N-2601 

  10-08-2024 06:10 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಬಿಸಿಲು ಬೆಳದಿಂಗಳು ಅಂಕಣದ
ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ
ಪೂಜ್ಯರಾದಂತಹ ಡಾ. ಶಿವಮೂರ್ತಿ
ಶಿವಾಚಾರ್ಯ ಸಿರಿಗೆರೆ - ಇವರಿಗೆ ಭಕ್ತಿಪೂರ್ವಕ ಪ್ರಣಾಮಗಳು.

ಮೇಟಿವಿದ್ಯಾ ಸಂಪನ್ನರಿಗೆ ಮರೆಮೋಸ.
ಎನ್ನುವುದರೊಂದಿಗೆ ತಮ್ಮ ಮಾತುಗಳು ರೈತರ ಮೇಲೆ
ಕನಿಕರ ತೋರಿವೆ.

ಪೂಜ್ಯರು ಹೇಳಿದ ಮಾತು ಎಂತಹವರಿಗೂ ದುಃಖ ಖಿನ್ನತೆ ತರುವಂತಿದೆ. ನಮ್ಮ ದೇಶದ ಬಡ ರೈತರಿಗೆ ನಾವು ಕೊಡುವ `ಗೌರವಾದರಗಳನ್ನು` ನೆನೆಸಿಕೊಂಡರೆ ಎದೆ ಝಲ್ ಎನ್ನುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ಸಮೇತ ಹೇಳಬೇಕೆಂದರೆ ಇತ್ತೀಚಿಗಷ್ಟೇ ನಡೆದ ಒಂದು ಘಟನೆಗೆ ವಿಷಾದ ವ್ಯಕ್ತಪಡಿಸುವಂತಾಗುತ್ತದೆ .ಒಬ್ಬ ಬಡರೈತ ತನ್ನ ಮಗನ ಜೊತೆಯಲ್ಲಿ , ಬೆಂಗಳೂರಿನಲ್ಲಿರುವ ಒಂದು ಪ್ರಸಿದ್ಧ *ಶಾಪಿಂಗ್ ಮಹಲ್ಗೆ* ಪಂಚೆ ಕಟ್ಟಿಕೊಂಡು ಎಂದಿನಂತೆ ಹೋದಾಗ ಅಲ್ಲಿನ Security guard ಅವರನ್ನು ಒಳಗೆ ಬಿಡಲು ನಿರಾಕರಿಸುತ್ತಾನೆ . ಆಗ ಅಲ್ಲಿದ್ದ ಜನರಿಂದ ಪ್ರತಿಭಟನೆ ನಡೆದು ತುಂಬಾ ಜನಗಳು ಸೇರಿ Vedio ಸಹಾ ಮಾಡುತ್ತಾರೆ. ಈ ವಿಚಾರ ಮಾಲೀಕರವರಗೆ ಹೋಗಿ ಅವರು ಬಂದು ತಮ್ಮವರಿಂದ ತಪ್ಪಾಯಿತೆಂದು ಆ ರೈತನಿಗೆ ನಮಸ್ಕರಿಸಿ *ಕ್ಷಮೆ* ಕೇಳುತ್ತಾರೆ. ಹಾಗೆಯೇ ಈ ವಿಷಯ Media ದವರವರೆಗೂ ಹೋಗಿ ಅವರೂ .ಸಹ ಬಂದು ಚಿತ್ರೀಕರಿಸಿ T.V. ಗಳಲ್ಲಿ ಪ್ರಚಾರ ಮಾಡಿ , ರೈತನನ್ನು Channel ಗೆ ಕರೆಸಿ ನಡೆದ ಘಟನೆಯನ್ನು ವಿವರಿಸಿ *ಸನ್ಮಾನ* ಮಾಡಿ ಕಳಿಸುತ್ತಾರೆ . ಈ ವಿಷಯ ರಾಜ್ಯಾದ್ಯಂತ ಹರಡಿ ರೈತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಮೂಲಕ ನಮ್ಮ ದೇಶದ ಎಲ್ಲಾ ರೈತರ ಬಗ್ಗೆ ಅಭಿಮಾನ ಮೂಡುತ್ತದೆ.
S.N.ಕಾಶಿ ವಿಶ್ವನಾಥ ಶೆಟ್ಟಿ ಮಾಲೀಕರು, ಶ್ರೀ ಗುರುರಾಜ ಫರ್ನೀಚರ್ಸ ಚಿತ್ರದುರ್ಗ


N-2601 

  10-08-2024 06:02 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಮೇಟಿವಿದ್ಯಾ ಸಂಪನ್ನರಿಗೆ ಮರೆಮೋಸ.
ಈ ಅಂಕಣದಲ್ಲಿ ಗುರೂಜಿ ಅವರು ರೈತರ ಜೀವನದ ವಾಸ್ತವ ಪರಿಸ್ಥಿತಿಯನ್ನು ನಿರೂಪಿಸಿದ್ದಾರೆ. ಗುರುಗಳು ಬರೆವ ಪ್ರತಿ ಅಂಕಣ ಬರೆಹವೂ ಒಂದು ವಿಶೇಷ ಸಂದೇಶವನ್ನು ತಿಳಿಯಪಡಿಸುತ್ತದೆ. ಇಂತಹ
ಸಾಮಾಜಿಕ ಕಳಕಳಿಯ ಶ್ರೇಷ್ಠ
ವ್ಯಕ್ತಿಗಳು ನಮ್ಮ ಸರಕಾರಗಳಿಗೆ ಮಾರ್ಗದರ್ಶನ ಮಾಡಿದಾಗ ದೇಶದ ಏಳ್ಗೆ ಸಾಧ್ಯ. ಸರಕಾರದ
ಸಲಹಾ ಸಮಿತಿಯಲ್ಲಿ ಗುರುಗಳನ್ನು ಸೇರಿಸಲು ನಾವೆಲ್ಲಾ ಅನುಮೋದನೆ ಮಾಡಿ ಪತ್ರ ಕಳಿಸೋಣ.
ಇದಕ್ಕೆ ನಿಮ್ಮೆಲ್ಲರ ಅನುಮೋದನೆ ಇದೆ, ಅಲ್ಲವೇ?
ಗುರುಗಳ ಶ್ರೀಪಾದಗಳಿಗೆ ಸಾಷ್ಟಾಂಗ ಪ್ರಣಾಮಗಳು. 🙏🏻.

ಗುರುಸೇವಾ ನಿರತ ವೆಂಕಟೇಶ ಶೆಟ್ಟಿ ಅವರಿಗೆ ವಿನಯಪೂರ್ವಕ
ವಂದನೆಗಳು. 🙏🏻
ಮುಕ್ತಾ ಗುಜಮಾಗಡಿ, ನರಗುಂದ.


N-2601 

  10-08-2024 05:58 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಈ ಸಲದ ಲೇಖನದಲ್ಲಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ದೇಶದ ಸಮಗ್ರ ಜನತೆಗೆ ಅನ್ನದಾತರಾದ ರೈತರ ಬವಣೆಗೆ ದನಿಯಾಗಿದ್ದಾರೆ. ರೈತರು ಬೆಳೆದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೈಕೊಟ್ಟಾಗ ಬೆಳೆ ವಿಮೆ ಹಣವನ್ನು ಆಯಾ ಸಾಲಿನ ವರ್ಷದಲ್ಲಿ ನಷ್ಟವುಂಟಾದ ಬೆಳೆಯ ಪ್ರಮಾಣಕ್ಕೆ ಅನುಗುಣವಾಗಿ ಸರಾಸರಿ ಇಳುವರಿ ಲೆಕ್ಕ ಹಾಕಿ ವಿಮಾ ಹಣ ಪಾವತಿಸುವ ಬದಲು ವಿಮಾ ಕಂಪೆನಿಗಳು ಅವೈಜ್ಞಾನಿಕ ಮಾರ್ಗದಂಡಗಳನ್ನು ವಿಧಿಸಿ ಯಾವ ರೀತಿ ಮುಗ್ದ ರೈತರನ್ನು ಕುತಂತ್ರದಿಂದ ವಂಚಿಸಿ ಮೋಸ ಮಾಡುವರೆಂದು ತಿಳಿಸಿರುವುದು ಆಳುವ ಸರಕಾರದ ರಾಜಕಾರಣಿಗಳಿಗೆ ಮತ್ತು ವಿಮೆ ಕಂಪೆನಿಗಳಿಗೆ ಚಾಟಿ ಬೀಸಿದಂತಿದೆ. ವಿಮಾ ಕಂಪೆನಿಗಳ ಈ ವ್ಯವಸ್ಥಿತ ಮೋಸ `ಗಾಯಕ್ಕೆ ಉಪ್ಪು` ಸುರಿದಂತಾಗಿದೆ.

ಇಂತಹ ಬಡ ರೈತರ ಕಷ್ಟಕ್ಕೆ ಸ್ಪಂದಿಸಿ 70 ಕೋಟಿ ವಿಮಾ ಹಣವನ್ನು ನಷ್ಟ ಅನುಭವಸಿದ ರೈತರಿಗೆ ಕೊಡ ಮಾಡಲು ಪರಮ ಪೂಜ್ಯ ಗುರುಗಳು ತುರ್ತು ಕ್ರಮ ಜರುಗಿಸಿ ಕಾರಣವಾಗಿರುವುದು ಹೋಗುತ್ತಿದ್ದ ರೋಗಿಯ ಜೀವಕ್ಕೆ ಸಕಾಲದಲ್ಲಿ ಗ್ಲುಕೋಸ್ ನೀಡಿ ಬದುಕಿಸಿದಂತಾಗಿದೆ.

ಸರಕಾರಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ಉದ್ಯಮಿಗಳು ಸಂಬಳದಾರರ ಹಿತಕ್ಕೆ ಒತ್ತು ನೀಡದೆ `ರೈತ ಸ್ನೇಹಿ` ಬಜೆಟ್ ಮಂಡಿಸಿ ಬೇಸಾಯ ಅನ್ನುವ `ದೇಶದ ಬೆನ್ನೆಲುಬು` ಮುರಿಯದಂತೆ ಮುತುವರ್ಜಿ ವಹಿಸುವುದು ಸಮಂಜಸ.

ಲೇಖನದ ಮೂಲಕ ಎಲ್ಲರ ಕಣ್ಣು ತೆರೆಸಿರುವ ಪರಮ ಪೂಜ್ಯ ಶ್ರೀ ಜಗದ್ಗುರುಗಳವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು...
🙏🏻🙏🏻🙏🏻.
ಡಿ. ಪ್ರಸನ್ನಕುಮಾರ್, ಬೆಂಗಳೂರು


N-2600 

  10-08-2024 09:08 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಮಠದ ಬಗ್ಗೆ, ಸ್ವಾಮಿಗಳ ಬಗ್ಗೆ ರೆಸಾರ್ಟ್ ನಲ್ಲಿ ಹಾದಿಬೀದಿಯಲ್ಲಿ ಮಾಧ್ಯಮದವರ ಮುಂದೆ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರುವಂತದ್ದಲ್ಲ. ನಮ್ಮ ಸಮಾಜಕ್ಕೆ ನಮ್ಮ ಮಠಕ್ಕೆ ತನ್ನದೇ ಆದ ಗೌರವ ಮತ್ತು ವರ್ಚಸ್ಸು ಇದೆ ಇದಕ್ಕೆ ಕಾರಣ ಕರ್ತರು ನಮ್ಮ ಪೀಠಾಧಿಪತಿಗಳು. ಚುನಾವಣೆ ಸಂದರ್ಭ ಸ್ವಾಮಿಗಳ ಆಶೀರ್ವಾದ ಪಡೆದ ಕಾರಣಕ್ಕಾಗಿ ನಮ್ಮ ಸಮಾಜ ಒಗ್ಗಟ್ಟಿನಿಂದ ಆ ವ್ಯಕ್ತಿಗಳನ್ನು ಗೆಲ್ಲಿಸಿರುವ ಉದಾಹರಣೆ ನಮ್ಮಗಳ ಮುಂದೆ ಇದೆ. ಅಂತಹ ರಾಜಕಾರಣಿಗಳು ಹಾಗೂ ಮಠದ ಆಶ್ರಯ ಪಡೆದು ಆರ್ಥಿಕವಾಗಿ ಸದೃಡವಾಗಿರುವ ವ್ಯವಹಾರಿಕರು ಈ ರೀತಿ ಮಾತನಾಡಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದೀರಿ. ಮಠದಿಂದ ಅರ್ಥಾತ್ ಸ್ವಾಮಿಗಳಿಂದ ಯಾವುದೇ ಉಪಯೋಗ ಪಡೆಯದ ಸದ್ಬಕ್ತರು ಸುಮ್ಮನಿರುವಾಗ, ಅವಕಾಶವಾದಿಗಳಾದ ತಾವುಗಳು ಈ ರೀತಿ ಮಾತನಾಡುವುದು ಸರಿಯಲ್ಲ. ಹೌದಾ ತಪ್ಪಾಗಿದೆಯಾ? ಸಮಾಜಕ್ಕೆ ಅನ್ಯಾಯ ಆಗಿದೆಯೆ? ಭಕ್ತರೊಂದಿಗೆ ಮಠಕ್ಕೆ ಹೋಗಿ ಪ್ರಶ್ನೆ ಮಾಡಿ. ಚರ್ಚೆ ಮಾಡಿ ವಿಮರ್ಶೆ ಮಾಡಿ ತಪ್ಪೇನು... ಯಾಕೆ ಮಠಕ್ಕೆ ಹೋಗುವ ನೈತಿಕತೆ ಇಲ್ಲವೇ ತಮಗೆ...

ಶ್ರೀಧರ ಬಿ ಸಿ
ಪಾಂಡೋಮಟ್ಟಿ. ಚನ್ನಗಿರಿ. ದಾವಣಗೆರೆ.

N-2602 

  10-08-2024 08:31 AM   

ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಸತ್ಯದ ಮೂಲವನ್ನು ಅರಿತು ಮಾತನಾಡಿ : ವಿರೋಧಿಗಳಿಗೆ ಸಿರಿಗೆರೆಶ್ರೀ ಸ್ಪಷ್ಟನೆ

 Ji taralabaalu
Srinivas ks Srinivas
Hulemalali karnataka chitradurga

N-2600 

  10-08-2024 08:20 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಪರಮ ಪೂಜ್ಯರ ಪಾದಗಳಿಗೆ ಶರಣು.

ಬುದ್ಧಿ...ನಾನು ಸಿದ್ದಗಂಗಾ ಮತ್ತು ಸುತ್ತೂರು ಮಠದ ವಿದ್ಯಾರ್ಥಿ..ಮಠದ ಎಲ್ಲ ಚಟುವಟಿಕೆಯನ್ನು ಒಳ ಹೊರಗನ್ನು ಹತ್ತಿರದಿಂದ
ನೋಡಿದ್ದೇನೆ...ಆದರೆ ಸಿರಿಗೆರೆ ತರಳಬಾಳು ಮಠ ಎಂದರೆ ಅದೆಷ್ಟು ಗೌರವ ಇತ್ತು ಇತರ ಮಠಗಳಲ್ಲಿ
ಅನ್ನೋದನ್ನು ನೋಡಿದ್ದೆ...ನಿಮ್ಮಂಥ ಸ್ವಾಮಿಗಳು ನಮ್ಮ ಸಮಾಜಕ್ಕೆ ಇಲ್ಲವಲ್ಲ ಎಂದು ಹೊಟ್ಟೆಕಿಚ್ಚು ಪಟ್ಟವರನ್ನು ನೋಡಿದ್ದೇನೆ.. ಈ ಬೇಸರ ನನಗೂ ಇದೆ..ನಾನು ಹುಟ್ಟಿದ ಸಮಾಜಕ್ಕೆ ಇಂಥ ಒಬ್ಬ ಗುರು ಸಿಗಲಿಲ್ಲವಲ್ಲ ಎಂದು .

ಬುದ್ಧಿ ..ನಿಮ್ಮ ಭಕ್ತರ ಒಗ್ಗಟ್ಟು...ನಿಷ್ಠೆ..ಬಹುಶಃ ಕರ್ನಾಟಕದ ಯಾವ ವೀರಶೈವ ಮಠಗಳಿಗೂ ಇಲ್ಲ.
ಹಾಗೆ ಇದು ನನ್ನ ಅನಿಸಿಕೆ..ಕೂಡ
ನಾನು ಸಾಧು ವೀರಶೈವ ಸಮಾಜದ ವ್ಯಕ್ತಿಯಲ್ಲ
ಆದರೂ ಸಿರಿಗೆರೆ ಮಠದ ಯಾವ ಕಾರ್ಯಕ್ರಮಗಳು ನಡೆದರು ..ತಾವು ನಮ್ಮ ಸುತ್ತ ಎಲ್ಲಿ ದಯಮಾಡಿಸಿದರು ಅಲ್ಲಿ ತಮ್ಮ ದರ್ಶನಕ್ಕೆ ಬರುತ್ತಿದ್ದೆ .ಕಾರಣ ತಮ್ಮ ವ್ಯಕ್ತಿತ್ವ..ವಿದ್ವತ್ತು..ಶಿಷ್ಟರ ಮೇಲೆ ಇಟ್ಟಿರುವ ವಾತ್ಸಲ್ಯ...ಮೇಲಾಗಿ ಬಿಸಿಲು ಬೆಳದಿಂಗಳು ಅಂಕಣ..
ಬುದ್ಧಿ.. ತಮ್ಮ ವ್ಯಕ್ತಿತ್ವ ಮತ್ತು ಸತ್ಯ ಸಂಕಲ್ಪಕ್ಕೆ ಸದಾ ವಿಜಯ ಇದ್ದೆ ಇರುತ್ತದೆ.. ಇಂಥ ಕೆಲವು ದುಷ್ಠ ಕೂಟಗಳು ಕರ್ನಾಟಕದ ಪ್ರತಿಷ್ಠಿತ ವೀರಶೈವ ಮಠಗಳನ್ನು ಹಾಳು ಮಾಡಿವೆ.. ಇದಕ್ಕೆ ತಮ್ಮ ಭಕ್ತರು.. ಸಮಾಜದ ನಿಷ್ಠಾವಂತ ಮುಖಂಡರು ಅವಕಾಶ ಕೊಡದೆ.. ತಮ್ಮ ಬೆಂಬಲವಾಗಿ ನಿಲ್ಲಬೇಕು. ಇತಿಹಾಸದಿಂದ ನಾವು ಪಾಠ ಕಲಿಯದಿದ್ದರೆ ಬಹುಶಃ ಸಿರಿಗೆರೆ ಮಠದ ಪ್ರತಿಷ್ಠೆಯನ್ನು ಇಂತಹ ವ್ಯವಹಾರಿಕ ಭಕ್ತರು ಮಣ್ಣು ಪಾಲು ಮಾಡದೇ ಇರಲಾರರು. ಸಿರಿಗೆರೆ ಮಠದ ಪೂರ್ವದ ಜಗದ್ಗುರುಗಳು ಪಟ್ಟ ಕಷ್ಟ ಮಠದ ಒಳಗೆ ಇದ್ದೆ ಶತ್ರುಗಳಿಂದಲೇ ಹೊರತು ಬೇರೆ ಶಕ್ತಿಗಳಿಂದ ಕಡಿಮೆ.ಇದನ್ನ ತಾವೇ ಕೆಲ ಬಾರಿ
ಹೇಳಿದ್ದೀರಿ.
ಸಮಕಾಲೀನ ಚಿಂತನೆ..ಇವತ್ತಿನ ಅವಶ್ಯಕತೆ ..ಸವಾಲುಗಳಿಗೆ ಇಂಥ ಇಳಿವಯಸ್ಸಿನಲ್ಲಿ ನಿಮ್ಮ ದಿಟ್ಟತನ..ಸಮಾಜಪರ ನಿಷ್ಠೆ...ರೈತ ಕಾಳಜಿ..ಸಾಹಿತ್ಯ ಪ್ರೀತಿ...ತಾಯಿ ಹೃದಯ.

ಈ ಕಾರಣದಿಂದ ತರಳಬಾಳು ಸದ್ಭಕ್ತರಲ್ಲಿ ನನ್ನದೊಂದು ಮನವಿ ಈ ಸದ್ಧರ್ಮ ಸಿಂಹಾನಕ್ಕೆ ಎಂಥ ಉತ್ತರಾಧಿಕಾರಿ ನೇಮಕ ಆಗಬೇಕೆಂಬ ದೂರ ದೃಷ್ಟಿ ಇರುವುದು ಪೂಜ್ಯರಿಗೆ..ಹಾಗಾಗಿ ಈ ಆಯ್ಕೆಯ ಹಕ್ಕು ಮತ್ತು ಜವಾಬ್ದಾರಿಯನ್ನು ಸಮಾಜ ಪೂಜ್ಯ ಶ್ರೀಗಳಿಗೆ ನೀಡುವದು ಇವತ್ತಿನ ಅವಶ್ಯಕತೆ..ಅದೇ ಬುದ್ದಿವಂತಿಕೆ..
ಶಿಸ್ತಿನ...ಒಗ್ಗಟ್ಟಿನ...ಸಮಾಜ ನಮ್ಮ ಕಣ್ಣೆದುರೇ ಒಡೆದು ಹೋಗದಂತೆ ಜಾಗ್ರತೆ ವಹಿಸಿ..ಅಖಂಡ ವೀರಶೈವ ಸಮಾಜದ ಗೌರವ ಸಿರಿಗೆರೆ ತರಳಬಾಳು ಮಠದ ಕಾರಣದಿಂದ ಹೆಚ್ಚಾಗಿದೆ ಅನ್ನುವುದನ್ನ ನಾನು ನಿವೇದಿಸಿಕೊಳ್ಳುತ್ತ...ಮುಂದಿನ ದಿನಗಳಲ್ಲಿ ಒಳಿತಾಗಲಿ ದಾರಿ ಬಿಟ್ಟ ಕೆಲ ಭಕ್ತರು ಬುದ್ಧಿ ಕಲಿಯಲಿ..ತಮ್ಮ ಆರೋಗ್ಯ ಸ್ತಿರವಿದ್ದು ಉಳಿದ ವೀರಶೈವ ಸಮಾಜಗಳಿಗೂ ಮಾರ್ಗದರ್ಶನದ ಆಶೀರ್ವಾದಗಳನ್ನು ಕರುಣಿಸಿ ಬುದ್ಧಿ..
ಶರಣು..
ಕುಮಾರ ಸ್ವಾಮಿ ಎನ್ ಬಿ
ಚಿಕ್ಕಮಗಳೂರು

N-2601 

  09-08-2024 11:51 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಈ ವಾರದ ಲೇಖನದಲ್ಲಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ದೇಶದ ಸಮಗ್ರ ಜನತೆಗೆ ಅನ್ನದಾತರಾದ ರೈತರು ತಾವು ಬೆಳೆದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಬೆಳೆ ಕೈಕೊಟ್ಟಾಗ ಬೆಳೆ ವಿಮೆ ಹಣವನ್ನು ಆಯಾ ಸಾಲಿನ ವರ್ಷದಲ್ಲಿ ನಷ್ಟವುಂಟಾದ ಬೆಳೆಯ ಪ್ರಮಾಣಕ್ಕೆ ಅನುಗುಣವಾಗಿ ಸರಾಸರಿ ಇಳುವರಿ ಲೆಕ್ಕ ಹಾಕಿ ವಿಮಾ ಹಣ ಪಾವತಿಸುವ ಬದಲು ವಿಮಾ ಕಂಪೆನಿಗಳು ಅವೈಜ್ಞಾನಿಕ ಮಾರ್ಗದಂಡಗಳನ್ನು ವಿಧಿಸಿ ಯಾವ ರೀತಿ ಮುಗ್ದ ರೈತರನ್ನು ಕುತಂತ್ರದಿಂದ ವಂಚಿಸಿ ಮೋಸ ಮಾಡುವರೆಂದು ತಿಳಿಸಿರುವುದು ಆಳುವ ಸರಕಾರದ ರಾಜಕಾರಣಿಗಳಿಗೆ ಮತ್ತು ವಿಮೆ ಕಂಪೆನಿಗಳಿಗೆ ಚಾಟಿ ಬೀಸಿದಂತಿದೆ.

ವಿಮಾ ಕಂಪೆನಿಗಳ ಈ ವ್ಯವಸ್ಥಿತ ಮೋಸ `ಗಾಯಕ್ಕೆ ಉಪ್ಪು` ಸುರಿದಂತಾಗಿದೆ.

ಇಂತಹ ಬಡ ರೈತರ ಕಷ್ಟಕ್ಕೆ ಸ್ಪಂದಿಸಿ 70 ಕೋಟಿ ವಿಮಾ ಹಣವನ್ನು ನಷ್ಟ ಅನುಭವಸಿದ ರೈತರಿಗೆ ಕೊಡ ಮಾಡಲು ಪರಮ ಪೂಜ್ಯ ಗುರುಗಳು ತುರ್ತು ಕ್ರಮ ಜರುಗಿಸಿ ಕಾರಣವಾಗಿರುವುದು ಸಾಯುತ್ತಿದ್ದ ರೋಗಿಯ ಜೀವಕ್ಕೆ ಸಕಾಲದಲ್ಲಿ ಗ್ಲುಕೋಸ್ ನೀಡಿ ಬದುಕಿಸಿದಂತಾಗಿದೆ.

ಸರಕಾರಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ಉದ್ಯಮಿಗಳು ಸಂಬಳದಾರರ ಹಿತಕ್ಕೆ ಒತ್ತು ನೀಡದೆ `ರೈತ ಸ್ನೇಹಿ` ಬಜೆಟ್ ಮಂಡಿಸಿ ಬೇಸಾಯ ಅನ್ನುವ `ದೇಶದ ಬೆನ್ನೆಲುಬು` ಮುರಿಯದಂತೆ ಮುತುವರ್ಜಿ ವಹಿಸುವುದು ಸಮಂಜಸ.
ಲೇಖನದ ಮೂಲಕ ಎಲ್ಲರ ಕಣ್ಣು ತೆರೆಸಿರುವ ಪರಮ ಪೂಜ್ಯಶ್ರೀ ಜಗದ್ಗುರುಗಳವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು...

🙏🏻🙏🏻🙏🏻
ಡಿ. ಪ್ರಸನ್ನಕುಮಾರ್
ಬೆಂಗಳೂರು

N-2599 

  09-08-2024 10:00 PM   

ಸಮಾಜದ ಆಗು ಹೋಗುಗಳ ಬಗ್ಗೆ ಶ್ರೀ ಗಳ ಹತ್ತಿರ ಚರ್ಚೆ ( ದಿನಾಂಕ - 05-08-2024 )

 Gurugalu corect ge heltidhre om namah shivaya 🕉️🕉️🕉️🚩🚩🚩🚩🙏🙏🙏🙏
B k shashidhar
Birur, kadur tq, chikamanglur destrik,

N-2601 

  09-08-2024 09:30 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಪರಮ ಪೂಜ್ಯರಲ್ಲಿ ಪ್ರಣಾಮಗಳನ್ನು ಸಲ್ಲಿಸುತ್ತಾ ,"ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮಹಾ ಮೋಸ " ಅಂಕಣವನ್ನು ಓದುತ್ತಾ ನನಗೆ ಗುರುಗಳಿಗೆ ರೈತರ ಮೇಲಿರುವ ಕಾಳಜಿ ಎಷ್ಟಿದೆ ಎಂದು ತಿಳಿಯುತ್ತದೆ. ಸುಮಾರು ನಾಲ್ಕೈದು ವರ್ಷಗಳಿಂದ ಮೆಕ್ಕೆಜೋಳದ ಬೆಳೆವಿಮೆ ಬಂದಿದ್ದಿಲ್ಲ. ಈ ವರ್ಷ ಮಾತ್ರ ಬಂದಿದೆ. ನಮ್ಮ ರೈತರು ಅಮಾಯಕರು ಈ ವರ್ಷ 90% ರೈತರು ಬೆಳೆವಿಮೆ ಕಟ್ಟಿದ್ದಾರೆ. ಆದರೆ ದುರದೃಷ್ಟ ಅಂದರೆ ಈ ವರ್ಷ ಬೆಳೆಯ ಬೆಳೆವಿಮೆ ಬರುವುದಿಲ್ಲ. 100% ಸತ್ಯ
ಒಟ್ಟಾರೆ ಯಾವ ಸರ್ಕಾರ ಬಂದರು ರೈತರಿಗೆ ಮಹಾ ಮೋಸನೆ , ಇದನ್ನು ಮನದಲ್ಲಿ ಇಟ್ಟುಕೊಂಡು ನಮ್ಮ ಗುರುಗಳು ಈ ಅಂಕಣವನ್ನು ಬರೆದಿದ್ದಾರೆ. ನಮ್ಮಗುರುಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ ಮುಂದಿನ ತರಳಬಾಳು ಹುಣ್ಣಿಮೆ ಭರಮಸಾಗರ ದಲ್ಲಿ ನಡೆಯುವಾಗ ಪ್ರತಿ ದಿನ ರೈತರ ಬಗ್ಗೆ ಮಾತನಾಡುವ ಅತಿಥಿ ಯನ್ನೂ ಕರೆಯಿಸಿಕೊಳ್ಳಿ. ರಾಜಕೀಯ ದವರನ್ನು ಆದಷ್ಟು (ಅವಾಯ್ಡ್) ಕಡಿಮೆ ಮಾಡಿ.
ಮಂಜನಗೌಡ ಕೆ. ಜಿ.
ಭರಮಸಾಗರ

N-2422 

  09-08-2024 08:15 PM   

ಉಚಿತ ಆರೋಗ್ಯ ತಪಾಸಣಾ ಶಿಬಿರ : ಎಸ್.ಎಸ್.ಕೇರ್ ಟ್ರಸ್ಟ್ ದಾವಣಗೆರೆ -

 ಮಾನ್ಯ ಸಮಾಜದ ಅಧ್ಯಕ್ಷರೆ ತಾವು ದಯವಿಟ್ಟು ಪೂಜ್ಯರ ಗಮನಕ್ಕೆ ತಂದು ಒಂದು ದಿನಾಂಕ ನಿಗದಿ ಮಾಡಿ ಒಂದು ಬಹಿರಂಗ ಸಭೆ ಕರೆಯಿರಿ ಆಗ ಎಲ್ಲ ರೆಸರ್ಟ್ ಭಕ್ತರು ಭಾಗವಹಿಸಿ. ಅವರ ಸಮಸ್ಯೆಗಳನ್ನು ಸಭೆ ಗಮನಕ್ಕೆ ತರಲ ಆದು ಬಿಟ್ಟು ಅಲ್ಲಿ ಇಲ್ಲಿ ಪ್ರೇಸ್ ಮಿಟ್ ಮಾಡದಿರಲಿ ಸಮಾಜದ ಕಲ್ಕ ಕಳಿ ಕಳಿ ಇಂದ ನಾನು ಮಾತಾನಾ ತ್ತದ್ದೆನ ಲಿಂಗ ಮೂರ್ತಿ
ಸಿರಿಗೆರೆ
India

N-2601 

  09-08-2024 07:50 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ" ಶೀರ್ಷಿಕೆಯಡಿಯಲ್ಲಿ ಶ್ರೀ ಗುರುಗಳು ರಚಿಸಿದ ಬರಹ ರೈತನ ಒಡಲಳಲನ್ನು ಅನುಭವಿಸಿ ನೋವಿನಿಂದ ಅಭಿವ್ಯಕ್ತಿಸಿದಂತಿದೆ. ಬಡತನದಲ್ಲಿ ಬೆಂದು ಒಡೆಯಂಗೊಡಲ ತೋರಿ ತನ್ನ ಬಾಳ ಬವಣೆಯನ್ನು ಬಿನ್ನವಿಸಿಕೊಳ್ಳುವ ರೈತನಿಗೆ ಪ್ರತಿಫಲವೇ ಅನಿಶ್ಚಿತ. ಕೃಷಿ ಕಾಯಕ ಅವನ ಒಡಲಿಗೆ ಬರೆಯೇ ಆಗಿದೆ. ಇಂಥದರಲ್ಲಿ ಸರ್ಕಾರದ ಬೆಳೆ ವಿಮೆ ಯೋಜನೆಯೊಂದು ಮರೆಮೋಸದ ವಂಚನೆಯೇ ಸರಿ. ಈ ಯೋಜನೆಯ ಪ್ರಕಾರ ಹೊಸ್ತಿಲ ಲೆಕ್ಕಾಚಾರದ ಬದಲು ಆಯಾ ವರ್ಷದ ನಷ್ಟದ ಲೆಕ್ಕಾಚಾರವನ್ನು ಆಯಾಯ ವರ್ಷವೇ ಲೆಕ್ಕ ಹಾಕಿ ವಿಮಾ ಹಣವನ್ನು ಪಾವತಿಸುವುದು ಸೂಕ್ತ. ತನ್ನ ಉತ್ಪಾದನೆಗೆ ಬೆಲೆ ನಿಗದಿಪಡಿಸಲಾರದ ಏಕೈಕ ಉತ್ಪಾದಕನೆಂದರೆ ರೈತ ಮಾತ್ರ. ಆತನೊಡಲು ಹಸಿದು ಸಂಕಟವನ್ನನ್ನುಭವಿಸದಂತೆ ನೋಡಿಕೊಳ್ಳಬೇಕಾಗಿದ್ದು ವ್ಯವಸ್ಥೆಯ ಹೊಣೆಯಾಗಿದೆ ಎಂದು ಎಚ್ಚರಿಸಿದ ಶ್ರೀ ಗುರುಗಳಿಗೆ ಶರಣು ಶರಣಾರ್ಥಿಗಳು 🙏

ವೆಂಕಟೇಶ ಜನಾದ್ರಿ, ಕಲಬುರ್ಗಿ.


N-2601 

  09-08-2024 07:44 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ*
ಪೂಜ್ಯರ ಅಂಕಣಕ್ಕೆ ನನ್ನ ಪ್ರತಿಕ್ರಿಯೆ.

ರೈತಾಪಿ ವರ್ಗದವರಿಗೆ ನಡೆಯುತ್ತಿರುವ ಅನ್ಯಾಯಗಳನ್ನು ಗುರುಗಳು ವಿವರವಾಗಿ ಬಿಡಿಸಿ ಹೇಳಿದ್ದಾರೆ. ಪ್ರತಿಯೊಂದು ಎಜೆನ್ಸಿ, ರಾಜಕೀಯದವರು ರೈತರನ್ನು ದಾಳಗಳನ್ನಾಗಿ ಬಳಸಿಕೊಂಡು ಶೋಷಿಸುತ್ತಿದ್ದಾರೆ. ಪ್ರಕೃತಿ ವಿಕೋಪದಿಂದ ಹಲವಾರು ಗ್ರಾಮಗಳು ಕಾಣೆಯಾಗಿರುವ ಸಂದರ್ಭದಲ್ಲಿ ಬಡ ರೈತರ ಅನಾಯಗಳನ್ನು ಪ್ರಸ್ತಾಪಿಸಿರುವ ಗುರುಗಳಿಗೆ ಪ್ರಣಾಮಗಳು.

ಅನ್ನ ನೀಡುವ ಬಡ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ರೈತರಿಗೆ ನಾವು ಸದಾ ಋಣಿಯಾಗಿರಬೇಕು ಎಂಬ ಆಶಯದೊಂದಿಗೆ ಗುರುಗಳಿಗೆ ವಂದನೆಗಳು ಹಾಗೂ ನನಗೆ ಪ್ರತಿಕ್ರಿಯೆ ಬರೆಯಲು ಪ್ರೋತ್ಸಾಹ ನೀಡುತ್ತಿರುವ ಶ್ರೀ ವೆಂಕಟೇಶ ಶೆಟ್ಟಿಯವರಿಗೆ ಧನ್ಯವಾದಗಳು

ಅಶೋಕ ಟಿ ಎನ್, ಬೆಂಗಳೂರು


N-2601 

  09-08-2024 07:39 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಈ ದಿನದ ಲೇಖನ ತುಂಬಾ ಅರ್ಥಪೂರ್ಣವಾಗಿತ್ತು ನಮ್ಮ ಎಲ್ಲಾ ವಿದ್ಯಾರ್ಥಿಗಳ ಎದುರಿಗೆ ವಾಚನ ಮಾಡಲಾಯಿತು. ರೈತರಿಗೆ ಆಗುತ್ತಿರುವ ತೊಂದರೆಯನ್ನು ಬಹಳ ಸರಳವಾಗಿ ಪರಮಪೂಜ್ಯರು ತಿಳಿಸಿದ್ದಾರೆ ಧನ್ಯವಾದಗಳು 🙏🏻🙏
ಮರುಳಸಿದ್ಧಯ್ಯ ಶಾಸ್ತ್ರಿ ಶಾಂತಿವನ, ಸಿರಿಗೆರೆ


N-2601 

  09-08-2024 07:35 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಬಿಸಿಲು ಬೆಳದಿಂಗಳ
ಪೂಜ್ಯರಾದಂತಹ ಡಾ. ಶಿವಮೂರ್ತಿ
ಶಿವಾಚಾರ್ಯ ಸಿರಿಗೆರೆ.

ಮೇಟಿವಿದ್ಯಾ ಸಂಪನ್ನರಿಗೆ ಮರೆಮೋಸ.
ಎನ್ನುವುದರೊಂದಿಗೆ ತಮ್ಮ ಮಾತುಗಳು ರೈತರ ಮೇಲೆ
ಕನಿಕರ ತೋರಿವೆ.

ಪೂಜ್ಯರು ಹೇಳಿದ ಮಾತು ಸತ್ಯ.
ನಾವು ರೈತರು ಬೆಳೆದ ಬೆಳೆಗಳನ್ನು ಅಲ್ಪ ರೇಟಿಗೆ ಖರೀದಿ ಮಾಡ್ತಾರೆ. ನಾವು ಏನಾದರೂ
ಖರೀದಿ ಮಾಡಬೇಕು ಅಂದರೆ
ಒನ್ ಟೂ ಡಬಲ್ ಹೇಳ್ತಾರೆ.
ನೀಜವಾಗ್ಲೂ ನಾವು ರೈತರಿಲ್ಲಂದರೆ
ನೀರು ಕುಡಿದು ಇರುವ ಪರಿಸ್ಥಿತಿ ಬರುತ್ತಿತ್ತು. ಇವಾಗ ನೀರು ಕೂಡ ಅಷ್ಟಕಷ್ಟೆ. ಎಲ್ಲಾ ಜಲ ಬತ್ತಿ ಹೋಗಿವೆ
ಬ್ಯಾಸಿಗೆಯಲ್ಲಂತು ಕೇಲವೊಂದು ಬೋರ್ ಬಂದ್ ಆಗುತ್ತಿವೆ. ದನ ಕರುಗಳಿಗೆ ನೀರು ಸಿಗುವುದು ಕಷ್ಟ ಇನ್ ಬೆಸಿಗೆ ಪೀಕೂ ಮಾಡುವುದಂತು ದೂರದ ಮಾತು. ಮಳೆಗಾಲದಲ್ಲಿ ಮಳೆ ಚೊಲೊ ಇದ್ದು ಪೀಕೂ ಜವ್ಳ್ ಹಿಡಿದು ಹಾಳಾಗುತ್ತವೆ. ಬೇಸಿಗೆಯಲ್ಲಿ
ಇನ್ನೆನ್ ಪೀಕು ಚೊಲೊ ಇದಾವು ಅನ್ನೊಷ್ಟತ್ತಿಗೆ ಬೊರ್ ನೀರು ಬತ್ತಿ ಹೊಗ್ತಿವೆ. ಪೀಕೂ ಒಣಗಿ ರೈತರು ನೋವು ಸಂಕಟದಿಂದ ಕಣ್ಣೇರಿಡುತ್ತಿರುತ್ತಾರೆ. ಮತ್ತೊಂದು ವಿಷಯ: ರೈತರೇನು ಗೊಬ್ಬರ ಬೀಜ ತರುವುದಕ್ಕೆ ದುಡ್ಡು ಒಟ್ಟಿಕೊಂಡು
ಕುಳಿತಿರುವುದಿಲ್ಲ. ಹೊಲಾ ಕೂಡ ಲಾವ್ಣಿ ಹಾಕೊಂಡಿತಾ೯ರೆ. ಒಂದು ವರ್ಷಕ್ಕೆ. ಒಂದು ಎಕರೆ ಹೊಲಕ್ಕೆ ಹದಿನಾರು ಸಾವಿರ ರೂಪಾಯಿ. ಪೀಕು ಬಂದರೂ ಸರಿ ಬರದೆ ಇದ್ದರೂ ಸರಿ, ಒಟ್ ಬಡ್ಡಿಸಾಲಾ ಅಥವಾ ತಮ್ಮ ಹೆಂಡತಿ ಮಕ್ಕಳ
ಬಂಗಾರ ಬ್ಯಾಂಕ್ ಒಳಗೆ ಒತ್ತಿ ಇಟ್ಟು
ಲಾವ್ಣಿ ರೊಕ್ಕ ಕೊಟ್ಟು ಉಳಿದ ದುಡ್ಡಲ್ಲಿ ಗೊಬ್ಬರ ಬೀಜ ತರಬೇಕು. ತಮ್ಮ ಮಕ್ಕಳು ಹೆಂಡತಿಯನ್ನು ಕರೆದುಕೊಂಡು ಹೋಗಿ ಹೊಲ ಹೊಡೆದು ಗೊಬ್ಬರ ಹಾಕಿ ಬಿತ್ತಿ ಬರುತ್ತಾರೆ.ಇವಾಗ ಆಳು ಮಾಡಿದರೆ ಹೆಣ್ಣು ಮಕ್ಕಳಿಗೆ ಮುನ್ನೂರು ರುಪಾಯಿ. ಗಂಡು ಮಕ್ಕಳಿಗೆ ಐದನೂರು ರೂಪಾಯಿ ಕೂಲಿ ನಡೆದಿವೆ. ಒಂದ್ ಮಾತ್ನಲ್ಲಿ ಹೇಳಬೆಕಂದರೆ.ಸ್ವಂತ ಹೊಲ ಇದ್ದವರೇ ಪುಣ್ಯವಂತರು. ಲಾವ್ಣಿ ರೊಕ್ಕ ಉಳಿದು ಗೊಬ್ಬರ ಬೀಜದ ಖಚು೯ ಅಷ್ಟೇ. ಭೂಮಿತಾಯಿ ಒಲಿದರೆ ರೈತರ ಮುಖದಲ್ಲಿ ನಗುವು.
ಭೂಮಿತಾಯಿ ಮುನಿದುಕೊಂಡರೆ
ರೈತರು ಮುಖದಲ್ಲಿ ನೋವು.
ಬೆಳೆ ವಿಮೆ ಬರುತ್ತದೆ ಅಂತ ನಂಬುವುದು ಬಹಳ ಮೋಸ. ಕೆಲವೊಂದು ಸರಿ ಬೆಳೆ ಹಾನಿ ಬೆಳೆ ಪರಿಹಾರ ಎನೆಲ್ಲ ಹೇಳಿದರೂ ರೈತರಿಗೆ ಗೊಳು ತಪ್ಪುವುದಿಲ್ಲ.

ನನಗೆ ಬಿಸಿಲು ಬೆಳದಿಂಗಳು.
ಅಂಕಣದಲ್ಲಿ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ
ಸ್ವಾಮಿಜಿ ಸಿರಿಗೆರೆ. ಪೂಜ್ಯರು
ರೈತರ ಬಗ್ಗೆ ಹೇಳಿದ ಮಾತು ಬಹಳ ಸಂತೋಷ ತಂದಿದೆ. ಪೂಜ್ಯರಿಗೆ ನನ್ನ
ಭಕ್ತಿಯ ನಮಸ್ಕಾರಗಳು
ಸುವರ್ಣ ಎಸ್ ಪಾಟೀಲ ವಳಗೆರಿ✍️


N-2601 

  09-08-2024 07:25 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 *ಮೇಟಿ ವಿದ್ಯಾಸಂಪನ್ನರಿಗೆ ಮರೆ ಮೋಸ*

ಬಿಸಿಲು ಬೆಳದಿಂಗಳು ಅಂಕಣಕ್ಕೆ ಪ್ರತಿಕ್ರಿಯೆ.ಎಲ್ಲಿಂದೆಲ್ಲಿಗೆ ಹೋದರೂ ರೈತರಿಗೆ ಅನ್ಯಾಯವಾಗುತ್ತಿದೆ.ಗುರುಗಳು ರೈತರ ನೋವು, ಅವರನ್ನು ಗೋಳಾಡಿಸುವ ಪರಿಯನ್ನು ವಿವರಿಸಿದ್ದಾರೆ.ರೈತರಿಗಾಗಿ ರೈತರೊಬ್ಬರೇ ಹೋರಾಡಬಾರದು.ಅವರಿಂದ ತಾನೇ ನಮಗೆ ಆಹಾರ.ಅಂದಮೇಲೆ ಎಲ್ಲರೂ ಅಂದರೆ ರೈತರಲ್ಲದವರೂ,ಬೇರೆ ಬೇರೆ ಉದ್ಯೋಗದಲ್ಲಿರುವವರು ಎಲ್ಲರೂ ಟೊಂಕ ಕಟ್ಟಿ ನಿಂತಾಗ ಮಾತ್ರ ನಾವು ರೈತರಿಗೆ ನ್ಯಾಯ ಕೊಡಿಸಲು ಸಾಧ್ಯ.
ಮಹಬೂಬಿ ದೈಹಿಕ ಶಿಕ್ಷಣ ಶಿಕ್ಷಕಿ ಸ ಹಿ ಪ್ರಾ ಶಾಲೆ ಮದಕರಿಪುರ ಚಿತ್ರದುರ್ಗ


N-2601 

  09-08-2024 07:07 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಶ್ರೀಗಳರ ಲೇಖನವನ್ನು ಓದಿದೆ. ಮೇಟಿ ವಿದ್ಯೆಯ ರೈತರ ಜೀವನದ ಬಗ್ಗೆ ಮತ್ತು ಅವರ ಕಷ್ಟಗಳ ಬಗ್ಗೆ ಗುರುಗಳು ಚೆನ್ನಾಗಿ ಬರೆದಿದ್ದಾರೆ. ನಾನು ಒಬ್ಬ ರೈತನ ಮಗ ಮತ್ತು ವ್ಯವಸಾಯದ ಎಲ್ಲಾ ವಿಷಯಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ. ಉಪನ್ಯಾಸಕ ವೃತ್ತಿಯನ್ನು ಶ್ರೀ ಸಂಸ್ಥೆ ಪಾಲಿಸದೆ ಹೋಗಿದ್ದರೆ ನನಗೆ ಮೇಟಿ ವಿದ್ಯೆಯೇ ಗತಿಯಾಗುತ್ತಿತ್ತು. ನಾನು ವ್ಯವಸಾಯ ಮಾಡಿದ್ದೇನೆ. ಗುರುಗಳು ರೈತರಿಗೆ ಬರಬೇಕಾದ ವಿಮಾ ಹಣವನ್ನು ದೊರಕುವಂತೆ ಮಾಡಿದ್ದಾರೆ . ಅದು ಸಣ್ಣ ಮೊತ್ತವಲ್ಲ. ಎಪ್ಪತ್ತು ಕೋಟಿ ರೂಪಾಯಿಗಳು. ಜಗಳೂರು ತಾಲೂಕಿನ ರೈತರು ಶ್ರೀಗಳ ಗಮನಕ್ಕೆ ತರದಿದ್ದರೆ ಹಣ ಪಡೆಯುವುದು ಕಷ್ಟವಾಗುತ್ತಿತ್ತು. ನಾನು ವ್ಯವಸಾಯ ಮಾಡುವಾಗ ಕಡಿಮೆ ಪ್ರಮಾಣದ ಔಷಧ ಗೊಬ್ಬರ ಬಳಸುತ್ತಿದ್ದೆ. ಕೃತಕ ಗೊಬ್ಬರ ಹೆಚ್ಚಾಗಿ ಬಳಸುತ್ತಿದ್ದಿಲ್ಲ. ಈಗಿನ ರೈತರುಗಳು ಬೀಜ ಗೊಬ್ಬರ ಔಷಧಿ ಕಂಪನಿಗಳ ಶೋಷಣೆಗೆ ಈಡಾಗಿದ್ದಾರೆ. ನಾನು ಕೆಲಸಕ್ಕೆ ಬಂದ ಕೆಲಸಗಾರರಿಗೆ ಹೊಟ್ಟೆ ತುಂಬ ಊಟ ಕೊಟ್ಟು, ಸರಿಯಾದ ವೇತನವನ್ನು ಅಥವಾ ಕೂಲಿಯನ್ನು ಕೊಡುತ್ತಿದ್ದೆ. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಎಂಬ ತಾರತಮ್ಯ ಮಾಡುತ್ತಿರಲಿಲ್ಲ. ಮುಂಜಾನೆ ಹತ್ತು ಗಂಟೆಯಿಂದ ಸಾಯಂಕಾಲ 5:00 ವರೆಗೆ ಮಾತ್ರ ಕೆಲಸ. 14 ವರ್ಷ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ . ಧಾನ್ಯ ಒಕ್ಕಲು ಮಾಡಿದಾಗ ನಾನು ಬೆಳೆದ ಧಾನ್ಯವನ್ನು ಉದಾರವಾಗಿ ಕೊಡುತ್ತಿದ್ದೆ. ನಾನು ಬಹಳ ನಿರೀಕ್ಷಣೆ ಮಾಡುತ್ತಿರಲಿಲ್ಲ. ನನ್ನ ವ್ಯವಸಾಯ ನೋಡಿ ಜನರು ನಗುತ್ತಿದ್ದರು. ರೈತ ದೇಶದ ಆಸ್ತಿ. ಅವನು ಬೆಳೆದ ಧಾನ್ಯವನ್ನು ನಾವು ಊಟ ಮಾಡುತ್ತೇವೆ. ಬೆಂಗಳೂರಿನ ಮೆಟ್ರೋ ರೈಲ್ ನಲ್ಲಿ ಮತ್ತು ಒಂದು ಮಾಲಿನಲ್ಲಿ ರೈತನಿಗೆ ಪ್ರವೇಶ ನೀಡಲಿಲ್ಲ. ಇದು ಅಕ್ಷಮ್ಯ ಅಪರಾಧ. ನಾವು ಹಣ ಅಥವಾ ಬಂಗಾರವನ್ನು ತಿನ್ನುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರೈತರ ಯೋಜನೆಗಳನ್ನು ನಿರ್ಮಿಸುವವರಿಗೆ, ರಾಜಕಾರಣಿಗಳು‌‌ ಮತ್ತು ಅಧಿಕಾರಿಗಳನ್ನು ಕೆಲವು ವಾರಗಳ ಕಾಲ ಹೊಲದಲ್ಲಿ ಕೆಲಸ ಮಾಡಿಸಬೇಕು. ಆಗ ಗೊತ್ತಾಗುತ್ತದೆ ರೈತರ ಬವಣೆಗಳು. ಏನೇ ಇರಲಿ ಶ್ರೀಗಳು ರೈತರ ಬಗ್ಗೆ ಲೇಖನ ಬರೆದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ರೈತ ಬೆಳೆದ ಬೆಳೆಗೆ ಒಳ್ಳೆಯ ಲಾಭ ಸಿಗಬೇಕು. ಮಾರುಕಟ್ಟೆಗಳಲ್ಲಿ ಖರೀದಿದಾರರು ಎಲ್ಲೋ ಇರುತ್ತಾರೆ. ಸ್ಥಳೀಯ ವ್ಯಾಪಾರಿಗಳ ಮಧ್ಯವರ್ತಿಗಳು ಕಾರಬಾರು ನಡೆಸುತ್ತಿದ್ದಾರೆ. ನಾನು ಒಮ್ಮೆ ಈರುಳ್ಳಿಯನ್ನು ತೆಗೆದುಕೊಂಡು ಮಾರುಕಟ್ಟೆಯೊಂದಕ್ಕೆ ಹೋಗಿದ್ದೆ. ಉರ್ದು ಅಥವಾ ಹಿಂದಿಯಲ್ಲಿ ವ್ಯವಹಾರ. ನಾನು ಪ್ರತಿಭಟಿಸಿದೆ. ನಾನು ಬೆಳೆದ ಈರುಳ್ಳಿಗೆ ಕ್ವಿಂಟಾಲಿಗೆ 400 ರೂಪಾಯಿ ನಿಗದಿ ಮಾಡಿದರು. ಅಲ್ಲಿದ್ದ ರೈತರನ್ನು ಒಟ್ಟಿಗೂಡಿಸಿ ಗಲಾಟೆ ಮಾಡಿದೆ. ಕೊನೆಗೆ 800 ರೂ ಸಿಕ್ಕಿತು. ನಿಮ್ಮಂತಹವರು ಮಾರುಕಟ್ಟೆಗೆ ಬರಬಾರದು ಎಂದು ಹೇಳಿದರು. ಏಕೆಂದರೆ ಪ್ರಶ್ನೆ ಮಾಡುತ್ತೇನೆ ಅಂತ. ಯಾರಾದರೂ ಪ್ರಶ್ನೆ ಮಾಡಿದರೆ ಅವನ ಮಾಲನ್ನೇ ತೆಗೆದುಕೊಳ್ಳುವುದಿಲ್ಲ. ಎಪಿಎಂಸಿಯವರು ಶಾಮೀಲು. ಈ ರೀತಿ ರೈತರ ಶೋಷಣೆ ಬಗ್ಗೆ ಬರೆಯುತ್ತಾ ಹೋಗಬಹುದು. ರೈತರು, ಯುವಕರು, ಕಾರ್ಮಿಕರು ಮತ್ತು ಹೆಣ್ಣು ಮಕ್ಕಳು ಈ ದೇಶದ ಆಧಾರ ಕಂಬಗಳು. ರೈತ ಒಕ್ಕದಿದ್ದರೆ ಬಿಕ್ಕುವುದು ಬಿಕ್ಕುವುದು ಜಗವೆಲ್ಲ.
ಸಿದ್ದನಗೌಡ ಉಜ್ಜಯಿನಿ,. ದಾವಣಗೆರೆ


N-2601 

  09-08-2024 06:58 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 *ಮೇಟಿವಿದ್ಯಾಸಂಪನ್ನರಿಗೆ ಮಾಡುತ್ತಿರುವ ಮರೆ ಮೋಸ ಅಂಕಣಕ್ಕೆ ಪ್ರತಿಕ್ರಿಯೆ*

ಗುರುಗಳ ಈ ಅಂಕಣದಲ್ಲೂ ಎಂದಿನಂತೆ ರೈತಪರ ಕಾಳಜಿ ಎದ್ದು ತೋರುತ್ತದೆ. ಅಮಾಯಕ ಅನಕ್ಷರಸ್ಥ ರೈತನ ನೆರವಿಗೆ ಬರುವಂತಹ ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ ಇಂದಿನ ಅಂಕಣದಲ್ಲೂ ಮೇಧಾವಿಗಳು ಮಾಡುವ ಸೂಕ್ಷ್ಮ ಮೋಸದ ಎಳೆಯನ್ನು ಬಿಚ್ಚಿಟ್ಟಿದ್ದಾರೆ. ಬೆಳೆವಿಮೆಯಿಂದ ರೈತನಿಗಾಗುವ ಅನ್ಯಾಯ ರಸಗೊಬ್ಬರಗಳ ಹೆಚ್ಚುವರಿ ದರ ಎಲ್ಲವುಗಳ ಎದುರಿಸಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟವಾದ ಬೆಳೆಗಳಿಗೆ ಆಯಾ ವರ್ಷವೇ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಹಳ್ಳಿಯ ರೈತ ಹುಡುಗನ ಮದುವೆಯಾಗದ ಹಿಂದಿನ ತೊಳಲಾಟವನ್ನು ಗಮನಕ್ಕೆ ತಂದಿದ್ದಾರೆ. ಒಟ್ಟಿನಲ್ಲಿ ಶ್ರೀಗಳ ರೈತಪರ ನಿಲುವುಗಳಿಗೆ ಗಟ್ಟಿಧ್ವನಿಯಾಗಿ ಕಾಣಿಸುತ್ತಿದ್ದಾರೆ. ಶ್ರೀಗಳಿಗೆ ಪ್ರಣಾಮಗಳನ್ನು ಸಲ್ಲಿಸಿ ಅಂಕಣ ಬರಹದ ಪ್ರತಿಕ್ರಿಯೆಯನ್ನು ಮುಕ್ತಾಯಗೊಳಿಸುವೆ
.ಜೆ.ಆರ್.ಶಿವಕುಮಾರ್, ಚಿತ್ರದುರ್ಗ


N-2601 

  09-08-2024 06:53 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 *ದೇಶದ ಬೆನ್ನೆಲುಬು ರೈತ*

ಪೂಜ್ಯ ಗುರುಗಳಿಗೆ ಪ್ರಣಾಮಗಳು. ದೇಶದ ಬೆನ್ನೆಲುಬಿಗೆ ಪೆಟ್ಟಾಗಿದೆ. ಆದರೆ ಚಿಕಿತ್ಸೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ. ಮುಗ್ಧ ರೈತರಿಗೆ ವಿಮೆ ಹಣದ ಹೆಸರಿನಲ್ಲಿ ಆಗುತ್ತಿರುವ ಮೋಸ ತಿಳಿದು ಅತ್ಯಂತ ಬೇಸರವಾಯಿತು. ಎಲ್ಲ ರೈತರು ಸರ್ಕಾರದಿಂದ ಸೂಕ್ತ ಸೌಲಭ್ಯಗಳನ್ನು ಪಡೆದು ಜೀವನ ಮಟ್ಟ ಸುಧಾರಿಸಿದರೆ, ಪಾಪ ನಮ್ಮ ರಾಜಕೀಯ ಧುರೀಣರ ವೋಟ್ ಬ್ಯಾಂಕುಗಳಿಗೆ ಕನ್ನ ಬೀಳುವುದೆಂಬ ಭಯದಿಂದ ಅವರನ್ನು ಸೌಲಭ್ಯ ವಂಚಿತರನ್ನಾಗಿಸಿ ಅಂಧಕಾರದಲ್ಲಿಯೇ ಇಟ್ಟಿದ್ದಾರೆ. ನಿರ್ದಿಷ್ಟ ವರಮಾನವಿಲ್ಲದ ನಮ್ಮ ರೈತರ ಪಾಡು ದೇವರಿಗೆ ಪ್ರೀತಿ. ಪ್ರತಿಯೊಂದು ಬಜೆಟ್ಟಿನಲ್ಲಿ ಮೊಟ್ಟ ಮೊದಲು ಹೇಳುವ ಮಾತು ನಮ್ಮದು ರೈತ ಸ್ನೇಹಿ ಬಜೆಟ್ ಎಂದು. ಆದರೆ ಈ ಸ್ನೇಹಿತರು ಸ್ವತಂತ್ರ ಬಂದು ಇಷ್ಟು ವರ್ಷ ಆದರೂ ಇನ್ನೂ ರೈತರನ್ನು ನಿಜವಾದ ದೇಶದ ಬೆನ್ನೆಲುಬನ್ನಾಗಿ ಪರಿವರ್ತಿಸಿಲ್ಲ. ಇಂತಹ ಲೇಖನಗಳು ಸರಕಾರದ ಕಣ್ಣು ತೆರೆಸುವಂತೆ ಆಗಬೇಕು. ರೈತರಿಗೆ ನ್ಯಾಯ ದೊರಕಬೇಕು. ಅನ್ನದಾತನು ನಗುನಗುತ್ತಾ ಎಲ್ಲರಿಗೂ ಅನ್ನ ನೀಡುವಂತಾಗಲಿ ಎಂದು ಹಾರೈಸುತ್ತಾ.......
ಡಿ.ಎಸ್ ಅನಿತಾ ಮಂಜುನಾಥ್, ಹೊಸದುರ್ಗ


N-2601 

  09-08-2024 06:43 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಬಿಸಿಲು ಬೆಳದಿಂಗಳು ಅಂಕಣ
8-8-2024
ಸಂಘಟನೆ ಬಲವಿಲ್ಲದ ರೈತರ ಪರಿಶ್ರಮಕ್ಕೆ ಸಿಗದ ಫಲ ಕುರಿತು ಇಂದಿನ ಅಂಕಣ ಬರಹ ನೈಜ ಚಿತ್ರಣ ನೀಡಿದೆ. ಪ್ರಕೃತಿಯ ಮುನಿಸಿನ ಚೆಲ್ಲಾಟ ಒಂದೆಡೆಯಾದರೆ ಬುದ್ಧಿವಂತ ಜನರ ಕೈವಾಡ ಎನಿಸಿರುವ ನಿಯಮಾವಳಿಗಳು ರೈತರ ಕುತ್ತಿಗೆಗೆ ಕುಣಿಕೆಗಳಾಗುತ್ತಿರುವ ಅಂಶಗಳನ್ನು ಮನಸಿಗೆ ತಾಕುವಂತೆ ಶ್ರೀಗಳವರು ವಿವರಣೆ ನೀಡಿದ್ದಾರೆ. ತರಕಾರಿ ಬೆಲೆ ಏರಿದರೂ ಬೆಳೆಗಾರನಿಗೆ ಅದರ ಫಲ ದಕ್ಕದೆ ಮಧ್ಯವರ್ತಿಯ ಪಾಲಾಗುತ್ತದೆ. ತೀವ್ರ ಇಳಿಕೆ ಕಂಡರೂ ಮಧ್ಯವರ್ತಿಗೆ ಅದರ ಬಿಸಿ ತಾಕುವುದೇ ಇಲ್ಲ. ರೈತ ತಾನು ಬೆಳೆದಿದ್ದ ಪದಾರ್ಥಗಳನ್ನು ತಾನೇ ಮಾರಾಟವನ್ನು ಮಾಡದ ಪರಿಸ್ಥಿತಿ ಇದೆ. *ರಸ್ತೆ ಅಗಲೀಕರಣ ಮೊದಲಾದ ಪ್ರಕ್ರಿಯೆ ಹಾಗೂ ಕೃಷಿಭೂಮಿಯನ್ನು ನಿವೇಶನಗಳಾಗಿಸುವ ತೀವ್ರತೆಗಳ ಮೂಲಕ ಹೊಲ ಗದ್ದೆಗಳೆಲ್ಲಾ ಕಾಂಕ್ರೀಟ್ ಕಾಡುಗಳಾಗುತ್ತಿವೆ*

ಆ ಜಾಗಗಳಲ್ಲಿ ಮನೆಗಳನ್ನು ಕಟ್ಟದೆ ಕುರುಚಲು ಬೆಳೆದು ಅಥವಾ ಕಸದ ರಾಶಿ ತುಂಬುವ ಖಜಾನೆಗಳಾಗುತ್ತಿವೆ. ಈ ಪ್ರಕ್ರಿಯೆಗಳ ಕೊನೆ ಎಂದು? ಈ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. ನಮ್ಮ ನಡುವಿನ ವಿರೋಧಾಭಾಸದ ಅನಾವರಣದಂತೆ ಇಂದಿನ ಅಂಕಣ ಶ್ರೀಗಳವರ ಮಾರ್ಗದರ್ಶನದಂತಿದೆ. ಅಂಕಣವನ್ನು ಎಲ್ಲರ ಬಳಿಗೆ ಬೆಳ್ಳಂಬೆಳಗು ರವಾನಿಸುವಲ್ಲಿ ಪರಿಶ್ರಮ ಪಡುತ್ತಿರುವ ರಾ.ವೆಂಕಟೇಶ ಶೆಟ್ಟರಿಗೆ ವಂದನೆಗಳು.
ಟೀಕಾ. ಸುರೇಶ ಗುಪ್ತ, ಚಿತ್ರದುರ್ಗ.


N-2601 

  09-08-2024 06:19 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಪರಮ ಪೂಜ್ಯ ಗುರುಗಳಿಗೆ ‌ಸಾಷ್ಟಾಂಗ ನಮಸ್ಕಾರಗಳು.

ಈ ದಿನದ ಬಿಸಿಲು ಬೆಳದಿಂಗಳು ಲೇಖನದಲ್ಲಿ ಪೂಜ್ಯ ಗುರುಗಳು ದೇಶದ ಬೆನ್ನೆಲುಬಾದ ರೈತರ ಬವಣೆಯನ್ನು ಮತ್ತು ಅವರಿಗೆ ಆಗುತ್ತಿರುವ ಮೋಸಗಳನ್ನು ಹೃದಯಂಗಮವಾಗಿ ವಿವರಿಸಿದ್ದಾರೆ.
ರೈತರ ಕುಟುಂಬಗಳಿಂದ ಹಾಗೂ ಗ್ರಾಮೀಣ ಕುಟುಂಬಗಳಿಂದ ಹೆಚ್ಚು ಜನಪ್ರತಿನಿಧಿಗಳು ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಆದರೂ ರೈತರಿಗೆ ಸರ್ಕಾರಗಳು ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತಿಲ್ಲ.

ರೈತರಿಗೆ ಅನುಕೂಲವಾಗಬೇಕಾದ ಬೆಳೆ ವಿಮೆ ಯೋಜನೆ ವಿಮೆ ಕಂಪನಿಗಳಿಗೆ ಲಾಭದಾಯಕವಾಗಿರುದನ್ನು ಸರ್ಕಾರ ಗಮನಿಸದೇ ಇರುವುದು ಶೋಚನೀಯವಾಗಿದೆ.
ಈಗಲಾದರೂ ಸರ್ಕಾರ ಇದನ್ನು ಸರಿಪಡಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಲಿ.
ರೈತರ ಬವಣೆಯನ್ನು ನೀಗಿಸಿ ಅಭಿವೃದ್ಧಿಪಡಿಸಲು ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.ಮುಖ್ಯವಾಗಿ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅವರಿಗೆ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಗಳನ್ನು ಕೊಡಬೇಕು.ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ‌ಸಿಗುವಂತೆ ಕ್ರಮ ಕೈಗೊಳ್ಳಬೇಕು.ಹೀಗಾದರೆ ಮಾತ್ರ ದೇಶದ ನಿಜವಾದ ಅಭಿವೃದ್ಧಿಯಾಗುತ್ತದೆ.

ಇಂದಿನ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟ ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು.

ಮಾರ್ಗದರ್ಶನ ನೀಡುವ ಗುರುಗಳಾದ ಶ್ರೀ ವೆಂಕಟೇಶ ಶೆಟ್ಟಿಯವರಿಗೆ ಹೃತ್ಪೂರ್ವಕ ವಂದನೆಗಳು.
ಸದಾನಂದ ಶೆಟ್ಟಿ ವೈ ಚಿತ್ರದುರ್ಗ