N-2605 
  11-08-2024 09:03 AM   
BREAKING NEWS !.. BEWARE OF SOCIAL MEDIA!... ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ!…
Up
ಶಿವಶರಣರ ವಚನ ಸಂಪುಟ
ಬಸವಣ್ಣ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
Home
About
ವಚನಕಾರರು
ಸರ್ವಜ್ಞ
Search
Books
Dictionary
ಆಕರ ಗ್ರಂಥಗಳು
ಲೇಖನಗಳು
Feedback
ಪ್ರತಿಕ್ರಿಯೆಗಳು
Donation
Android Mobile App
Privacy Policy
ವಚನ - 28
ಬೆದಕದಿರು ಬೆದಕದಿರು; ಬೆದಕಿದೊಡೆ ಹುರುಳಿಲ್ಲ!
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ?
ನಿಮ್ಮುತ್ತಮಿಕೆಯನೇ ಪೂರೈಸುವುದು,
ಕೂಡಲ ಸಂಗಮದೇವಾ.
ಕನ್ನಡ ವ್ಯಾಖ್ಯಾನ
ಕಾಯಿ ತುಂಬ ತಿನ್ನಬಾರದ ಮೂರು ಬೀಜವೇ ತುಂಬಿಕೊಂಡಿರುವ ಚಿತ್ತರಟ್ಟಿಯ ಕಾಯಲ್ಲಿ ತಿರುಳೆಲ್ಲಿಯದು, ರಸವೆಲ್ಲಿಯದು, ರುಚಿಯೆಲ್ಲಿಯದು? ದೇಹವಿಡಿದು ನೋಡಿದಾಗ-ಚಿತ್ತರಟ್ಟೆಯ ಕಾಯಂತೆ-ನಾನೂ ರಂಗಾಗಿ ಕಾಣುವೆನಾದರೂ-ನನ್ನಲ್ಲಿ ಸತ್ತಿನ ತಿರುಳಿಲ್ಲ,ಚಿತ್ತಿನ ರಸವಿಲ್ಲ, ಆನಂದದ ರುಚಿಯಿಲ್ಲ-ಇರುವಿದೆಲ್ಲಾ ಹೆಣ್ಣು ಹೊನ್ನು ಮಣ್ಣು ಎಂಬ ಈಷಣತ್ರಯ ಬೀಜ ಮಾತ್ರ.
ಎಲೆ ಶಿವನೇ ಉತ್ತಮವೆಂಬುದೇನನ್ನೂ ನನ್ನಲ್ಲಿ ನಿರೀಕ್ಷಿಸಿ ಪರೀಕ್ಷಿಸಬೇಡ. ನಿನ್ನಲ್ಲಿರುವ ಉತ್ತಮಿಕೆಯನ್ನೇ ನನಗೆ ಧಾರೆಯೆರೆದು ಸಂರಕ್ಷಿಸೆಂದು ಬಸವಣ್ಣನವರು ದೇವರಲ್ಲಿ ಮೊರೆಯಿಡುತ್ತಿರುವರು.
ಮೇಲೆ ಮೇಲೆ ದೇಹವು ಭೂಷಣವಾಗಿ ಕಂಡು ಒಳಗೆ ಸತ್ತ್ವವಿಲ್ಲದಿದ್ದರೆ-ಆ ದೇಹಕ್ಕಾಗಲಿ, ಅದನ್ನು ಧರಿಸಿದ ಜೀವಕ್ಕಾಗಲಿ ಬೆಲೆಯಿಲ್ಲ, ಅವೆರಡಕ್ಕೂ ಬೆಲೆ ಬರುವುದು ಶಿವಾಂಶ ನಮ್ಮೊಳಕ್ಕೆ ಅವತರಿಸಿದಾಗಲೇ!
🎉ಬರೀ ಮತ್ತಿನಲ್ಲಿದ್ದು ಶಿವಾಂಶ ವಿಲ್ಲದವರ ಬಗ್ಗೆ ತರಳಬಾಳು ಮಠದಶಿಷ್ಯರ ಮಾನಸ ಗಟ್ಟಿ ಯಾಗಿ ಬೇಕಿದೆ,ಬರೀ ಸುಳ್ಳು ಕೆದಕುವವರೇ ಸಹಿ ಮಾಡಿದ್ದು ಗೂತ್ತಿದ್ರೆ ಈಗೆ ವಿಚಾರ ಮಾಡುವುದು ಯಾವ ಪುರುಷಾರ್ಥ????!!!ಬರೀ ಲಾಭ ಮಾಡಿಕೊಳ್ಳುವ ಮೂಲಕ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಂದ ಗುಣ ಹೊಂದಿದ್ದಾರಲ್ಲವೆ.
-
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ