N-2639 
  04-09-2024 08:11 AM   
ಡಾ. ಸಿದ್ದಯ್ಯನಿಂದ ಮಠದ ಜಮೀನು ಪರಿಹಾರದ ಹಣ ₹ 30 ಲಕ್ಷ ರೂ. ಕಬಳಿಕೆ
ಗುರುಗಳೇ ಯಾರೂ ತಪ್ಪು ಮಾಡಿದರೂ ತಪ್ಪೇ
,ಇಲ್ಲಿಯವರೆಗೆ ನೀವು ಏಕೆ ಕೇಳಲಿಲ್ಲ ನೀವು ಈ ವಿಷಯವನ್ನು ಏಕೆ ಮುಚ್ಚಿಟ್ಟಿದ್ದೀರಿ , ನನಗೆ ತಿಳಿದ ಮಟ್ಟಿಗೆ ಭೂ ಪರಿಹಾರ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಅಕೌಂಟಿಗೆ ಬರಲೇಬೇಕು
ಮಠದ ವಿಚಾರವಾಗಿ ಸಮಾಜ 2 ಗುಂಪುಗಳಾಗಿ ಹೊಡೆದಾಡುತ್ತಿದೆ ಇದನ್ನು ಅರ್ಥಮಾಡಿಕೊಂಡು ಸಣ್ಣ ಮುಗ್ಸ ಭಕ್ತರಿಗೆ ಗೊಂದಲವನ್ನುಂಟು ಮಾಡದೆ ಬುದ್ಧಿಜೀವಿಗಳೆಲ್ಲ ಸೇರಿಕೊಂಡು ಬೇಗನೆ ಸಮಸ್ಯೆ ಬಗೆಹರಿಸಿ
ತಲ ತಲಾಂತರದಿಂದ ಬಂದಂತಹ ಸಂಪ್ರದಾಯ ನಮ್ಮ ಮಠದ ಆಚಾರ ವಿಚಾರಗಳು ಉಳಿಯಬೇಕು, ನೀವೇ ಮುಂದಿನ ನಿಮ್ಮ ಜೀವಿತಾವಧಿವರಿಗೂ ಜಗದ್ಗುರುಗಳಾಗಿರಿ ಮುಂದೆ ಯಾರು ಈ ಸಮಾಜವನ್ನು ನಡೆಸಿಕೊಂಡು ಹೋಗುವವರು ಯಾರು ಎಂಬುದನ್ನು ಖಾತ್ರಿ ಮಾಡಿ, (ಮರಿ)
ಹಾಗೂ ಮುಂದೆ ಬರುವ ಗುರು ನಿಮ್ಮ ಹಾಗೆ ಸಮಸ್ತ ಮಠದ ಆಸ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವವರಾಗಿರಬೇಕು ಏಕೆಂದರೆ ಈಗ ಯಾರ ಮೇಲೂ ವಿಶ್ವಾಸವಿಲ್ಲ ನೀವು ಮಾಡಿರುವ ಟ್ರಸ್ಟ್ ಡೀಡ್ ಬದಲಾವಣೆ ಮಠದ ಗುರುವೇ ಅಂತಿಮ ಎನ್ನುವ ಹಾಗೆ ಇದೆಯಂತೆ, ಮಠದ ಸಮಗ್ರ ಆಸ್ತಿಯನ್ನು ಒಬ್ಬ ಗುರುವೇ ನಿಯಂತಿಸಬೇಕಂತೆ ಎಂದು ಮಾಹಿತಿ ಇದೆ
ನಿಮ್ಮ ನಂತರ ಬಂದ ಗುರುಗಳು ನಿಮ್ಮ ಹಾಗೆ ಆಸ್ತಿಯನ್ನು ರಕ್ಷಣೆ ಮಾಡಬೇಕಲ್ಲ? ಅವನು ಮಾರಿದರೆ ಹೇಗೆ ? ತನ್ನ ಮನಸ್ಸಿಗೆ ಬಂದಂತೆ ಬಳಸಿಕೊಂಡರೆ ಹೇಗೆ? ಎಂಬ ಅನೇಕ ಪ್ರಶ್ನೆಗಳು ಸಾಮಾನ್ಯ ಭಕ್ತರಿಗೆ ಬರುವುದು ಸಹಜ,
ದಯವಿಟ್ಟು ಗುರುಗಳಲ್ಲಿ ವಿನಂತಿ ,ಈ ಮಠದ ಶ್ರಯೋಭಿವೃದ್ಧಿಗೆ ಈಗ ಮಠದ ವಿರುದ್ಧ ಮಾತನಾಡುವವರು ಸಹ ಸಾಕಷ್ಟು ತನುಮನ ಧನ ಸಹಾಯದೊಂದಿಗೆ ಎಲೆ ಮರೆ ಕಾಯಾಗಿ ಸೇವೆ ಸಲ್ಲಿಸಿರಬಹುದು (ಅವರು ನಮ್ಮ ಸಾಧು ಲಿಂಗಾಯತರೆ )
ತಾವುಗಳು ದೊಡ್ಡ ಸ್ಥಾನದಲ್ಲಿ ಕುಳಿತವರು ಎಲ್ಲವುಗಳನ್ನು ಪರಿಗಣನೆಗೆ ತೆಗೆದುಕೊಂಡು , ಹಾದಿ ಬೀದಿ ರಂಪಾಟ ಮಾಡದೆ ನಾ ಹೆಚ್ಚು ನಾ ಹೆಚ್ಚು ಎಂದು ಒಬ್ಬರ ಮೇಲೆ ಒಬ್ಬರು ಗೂಬೆಯ ಕುಳಿಸಿ, ಅವರು ಮಠದ ಆಸ್ತಿ ಮಾರಿದರು ಇವರ ದುಡ್ಡು ತಿಂದವರು ಎಂದು ಮಾತನಾಡುತ್ತಾ ಹೋದರೆ ಸಮಸ್ಯೆ ಬಗೆಹರಿಯಲಾರದು,
ಗುರುವಿಗೆ ಅಂಜಿ ಶಿಷ್ಯರು ಶಿಷ್ಯರಿಗೆ ಅಂಜಿ ಗುರು ಎಂಬ ನಮ್ಮ ಹಿರಿಯ ಗುರುಗಳು ಹೇಳಿದ ಮಾತು ಇಂದು ಮರೆತೇ ಹೋಗಿದೆ,
ಗುರುಗಳ ಮೇಲೆ ಮೂರು ಪ್ರಶ್ನೆಗಳಿವೆ ಅವುಗಳಲ್ಲಿ ೧ ನೀವು ಟ್ರಸ್ಟ ಡೀಡ್ ತಿದ್ದಿದ್ದು ಯಾಕೆ,
೨ ಯಾಕೆ ಮರಿ ಮಾಡಿಕೊಳ್ಳಲು ಇಚ್ಚಿಸುತ್ತಿಲ್ಲ
೩ ನೀವೇನಾದರೂ ಹೊಸ ಟ್ರಸ್ಟ್ ಡೀಡ್ ಪ್ರಕಾರ ಯಾರಾದರೂ ಒಬ್ಬ ಮರಿಯನ್ನು ವಿಲ್ ಮಾಡಿ ಜೀವಿತಾವಧಿ ನಂತರ ಮರಿಯಾಗಬೇಕೆಂದು ಇಟ್ಟಿದ್ದೀರಾ /ಬಯಸಿದ್ದೀರಾ,
ಈ ಮೂರೇ ವಿಚಾರಗಳ ಮೇಲೆ ಭಕ್ತರ ವಿಚಾರಗಳು ಭಾವನೆಗಳುಬೇರೆ ಬೇರೆ ಆಗುತ್ತಿವೆ
ಗುರುಗಳೇ ನೀವು ಬದಲಾವಣೆ ಮಾಡಿದ ಟ್ರಸ್ಟ್ ಡಿಡ್ ಒಂದು ವಿಚಾರದಲ್ಲಿ ನನಗೆ ತಿಳಿದ ಹಾಗೆ ನೀವು ಟ್ಯಾಕ್ಸ್ ರಿಯಾಯಿತಿಗೆ ಈ ಟ್ರಸ್ಟನ್ನು ಬದಲಾವಣೆ ಮಾಡಿದ್ದೇನೆ ಎಂದು ನಿಮ್ಮ ಸಭೆಗೆ ನಾನು ಬಂದಾಗ ನೀವು ಹೇಳಿದ್ದನ್ನು ನಾವು ಕೇಳಿರುತ್ತೇವೆ ನಿಜ,
ಹಾಗಾದರೆ ಶ್ರೀ ಮದ್ದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀಮತ್ ಪಾಲ್ಕುರಿಕೆ_ಸಿರಗೆರೆ ಶ್ರೀ ತರಳ ಬಾಳು ಜಗದ್ಗುರು ಬೃಹನ್ ಮಠ, ಈ ಬೈಲಾದ ಪ್ರಕಾರವೇ ರೆಪ್ರೆಸೆಂಟೇಡ್ ಬೈ ಶ್ರೀ ಶ್ರೀ ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಎಂದು ಬದಲಾವಣೆ ಮಾಡಿ, ಟ್ಯಾಕ್ಸಿನ ರಿಯಾಯಿತಿ ಪಡೆಯಲು ತಿದ್ದುಪಡೆ ಮಾಡಬೇಕಾಗಿತ್ತು,
ಆದರೆ ಅದರ ಜೊತೆಗೆ ಮೂಲ ಶ್ರೀಮತ್ ಸಾಧುಸಧರ್ಮ ವೀರಶೈವ ಸಂಘದ ೧೯೭೭ ಬೈಲಾ ತಿದ್ದುಪಡಿ ಮಾಡಿ ,ಅದರ ಒಳಗೆ ಸಂಘ ನಡೆಯುವ ರೀತಿ ,ಗುರುಗಳ ಆಯ್ಕೆ ವಿಚಾರ ,ಸಂಘದ ದೇಯೋದ್ದೇಶಗಳು ,ಕರ್ತವ್ಯಗಳು ,ಇವುಗಳನ್ನು ತಿದ್ದುವ ಉದ್ದೇಶವೇನಿತ್ತು ಎಂಬುದೇ ಪ್ರಶ್ನೆಯಾಗಿದೆ
, ಇದರ ಬಗ್ಗೆ ನೀವುಗಳು ಆಗಿರುವ ಗೊಂದಲಕ್ಕೆ ಸರಿಯಾದ ಉತ್ತರವನ್ನು ಕೊಡದೆ ಹೋದರೆ, ಈ ಸಮಸ್ಯೆ ಆಗಿಯೇ ಮುಂದುವರೆದು ಸಮಾಜ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಊಹೆ ಮಾಡಲು ಆಗುವುದಿಲ್ಲ ಆದ್ದರಿಂದ ಈಗಲೇ ತಿದ್ದುವ ಅಥವಾ ಸರಿ ದಾರಿಗೆ ತರುವ ಪ್ರಯತ್ನವನ್ನು ಮಾಡಿರಿ, ಇದನ್ನು ಸರಿ ಮಾಡಿಕೊಂಡು,ನೀವೇ ತುಮಕೂರು ಶಿವಕುಮಾರ ಸ್ವಾಮಿಗಳ ಹಾಗೆ ಜೀವಿತಾವಧಿವರಿಗೂ ನೀವೇ ಜಗದ್ಗುರುಗಳಾಗಿ ಮುಂದುವರೆಯಿರಿ, ಎಂಬುದು ನಮ್ಮ ಸಾಮಾನ್ಯ ಭಕ್ತರ ಆಶಯವಾಗಿದೆ ,
ಜೈ ಸಾಧು ಲಿಂಗಾಯತ ಜೈ ತರಳುಬಾಳು ಶ್ರೀ
ಜೈ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ,
,
ಜಗದೀಶ ಲಕ್ಕನಗೌಡ್ರ
ಗ್ರಾಮ,ಕಡೂರು ತಾ,ರಟ್ಟೀಹಳ್ಳಿ ಜಿಲ್ಲಾ ಹಾವೇರಿ