N-2608 
  13-08-2024 09:16 AM   
ಸಿರಿಗೆರೆ,ಪಲ್ಲಾಗಟ್ಟೆ, ಮೆಳ್ಳೇಕಟ್ಟೆ ಗ್ರಾಮಗಳ ಭಕ್ತರ ಸಭೆ : ತರಳಬಾಳು ಶ್ರೀಗಳ ಪರ ಬೆಂಬಲ
ಭಕ್ತರಿಗಂಜಿ ಗುರು,ಗುರುವಿಗಂಜಿ ಭಕ್ತರು ಇದು ಯಾರಸ್ವಾರ್ಥವಲ್ಲದ ಭಕುತಿ.ನಿಸ್ವಾರ್ಥ ಭಕ್ತರು ಮನಸ್ಥಿತಿ.ತುಂಗೆಯನ್ನ ಭದ್ರವಾಗಿ ನಮಗೆ (ಶಿಷ್ಯಂದರಿಗೆ) ಕೂಟ್ಟಮೇಲೂ ಸ್ವಾರ್ಥವೇ?!ಇದನು ಮೆಚ್ಚನಾ ತರಳಬಾಳು ಶ್ರೀಗುರುವೆ.
ಶಿವಶರಣರ ವಚನ ಸಂಪುಟ
ಬಸವಣ್ಣ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
ವಚನ - 874
ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು.
ಕನ್ನಡ ವ್ಯಾಖ್ಯಾನ
ಶಿವಧರ್ಮದ ಈ ಶರಣರು ಯಾವ ಇತರ ಧರ್ಮದ ಸಂತರೊಡನೆಯೂ ಹೋಲಿಸಲಾಗದ ಉಪಮಾತೀತರು. ಅವರು ಒಂದು ಮುಕ್ತ ಸಮಾಜದ ಅನ್ವೇಷಣೆಯಲ್ಲಿರುವ ವೈಚಾರಿಕ ಜನ. ಕಾಲಕರ್ಮದ ಯಾವ ಒತ್ತಾಯಗಳಿಗೂ ಅವರು ಮಣಿಯುವರಲ್ಲ, ರೂಢಿಯ ಠೀವಿ ಠೇಂಕಾರಗಳೂ ಅವರಿಗಿಲ್ಲ. ಅಂಗೈಯಲ್ಲಿ ಬಿತ್ತಿದ ಲಿಂಗಬೀಜ ಅವರ ಕಾಲುಗಳಲ್ಲಿ ಬೇರುಬಿಟ್ಟ, ತೋಳುಗಳಲ್ಲಿ ಶಾಖೋಪಶಾಖೆಯಾಗಿ ಶಿರದಲ್ಲಿ ಸಹಸ್ರಾರವಾಗಿ ಅರಳುವ ಒಂದು ಜಂಗಮದಿವ್ಯವೃಕ್ಷ ಅವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ