

  11-09-2024 10:16 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಶ್ರೀ ಗುರಗಳ ಚರಣಗಳಿಗೆ ದೀರ್ಘ ದಂಡ ನಮಸ್ಕಾರಗಳು. ಈ ಸಂಧಿಗ್ಧ ವಾತಾವರಣವನ್ನು ಅತಿ ಶೀಘ್ರದಲ್ಲಿ ಪರಿಹರಿಸುವಿರಿ. ಇದಕ್ಕೆ ಪೂರಕವಾಗಿ - ವಚನದ ಭಾವಾರ್ಥ

ನಾವು ಈ ಮೇಲಿನ ವಚನವನ್ನು ಎರಡು ರೀತಿಯಲ್ಲೂ ವಿಶ್ಲೇಷಿಸಬಹುದು.

************************
ವಿಶ್ಲೇಷಣೆ-೧
************************
ಶತಶತಮಾನಗಳಿಂದ ನಡೆದುಬಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಠಕಪ್ರಾಯ ಅಂಶವಾದ ವರ್ಗ ಭೇಧ, ಜಾತಿ ಭೇಧದ ಬಗ್ಗೆ ಮಾನವೀಯ ದೃಷ್ಟಿಕೋನದಿಂದ, ವಿಶಾಲ ಮನೋಭಾವದಿಂದ ನೋಡಿ "ಮನುಷ್ಯ ಕುಲ ತಾನೊಂದೆ ವಲಂ" ಎಂಬ ಕವಿ ಪಂಪನ ನುಡಿಯಂತೆ ಜಾತಿ ಭೇಧವಳಿಸಿ ಸಮಾನತೆಯ ಬೀಜ ಬಿತ್ತಿ ಸಮಸಮಾಜ ಕಟ್ಟುವ ಕನಸು ಹೊತ್ತ ಹನ್ನೆರಡನೆಯ ಶತಮಾನದ ಮಹಾನ್ ಮಾನವತವಾದಿ, ಮಹಾನ್ ಕ್ರಾಂತಿ ಪುರುಷ ಬಸವಣ್ಣನವರು ಕೆಳ ವರ್ಗದ ಜನರನ್ನು ಕಂಡು ಇವನಾರವ ಇವನಾರವ ಎಂದೆಣಿಸದೆ ಇವ ನಮ್ಮವ ಎಂದು ತೆರೆದ ಹೃದಯದಿಂದ ಆಲಿಂಗಿಸಿಕೊಳ್ಳಿ, ಇನ್ನೂ ಮುಂದುವರೆದು ಕೀಳು ಜಾತಿಯ ಜನರನ್ನು ನಿಮ್ಮ ಮನೆಯ ಮಗನೆಂದು ಎಣಿಸಿ ನಿಮ್ಮ ಹೃದಯದಲ್ಲಿ ಜಾಗ ಕೊಡಿ ಎಂದಿದ್ದಾರೆ. ಈ ಜಾತಿ ವರ್ಗ,ಧರ್ಮ ಬೇಧವೆಲ್ಲ ಸೂಕ್ಷ್ಮ ವಿಚಾರವಾಗಿದ್ದು ಇವುಗಳನ್ನು ಕಾನೂನು ಕಟ್ಟಳೆಗಳಿಂದ ಸಂಪೂರ್ಣ ತೊಡೆದು ಸಮ ಸಮಾಜ ಕಟ್ಟುವುದು ಮರುಭೂಮಿಯಲ್ಲಿ ಹಸಿರು ಬೆಳೆಸುವ ದುಸ್ಸಾಹಾಸದಂತೆ. ಪರಸ್ಪರ ಮನುಷ್ಯರ ಮನದೊಳಗೆ ಭೇಧವಳಿದು ಪ್ರೀತಿ ವಿಶ್ವಾಸಗಳು ಅರಳದೆ ಈ ಅಸಮಾನತೆಯನ್ನು ಬೇರು ಸಹಿತ ಕಿತ್ತುಹಾಕುವುದು ಸಾಧ್ಯವಿಲ್ಲ ಎಂಬುದೇ ಈ ವಚನದ ಸಾರವಾಗಿದೆ.
************************
ವಿಶ್ಲೇಷಣೆ-೨
************************
ಬಸವಣ್ಣನವರು ಮೂಲತಹ ಮೇಲ್ವರ್ಗದವರಾಗಿದ್ದು, ಮಾನವೀಯತೆಯ ಕ್ರಾಂತಿ ಮೊಳಗಿಸಿ ಜಾತಿರಹಿತ ವರ್ಗರಹಿತ ಸಮಸಮಾಜ ಕಟ್ಟುವ ಕನಸು ಹೊತ್ತ ಈ ಸಾಮಾಜಿಕ ಪರಿವರ್ತನೆಯ ಹರಿಕಾರ ಸಮಾಜದ ಕೆಳವರ್ಗದವರು ಎಂದು ಪ್ರತ್ಯೇಕಿಸಲ್ಪಟ್ಟ ಎಲ್ಲ ಕಾಯಕದ ಜನರ ಮನದಲ್ಲಿ ತಾನು ಮೇಲು ಜಾತಿಯವನು ಎಂಬ ಮೇಲರಿಮೆಯಿಂದ, ಇವರು ಕೆಳಜಾತಿಯವರು ಎಂಬ ಕೀಳರಿಮೆಯಿಂದ ಅವಿಶ್ವಾಸವುಂಟಾಗಬಾರದು ಎಂದೆಣಿಸಿ ತಮ್ಮನ್ನು ತಾವೇ ಸ್ವತಹ ಸಮಾಜದ ಇತರೆ ಜನರಲ್ಲಿ "ನನ್ನನ್ನು ಇವನಾರವ ಇವನಾರವ ಎಂದೆಣಿಸದೆ ಬಸವಣ್ಣ ನಿಮ್ಮವನೆ, ಇವನು ನಿಮ್ಮ ಮನೆಯ ಮಗ ಎಂದೆಣಿಸಿ ಪ್ರೀತಿ ವಿಶ್ವಾಸದಿಂದ ನಿಮ್ಮ ಮನದಲ್ಲಿ ಜಾಗ ನೀಡಿ ಎಂಬ ಅರಿಕೆಯೂ ಕೂಡ ಇದಾಗಿದೆ ಎಂಬುದು ಇದರ ಎರಡನೇ ವಿಶ್ಲೇಷಣೆಯಾಗಿದೆ ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು.

Prabhudev M S
SHIVAMOGGA

N-2646 

  11-09-2024 09:29 PM   

ಸಿರಿಗೆರೆಯಲ್ಲಿ ಸೆ.20 ರಿಂದ 24ರವರೆಗೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ

 ಸರ್ವ ಜನಾಂಗದ ಶಾಂತಿಯ ತೋಟ ರಸಿಕರ

ರಸಿಕರ ಕಂಗಳ ಸೆಳೆಯುವ ನೋಟ ಎನ್ನುವ ಹಾಗೆ ನಾಡಿನ ಎಲ್ಲಾ ಸಮಾಜದ ಬಾಂಧವರು ಈ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಯಾಗಲೆಂದು ಹಾರೈಸುವ ನಿಮ್ಮ ಹಿತೈಷಿ

ಜೈ ತರಳಬಾಳು ಜಗದ್ಗುರು ಶ್ರೀ ಮಠ ಸಿರಿಗೆರೆ
ಎಸ್‌ಜಿ ಜಯಮ್ಮ ಹೊನ್ನಾಳಿ

ಸೆಳೆಯುವ ನೋಟ ಎನ್
JAYAMMA S G
Honnali

N-2646 

  11-09-2024 09:27 PM   

  11-09-2024 08:59 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಶ್ರೀ ಚರಣ ಕಮಲಗಳಿಗೆ ಹೃದಯ ಪೂರ್ವಕ ಶಿರಾ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏
Santosh
Mudigere karnataka india

N-2647 

  11-09-2024 04:19 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪರಮಪೂಜ್ಯರ ಚರಣ ಕಮಲಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಾ
ಪೂಜ್ಯರಲ್ಲಿ ಮನವಿ ಏನೆಂದರೆ ಬಂಗಾರವನ್ನು ಹೊರೆ ಹಚ್ಚಿದೊಷ್ಟು ಅದರ ಹೊಳಪು ಹೆಚ್ಚಿದಂತೆ, ಹುಳಿ ಪೆಟ್ಟು ಕಲ್ಲು ಶಿಲೆಯಾದಂತೆ ಪರಮಾಪೂಜ್ಯರನ್ನು ನಿಂದಿಸಿದೋಷ್ಟು ಅವರ ಗೌರವ ಘನತೆ ಹೆಚ್ಚುತ್ತದೆ. ಪೂಜ್ಯರು ಮತ್ತು ಭಕ್ತರ ಭಾಂದವ್ಯ ಗಟ್ಟಿಯಾಗುತ್ತತೆ
Nagaraja k
Kolahal

N-2647 

  11-09-2024 04:09 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಕಳೆದು ಹಲವಾರು ದಿನಗಳಿಂದ ಪ್ರಕಟಗೊಳ್ಳುತ್ತಿರುವ ಲೇಖನಗಳು- ಪರಮ ಪೂಜ್ಯ ಲಿಂಗೈಕ್ಯ ಹಿರಿಯ ಜಗದ್ಗುರುಗಳು ನಡೆದು ದಾರಿ ಎಷ್ಟು ದುರ್ಗಮ ಮತ್ತು ಅಂದಿನ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಈ ಸಮಾಜವನ್ನು ಇಷ್ಟು ಎತ್ತರಕ್ಕೆ ಬೆಳೆಸಿ, ಸುಲಲಿತವಾಗಿ ತಮ್ಮಂತ ವಿದ್ವತ್ತುಳ್ಳ ವಿಶ್ವ ಮಾನ್ಯರ ಕೈಯಲ್ಲಿ ಸಮಾಜದ ಜವಾಬ್ದಾರಿಯನ್ನು ಕೊಟ್ಟು ಬಯಲಲ್ಲಿ ಬಯಲಾದ ಮಹಾ ಗುರುವಿಗೆ ಕೋಟಿ ಕೋಟಿ ಶರಣು 🙏
Dr. KP. Basavaraj
Banglore