N-2605 
  11-08-2024 01:56 PM   
BREAKING NEWS !.. BEWARE OF SOCIAL MEDIA!... ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ!…
ಶ್ರೀ ತರಳಬಾಳು ಜಗದ್ಗುರು ಗುರುಗಳ ಪಾದಕಮಲಗಳಿಗೆ ಶಿರಸಾಷ್ಟಂಗ ನಮಸ್ಕಾರಗಳು.
ದಾವಣಗೆರೆ ಅಪೂರ್ವ ರೆಸಾರ್ಟ್ ನಲ್ಲಿ ನಮ್ಮ ಸಮಾಜದ ಘನತೆಯನ್ನು ಹಾಳು ಮಾಡಲು ಪ್ರಯತ್ನಿಸಿದ ಸ್ವಯಂ ಘೋಷಿತ ಘಟಾನುಘಟಿಗಳಿಗೆ , ಭಕ್ತರ ಮನಸ್ಸಿನ ಅನಿಸಿಕೆಗಳು:
1) ಹಣ & ರಾಜಕೀಯ ಬಲಿಷ್ಟರಾದ ಮಾತ್ರಕ್ಕೆ, ತಮ್ಮಷ್ಟಕ್ಕೆ ತಾವೇ ಸಮಾಜದ ಘಟಾನುಘಟಿಗಳೆಂದುಕೊಂಡು , ಇಡೀ ಸಮಾಜದ ಭಕ್ತ ಗಣದ ಅಂತಃ ಕರಣವನ್ನು ಅರ್ಥಮಾಡಿಕೋಳ್ಳದೇ, ರಾಜಕೀಯ-ರಿಯಲ್ ಎಸ್ಟೇಟ್ ದುಷ್ಟಕೋಟವನ್ನು ಕಟ್ಟಿಕೊಂಡು , ನಿಮ್ಮ ಹಿತಾಸಕ್ತಿಗೋಸ್ಕರ ಖಾಸಗಿ ರೆಸಾರ್ಟ್ ನಲ್ಲಿ ಮಾತಾಡಿದಾಕ್ಷಣ ಅದು ಒಂದು ಇಡೀ ಸಮಾಜದ ತಿರ್ಮಾನ ವಾಗುತ್ತದೆಯೇ?
2) ಖಾಸಗಿ ರೆಸಾರ್ಟ್ ನಲ್ಲಿ ಸೇರಿ ಮಾತನಾಡಿದವರಲ್ಲಿ ಒಂದಿಬ್ಬರನ್ನು ಹೋರತು ಪಡಿಸಿ , ಉಳಿದವರನೇಕರು ಸಮಾಜದ ಬಗ್ಗೆಯಾಗಲೀ, ರೈತರ ಏಳ್ಗೆಗಾಗಲೀ, ಬಡ ಮಕ್ಕಳ ಶಿಕ್ಷಣಕ್ಕಾಗಲೀ ಕಿಂಚಿತ್ತೂ ಕಾಳಜಿಯನ್ನು ಹೊಂದಿದವರಲ್ಲ. ತಮ್ಮ ವ್ಯವಹಾರದ ಲಾಭಕ್ಕೋಸ್ಕರ ಸಮಾಜದ, ಮಠದ ಹೆಸರನ್ನು ಬಳಸಿಕೊಂಡಿರುವವರೇ ಅಲ್ಲವೇ?
3) ಬೃಹನ್ಮಠದ ಪಾರಾಂಪಾರಿಕ ಆಶಯ ಮತ್ತು ಆಶ್ರಯದ ನೆರಳಿನಿಂದಾಗಿಯೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಸಮಾಜ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ವ್ಯವಹಾರಿಕವಾಗಿ ಅನೇಕ ಕ್ಷೇತ್ರದಲ್ಲಿ ಮುಂದುವರೆದಿರುವುದನ್ನು ಯಾರೋಬ್ಬರೂ ಅಲ್ಲಗಳೆಯುವಂತಿಲ್ಲ. ನಮ್ಮ ಇಂದಿನ ಗುರುಗಳು ಬೃಹನ್ಮಠದ ಈ ಆಶಯ ಮತ್ತು ಆಶ್ರಯದ ನೆಲೆಗಟ್ಟನ್ನು ಮತ್ತೂಷ್ಟು ಗಟ್ಟಿಗೊಳಿಸುವುದರ ಜೋತೆ ಜೋತೆಗೆ ಬೃಹನ್ಮಠದ ಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿ ಮಠವನ್ನು, ಮಠದ ಪರಂಪರೆಯ ಶ್ರೀಮಂತಿಕೆಯನ್ನು ಸಂಪದ್ಬರಿತ ಗೋಳಿಸಿದವರು.
4) ಮಠದಲ್ಲಿ ಸಾಕಷ್ಟು ಹಣ , ರಾಜಕೀಯ ಪ್ರಭಾವ ವಿದ್ದರೂ ಮೆಡಿಕಲ್ ಕಾಲೇಜ್ ಸ್ಥಾಪಿಸಿಲ್ಲ ಸ್ವಾಮೀಜಿಯವರು ಹಣವನ್ನು ಹಾಗೇ ಮಠದ ಖಾತೆಯಲ್ಲರಿಸಿ ಸದ್ವಿನಿಯೋಗ ಮಾಡಿಲ್ಲ ವೆನ್ನುವುದು ಕೆಲವರ ವಾದ . ನಮ್ಮ ಬೃಹನ್ಮಠದ ಮುಖ್ಯ ಉದ್ದೇಶ ಸಮಾಮಾಜದ ಜನರಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿ ಅವರನ್ನು ಪ್ರಜ್ಙಾವಂತ ನಾಗರೀಕರನ್ನಾಗಿ ಮಾಡುವುದಾಗಿತ್ತು. ಈ ಆಶಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವದು ತಪ್ಪೆ?
5) ಇದುವರೆಗಿನ ಎಲ್ಲಾ ಗುರುಗಳ ಹೆಸರಿನಲ್ಲಿರುವ ಮತ್ತು ಮಠಕ್ಕೆ ಸಂಬಂದಿಸಿದ ಹಣದಿಂದ ಖರೀದಿಸಿದ ಚರ-ಸ್ಥಿರ ಆಸ್ತಿಗಳೆಲ್ಲವೂ ಮಠದ ಆಸ್ತಿಯಂದು ಅಧಿಕೃತವಾಗಿರುವಾಗ, ಸ್ವಾಮೀಜಿಯವರು ತಮ್ಮ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆಂದು ಸುಳ್ಳು ಸುದ್ದಿ ಹರಡಿಸಿ ಬೊಬ್ಬೆ ಹೊಡೆಯುತ್ತಿದ್ದೀರಿ ಏಕೆ?
6) ಸ್ವಾಮಿಜಿಯವರ ನಿಸ್ವಾರ್ಥ ಸೇವೆ, ರೈತರ ಶ್ರೇಯೋಭಿವೃದ್ದಿ, ಕೃಷಿ ಕ್ಷೇತ್ರದ ವೈಜ್ಞಾನಿಕ ಬೆಳವಣಿಗೆ, ನೀರಿನ ಸದ್ಬಳಕೆ, ನೀರಿನ ಮಹತ್ವ, ಶಿಕ್ಷಣದ ಸದ್ವನಿಯೋಗದ ಕುರಿತು ಸಮಾಜದ ಐಕ್ಯತೆಗಾಗಿ ಸಮಾಜದ ಭಕ್ತ ಗಣ ಪಾದಯಾತ್ರೆ ಮಾಡೋಣ, ನೀವು ನಿಮ್ಮ ರಾಜಕೀಯ-ರಿಯಲ್ ಎಸ್ಟೇಟ್ ದುಷ್ಟಕೋಟದ ರಕ್ಷಣೆಗಾಗಿ ಪಾದ ಯಾತ್ರೆ ಮಾಡಿ. ನಿಮ್ಮ ಸ್ವಾರ್ಥದ ಮರಮಾವಧಿಯ ಪಾದ ಯಾತ್ರೆಯೋ? ಸಮಾಜದ ಶ್ರೇಯೋಭೀವೃದ್ದಿಯ ಪಾದ ಯಾತ್ರೆಯೋ? ನೋಡೋಣ.
7) ಇಂದಿನ ಅನೇಕ ಮಠಗಳ ಸಮಾಜಿಕ ವಿದ್ಯಾಮಾನಗಳನ್ನು ನೋಡಿದಾಗ, ನಮ್ಮ ಬೃಹನ್ಮಠದ ಜಗದ್ಗುರುಗಳು, ಯಾವುದೇ ಕಳಂಕಕ್ಕೆ ಆಸ್ಪದ ಕೊಡದಂತೆ ಘನತೆ, ಗೌರವದಿಂದ ತಮ್ಮ ಸಚ್ಚಾರಿತ್ರ್ಯದ ಮುಖಾಂತರ ಸನಾತನ ಧರ್ಮದ ಗುರು ಪರಂಪರೆಗೆ, ಇಡೀ ಸಮಾಜಕ್ಕೆ ಕಳಶ ಪ್ರಾಯವಾಗಿರುವವರು. ಉತ್ತರಾಧಿಕಾರಿ ನೇಮಿಸುತಿಲ್ಲವೆಂದು ಬೊಬ್ಬೆ ಹಾಕುವ ನೀವುಗಳೇ, ಕೋರ್ಟನಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ತಂದಿರುವುದೆಂದು ಈಗ ಜಗಜ್ಜಾಯೀರಾಗಿದೆ. ಈಗಲಾದರೂ ನಿಮ್ಮ ಸ್ವಾರ್ಥವನ್ನು ಬದಿಗೋತ್ತಿ ಸಮಾಜಮುಖಿಯಾಗಿ ವರ್ತಿಸುವ ಮನೋಭಾವ ಬೇಳೆಸಿಕೋಳ್ಳಿ.
Vivek
Davanagere